ಮಂಗಳವಾರ, ಮೇ 7, 2024
ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಲೀಕ್ ಆಗಲು ನನ್ನ ಪಾತ್ರವಿಲ್ಲ; ದೇವರಾಜೆಗೌಡರಿಂದ ಸುಳ್ಳು ಆರೋಪವೆಂದ ಡಿಕೆ ಶಿವಕುಮಾರ್-ಕೋವಿಡ್ ಲಸಿಕೆಯಿಂದಲೇ ನನಗೆ ಹೃದಯಾಘಾತ ಸಂಭವಿಸಿರಬಹುದು? ನಟ ಶ್ರೇಯಸ್ ತಲ್ಪಾಡೆ-ಆಘಾತಕಾರಿ ಘಟನೆ; ಕ್ರಿಕೆಟ್‌ ಆಡುತ್ತಿದ್ದಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು ಬಾಲಕ ಸಾವು..!-ತಮ್ಮ ಭಾವಚಿತ್ರವನ್ನು ಅಳವಡಿಸಿ ಮತ ಹಾಕುವಂತೆ ಪೋಸ್ಟ್ ; ಆಪ್ತನ ವಿರುದ್ಧ ಅನಂತ್ ಕುಮಾರ್ ಹೆಗ್ಡೆ ದೂರು ದಾಖಲು.!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ ; ಇಲ್ಲಿದೆ ಇಂದಿನ ಚಿನ್ನ ಬೆಳ್ಳಿಯ ದರದ ವಿವರ-ಶೀಘ್ರದಲ್ಲೇ SSLC ಪಲಿತಾಂಶ ಪ್ರಕಟ; ರಿಸಲ್ಟ್ ನೋಡುವುದು ಹೇಗೆ.!-ಮೇ 7 ರ ಚುನಾವಣೆ ಬಳಿಕ ಪ್ರಜ್ವಲ್ ರೇವಣ್ಣ ಭಾರತಕ್ಕೆ ಆಗಮನ..?-ಮದುವೆಗೆ ತೆರಳಿದ್ದ 5 ಮಂದಿ ವಿದ್ಯಾರ್ಥಿಗಳು ಕನ್ಯಾಕುಮಾರಿ ಬೀಚ್ ನಲ್ಲಿ ಮುಳುಗಿ ಸಾವು!-ಚಾಲಕ ನಿಯಂತ್ರಣ ತಪ್ಪಿ 5 ವಿದಾರ್ಥಿಗಳ ದುರಂತ ಅಂತ್ಯ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Sini Shetty: ‘ಮಿಸ್​ ಇಂಡಿಯಾ 2022’ ಸಿನಿ ಶೆಟ್ಟಿ ಸೂಪರ್​ ಡ್ಯಾನ್ಸ್​ ವಿಡಿಯೋ ವೈರಲ್​; ಹೆಜ್ಜೆ ಹಾಕಿದ್ದು ಯಾವ ಹಾಡಿಗೆ?

Twitter
Facebook
LinkedIn
WhatsApp
Sini Shetty: ‘ಮಿಸ್​ ಇಂಡಿಯಾ 2022’ ಸಿನಿ ಶೆಟ್ಟಿ ಸೂಪರ್​ ಡ್ಯಾನ್ಸ್​ ವಿಡಿಯೋ ವೈರಲ್​; ಹೆಜ್ಜೆ ಹಾಕಿದ್ದು ಯಾವ ಹಾಡಿಗೆ?

ಕರ್ನಾಟಕ ಮೂಲದ ಸಿನಿ ಶೆಟ್ಟಿ (Sini Shetty) ಅವರು ಈ ವರ್ಷ ಮಿಸ್​ ಇಂಡಿಯಾ (Miss India) ಕಿರೀಟ ಮುಡಿಗೇರಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಅವರ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್​ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಫ್ಯಾಷನ್​ ಜಗತ್ತಿನಲ್ಲಿ ಹೆಸರು ಮಾಡಿದವರು ಸಿನಿಮಾಗೆ ಎಂಟ್ರಿ ನೀಡುವುದು ವಾಡಿಕೆ. ಈಗಾಗಲೇ ಸಿನಿ ಶೆಟ್ಟಿ ಅವರಿಗೂ ಹಲವು ಆಫರ್​ಗಳು ಬಂದಿರುತ್ತವೆ. ಚಿತ್ರರಂಗಕ್ಕೆ ಕಾಲಿಡಲು ಬೇಕಾದ ಹಲವು ತಯಾರಿಯನ್ನು ಸಿನಿ ಶೆಟ್ಟಿ ಈಗಾಗಲೇ ಮಾಡಿಕೊಂಡಂತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕೆಲವು ಡ್ಯಾನ್ಸ್ ವಿಡಿಯೋಗಳು ವೈರಲ್​ ಆಗಿವೆ. ‘ಮಿಸ್​ ಇಂಡಿಯಾ 2022’ (Miss India 2022) ಪಟ್ಟ ಗೆದ್ದ ಬಳಿಕ ಅವರನ್ನು ಸೋಶಿಯಲ್​ ಮೀಡಿಯಾದಲ್ಲಿ ಫಾಲೋ ಮಾಡುವವರ ಸಂಖ್ಯೆ ಹೆಚ್ಚಿದೆ. ಸಿನಿ ಶೆಟ್ಟಿ ಹಂಚಿಕೊಂಡ ವಿಡಿಯೋಗಳು ಲಕ್ಷಾಂತರ ವೀವ್ಸ್​ ಪಡೆದುಕೊಂಡಿವೆ.

Sini Shetty: ‘ಮಿಸ್​ ಇಂಡಿಯಾ 2022’ ಸಿನಿ ಶೆಟ್ಟಿ ಸೂಪರ್​ ಡ್ಯಾನ್ಸ್​ ವಿಡಿಯೋ ವೈರಲ್​; ಹೆಜ್ಜೆ ಹಾಕಿದ್ದು ಯಾವ ಹಾಡಿಗೆ?

ಸಿನಿ ಶೆಟ್ಟಿ ಅವರು ಡ್ಯಾನ್ಸ್​ನಲ್ಲಿ ಪರಿಣತಿ ಹೊಂದಿದ್ದಾರೆ. ಬಾಲಿವುಡ್​ನ ಅನೇಕ ಹಾಡುಗಳಿಗೆ ಅವರು ರೀಲ್ಸ್​ ಮಾಡಿದ್ದಾರೆ. ಅವರು ಹೆಜ್ಜೆ ಹಾಕುವ ಪರಿ ಕಂಡು ಫ್ಯಾನ್ಸ್​ ಬೆರಗಾಗಿದ್ದಾರೆ. ನೃತ್ಯಪ್ರಧಾನ ಸಿನಿಮಾದ ಮೂಲಕವೇ ಅವರು ಬಾಲಿವುಡ್​ಗೆ ಎಂಟ್ರಿ ನೀಡಿದರೆ ಉತ್ತಮ ಎಂದು ಕೂಡ ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಷ್ಟರಮಟ್ಟಿಗೆ ಅವರ ಡ್ಯಾನ್ಸ್​ ಕಣ್ಮನ ಸೆಳೆಯುತ್ತಿದೆ.

ದೀಪಿಕಾ ಪಡುಕೋಣೆ ಮತ್ತು ಶಾಹಿದ್​ ಕಪೂರ್​ ಜೊತೆಯಾಗಿ ಕಾಣಿಸಿಕೊಂಡ ‘ಪದ್ಮಾವತ್​’ ಸಿನಿಮಾದ ಹಾಡುಗಳೆಲ್ಲವೂ ಸೂಪರ್​ ಹಿಟ್​. ಅದರಲ್ಲೂ ‘ನೈನೋವಾಲೇ ನೇ..’ ಸಾಂಗ್ ಎಲ್ಲರಿಗೂ ಇಷ್ಟ. ಆ ಗೀತೆಗೆ ಸಿನಿ ಶೆಟ್ಟಿ ರೀಲ್ಸ್​ ಮಾಡಿದ್ದಾರೆ. ಸ್ನೇಹಿತೆಯ ಜೊತೆಗೂಡಿ ಅವರು ಭರ್ಜರಿಯಾಗಿ ಸ್ಟೆಪ್ಸ್​ ಹಾಕಿದ್ದಾರೆ. ಈವರೆಗೂ ಈ ವಿಡಿಯೋವನ್ನು 7.7 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಿಸಲಾಗಿದೆ. ಕಮೆಂಟ್​ಗಳ ಮೂಲಕ ಸಾವಿರಾರು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ.

ಸಿನಿ ಶೆಟ್ಟಿ ಅವರ ಇನ್ನಿತರೆ ರೀಲ್ಸ್​ ಕೂಡ ಮಿಲಿಯನ್​ಗಟ್ಟಲೆ ವೀವ್ಸ್​ ಪಡೆದುಕೊಂಡಿವೆ. ಸದ್ಯಕ್ಕೆ ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 1.43 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ. ‘ಮಿಸ್​ ಇಂಡಿಯಾ 2022’ ಕಿರೀಟ ತೊಟ್ಟಿರುವ ಅವರನ್ನು ಮುಂಬೈನಲ್ಲಿ ಭರ್ಜರಿಯಾಗಿ ಸ್ವಾಗತಿಸಲಾಗಿದೆ. ಕೆಲವೇ ದಿನಗಳ ಹಿಂದೆ ಮಂಗಳೂರಿಗೆ ಬಂದಿದ್ದ ಅವರಿಗೆ ಆರತಿ ಬೆಳಗಿ ಅದ್ದೂರಿ ಸ್ವಾಗತ ನೀಡಲಾಗಿತ್ತು. ಆದಷ್ಟು ಬೇಗ ಅವರು ಸಿನಿಮಾ ರಂಗಕ್ಕೆ ಕಾಲಿಡಲಿ ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!

ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!

ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ! Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಸರಿಯಾದ ಸಮಯಕ್ಕೆ ಸಬ್ ರಿಜಿಸ್ಟರ್ಗಳ ರಿಜಿಸ್ಟ್ರೇಷನ್

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಅಂಕಣ