ಸೋಮವಾರ, ಮೇ 6, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೆಳಗಾವಿ: ಎರಡು ವರ್ಷಗಳ ನಂತರ ಗೋಕಾಕ ಫಾಲ್ಸ್‌ನಲ್ಲಿ ಪ್ರವಾಸಿಗರ ಸಂಭ್ರಮ..!

Twitter
Facebook
LinkedIn
WhatsApp
ಬೆಳಗಾವಿ: ಎರಡು ವರ್ಷಗಳ ನಂತರ ಗೋಕಾಕ ಫಾಲ್ಸ್‌ನಲ್ಲಿ ಪ್ರವಾಸಿಗರ ಸಂಭ್ರಮ..!

ಗೋಕಾಕ(ಜು.15):  ಕಳೆದ ಎರಡು ವರ್ಷಗಳಿಂದ ಕೊರೋನಾ ಅಟ್ಟಹಾಸ ಮಿತಿಮೀರಿತ್ತು. ಪರಿಣಾಮ ಕೇವಲ ಒಂದು ವಲಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಬದಲಾಗಿ ಅಲ್ಪನಿಂದ ಹಿಡಿದು ಶ್ರೀಮಂತರವರೆಗಿನ ಎಲ್ಲ ಸ್ತರದ ಜನರನ್ನೂ ಕಾಡಿತು. ಆದರೀಗ ಕೊರೋನಾದ ಕಾರ್ಮೋಡ ಮರೆಯಾಗಿದೆ. ಹೀಗಾಗಿ ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭಗೊಂಡಿವೆ. ಅದರಂತೆಯೇ ಈಗ ಪ್ರವಾಸೋದ್ಯಮ ಕೂಡ ಮತ್ತಷ್ಟು ಚುರುಕಾಗಿದೆ. ಎರಡು ವರ್ಷಗಳಿಂದ ಸಂಪೂರ್ಣ ನೆಲಕಚ್ಚಿದ್ದ ಗೋಕಾಕ ಫಾಲ್ಸ್‌ ನೋಡಲು ಬರುವ ಪ್ರವಾಸಿಗರ ಸಂಖ್ಯೆ ತೀರಾ ವಿರಳವಾಗಿತ್ತು. ಕೊರೋನಾದಿಂದಾಗಿ ಲಾಕ್‌ಡೌನ್‌ ವಿಧಿಸಿದ್ದರಿಂದಾಗಿ ಪ್ರವಾಸೋದ್ಯಮ ಸೇರಿದಂತೆ ಎಲ್ಲ ಆರ್ಥಿಕ ಚಟುವಟಿಕೆಗಳು ಬಂದ್‌ ಆಗಿದ್ದವು. ಹೀಗಾಗಿ ಗೋಕಾಕ ಫಾಲ್ಸ್‌ನಲ್ಲಿ ನೀರು ಹರಿದರೂ ಅದನ್ನು ನೋಡಲು ಬರುವವರ ಪ್ರವಾಸಿಗರೇ ಇರಲಿಲ್ಲ. ಹೀಗಾಗಿ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ನೀಡಿತ್ತು. ಮಾತ್ರವಲ್ಲ, ಈ ಪ್ರವಾಸಿಗರನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಇಲ್ಲಿನ ವ್ಯಾಪಾರಸ್ಥರು ಕೂಡ ಬದುಕು ಕೂಡ ಮೂರಾಬಟ್ಟೆಯಾಗಿತ್ತು. ಬದುಕು ನಡೆಸುವುದು ಕೂಡ ದುಸ್ತರವಾಗಿತ್ತು.

ಪ್ರಸಕ್ತ ಸಾಲಿನಲ್ಲಿ ಮುಂಗಾರು ಆರ್ಭಟ ತುಸು ತಡವಾಗಿಯೇ ಆರಂಭವಾಗಿದೆ. ಆದರೆ, ಜೋರಾಗಿಯೇ ಮಳೆಯಾಗುತ್ತಿದೆ. ಪರಿಣಾಮವಾಗಿ ಘಟಪ್ರಭಾ ನದಿ ಕೂಡ ತುಂಬಿ ಹರಿಯುತ್ತಿದೆ. ಹೀಗಾಗಿ ಗೋಕಾಕ ಫಾಲ್ಸ್‌ ನೋಡಲು ಸಹಸ್ರಾರು ಸಂಖ್ಯೆಯ ಜನರು ಇಲ್ಲಿಗೆ ಬರುತ್ತಿದ್ದಾರೆ. ಫಾಲ್ಸ್‌ ಸೊಬಗನ್ನು ಸವಿಯುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕಣ್ಮನ ತುಂಬಿಕೊಳ್ಳುವುದರಿಂದ ವಂಚಿತವಾಗಿದ್ದ ಸಾವಿರಾರು ಪ್ರವಾಸಿಗರು ಈಗ ಈ ನೋಟವನ್ನು ಸವಿಯುತ್ತಿದ್ದಾರೆ.

ಬೆಳಗಾವಿ: ಎರಡು ವರ್ಷಗಳ ನಂತರ ಗೋಕಾಕ ಫಾಲ್ಸ್‌ನಲ್ಲಿ ಪ್ರವಾಸಿಗರ ಸಂಭ್ರಮ..!

ನಾನಾ ಭಾಗಗಳಿಂದ ಬರುತ್ತಿರುವ ಪ್ರವಾಸಿಗರು:

ಗೋಕಾಕ ಫಾಲ್ಸ್‌ ಅನ್ನು ಮಿನಿ ನಯಾಗಾರ ಎಂದೇ ಕರೆಯುತ್ತಾರೆ. ಫಾಲ್ಸ್‌ನ ಸೊಬಗು ನೋಡಲು ಮಹಾರಾಷ್ಟ್ರ, ಕರ್ನಾಟಕ, ಗೋವಾದಿಂದ ನಿತ್ಯ ನೂರಾರು ಜನರು ಬರುತ್ತಿದ್ದಾರೆ. ವಾರಾಂತ್ಯವಾದ ಶನಿವಾರ, ಭಾನುವಾರದಂದು ಕರ್ನಾಟಕದ ನಾನಾ ಭಾಗಗಳಿಂದ ಪ್ರವಾಸಿಗರು ಬರುತ್ತಿದ್ದಾರೆ. ಇದರಿಂದಾಗಿ ಕೊರೋನಾ ಪೂರ್ವದ ಅನುಭವವನ್ನು ಪಡೆದುಕೊಳ್ಳುತ್ತಿದ್ದಾರೆ. ಮಕ್ಕಳು ಕೂಡ ಈ ಸೊಬಗಳನ್ನು ಕಳೆದುಕೊಂಡಿದ್ದರು. ಆದರೆ, ಅವರು ಕೂಡ ತಮ್ಮ ಪೋಷಕರೊಂದಿಗೆ ಬಂದು ಈ ಪ್ರಕೃತಿ ಸೊಬಗನ್ನು ಸವಿಯುತ್ತಿದ್ದಾರೆ.

ಕೇವಲ ಗೋಕಾಕ ಫಾಲ್ಸ್‌ ಮಾತ್ರವಲ್ಲ, ಹತ್ತಿರದಲ್ಲಿಯೇ ಇರುವ ಗೊಡಚಿನ ಮಲ್ಕಿಯಲ್ಲಿಯೂ ಘಟಪ್ರಭಾ ನೀರು ತುಂಬಿ ಹರಿಯುತ್ತಿದೆ. ಈ ಸೊಬಗು ಕೂಡ ಈಗ ಎಲ್ಲರ ಮನಸೂರೆಗೊಂಡಿರುವುದರಿಂದ ಹೆಚ್ಚು ಹೆಚ್ಚು ಜನರು ಬರುತ್ತಿದ್ದಾರೆ.

ಬೆಳಗಾವಿ: ಎರಡು ವರ್ಷಗಳ ನಂತರ ಗೋಕಾಕ ಫಾಲ್ಸ್‌ನಲ್ಲಿ ಪ್ರವಾಸಿಗರ ಸಂಭ್ರಮ..!

ಹೆಚ್ಚಿದ ಆರ್ಥಿಕ ಚಟುವಟಿಕೆ:

ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದಂತೆ ಸಹಜವಾಗಿ ಈ ಪ್ರವಾಸಿಗರನ್ನೇ ನಂಬಿಕೊಂಡಿರುವ ಹಲವಾರು ವ್ಯಾಪಾರಸ್ಥರ ಬದುಕು ಕೂಡ ಈಗ ಸುಧಾರಣೆಯತ್ತ ಸಾಗುತ್ತಿದೆ. ಎರಡು ವರ್ಷಗಳಿಂದ ತೀವ್ರ ಸಂಕಷ್ಟಅನುಭವಿಸಿದ್ದ ಈ ವ್ಯಾಪಾರಸ್ಥರು ಈಗ ಮೊದಲಿನ ಹಾಗೆ ವ್ಯಾಪಾರದಲ್ಲಿ ತೊಡಗಿದ್ದಾರೆ. ಕೊರೋನಾ ಸಂದರ್ಭದಲ್ಲಿ ಅನುಭವಿಸಿದ್ದ ಸಂಕಷ್ಟದೂರವಾಗುತ್ತಿರುವುದರಿಂದ ಸಹಜವಾಗಿ ಇವರ ಆರ್ಥಿಕ ಮಟ್ಟವೂ ಕೂಡ ಚೇತರಿಕೆ ಆಗುತ್ತಿದೆ.

ಫಾಲ್ಸ್‌ ಹತ್ತಿರ ಹುಚ್ಚಾಟ ಬೇಡ:

ಗೋಕಾಕ ಫಾಲ್ಸ್‌ ರುದ್ರರಮಣೀಯ ದೃಶ್ಯವನ್ನು ದೃಶ್ಯ ರೂಪದಲ್ಲಿ ಅನುಭವಿಸುವುದೇ ಒಂದು ಸೊಬಗು. ಇದನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಕಾತರರಾಗಿರುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಸ್ಥಳೀಯ ಪೊಲೀಸರು ಕೈಗೊಂಡಿರುವ ಕ್ರಮಗಳಿಗೆ ಎಲ್ಲರೂ ಸಹಕಾರ ನೀಡಬೇಕಾದ ಅನಿವಾರ್ಯ ಇದೆ. ಆದರೆ, ಇತ್ತೀಚೆಗೆ ಕೆಲವು ಪ್ರವಾಸಿಗರು ಸೆಲ್ಫಿ ಹುಚ್ಚಾಟಕ್ಕೆ ಫಾಲ್ಸ್‌ನ ತುತ್ತ ತುದಿಯವರೆಗೆ ಹೋಗುತ್ತಿರುವುದು ಕೂಡ ಕಂಡುಬಂದಿದೆ. ಮಾತ್ರವಲ್ಲ, ಸುರಕ್ಷತೆ ಕೈಗೊಳ್ಳುವಂತೆಯೂ ಇತ್ತೀಚೆಗೆ ಬೆಳಗಾವಿ ಎಸ್ಪಿ ಸಂಜೀವ್‌ ಪಾಟೀಲ್‌ ಮತ್ತು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಕೂಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದಲ್ಲದೆ, ಪ್ರವಾಸಿಗರ ದೃಷ್ಟಿಯಿಂದ ಎಲ್ಲ ಅಗತ್ಯ ಕ್ರಮಕ್ಕೆ ಸ್ಥಳೀಯ ಪೊಲೀಸರಿಗೆ ಖಡಕ್‌ ಸೂಚನೆಯನ್ನೂ ಕೊಟ್ಟಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ

ಅಂಕಣ