ಇಡೀ ಪ್ರಪಂಚವನ್ನು ಕೊರೋನಾ ಎಂಬ ಮಹಾಮಾರಿ ಇನ್ನಿಲ್ಲದಂತೆ ಕಾಡಿದೆ. ಅದು ಯಾವೊಂದು ದೇಶವನ್ನು ಬಿಟ್ಟಿಲ್ಲ. ಪ್ರಪಂಚದ ಮಾನವಕುಲ ಕೊರೋನಾ ವಿಪತ್ತಿನಿಂದ ಭಾದೆಗೆ ಒಳಗಾಗಿದೆ.
ಮನುಷ್ಯ ಸಹಜವಾಗಿ ಮನುಷ್ಯ ಭವಿಷ್ಯದ ಬಗ್ಗೆ ಚಿಂತನೆ ನಡೆಸುತ್ತಾನೆ. ಭವಿಷ್ಯದ ಚಿಂತನೆ ಅವನನ್ನು ಉತ್ಸಾಹದಿಂದ ಜೀವನ ನಡೆಸುವಂತೆ ಪ್ರೇರೇಪಿಸುತ್ತದೆ. ಆದರೆ ಕೊರೋನಾ ಎಂಬ ಮಹಾಮಾರಿ ಮನುಷ್ಯನ ಭವಿಷ್ಯದ ಚಿಂತನೆಗೆ ಬಹುದೊಡ್ಡ ಸವಾಲನ್ನು ಎತ್ತಿದೆ. ಭವಿಷ್ಯದ ಬಗ್ಗೆ ನೂರಾರು ಪ್ರಶ್ನೆಗಳು ಏಳುವಂತೆ ಮಾಡಿದೆ. ಹಲವಾರು ಮಂದಿ ತಮ್ಮ ಭವಿಷ್ಯದ ಬಗ್ಗೆ ಆತಂಕಿತರಾಗಿರುವ ಬಗ್ಗೆ ನಾವು ನೋಡಬಹುದು. ಆದರೆ ಮಾನವಕುಲದ ಹುಟ್ಟು ,ವಿಕಸನ ವನ್ನು ನಾವು ಸೂಕ್ಷ್ಮವಾಗಿ ಗಮನಿಸುವುದಾದರೆ, ಮನುಷ್ಯ ತನ್ನ ವಿಕಸನದ ಪ್ರತಿಹಂತದಲ್ಲೂ ಸವಾಲುಗಳನ್ನು ಎದುರಿಸಿದ್ದಾನೆ. ಆ ಸವಾಲುಗಳನ್ನು ಎದುರಿಸಿ ಇಂದಿನ ಆಧುನಿಕ ನಾಗರಿಕ ಮನುಷ್ಯನ ಎನಿಸಿಕೊಂಡಿದ್ದಾನೆ.
ಸವಾಲು ಮನುಷ್ಯನಿಗೆ ಹೊಸದರಲ್ಲ. ಸವಾಲು ಇದ್ದಾಗಲೇ, ಮನುಷ್ಯ ಹೊಸತನಕ್ಕೆ ತೆರೆದುಕೊಳ್ಳುತ್ತಾರೆ. ಸಂಶೋಧನೆಗೆ ತೊಡಗಿಕೊಳ್ಳುತ್ತಾನೆ. ಹೊಸ ಆವಿಷ್ಕಾರದ ಬಗ್ಗೆ ಗಮನಹರಿಸುತ್ತಾನೆ.
ಒಂದು ವೇಳೆ ಸವಾಲು ಇಲ್ಲದೆ ಹೋದರೆ, ಆತ ನಿಂತ ನೀರಾಗುತ್ತಾನೆ. ಈ ದೃಷ್ಟಿಯಲ್ಲಿ ಮನುಷ್ಯನಿಗೆ ಸವಾಲನ್ನು ಎದುರಿಸುವ ಬುದ್ಧಿವಂತಿಕೆ ಅನಾದಿಕಾಲದಿಂದಲೂ ಬಂದಿದೆ.
ಆದರೆ ಭವಿಷ್ಯದ ಬಗ್ಗೆ ಆತಂಕಿತನಾದರೆ ಭವಿಷ್ಯದ ಯೋಜನೆಗಳನ್ನು ಹಮ್ಮಿಕೊಳ್ಳಲು ಸಾಧ್ಯವೇ? ಸಾಧ್ಯವೇ ಇಲ್ಲ. ಕೊರೋನ ಕಾರಣವನ್ನು ಮುಂದಿಟ್ಟುಕೊಂಡು ಭವಿಷ್ಯದ ಬಗ್ಗೆ ಯೋಜನೆಗಳನ್ನು ಹಾಕಿಕೊಳ್ಳದೆ ಇರುವುದು ಮೂರ್ಖತನ ಎನಿಸಬಹುದು. ನಮ್ಮ ಭವಿಷ್ಯದ ಯೋಜನೆಗಳನ್ನು ಸ್ವಲ್ಪಮಟ್ಟಿಗೆ ಮುಂದೂಡಬಹುದು. ಆದರೆ ಭವಿಷ್ಯದ ಯೋಜನೆಗಳನ್ನು ಇಲ್ಲದಂತೆ ಮಾಡಿದರೆ ಜೀವನಕ್ಕೆ ಅರ್ಥವಿರುವುದಿಲ್ಲ. ಸವಾಲುಗಳನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಈ ನೆಲೆಯಲ್ಲಿ ಭವಿಷ್ಯದ ಚಿಂತನೆ ಇದ್ದರೆ ಮಾತ್ರ ನಮ್ಮ ಜೀವನ ಸುಖಮಯವಾದ ಜೀವನ, ಸಂತೋಷಮಯ ವಾಗಿರಲು ಸಾಧ್ಯ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಭವಿಷ್ಯದ ಚಿಂತನೆ ಮತ್ತು ಕನಸು ಕಾಣುವುದನ್ನು ಬಿಡಬಾರದು. ಬಿಟ್ಟರೆ ಈ ಮಹಾಮಾರಿಯ
ಸವಾಲನ್ನು ಎದುರಿಸಲು ಸಾಧ್ಯವಿಲ್ಲ. ಭವ್ಯ ಬದುಕಿನ ಭವಿಷ್ಯದ ಚಿಂತನೆ ನಮ್ಮ ಮನದಲ್ಲಿ ಇರಲಿ.