ಸೋಮವಾರ, ಮೇ 6, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಆಂಧ್ರದಲ್ಲಿ ಬೀಕರ ಮಳೆ ‌. ಕನಿಷ್ಠ 17 ಸಾವು. ನೂರಾರು ಮಂದಿ ನಾಪತ್ತೆ.

Twitter
Facebook
LinkedIn
WhatsApp
ಆಂಧ್ರದಲ್ಲಿ ಬೀಕರ ಮಳೆ ‌. ಕನಿಷ್ಠ 17 ಸಾವು. ನೂರಾರು ಮಂದಿ ನಾಪತ್ತೆ.

ಅಮರಾವತಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸುರಿಯುತ್ತಿರುವ ಭಾರಿ ಮಳೆ ಮತ್ತು ಪ್ರವಾಹದ ಕಾರಣ ಸತ್ತವರ ಸಂಖ್ಯೆ 17ಕ್ಕೆ ಮುಟ್ಟಿದೆ. 100 ಮಂದಿ ನಾಪತ್ತೆಯಾಗಿದ್ದಾರೆ. ದೇಗುಲಗಳ ನಗರ ತಿರುಪತಿಯಲ್ಲಿ ವಿಪರೀತ ಪ್ರವಾಹದ ಕಾರಣ ಯಾತ್ರಿಗಳು ಇದ್ದಲ್ಲೇ ಸಿಲುಕಿಬಿದಿದ್ದಾರೆ.
ಮೊದಲ ಹಂತದ ಘಟ್ಟದ ರಸ್ತೆಯಲ್ಲಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿರುವ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ), ತಿರುಪತಿಯಲ್ಲಿ ಪದಚಾರಿ ಮಾರ್ಗ ಮತ್ತು ವಸತಿ ಗೃಹಗಳನ್ನು ಮುಚ್ಚಲಾಗಿದೆ. ತಿರುಪತಿಯ ಹೊರ ವಲಯದಲ್ಲಿ ಹರಿಯುವ ಸ್ವರ್ಣಮುಖಿ ನದಿಯಲ್ಲಿ ಭಾರಿ ಪ್ರವಾಹ ಉಂಟಾಗಿದೆ.

ಇದರ ಜಲಾಶಯಗಳು ತುಂಬಿದ್ದು, ನೀರು ಹೊರಬಿಡಲಾಗಿದೆ. ಪ್ರವಾಹದಲ್ಲಿ ಸಿಲುಕಿ ರಾಜ್ಯ ಸಾರಿಗೆ ಸಂಸ್ಥೆಯ ಮೂರು ಬಸ್‌ಗಳು ಜಖಂಗೊಂಡಿವೆ. ಪ್ರವಾಹದಿಂದ ರಸ್ತೆಗಳು ಕೊಚ್ಚಿಹೋಗಿವೆ. ರೈಲು ಮತ್ತು ವಿಮಾನ ಸಂಚಾರ ಕೂಡ ವ್ಯತ್ಯಯವಾಗಿದೆ. ಕಡಪಾ ಏರ್‌ಪೋಟ್‌ ಅನ್ನು ನ.25ರವರೆಗೆ ಮುಚ್ಚಲಾಗಿದೆ.
ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಪರಿಹಾರ ಕಾರ್ಯಗಳಲ್ಲಿ ತೊಡಗಿವೆ. ರಾಯಲಸೀಮೆಯಲ್ಲಿ ಹೆಚ್ಚು ಹಾನಿಯಾಗಿದ್ದು, ಚಿತ್ತೂರು, ಕಡಪಾ, ಕರ್ನೂಲ್‌, ಅನಂತಪುರ ಜಿಲ್ಲೆಗಳಲ್ಲಿ ಮಳೆ ಪರಿಣಾಮ ತೀವ್ರವಾಗಿದೆ. ಗುರುವಾರದಿಂದ ನಿರಂತರ ಮಳೆ ಸುರಿಯುತ್ತಿರುವ ಕಾರಣ ಚೆಯ್ಯೆರು ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಇದರಿಂದ ಅನ್ನಮಯ್ಯ ನೀರಾವರಿ ಯೋಜನೆಯ ಏರಿ ಒಡೆದಿದೆ. ಇದರಿಂದ ಉಂಟಾದ ಪ್ರವಾಹದಲ್ಲಿ ಶುಕ್ರವಾರ ಮೂವರು ಸಾವನ್ನಪ್ಪಿದ್ದರು. 30ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು