ಮಂಗಳವಾರ, ಮೇ 14, 2024
ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್--ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ-ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್..!-ಕಾಂಗ್ರೆಸ್ ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ; ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ ಪ್ರಕರಣ ದಾಖಲು..!-ಜೈಲಿನಿಂದ ಬಿಡುಗಡೆಯಾದ ಬಳಿಕ ಅರವಿಂದ್ ಕೇಜ್ರಿವಾಲ್ ಗೆ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ; ಸುಪ್ರೀಂನಿಂದ ಷರತ್ತುಗಳೇನು.?-ಇದು ನಾಚಿಕೆಗೇಡಿನ ಸಂಗತಿ; ಕೆಎಲ್ ರಾಹುಲ್ ಗೆ ನಿಂದಿಸಿದ್ದ ಸಂಜೀವ್ ಗೋಯೆಂಕಾ ವಿರುದ್ಧ ಮೊಹಮ್ಮದ್ ಶಮಿ ವಾಗ್ದಾಳಿ..!-ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು-ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ವಕೀಲ ದೇವರಾಜೆಗೌಡ ಪೊಲೀಸ್ ವಶಕ್ಕೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಉಳ್ಳಾಲ: ನಾಲ್ಕು ವಾಹನಗಳ ನಡುವೆ ಸರಣಿ ಅಪಘಾತ ; ಘಟನೆಯಲ್ಲಿ ಪ್ರಾಣಾಪಾಯದಿಂದ ಪಾರು!

Twitter
Facebook
LinkedIn
WhatsApp
WhatsApp Image 2023 09 09 at 4.33.32 PM

ಉಳ್ಳಾಲ ಸೆಪ್ಟೆಂಬರ್ 09: ಸರಣಿ ಅಪಘಾತದಲ್ಲಿ ವ್ಯಾಗನರ್ ಕಾರೊಂದು ಅಪ್ಪಚ್ಚಿಯಾದ ಘಟನೆ ರಾಷ್ಟ್ರೀಯ 66ರ ಜೆಪ್ಪುವಿನ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ಸಮೀಪದಲ್ಲೇ ಸಂಭವಿಸಿದೆ.

 ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಸಿಯಾಝ್ ಕಾರಿನ ಚಾಲಕ ಹಠಾತ್ ಬ್ರೇಕ್ ಹಾಕಿದ್ದಾರೆ.ಇದರಿಂದಾಗಿ ಹಿಂಬದಿಯಲ್ಲಿದ್ದ ಲಾರಿ ಸಿಯಾಝ್ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಅದೇ ವೇಳೆ ಲಾರಿ ಹಿಂಭಾಗದಲ್ಲಿದ್ದ ವ್ಯಾಗನಾರ್ ಕಾರು ಲಾರಿಯ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ.

ಅದೇ ವೇಳೆ ವ್ಯಾಗನರ್ ಕಾರಿನ ಹಿಂಭಾಗದಲ್ಲಿದ್ದ ಕೇರಳ ಸಾರಿಗೆ ಬಸ್ಸು ವ್ಯಾಗನಾರ್ ಕಾರಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಲಾರಿ ಹಾಗೂ ಬಸ್ ನಡುವೆ ಸಿಲುಕಿದ ವ್ಯಾಗನಾರ್ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿ ಅಪ್ಪಚ್ಚಿಯಾಗಿದೆ. ಉಳಿದ ವಾಹನಗಳ ಹಿಂಭಾಗಕ್ಕೆ ಹಾನಿಯಾಗಿದೆ. ವ್ಯಾಗನಾರ್ ಕಾರಿನ ಲ್ಲಿ ಚಾಲಕ ಮಾತ್ರ ಇದ್ದು, ಆತ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾನೆ.

ಎಲ್ಲಾ ವಾಹನಗಳಲ್ಲಿದ್ದ ಐದು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಮಂಗಳೂರು