ಭಾನುವಾರ, ಏಪ್ರಿಲ್ 28, 2024
ನೋಟಾ, ಅತಿ ಹೆಚ್ಚು ಅಲ್ಪಸಂಖ್ಯಾತರ ಮತದಾನ, ಮೂಡಬಿದ್ರೆ- ಬೆಳ್ತಂಗಡಿಯಲ್ಲಿ ಬಿಲ್ಲವರ ಅತಿ ಹೆಚ್ಚು ಮತದ ಬಗ್ಗೆ ಕಾಂಗ್ರೆಸ್ ನಿರೀಕ್ಷೆ.ಆ ಮೂಲಕ ಗೆಲುವಿನ ಭರವಸೆ!-ಬಿಜೆಪಿಯ ಬಣ ರಾಜಕೀಯ, ನೋಟಾ, ಸತ್ಯಜಿತ್ , ಗ್ಯಾರೆಂಟಿ, ಬಿಲ್ಲವ ಟ್ರಂಪ್ ಕಾರ್ಡ್ , ಅಲ್ಪಸಂಖ್ಯಾತರ ಬೂತುಗಳ ಹೆಚ್ಚಿನ ಮತದಾನ ಸಹಾಯ ಪಡೆದು ಮಂಗಳೂರು ಲೋಕಸಭೆಯಲ್ಲಿ ಪದ್ಮರಾಜ್ ವಿಜಯ ಪತಾಕೆ ಹಾರಿಸಬಹುದೇ?-ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸುಳ್ಯ: ಕೆಲಸಕ್ಕಿದ್ದ ಮನೆಯಿಂದಲೇ ಕಳ್ಳತನ

Twitter
Facebook
LinkedIn
WhatsApp
39 2

ಸುಳ್ಯ: ರಬ್ಬರ್‌ ಟ್ಯಾಪಿಂಗ್‌ ಕೆಲಸಕ್ಕಿದ್ದ ಕಾರ್ಮಿಕನೊಬ್ಬ ಕೆಲಸಕ್ಕಿದ್ದ ಮನೆಯಲ್ಲಿ ಚಿನ್ನ ಮತ್ತು ನಗದು ಕಳ್ಳತನ ನಡೆಸಿ ಸಿಕ್ಕಿ ಬಿದ್ದ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಬಳ್ಪದಿಂದ ವರದಿಯಾಗಿದೆ.

ಬಳ್ಪದ ಎಣ್ಣೆಮಜಲು ಪುಟ್ಟಣ್ಣ ಅವರ ಮನೆಗೆ ರಬ್ಬರ್‌ ಟ್ಯಾಪಿಂಗ್‌ ಕೆಲಸಕ್ಕೆ ಮರ್ದಾಳದ ಪ್ರಸಾದ್‌ ಎಂಬಾತ ಬಂದಿದ್ದು, ಇತ್ತೀಚೆಗೆ ಮನೆ ಮಂದಿ ಕಾರ್ಯಕ್ರಮವೊಂದಕ್ಕೆ ಹೊರ ಹೋಗಿದ್ದಾಗ ಕಾರ್ಮಿಕ ಮನೆಯೊಳಗೆ ಹೋಗಿ ಸರ, ಉಂಗುರ, ಮೊದಲಾದ ಚಿನ್ನಾಭರಣ ಹಾಗೂ 8,000 ರೂ. ನಗದು ಕಳ್ಳತನ ನಡೆಸಿದ್ದ. ಮರುದಿನ ಕಾರ್ಮಿಕ ಊರಿಗೆ ತೆರಳಿದ್ದ, ಮನೆಯವರಿಗೆ ಚಿನ್ನ ಮತ್ತು ನಗದು ಕಾಣೆಯಾಗಿರುವುದು ಬಳಿಕ ಗಮನಕ್ಕೆ ಬಂದಿದೆ.

ಈ ಬಗ್ಗೆ ಮನೆಮಂದಿ ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಿ ಕಾರ್ಮಿಕನ ಮನೆಗೆ ತೆರಳಿ ಊರಿನಲ್ಲಿದ್ದ ಆತನನ್ನು ಹಿಡಿದು, ಸುಬ್ರಹ್ಮಣ್ಯ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ವೇಳೆ ಕಳವು ನಡೆಸಿದ್ದು ಒಪ್ಪಿಕೊಂಡಿದ್ದಾನೆ.

ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳೂರು: ಚಪ್ಪಲಿ ಕಳೆದುಕೊಂಡ ಯುವಕನಿಂದ 112ಕ್ಕೆ ಕರೆ.!

ಮಂಗಳೂರು,ಜು 19: ನಗರದ ಸಭಾಂಗಣದಲ್ಲಿ ಯುವಕನೊಬ್ಬನ ಹೊರಗೆ ಬಿಟ್ಟಿದ್ದ ಚಪ್ಪಲಿ ನಾಪತ್ತೆಯಾಗಿ ಇದಕ್ಕಾಗಿ 112 ನಂಬರಿಗೆ ಕರೆ ಮಾಡಿ ಪೊಲೀಸರನ್ನು ಕರೆಸಿಯಿಸಿದ ಸ್ವಾರಸ್ಯಕರ ಘಟನೆ ಭಾನುವಾರ ನಗರದಲ್ಲಿ ನಡೆದಿದೆ.

ಶರವು ದೇವಸ್ಥಾನದ ಸಮೀಪದ ಸಭಾಂಗಣಕ್ಕೆ ಆಗಮಿಸಿದ್ದ ಯುವಕ ಚಪ್ಪಲಿಯನ್ನು ಹೊರಗೆ ಬಿಟ್ಟಿದ್ದು ವಾಪಾಸ್ ಬಂದಾಗ ಅಲ್ಲಿರಲಿಲ್ಲ. ಹೀಗಾಗಿ 112 ನಂಬರಿಗೆ ಕರೆ ಮಾಡಿ ದೂರು ದಾಖಲಿಸಿದ್ದಾನೆ. ಈ ದೂರನ್ನು ಪರಿಶೀಲಿಸುವಂತೆ ಬಂದರು ಠಾಣೆಗೆ ಸಂದೇಶ ಬಂದಿತ್ತು. ಇದನ್ನು ನೋಡಿ ಪೊಲೀಸರೂ ಸುಸ್ತು ಬಿದ್ದಿದ್ದಾರೆ. ಆದರೆ ದೂರನ್ನು ನಿರ್ಲಕ್ಷಿಸುವ ಹಾಗಿಲ್ಲವಲ್ಲ. ಹೀಗಾಗಿ ಕರ್ತವ್ಯದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಯುವಕ ಚಪ್ಪಲಿ ಕಳವಾಗಿರುವ ವಿಷಯ ಅವರಿಗೆ ತಿಳಿಸಿದ್ದಾನೆ.

ಪೊಲೀಸರು ಕೂಡ ಹುಡುಕಾಡಿದ್ದಾರೆ. ಸ್ಥಳದಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆ ಹಿಡಿಯಲ್ಪಟ್ಟ ದೃಶ್ಯಾವಳಿಗಳನ್ನು ಕೂಡಾ ಪರಿಶೀಲಿಸಿದ್ದಾರೆ. ಆಗ ಸಭಾಂಗಣಕ್ಕೆ ಮಾರುಕಟ್ಟೆಯಿಂದ ಸಾಮಗ್ರಿ ಹಾಕಲು ಬಂದಿದ್ದ ವ್ಯಕ್ತಿಯೊಬ್ಬ ಚಪ್ಪಲಿ ಹಾಕಿಕೊಂಡು ಹೋಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಠಾಣೆಗೆ ಬಂದು ದೂರು ನೀಡುವಂತೆ ಯುವಕನಲ್ಲಿ ಪೊಲೀಸರು ತಿಳಿಸಿದ್ದು, ಯುವಕ ದೂರು ನೀಡದೆ ತೆರಳಿದ್ದಾನೆ ಎಂದು ಹೇಳಲಾಗಿದೆ. ಕಳೆದು ಹೋದ ಚಪ್ಪಲಿಯ ಮೌಲ್ಯ ಎಷ್ಟೆಂದು ಮಾತ್ರ ತಿಳಿದು ಬಂದಿಲ್ಲ.

ಚಪ್ಪಲಿ ಕಳೆದುಕೊಂಡ ಮಾತ್ರಕ್ಕೆ ಪೊಲೀಸರನ್ನು ಕರೆಸುವ ಅಗತ್ಯವಿತ್ತೇ ? ಕ್ಷುಲಕ ಕಾರಣಕ್ಕೂ ಪೊಲೀಸರನ್ನು ಕರೆಸುವುದರಿಂಡ ಅವರು ರೋಸಿ ಹೋಗಿ ಮುಂದೆ ನಿಜಕ್ಕೂ ಅಗತ್ಯವಿದ್ದಾಗ ತತಕ್ಷಣ ಸ್ಪಂದಿಸದೇ ಇರುವ ಸಂದರ್ಭ ಸೃಷ್ಟಿಯಾದರೇ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಮಂಗಳೂರು