ಭಾನುವಾರ, ಮೇ 5, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಂಟ್ವಾಳ ವಕೀಲರ ಸಂಘದ ಸಹಭಾಗಿತ್ವದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಚರಣೆ

Twitter
Facebook
LinkedIn
WhatsApp
WhatsApp Image 2023 03 13 at 10.45.19 AM

 ವಕೀಲರ ಸಂಘ (ರಿ) ಬಂಟ್ವಾಳ, ದ ಕ ಜಿಲ್ಲಾ ಕಾನೂನು ವೇದಿಕೆ (ರಿ), ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ ಇವುಗಳ ಸಂಯುಕ್ತ ಅಶ್ರಯದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವು ಬಂಟ್ವಾಳ ಜೆ ಎಂ ಎಫ್ ಸಿ ನ್ಯಾಯಾಲಯದ ಆವರಣದಲ್ಲಿ ನಡೆಯಿತು.

ಕ್ರಾರ್ಯಕ್ರಮವನ್ನು ಪ್ರಧಾನ ಹಿರಿಯ ಸಿವಿಲ್ ನ್ಯಾಯಾದೀಶೆ ಶ್ರೀಮತಿ ಭಾಗ್ಯಮ್ಮ ಉದ್ಘಾಟಿಸಿದರು. ವಕೀಲರ ಸಂಘದ ಉಪಾಧ್ಯಕ್ಷ ಮೋಹನ್ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಂಗಳೂರು ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಸೈಂಟಿಫಿಕ್ ಆಫಿಸರ್ ಆಫ್ ಸೆಂಟ್ರಲ್ ರಿಸರ್ಚ್ ಲ್ಯಾಬೇರೇಟರಿಯ ಪ್ರೊಫೆಸರ್ ಪ್ರಿನ್ಸಿಪಾಲ್ ಡಾ ಸುಚೇತ ಜೆ ಶೆಟ್ಟಿ ಮಹಿಳಾ ಸಬಲೀಕರಣದ ಬಗ್ಗೆ ವಿವರಿಸಿದರು.

ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ತಳವಾರ್, ಹೆಚ್ಚುವರಿ ಸಿವಿಲ್ ಹಾಗೂ ಜೆ ಎಂ ಎಫ್ ಸಿ ನ್ಯಾಯಾಧೀಶ ಕೃಷ್ಣ ಮೂರ್ತಿ, ದ.ಕ ಜಿಲ್ಲಾ ಕಾನೂನು ವೇದಿಕೆಯ ಉಪಾಧ್ಯಕ್ಷ ಉಮೇಶ್ ಕುಮಾರ್ ವೈ ಮಾತನಾಡಿದರು. ಇದೇ ವೇಳೆ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಮೂವರು ಮಹಿಳಾ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

ಹಿರಿಯ ವಕೀಲರಾದ ಎಂ ಅಶ್ವನಿ ಕುಮಾರ್ ರೈ, ಪಿ ಸಿ ಸಾಲ್ಯಾನ್, ಹಾತಿಮ್ ಅಹಮದ್, ಮೋಹನ್ ಕುಮಾರ್ ಕಡೇಶಿವಾಲ್ಯ, ಎಚ್ ಸತೀಶ್ ರಾವ್, ಮಹಮ್ಮದ್ ಅಶ್ರಫ್, ಆಶಾ ಪಿ ರೈ, ಸತೀಶ್ ಬಿ, ಮಹಮ್ಮದ್ ಕಬೀರ್, ಮಲಿಕ್ ಅನ್ಸಾರ್ ಕರಾಯ, ತುಳಸೀದಾಸ್, ಆರ್ ವಿನೋದ, ಶುಭ, ಅಭಿನಯ, ಗಾಯತ್ರಿ ಮೊದಲಾದವರು ಭಾಗವಹಿಸಿದ್ದರು.
ದ ಕ ಜಿಲ್ಲಾ ಕಾನೂನು ವೇದಿಕೆ (ರಿ) ಬಂಟ್ವಾಳ ತಾಲೂಕು ಘಟಕಾದ್ಯಕ್ಷ ಸುರೇಶ್ ಪೂಜಾರಿ ಸ್ವಾಗತಿಸಿ, ಪ್ರಸ್ತಾವನೆಗೈದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ವೀರೇಂದ್ರ ಎಂ ಸಿದ್ದಕಟ್ಟೆ ವಂದಿಸಿ, ಚಂದ್ರಶೇಖರ್ ರಾವ್ ಪುಂಚಮೆ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಮಂಗಳೂರು