ಮಂಗಳವಾರ, ಮೇ 14, 2024
ಕುರ್ಕುರೆ ತರಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ..!-ಹೆಚ್ ಡಿ ರೇವಣ್ಣಗೆ ಜಾಮೀನು ಸಿಕ್ಕಿದಕ್ಕೆ ನಾನಂತೂ ಖುಷಿ ಪಡಲ್ಲ, ಸಂಭ್ರಮಿಸುವ ಸಮಯವೂ ಇದಲ್ಲ; ಹೆಚ್ ಡಿ ಕುಮಾರಸ್ವಾಮಿ-ಮುಂಬೈ: ಬಿರುಗಾಳಿ ಮಳೆಗೆ ಜಾಹೀರಾತು ಫಲಕ ಕುಸಿದು 14 ಮಂದಿ ಸಾವು..!-ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!-ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!-ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಮತ್ತು ಗಾಳಿಯೊಂದಿಗೆ ಮಳೆ ಮುನ್ಸೂಚನೆ..!-ಕೊನೆಗೂ ಹೆಚ್ ಡಿ ರೇವಣ್ಣಗೆ ಜಾಮೀನು ಮಂಜೂರು ; ಕೋರ್ಟ್ ಷರತ್ತುಗಳೇನು.?-ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್-ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಲಗಿದ್ದಲ್ಲೆ ಕೊನೆಯುಸಿರೆಳೆದ 22ರ ಯುವಕ.

Twitter
Facebook
LinkedIn
WhatsApp
ಮಲಗಿದ್ದಲ್ಲೆ ಕೊನೆಯುಸಿರೆಳೆದ 22ರ ಯುವಕ.

ಬೈಂದೂರು: ಊಟ ಮಾಡಿ ಮನೆಯಲ್ಲಿ ಮಲಗಿದ್ದಾಗ ದೇಹದಲ್ಲಿ ಆಯಾಸಗೊಂಡು ಯುವಕನೊಬ್ಬ ಹಠಾತ್‌ ಮೃತಪಟ್ಟ ಘಟನೆ ಬೈಂದೂರು ಸಮೀಪದ ಮದ್ದೋಡಿ ರಸ್ತೆಯ ದರ್ಖಾಸ್‌ ಕಾಲನಿಯಲ್ಲಿ ನಡೆದಿದೆ.

ಬೈಂದೂರು ಮದ್ದೋಡಿ ರಸ್ತೆಯ ದರ್ಖಾಸ್‌ ಕಾಲನಿ ನಿವಾಸಿಯಾಗಿರುವ ಸಂದೇಶ್‌ (22) ಮೃತಪಟ್ಟ ಯುವಕ.

ಈತ ಕೂಲಿ ಕೆಲಸ ಮಾಡಿಕೊಂಡಿದ್ದು ಆರೋಗ್ಯವಂತನಾಗಿದ್ದ.ರಾತ್ರಿ ಊಟ ಮಾಡಿ ಮಲಗಿದ್ದಾಗ ಮೈಯೆಲ್ಲಾ ಬೆವತು ಮನೆಯವರನ್ನು ಕೂಗಿ ಕರೆದಿದ್ದ. ಮನೆಯವರು ತತ್‌ಕ್ಷಣ ಆಸ್ಪತ್ರೆಗೆ ಸಾಗಿಸಿದರೂ, ದಾರಿ ಮಧ್ಯೆ ಮೃತಪಟ್ಟಿದ್ದಾನೆ. ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಪುಂಜಾಲಕಟ್ಟೆಯಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಯುವತಿಯೋರ್ವಳು ಊಟ ಮಾಡಿ ಮಲಗಿದಲ್ಲಿಯೇ ಅಸ್ವಸ್ಥಗೊಂಡು ಸಾವಿಗೀಡಾಗಿದ್ದರು. ಹೃದಯಾಘಾತದಿಂದ ಸಾವು ಸಮಭವಿಸಿತ್ತೆಂದು ಅನಂತರ ಪರೀಕ್ಷಿಸಿದ ವೈದ್ಯರು ತಿಳಿಸಿದ್ದರು.

ಬಂಟ್ವಾಳ: ರಿಕ್ಷಾ-ಕಾರಿನ ನಡುವೆ ಅಪಘಾತ: ನಾಲ್ವರಿಗೆ ಗಾಯ

ಬಂಟ್ವಾಳ, ಸೆ 04 :  ರಿಕ್ಷಾ ಮತ್ತು ಕಾರಿನ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ ರಿಕ್ಷಾದಲ್ಲಿದ್ದ ಬಾಲಕಿ ಸಹಿತ ನಾಲ್ವರು ಗಾಯಗೊಂಡ ಘಟನೆ ವಗ್ಗ ಎಂಬಲ್ಲಿ ನಡೆದಿದೆ.

ಎಂಟು ವರ್ಷದ ಬಾಲಕಿ ಶ್ರೀನಿತ , ಪದ್ಮಲತಾ, ಅಪ್ಪಿಪೂಜಾರಿ ಮತ್ತು ಚಾಲಕ ಸಂಜೀವ ಪೂಜಾರಿ ಗಾಯಗೊಂಡವರು. ಕಾರು ಚಾಲಕ ಮಹಮ್ಮದ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ವಗ್ಗ ಸಮೀಪದ ಕಾಡಬೆಟ್ಟು ಕ್ರಾಸ್ ಎಂಬಲ್ಲಿ ಈ ಘಟನೆ ನಡೆದಿದೆ. ಕಾಡಬೆಟ್ಟು ಕ್ರಾಸ್ ನಿಂದ ಹೆದ್ದಾರಿಗೆ ರಿಕ್ಷಾ ಪ್ರವೇಶ ಮಾಡುವ ಸಂದರ್ಭದಲ್ಲಿ ಡಿಕ್ಕಿಹೊಡೆದಿದೆ. ಮಂಗಳೂರಿನಿಂದ ಬೆಳ್ತಂಗಡಿ ಮಾರ್ಗವಾಗಿ ಬೆಂಗಳೂರು‌ಕಡೆಗೆ ಹೋಗುತ್ತಿದ್ದ ಕಾರಿಗೆ ಕಾಡಬೆಟ್ಟು ಕ್ರಾಸ್ ನಲ್ಲಿ ಏಕಾಏಕಿ ರಿಕ್ಷಾ ಹೆದ್ದಾರಿಗೆ ನುಗ್ಗಿಸಿದ ಪರಿಣಾಮ ವಾಗಿ ಅಪಘಾತ ನಡೆದಿದೆ ಎಂದು ಹೇಳಲಾಗಿದ್ದು,ಕಾರು ಚಾಲಕ ಮಹಮ್ಮದ್ ರಿಕ್ಷಾ ಚಾಲಕನ ಮೇಲೆ ದೂರು ನೀಡಿದ್ದಾರೆ.

ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಮಂಗಳೂರು