ಮಂಗಳವಾರ, ಮೇ 7, 2024
ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಲೀಕ್ ಆಗಲು ನನ್ನ ಪಾತ್ರವಿಲ್ಲ; ದೇವರಾಜೆಗೌಡರಿಂದ ಸುಳ್ಳು ಆರೋಪವೆಂದ ಡಿಕೆ ಶಿವಕುಮಾರ್-ಕೋವಿಡ್ ಲಸಿಕೆಯಿಂದಲೇ ನನಗೆ ಹೃದಯಾಘಾತ ಸಂಭವಿಸಿರಬಹುದು? ನಟ ಶ್ರೇಯಸ್ ತಲ್ಪಾಡೆ-ಆಘಾತಕಾರಿ ಘಟನೆ; ಕ್ರಿಕೆಟ್‌ ಆಡುತ್ತಿದ್ದಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು ಬಾಲಕ ಸಾವು..!-ತಮ್ಮ ಭಾವಚಿತ್ರವನ್ನು ಅಳವಡಿಸಿ ಮತ ಹಾಕುವಂತೆ ಪೋಸ್ಟ್ ; ಆಪ್ತನ ವಿರುದ್ಧ ಅನಂತ್ ಕುಮಾರ್ ಹೆಗ್ಡೆ ದೂರು ದಾಖಲು.!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ ; ಇಲ್ಲಿದೆ ಇಂದಿನ ಚಿನ್ನ ಬೆಳ್ಳಿಯ ದರದ ವಿವರ-ಶೀಘ್ರದಲ್ಲೇ SSLC ಪಲಿತಾಂಶ ಪ್ರಕಟ; ರಿಸಲ್ಟ್ ನೋಡುವುದು ಹೇಗೆ.!-ಮೇ 7 ರ ಚುನಾವಣೆ ಬಳಿಕ ಪ್ರಜ್ವಲ್ ರೇವಣ್ಣ ಭಾರತಕ್ಕೆ ಆಗಮನ..?-ಮದುವೆಗೆ ತೆರಳಿದ್ದ 5 ಮಂದಿ ವಿದ್ಯಾರ್ಥಿಗಳು ಕನ್ಯಾಕುಮಾರಿ ಬೀಚ್ ನಲ್ಲಿ ಮುಳುಗಿ ಸಾವು!-ಚಾಲಕ ನಿಯಂತ್ರಣ ತಪ್ಪಿ 5 ವಿದಾರ್ಥಿಗಳ ದುರಂತ ಅಂತ್ಯ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Artemis mission: 50 ವರ್ಷ ಬಳಿಕ ಮತ್ತೆ ಚಂದ್ರಯಾನದ ಕನಸಿಗೆ ಅಮೆರಿಕದ ನಾಸಾ ಯಶಸ್ವಿ ಮುನ್ನುಡಿ

Twitter
Facebook
LinkedIn
WhatsApp
Artemis mission: 50 ವರ್ಷ ಬಳಿಕ ಮತ್ತೆ ಚಂದ್ರಯಾನದ ಕನಸಿಗೆ ಅಮೆರಿಕದ ನಾಸಾ ಯಶಸ್ವಿ ಮುನ್ನುಡಿ

ಕೇಪ್‌ ಕನವೆರಲ್‌: ಮತ್ತೊಮ್ಮೆ ಮಾನವ ಸಹಿತ ಚಂದ್ರಯಾನ (Moon Mission) ಕೈಗೊಳ್ಳುವ ತನ್ನ ಕನಸಿಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ (NASA) ಬುಧವಾರ ಯಶಸ್ವಿ ಮುನ್ನುಡಿ ಬರೆದಿದೆ. 2024ಕ್ಕೆ ಮಾನವ ಸಹಿತ ಚಂದ್ರಯಾನಕ್ಕೆ ನಾಸಾ ಉದ್ದೇಶಿಸಿದ್ದು, ಇದಕ್ಕೆ ಪೂರ್ವಭಾವಿಯಾಗಿ ಬುಧವಾರ ಅದು, ಒರಾಯನ್‌ ಕ್ಯಾಪ್ಸೂಲ್‌ (Orion Capsule) ಅನ್ನು ಚಂದ್ರನ (Moon) ಕಕ್ಷೆಗೆ ಕಳುಹಿಸಿದೆ. ಈ ಕ್ಯಾಪ್ಸೂಲ್‌ ಅನ್ನು ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಕೆಟ್‌ ಎಂಬ ಹಿರಿಮೆ ಹೊಂದಿರುವ ‘ಆರ್ಟೆಮಿಸ್‌ 1’ (Artemis – 1) ಯಶಸ್ವಿಯಾಗಿ ಹೊತ್ತೊಯ್ದು ಕಕ್ಷೆಯತ್ತ ಕಳುಹಿಸಿಕೊಟ್ಟಿದೆ. ನಾಸಾ ಹೀಗೆ ಚಂದ್ರಯಾನಕ್ಕೆ ಕೈಹಾಕಿರುವುದು 50 ವರ್ಷಗಳ ಬಳಿಕ ಎಂಬುದು ವಿಶೇಷ.

ಮಧ್ಯಾಹ್ನ 12.17ಕ್ಕೆ ನಭಕ್ಕೆ:
‘ಆರ್ಟೆಮಿಸ್‌’ ಯೋಜನೆಯ ಮೊದಲ ಭಾಗವಾಗಿ (ಆರ್ಟೆಮಿಸ್‌-1 ಯೋಜನೆ) 3 ಟೆಸ್ಟ್‌ ಡಮ್ಮಿಗಳಿರುವ ‘ಒರಾಯನ್‌ ಕ್ಯಾಪ್ಸೂಲ್‌’ ಅನ್ನು ಒಳಗೊಂಡ ದೈತ್ಯ ಬಾಹ್ಯಾಕಾಶ ಉಡ್ಡಯನ ರಾಕೆಟ್‌ನಲ್ಲಿ ಇಡಲಾಗಿತ್ತು. ಈ ರಾಕೆಟ್‌ ಭಾರತೀಯ ಕಾಲಮಾನ ಬುಧವಾರ ಮಧ್ಯಾಹ್ನ 12.17ಕ್ಕೆ ನಭಕ್ಕೆ ಹಾರಿತು. ಕ್ಯಾಪ್ಸೂಲ್‌ ಅನ್ನು ಹೊತ್ತೊಯ್ದ ಸ್ಪೇಸ್‌ ಲಾಂಚ್‌ ಸಿಸ್ಟಮ್‌ (Space Launch System) (ಎಸ್‌ಎಲ್‌ಎಸ್‌) ರಾಕೆಟ್‌, 32 ಅಂತಸ್ತಿನಷ್ಟು ಎತ್ತರವಿದ್ದು ವಿಶ್ವದ ಅತಿ ಶಕ್ತಿಶಾಲಿ ರಾಕೆಟ್‌ ಎನ್ನಿಸಿಕೊಂಡಿದೆ.

25 ದಿನ ಸಂಚಾರ:
ಬುಧವಾರ ಉಡ್ಡಯನಗೊಂಡ ಒರಾಯನ್‌ ಕ್ಯಾಪ್ಯೂಲ್‌ 25 ದಿನಗಳ ಕಾಲ ಚಂದ್ರನ ಕಕ್ಷೆಯಲ್ಲಿ ಸುತ್ತಿ ಡಿ. 11ರಂದು ತನ್ನ ಯಾತ್ರೆ ಪೂರ್ಣಗೊಳಿಸಿ ಪೆಸಿಫಿಕ್‌ ಸಾಗರದಲ್ಲಿ ಬಂದು ಬೀಳಲಿದೆ. ದು ಮಾನವಸಹಿತ ಚಂದ್ರಯಾನವಲ್ಲ. ಬದಲಾಗಿ ಮಾನವ ರಹಿತ ಚಂದ್ರಯಾನ. ಈಗ ಅಧ್ಯಯನಕ್ಕೆ ಮಾತ್ರ 3 ‘ಟೆಸ್ಟ್‌ ಡಮ್ಮಿ ಚಂದ್ರಯಾನಿ’ಗಳನ್ನು (ಪ್ರತಿಕೃತಿಗಳನ್ನು) ಇರಿಸಿ ಕಳಿಸಲಾಗಿದೆ. ಇದರ ಯಶಸ್ಸನ್ನು ಅರಿತುಕೊಂಡು ಮುಂದಿನ ದಿನಗಳಲ್ಲಿ ಆರ್ಟೆಮಿಸ್‌ 2 ಹಾಗೂ 3 ಹೆಸರಿನಲ್ಲಿ ಮಾನವಸಹಿತ ಯಾನ ಕೈಗೊಳ್ಳುವ ಉದ್ದೇಶ ನಾಸಾಗಿದೆ.

50 ವರ್ಷ ಬಳಿಕ:
ಈ ಹಿಂದೆ ನಾಸಾ, ಅಪೋಲೋ ಯಾನದ ಹೆಸರಿನಲ್ಲಿ 1969 ಹಾಗೂ 1972ರಲ್ಲಿ ಮಾನವಸಹಿತ ಚಂದ್ರಯಾನ ಕೈಗೊಂಡಿತ್ತು. ಇದಾಗಿ ಈಗ 50 ವರ್ಷ ಆಗುತ್ತಿದ್ದು, ಅರ್ಧ ಶತಕದ ಬಳಿಕ ಮತ್ತೆ ಸಾಹಸಕ್ಕೆ ಕೈಹಾಕುತ್ತಿದೆ. ಈ ಯೋಜನೆಗೆ ಆರ್ಟೆಮಿಸ್‌ 1, 2 ಹಾಗೂ 3 ಎಂದು 3 ಹಂತದ ಹೆಸರಿಟ್ಟಿದೆ.

ಯಾನದ ಉದ್ದೇಶವೇನು?:
50 ವರ್ಷ ಹಿಂದೆ ಚಂದ್ರಯಾನವನ್ನು ನಾಸಾ ಕೈಗೊಂಡಿತ್ತಾದರೂ, ಆಗ ತಂತ್ರಜ್ಞಾನ ಇಷ್ಟುಅಭಿವೃದ್ಧಿ ಆಗಿರಲಿಲ್ಲ. ಚಂದ್ರನ ಮೇಲ್ಭಾಗದಿಂದ ಯಾನಿಗಳು ತಂದ ವಸ್ತುಗಳನ್ನು ಅಧ್ಯಯನ ನಡೆಸಿದ್ದರೂ, ಅಧ್ಯಯನಕ್ಕೆ ಬಳಸಿದ ತಂತ್ರಜ್ಞಾನ ಹಳೆಯದಾಗಿದ್ದರಿಂದ ಅಷ್ಟೊಂದು ನಿಖರ ಫಲಿತಾಂಶ ಲಭ್ಯವಾಗಿರಲಿಲ್ಲ. ಹಾಗಾಗಿ ಈಗ ಸುಧಾರಿತ ತಂತ್ರಜ್ಞಾನದ ಮೂಲಕ ಚಂದ್ರನ ಅಧ್ಯಯನ ನಡೆಸುವ ಉದ್ದೇಶ ನಾಸಾಗಿದೆ. ಇದುವರೆಗೂ ವಿಶ್ವದ ಅರಿವಿಗೆ ಬಾರದ ಚಂದ್ರನ ದಕ್ಷಿಣ ಧ್ರುವದತ್ತ ತೆರಳಿ ಅಧ್ಯಯನ ನಡೆಸಲಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!

ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!

ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ! Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಸರಿಯಾದ ಸಮಯಕ್ಕೆ ಸಬ್ ರಿಜಿಸ್ಟರ್ಗಳ ರಿಜಿಸ್ಟ್ರೇಷನ್

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಅಂಕಣ