ಮಂಗಳವಾರ, ಏಪ್ರಿಲ್ 23, 2024
ವಿಟ್ಲ: ಬಾವಿಯೊಂದಕ್ಕೆ ರಿಂಗ್ ಹಾಕುವ ವೇಳೆ ಆಕ್ಸಿಜನ್ ಸಿಗದೇ ಕ್ಲಿನಿಂಗ್ ಗೆ ಇಳಿದ ಇಬ್ಬರು ಇಬ್ಬರು ಕಾರ್ಮಿಕರು ಸಾವು..-ವಿಟ್ಲ: ಬಾವಿಯೊಂದಕ್ಕೆ ರಿಂಗ್ ಹಾಕುವ ವೇಳೆ ಆಕ್ಸಿಜನ್ ಸಿಗದೇ ಕ್ಲಿನಿಂಗ್ ಗೆ ಇಳಿದ ಇಬ್ಬರು ಇಬ್ಬರು ಕಾರ್ಮಿಕರು ಸಾವು..-ಚುನಾವಣೆ ಮುಗಿಯುತ್ತಿದ್ದಂತೆ ಮತ್ತೆ ವಾಪಸ್ ಬಿಜೆಪಿಗೆ ಬರುತ್ತೇನೆ; ಕೆಎಸ್ ಈಶ್ವರಪ್ಪ-ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನ್ಯಾಯಾಂಗ ಬಂಧನ ಮೇ 7 ರವರೆಗೆ ವಿಸ್ತರಣೆ..!-ಗುಣಮಟ್ಟದ ಉದ್ದೇಶದಿಂದ MDH ಮತ್ತು ಎವರೆಸ್ಟ್ ಮಸಾಲೆ ಉತ್ಪನ್ನಗಳ ಪರೀಕ್ಷೆಗೆ ಮುಂದಾದ FSSAI..!-ನಾನು ಯಾವುದೇ ಉಚ್ಛಾಟನೆಗೆ ಹೆದರುವುದಿಲ್ಲ; ಕೆಎಸ್ ಈಶ್ವರಪ್ಪ-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಬಿಜೆಪಿಯಿಂದ ಉಚ್ಚಾಟನೆ.!-ಅಂಪೈರ್ ತೀರ್ಪಿಗೆ ಗರಂ ಆಗಿ ವಾಗ್ವಾದಕ್ಕಿಳಿದ ವಿರಾಟ್ ಕೊಹ್ಲಿಗೆ ಬಿಸಿಸಿಐಯಿಂದ ಬಿತ್ತು ದಂಡ.!-ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಾಹುಲ್ ಹಮೀದ್ ಆಗ್ರಹ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಎಂದ ರೇಮಂಡ್ ಕಂಪನಿಯ ಸಂಸ್ಥಾಪಕ.

Twitter
Facebook
LinkedIn
WhatsApp
ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಎಂದ ರೇಮಂಡ್ ಕಂಪನಿಯ ಸಂಸ್ಥಾಪಕ.

ಮಕ್ಕಳಿಗೆ ಆಸ್ತಿ ಮಾಡಿ ಇಡಬೇಡಿ ಬದಲಾಗಿ ಮಕ್ಕಳನ್ನೇ ಆಸ್ತಿಯನ್ನಾಗಿಸಿ. ಎಂಬ ಮಾತು ಹಲವಾರು ವರ್ಷಗಳಿಂದ ಪ್ರಚಲಿತದಲ್ಲಿದೆ. ಇದೇ ಮಾತನ್ನು ಇತ್ತೀಚೆಗೆ ತಮ್ಮ ಹೇಳಿಕೆಗಳಿಂದಲೇ ಅತೀ ಹೆಚ್ಚು ಪ್ರಚಲಿತದಲ್ಲಿರುವ ರೇಮಂಡ್ ಗ್ರೂಪ್ ನ ಮಾಜಿ ಛೇರ್ಮನ್ ವಿಜಯಪತ್ ಸಿಂಘನಿಯ ಅವರು ಪುನರುಚ್ಚಿಸಿರಿಸಿದಂತಿದೆ.
ಅದೇನೆಂದರೆ, ‘ಮಕ್ಕಳಿಗೆ ಎಂದೆಂದಿಗೂ ಆಸ್ತಿ ಮಾಡಿ ಕೊಡಬೇಡಿ’ ಎಂದು ಹೇಳಿಕೆ ನೀಡಿದ್ದಾರೆ. ಮುಂದುವರೆದು ನನ್ನ ಜೀವನದಲ್ಲಿ ನಾನು ಬಹುದೊಡ್ಡ ಪಾಠ ಕಲಿತಿದ್ದೇನೆ ಎಂದಿದ್ದಾರೆ. ತಮ್ಮ ಆತ್ಮಕಥನ “An Incomplete Life” ಅನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ತಮ್ಮ ಜೀವನದ ಬಗೆಗಿನ ಹಲವಾರು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

ವಿಜಯಪತ್ ಅವರು ತಮ್ಮ ಪರಿವಾರದಲ್ಲಿ ಆಸ್ತಿಯ ವಿಚಾರವಾಗಿ ನಡೆದ ಒಂದು ಬಿರುಕಿನ ಬಗ್ಗೆಯೂ ಸಹ ಬರೆದಿದ್ದಾರೆ. ಇದರೊಂದಿಗೆ ಅವರು ತಮ್ಮ ಬಾಲ್ಯದ ದಿನಗಳಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇನ್ನು ತಮ್ಮ ಅನುಭವ ಹಂಚಿಕೊಳ್ಳುತ್ತಾ “ನನ್ನ ಜೀವನದಲ್ಲಿ ನಾನು ಕಲಿತ ಅತ್ಯಂತ ದೊಡ್ಡ ಪಾಠವೆಂದರೆ ಅದು ‘ನಾನು ಜೀವಂತವಿರುವಾಗ ನನ್ನ ಆಸ್ತಿಯನ್ನು ನನ್ನ ಮಕ್ಕಳಿಗೆ ಬಿಟ್ಟು ಕೊಡುವಾಗ ಬಹಳಷ್ಟು ಎಚ್ಚರಿಕೆ ಹಾಗೂ ಕಾಳಜಿವಹಿಸಬೇಕು’ ಎಂದಿದ್ದಾರೆ. ಮುಂದುವರೆದು ನಿಮ್ಮ ಆಸ್ತಿ ನಿಮ್ಮ ಮಕ್ಕಳಿಗೆ ಸೇರಬೇಕು ಆದರೆ ಅದು ನಿಮ್ಮ ಸಾವಿನ ನಂತರ ಸೇರಬೇಕು, ಏಕೆಂದರೆ ನನ್ನ ಉದ್ದೇಶ ಇಷ್ಟೇ ಎಲ್ಲ ತಂದೆ ತಾಯಿಯರು ನನ್ನಂತೆ ಅಲೆಯುವ ಪರಿಸ್ಥಿತಿ ಬರಬಾರದು ಎಂಬುದೇ ಆಗಿದೆ..! ಎನ್ನುತ್ತಾರೆ ವಿಜಯಪತ್ .

ನೀವು ನಂಬುತ್ತಿರೋ ಬಿಡುತ್ತಿರೋ ವಿಜಯಪತ್ ಅವರು ತಮ್ಮ ಆಸ್ತಿಯನ್ನು ಬಿಟ್ಟುಕೊಟ್ಟ ನಂತರ ಅವರು ಅದೆಂತಹ ಕಷ್ಟದ ದಿನಗಳನ್ನು ಎದುರಿಸಬೇಕಾಗಿ ಬಂದಿತ್ತೆಂದರೆ 1200 ಕೋಟಿ ರೂಪಾಯಿ ಮೌಲ್ಯದ ರೇಮಂಡ್ ಗ್ರೂಪ್ ನ ಒಡೆಯ ಒಡೆಯನಾಗಿದ್ದ ವಿಜಯಪತ್ ಅವರು ತಮ್ಮ ಕಛೇರಿಗೆ ಹೋಗದಂತಹ ಪರಿಸ್ಥಿತಿ ಇತ್ತು. ಅಲ್ಲಿ ತಮಗೆ ಸಂಬಂಧಪಟ್ಟ ಕೆಲವು ಮಹತ್ವಪೂರ್ಣ ದಾಖಲೆಗಳನ್ನೇ ನೋಡದಂತಹ ಪರಿಸ್ಥಿತಿ, ಅಲ್ಲಿನ ಕೆಲವು ಅವಶ್ಯಕ ಸಾಮಗ್ರಿಗಳನ್ನು ಮುಟ್ಟದ ಪರಿಸ್ಥಿತಿ, ಇದಷ್ಟೇ ಅಲ್ಲದೇ ಮುಂಬೈ ಹಾಗೂ ಲಂಡನ್ ನಲ್ಲಿರುವ ತಮ್ಮ ಕಾರನ್ನು ಅಲ್ಲಿಯೇ ಬಿಟ್ಟು ಬಿಡಬೇಕಾಯಿತು. ಅಷ್ಟೇ ಅಲ್ಲದೇ ತನ್ನ ಕಂಪನಿಯ ಸಿಬ್ಬಂದಿಗಳೊಂದಿಗೆ ಮಾತನ್ನು ಸಹ ಆಡದೆ ಇರುವಂತಹ ಹಾಗೂ ವಿಜಯಪತ್ ಅವರ ಕಛೇರಿಯ ಒಳಗೂ ಅವರ ಕಂಪನಿಯ ಕೆಲಸಗಾರರಿಗೆ ಬರದೇ ಇರುವಂತಹ ಪರಿಸ್ಥಿತಿಗೆ ತಂದು ಇಟ್ಟಿದ್ದರು ವಿಜಯಪತ್ ಅವರ ಮಗ. ಒಂದು ಕಾಲದಲ್ಲಿ 1200 ಕೋಟಿ ರೂಪಾಯಿ ಆಸ್ತಿ ಹೊಂದಿ ದೇಶದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಹೆಸರು ಮಾಡಿಕೊಂಡಿದ್ದ ವಿಜಯಪತ್ ಅವರು ಇಂದು ಎಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದರೆ, ಒಂದೊಂದು ಪೈಸೆ ಪೈಸೆಗೂ ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಒಂದು ಸಮಯದಲ್ಲಿ ವಿಜಯಪತ್ ಸಿಂಘನಿಯ ಅವರ ಆಡಂಬರ ಹೇಗಿತ್ತು ಎಂದರೆ ದೇಶದ ಅತ್ಯಂತ ಶ್ರೀಮಂತ ಮುಖೇಶ್ ಅಂಬಾನಿಯವರು ಈಗ ವಾಸವಿರುವ ಎಂಟಲಿಯಾ ಮನೆಗಿಂತಲೂ ದೊಡ್ಡ ಹಾಗೂ ಆಡಂಬರದ ಮನೆ ಜೆಕೆ ಹೌಸ್ ನಲ್ಲಿ ವಾಸವಿದ್ದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು