ಸೋಮವಾರ, ಮೇ 6, 2024
ಮೂಡಬಿದರೆ: ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಪದವಿ ಪೂರ್ವ ವಿದ್ಯಾರ್ಥಿನಿ ಆತ್ಮಹತ್ಯೆ..!-ಸೇಡಂ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಡಾ ನಾಗರೆಡ್ಡಿ ಪಾಟೀಲ್ ನಿಧನ..!-Rain Alert : ನಾಳೆಯಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೇ 12ರವರೆಗೆ ಮಳೆ ನಿರೀಕ್ಷೆ..!-ಅಮೇಥಿಯಲ್ಲಿರುವ ಕಾಂಗ್ರೆಸ್​ ಕಚೇರಿ ಮೇಲೆ ದುಷ್ಕರ್ಮಿಗಳಿಂದ ದಾಳಿ; ಕಾರುಗಳು ಧ್ವಂಸ..!-ಬಂಟ್ವಾಳ: ನೇತ್ರಾವತಿ ನದಿ ನೀರಿನಲ್ಲಿ ಆಟವಾಡಲು ಇಳಿದ ಇಬ್ಬರು ಬಾಲಕಿಯರು ನೀರುಪಾಲು..!-6 ವರ್ಷದ ಮಗುವನ್ನು ಮೊಸಳೆಗಳಿದ್ದ ನಾಲೆಗೆ ಎಸೆದ ತಾಯಿ!-ಬೆಳ್ತಂಗಡಿ: ಅರ್ಚಕ ಆತ್ಮಹತ್ಯೆಗೆ ಶರಣು-ಬೆಳ್ತಂಗಡಿ: ಅರ್ಚಕ ಆತ್ಮಹತ್ಯೆಗೆ ಶರಣು-ತೇಜಸ್ವಿ ಸೂರ್ಯ ಮೀನು ತಿನ್ನುತ್ತಾ ಎಲ್ಲರ ಮೇಲೆ ಗೂಂಡಾಗಿರಿ ಮಾಡುತ್ತಿದ್ದಾರೆ ; ಕಂಗನಾ ರಣಾವತ್ ಹೇಳಿಕೆ ವಿಡಿಯೋ ವೈರಲ್-ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನಾನಿದ್ದಿದ್ದರೆ ಉಕ್ರೇನ್‌ ಯುದ್ಧ ಆಗುತ್ತಲೇ ಇರಲಿಲ್ಲ. ನಾನು ಯುದ್ಧ ಆಗಲು ಬಿಡುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ ಡೊನಾಲ್ಡ್ ಟ್ರಂಪ್

Twitter
Facebook
LinkedIn
WhatsApp
ನಾನಿದ್ದಿದ್ದರೆ ಉಕ್ರೇನ್‌ ಯುದ್ಧ ಆಗುತ್ತಲೇ ಇರಲಿಲ್ಲ. ನಾನು ಯುದ್ಧ ಆಗಲು ಬಿಡುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್‌ (ಫೆ. 28): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ತೆರೆಮರೆಗೆ ಸರಿದಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಪ್ರತ್ಯಕ್ಷರಾಗಿದ್ದು, ಉಕ್ರೇನ್‌ ಯುದ್ಧವನ್ನು ಮುಂದಿಟ್ಟುಕೊಂಡು ಹಾಲಿ ಅಧ್ಯಕ್ಷ ಜೋ ಬೈಡೆನ್‌ ವಿರುದ್ಧ ಹಿಗ್ಗಾಮುಗ್ಗಾ ವಾಕ್‌ ಪ್ರಹಾರ ನಡೆಸಿದ್ದಾರೆ. ನಾನು ಸ್ಪರ್ಧಿಸಿದ್ದ ಚುನಾವಣೆಯಲ್ಲಿ ಅಕ್ರಮ ನಡೆಯದೆ ಹೋಗಿದ್ದರೆ ಉಕ್ರೇನ್‌ನಲ್ಲಿ ನಡೆಯುತ್ತಿರುವ ಭಯಾನಕ ದುರ್ಘಟನೆ ಎಂದಿಗೂ ಘಟಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಫ್ಲೋರಿಡಾದ ಒರ್ಲಾಂಡೋದಲ್ಲಿ ಶನಿವಾರ ನಡೆದ ರಿಪಬ್ಲಿಕನ್‌ ಪಕ್ಷದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮಾಡಿದ್ದಕ್ಕೆ ಜೋ ಬೈಡೆನ್‌ ನಾಯಕತ್ವ ದುರ್ಬಲವಾಗಿರುವುದೇ ಕಾರಣ ಎಂದರು.
ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಬುದ್ಧಿವಂತ. ಅದು ಸಮಸ್ಯೆ ಅಲ್ಲ. ಆದರೆ ಸಮಸ್ಯೆ ಇರುವುದು ನಮ್ಮ ನಾಯಕರು ಪೆದ್ದರಾಗಿರುವುದರಿಂದ. ರಷ್ಯಾವನ್ನು ಕಡೆ ಪಕ್ಷ ಮಾನಸಿಕವಾಗಿಯಾದರೂ ತುಂಡು ತುಂಡು ಮಾಡುವ ಬದಲಿಗೆ ನ್ಯಾಟೋ ಪಡೆಗಳು ಬುದ್ಧಿವಂತನ ಎದುರಿಗಿರುವ ವ್ಯಕ್ತಿಯತ್ತ ನೋಡಿ ನಿರ್ಬಂಧಗಳನ್ನು ಹೇರುತ್ತಿವೆ ಎಂದು ಲೇವಡಿ ಮಾಡಿದರು. ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರನ್ನು ಧೈರ್ಯಶಾಲಿ ವ್ಯಕ್ತಿ ಎಂದು ಬಣ್ಣಿಸಿದರು.

 

ರಷ್ಯಾ ಮೇಲೆ ಮತ್ತಷ್ಟುಆರ್ಥಿಕ ನಿರ್ಬಂಧಕ್ಕೆ ಸಿದ್ಧತೆ: ಉಕ್ರೇನ್‌ ಮೇಲೆ ಅಪ್ರಚೋದಿತ ದಾಳಿ ನಡೆಸಿರುವ ರಷ್ಯಾದ ಹಣಕಾಸು ವ್ಯವಸ್ಥೆಗೆ ದೊಡ್ಡ ಮಟ್ಟಿನ ಹೊಡೆತ ನೀಡಲು, ಜಾಗತಿಕ ಸಮುದಾಯ ಸಮ್ಮತಿ ಸೂಚಿಸಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ರಷ್ಯಾದ ಕೇಂದ್ರೀಯ ಬ್ಯಾಂಕ್‌ ಮತ್ತು ಈಗಾಗಲೇ ನಿರ್ಬಂಧಕ್ಕೆ ಒಳಗಾಗಿರುವ ಹಲವು ಬ್ಯಾಂಕ್‌ಗಳು ದೊಡ್ಡ ಸಮಸ್ಯೆ ಎದುರಿಸಬೇಕಾಗಿ ಬರಲಿದೆ. ಅಲ್ಲದೆ ಈ ಬೆಳವಣಿಗೆ ರಷ್ಯಾದ ಆಮದು ಮತ್ತು ರಫ್ತು ವಲಯಕ್ಕೂ ಭಾರೀ ಪೆಟ್ಟು ನೀಡಲಿದೆ ಎನ್ನಲಾಗಿದೆ.
ಸ್ವಿಫ್ಟ್‌ ಶಾಕ್‌: ಭಾರತ ಸೇರಿದಂತೆ ವಿಶ್ವದ 200 ದೇಶಗಳ 11000ಕ್ಕೂ ಹೆಚ್ಚು ಬ್ಯಾಂಕ್‌ಗಳು ಸ್ವಿಫ್ಟ್‌ (ಸೊಸೈಟಿ ಫಾರ್‌ ವಲ್ಡ್‌ರ್‍ವೈಡ್‌ ಇಂಟರ್‌ಬ್ಯಾಂಕ್‌ ಪೈನಾನ್ಷಿಯಲ್‌ ಟೆಲಿಕಮ್ಯುನಿಕೇಷನ್‌) ಎಂಬ ಹಣಕಾಸು ವ್ಯವಸ್ಥೆಯನ್ನು ಬಳಸುತ್ತಿವೆ. ಈ ವ್ಯವಸ್ಥೆಯು ಎಲ್ಲಾ ಬ್ಯಾಂಕ್‌ಗಳಿಗೆ ದೇಶದಿಂದ ದೇಶಕ್ಕೆ ಹಣ ವರ್ಗಾವಣೆ ಕುರಿತು ತ್ವರಿತ ಸಂದೇಶ ನೀಡುವ ಮೂಲಕ, ಹಣ ವರ್ಗಾವಣೆ ಪ್ರಕ್ರಿಯೆ ಸುಲಲಿತವಾಗಿರುವಂತೆ ನೋಡಿಕೊಳ್ಳುತ್ತದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ

ಅಂಕಣ