ಶನಿವಾರ, ಮೇ 18, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು!

Twitter
Facebook
LinkedIn
WhatsApp
ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು!

ಧಾರವಾಡ : ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವಿರುದ್ದ ರಣಕಹಳೆ ಮೊಳಗಿಸಿರುವ ಶಿರಹಟ್ಟಿಯ ಫಕ್ಕೀರ ದಿಂಗಾಲೇಶ್ವರ ವಿರುದ್ದವೇ ಎಫ್‌ಐಆರ್ ದಾಖಲಾಗಿದೆ.

ಮೇ 2 ರಂದು ನವಲಗುಂದ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಭಿಮಾನಿ ಮತದಾರರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿ, ಪ್ರಹ್ಲಾದ ಜೋಶಿ ವಿರುದ್ದ ಭಾಷಣ ಮಾಡಿದ್ದರು. ಈ ಭಾಷಣದಲ್ಲಿನ ಹೇಳಿಕೆ ಆಧಾರಿಸಿ ಜಾತಿ, ಸಮುದಾಯ, ಧರ್ಮದ ಹೆಸರಿನಲ್ಲಿ ವಿಭಿನ್ನ ವರ್ಗಗಳ ನಾಗರಿಕರ ನಡುವೆ ವೈರತ್ವ ಮತ್ತು ದ್ವೇಷ ಭಾವನೆ ಉಂಟು ಮಾಡುವ ಹೇಳಿಕೆ ನೀಡಿದ ಅಪರಾಧದ ಆರೋಪದಡಿ ಶ್ರೀಗಳ ವಿರುದ್ದ ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸಮಾವೇಶದಲ್ಲಿದ್ದ ಚುನಾವಣಾ ಅಽಕಾರಿ ಆರ್.ಕುಮಾರಸ್ವಾಮಿ ಅವರಿಂದ ಈ ದೂರು ಸಲ್ಲಿಸಲಾಗಿದೆ.

ದೂರಿನಲ್ಲೇನಿದೆ?
ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರು ತಮ್ಮ ಜಾತಿ ಅವರನ್ನು ಪ್ರೀತಿ ಮಾಡಿದಷ್ಟು ಬೇರೆ ಯಾವ ಜಾತಿ ಅವರನ್ನು ಮಾಡಿಲ್ಲ. ನಿಮ್ಮ ಲಿಂಗಾಯತ ಜಾತಿ ಒಳಗ ಯಾರೂ ಇಲ್ಲ ಏನರೀ ನಿಮ್ಮ ಅವರಿಗೆ ಪೋನ್ ಮಾಡಿ ಕೊಡ್ರಿ ನಮಗೆ ಪೋನ್ ಮಾಡಬ್ಯಾಡಿ ಅಂತ ಹೇಳುವ ಈ ಪಾಪಿಯನ್ನು ಹೊರಗ ಹಾಕುವರೆಗೂ ಸಮಾಧಾನ ಇಲ್ಲ, ಮೊದಲು ಎಲ್ಲ ಜಾತಿ ಅವರು ಭಸ್ಮ ಹಚ್ಚುಗೊಳ್ಳುತ್ತಿದ್ದರು. ಭಸ್ಮ ಹೋಗಿ ಕುಂಕುಮ ಬಂದರೂ ಸುಮ್ಮ ಇದೀವಿ, ಭಂಡಾರ ಹೋಗಿ ಕುಂಕುಮ ಬಂದರೂ ಸುಮ್ಮನೆ ಇದೀವಿ. ನಮಸ್ಕಾರ, ಶರಣು ಶರಣಾರ್ಥಿ ಹೋಗಿ ಹರಿ ಓಂ, ಜೈ ಶ್ರೀರಾಮ್ ಪೋನ್‌ನಲ್ಲಿ ಬಂದರೂ ಸುಮ್ಮನೆ ಇದೀವಿ. ಏನೇನೆಲ್ಲಾ ನೋಡಿ ಸುಮ್ಮನೆ ಇದ್ದರೂ ಕೂಡ ಯಾವ ಸ್ಥಾನಕ್ಕೆ ಬಂದಿದೆ ಅಂದರೆ ನಾವು ಬದುಕೇನೂ ಉಪಯೋಗವಿಲ್ಲ. ಈ ನಾಡಿನೊಳಗೆ ಈ ಸಮಾಜದೊಳಗೆ ಹುಟ್ಟಿ ಉಪಯೋಗವಿಲ್ಲದಂತಹ ಕೆಟ್ಟ ಪರಿಸ್ಥಿತಿ ಬಂದ ಮೇಲೆ ಇವತ್ತಿನ ದಿವಸ ಅನಿವಾರ್ಯವಾಗಿ ಹೊರಗೆ ಬಂದೀವಿ.. ಹೀಗೆ ಸ್ವಾಮೀಜಿ ನೀಡಿದ ವಿವಿಧ ಹೇಳಿಕೆಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ದೂರುಗಳಿದ್ದು, ಇದು ಸೇರಿ ನಾಲ್ಕು ದೂರು ದಾಖಲಾದಂತಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ