ಸೋಮವಾರ, ಏಪ್ರಿಲ್ 29, 2024
ಅಮಿತ್ ಶಾ ಹೇಳಿಕೆ ತಿರುಚಿದ ಆರೋಪ ; ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಮನ್ಸ್..!-ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ; ಬಿಜೆಪಿ ಸೇರ್ಪಡೆ ಸಾಧ್ಯತೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಗೆ ಟ್ವಿಸ್ಟ್ ದೂರುದಾರೆಯ ಅತ್ತೆಯಿಂದ ಶಾಕಿಂಗ್ ಹೇಳಿಕೆ.!-ಸಂಸದ ಪ್ರಜ್ವಲ್​ ರೇವಣ್ಣ ಜೆಡಿಎಸ್​ನಿಂದ ಉಚ್ಚಾಟನೆ.!-ಗೃಹಲಕ್ಷ್ಮಿ ಯೋಜನೆ ಹಣದಿಂದ ಮೊಬೈಲ್ ಖರೀದಿಸಿದ ಮಹಿಳೆ; ಡಿಸ್ಪ್ಲೇ ಪಿಚ್ಚರ್ ವೈರಲ್!-ಮಾಜಿ ಸಿಎಂ ಎಸ್​ಎಂ ಕೃಷ್ಣ ಆಸ್ಪತ್ರೆಗೆ ದಾಖಲು.!-ನೇಣಿಗೆ ಶರಣಾದ ಖ್ಯಾತ ನಟಿ ಅಮೃತಾ ಪಾಂಡೆ.!-ಪ್ರಜ್ವಲ್ ರೇವಣ್ಣನಿಂದ 300ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ಕೃತ್ಯ ; ಲಕ್ಷ್ಮಿ ಹೆಬ್ಬಾಳ್ಕರ್-Weather Alert: ಮುಂದಿನ 5 ದಿನ ರಾಜ್ಯದಲ್ಲಿ ಹಲವೆಡೆ ಬಿಸಿಗಾಳಿ ಎಚ್ಚರಿಕೆ..!-ಮೇ 1ರಂದು ನೇಹಾ ಮನೆಗೆ ಅಮಿತ್ ಶಾ ಭೇಟಿ ; ಮುರುಗೇಶ್ ನಿರಾಣಿ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ದಿನನಿತ್ಯ ಕೋಲ್ಡ್ ನೀರು ಕುಡಿಯುತ್ತಿದ್ದೀರಾ; ಇದು ಶರೀರಕ್ಕೆ ಒಳ್ಳೆಯದೇ ಅಥಾವ ಅಪಾಯವೇ?

Twitter
Facebook
LinkedIn
WhatsApp
ದಿನನಿತ್ಯ ಕೋಲ್ಡ್ ನೀರು ಕುಡಿಯುತ್ತಿದ್ದೀರಾ; ಇದು ಶರೀರಕ್ಕೆ ಒಳ್ಳೆಯದೇ ಅಥಾವ ಅಪಾಯವೇ?

ಈಗ ಬೇಸಿಗೆ ಆಗಿರುವುದರಿಂದ ನಾವು ಸಾಧ್ಯವಾದಷ್ಟು ನಮ್ಮ ದೇಹವನ್ನು ತಂಪಾಗಿ ಇಟ್ಟು ಕೊಳ್ಳಲು ನೋಡುತ್ತೇವೆ. ಈ ಸಂದರ್ಭದಲ್ಲಿ ತಂಪಾಗಿರುವ ಆಹಾರ ತಿನ್ನುವುದು ಅಥವಾ ತಂಪು ಪಾನೀಯ ಸೇವಿಸುವುದು ನಮಗೆ ಅಭ್ಯಾಸವಾಗಿರುತ್ತದೆ. ರೆಫ್ರಿಜರೇಟರ್ ನಲ್ಲಿ ನಾವು ಹಲವಾರು ಹಣ್ಣುಗಳನ್ನು ಈ ಸಲುವಾಗಿ ಇಟ್ಟಿರುತ್ತೇವೆ.ಕೆಲವರಿಗೆ ಕಾಲ ಯಾವುದೇ ಆದರೂ, ಕುಡಿಯಲು ಫ್ರಿಜ್‌ನಿಂದ ತೆಗೆದ ತಣ್ಣೀರೇ ಆಗಬೇಕು. ಸಾಮಾನ್ಯ ನೀರು ಅಥವಾ ಬಿಸಿ ನೀರು ಕುಡಿದ್ರೆ, ನೀರು ಕುಡಿದ ಹಾಗೆ ಆಗೋದೇ ಇಲ್ಲ ಅನ್ನೋದು ಹೆಚ್ಚಿನವರ ಆಂಬೋಣ. ಆದರೆ ಹೀಗೆ ಕೋಲ್ಡ್‌ ನೀರು ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ಅದೇ ರೀತಿ ತಂಪಾದ ಮಜ್ಜಿಗೆ, ಐಸ್ ಕ್ರೀಮ್, ಪಾನೀಯಗಳು ಸಹ ನಮಗೆ ಕೈಗೆ ಸಿಗುವಂತೆ ಮನೆಯಲ್ಲಿರುತ್ತವೆ. ಈ ಸಂದರ್ಭದಲ್ಲಿ ವಾತಾವರಣ ಏರುಪೇರು ಆಗುತ್ತಿರುವುದರಿಂದ ಮಕ್ಕಳು ಹಾಗೂ ವಯಸ್ಸಾದವರು ರೆಫ್ರಿಜರೇಟರ್ ನಲ್ಲಿನ ಆಹಾರ ಅಥವಾ ಪಾನೀಯಗಳ ಸೇವನೆಯ ವಿಚಾರದಲ್ಲಿ ಜಾಗೃತೆಯಿಂದ ಇರಬೇಕು. ಈಗ ಪ್ರಶ್ನೆಯೆಂದರೆ, ರೆಫ್ರಿಜರೇಟರ್ ನಿಂದ ನೇರವಾಗಿ ತಂಪಾದ ನೀರನ್ನು ತೆಗೆದುಕೊಂಡು ಕುಡಿಯುವುದರಿಂದ ಹೃದಯಕ್ಕೆ ಏನಾದರೂ ತೊಂದರೆ ಆಗುತ್ತಾ ಎಂದು

ಫ್ರಿಜ್ ಎಂದರೆ, ನೈಸರ್ಗಿಕ ಪರಿಸರಕ್ಕಿಂತ ಭಿನ್ನ. ಫ್ರಿಡ್ಜ್ನಲ್ಲಿನ ತಂಪು ಕೃತಕವಾಗಿರುತ್ತದೆ. ಸಾಮಾನ್ಯವಾಗಿ ಫ್ರಿಜ್ನಲ್ಲಿಟ್ಟು ತಣ್ಣಗಾದ ನೀರನ್ನು ಕುಡಿಯುವುದರಿಂದ ಯಾವುದೇ ದೊಡ್ಡ ಅಡ್ಡ ಪರಿಣಾಮಗಳಾಗುವುದಿಲ್ಲ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ತುಂಬಾ ತಣ್ಣೀರು ಕುಡಿಯಬೇಡಿ. ಏಕೆಂದರೆ, ಶೂನ್ಯ ಡಿಗ್ರಿಯ ವ್ಯಾಪ್ತಿಯಲ್ಲಿರುವ ನೀರು, ನಮ್ಮ ಆರೋಗ್ಯಕ್ಕೆ ಅಪಾಯಕಾರಿ. ಆ ನೀರನ್ನು ಕುಡಿದರೆ ಕೆಲವು ಅಡ್ಡ ಪರಿಣಾಮಗಳು ಉಂಟಾಗಬಹುದು. ಅವು ಯಾವುವು ಗೊತ್ತಾ?

1. ಹೃದಯ ಬಡಿತ ಕಡಿಮೆಯಾಗಬಹುದು 

ಬೇಸಿಗೆಯಲ್ಲಿ, ಕೋಲ್ಡ್ ನೀರು ಕುಡಿಯುವುದು ನಿಮ್ಮ ಹೃದಯ ಬಡಿತದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಸಾಮಾನ್ಯ ನೀರನ್ನು ಕುಡಿಯಲು ಪ್ರಯತ್ನಿಸಿ. ಕೋಲ್ಡ್ ನೀರು ನಿಮ್ಮ ಹೃದಯ ಬಡಿತವನ್ನು ಕಡಿಮೆ ಮಾಡುತ್ತದೆ. ಹೀಗಾದಾಗ ಹೃದ್ರೋಗದ ಅಪಾಯ ಕೂಡಾ ಹೆಚ್ಚುತ್ತದೆ. ಇದರೊಂದಿಗೆ ಕೋಲ್ಡ್ ನೀರು ಕುಡಿಯುವುದರಿಂದ ಮೆದುಳಿನ ಮೇಲೆ ಕೂಡಾ ಪರಿಣಾಮ ಬೀರುತ್ತದೆ.

2.ತಣ್ಣೀರು ಕುಡಿಯುವುದರಿಂದ ಮೈಗ್ರೇನ್ ಲಕ್ಷಣ

ತುಂಬಾ ತಣ್ಣೀರು ಕುಡಿದರೆ, ಬೇಗ ಕುಡಿದರೆ, ಇದ್ದಕ್ಕಿದ್ದಂತೆ ತಲೆನೋವು ಬರುತ್ತದೆ. ಇದನ್ನು ಮೆದುಳಿನ ಫ್ರೀಜ್ ಎಂದು ಕರೆಯಲಾಗುತ್ತದೆ. ಇದನ್ನು ಐಸ್ ಕ್ರೀಮ್ ಹ್ಯಾಡಾಕ್ ಎಂದೂ ಕರೆಯುತ್ತಾರೆ. ಈ ತಲೆನೋವು ಹೇಗೆ ಬರುತ್ತದೆ ಅಂದರೆ ತಣ್ಣೀರು ತಕ್ಷಣವೇ ರಕ್ತನಾಳಗಳನ್ನು ಸಂಧಿಸುತ್ತದೆ. ಅದು ತಲೆಗೆ ಹೋಗುತ್ತದೆ. ಅಲ್ಲಿ ನೀರು ವೇಗವಾಗಿ ವಿಸ್ತರಿಸುತ್ತದೆ. ಇದು ಅಲ್ಪಾವಧಿಯ ತಲೆನೋವು ತರುತ್ತದೆ.

3. ಹೃದಯ ರೋಗಿಗಳು ಕೋಲ್ಡ್ ನೀರು ಕುಡಿಯಬಾರದು!

ಅವರು ಹೇಳುವ ಪ್ರಕಾರ ಹೃದಯ ರೋಗಿಗಳು ಅತಿಯಾಗಿ ತಂಪಾದ ನೀರನ್ನು ಕುಡಿಯಬಾರದು. ಇದು ಹೃದಯದ ಬಡಿತ ಗಳಲ್ಲಿ ಏರುಪೇರು ಉಂಟುಮಾಡುತ್ತದೆ ಮತ್ತು ಕೆಲ ವೊಮ್ಮೆ ಗಂಭೀರ ಸ್ವರೂಪದಲ್ಲಿ ಹೃದಯಘಾತವನ್ನು ತಂದು ಕೊಡುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ.

4. ಜೀರ್ಣಾಂಗ ವ್ಯವಸ್ಥೆಯ ಮೇಲೂ ಕೆಟ್ಟ ಪರಿಣಾಮ :

ಕೋಲ್ಡ್ ನೀರು ಕುಡಿದರೆ ಬಿಸಿಲ ಧಗೆಯಿಂದ ಮುಕ್ತಿ ಸಿಗುತ್ತದೆ, ದೇಹಕ್ಕೆ ಹಿತ ಅನ್ನಿಸುತ್ತದೆ ಎಂಬ ಭಾವನೆಯಿಂದ ನಾವು ಕೂಡಾ ತಣ್ಣೀರಿನ ಮೊರೆ ಹೋಗುತ್ತೇವೆ. ಆದರೆ ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೂಡಾ ಕೆಟ್ಟ ಪರಿಣಾಮ ಬೀರುತ್ತದೆ. ಅಂದರೆ ನಾವು ಸೇವಿಸುವ ಆಹಾರ ಸುಲಭವಾಗಿ ಜೀರ್ಣವಾಗುವುದಿಲ್ಲ.

5.ರೋಗನಿರೋಧಕ ಶಕ್ತಿಯೂ ದುರ್ಬಲವಾಗುತ್ತದೆ :

ಕರೋನಾ ಅವಧಿಯಲ್ಲಿ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು ಬಹಳ ಮುಖ್ಯ. ಆದರೆ ತಣ್ಣೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವ ಸಾಧ್ಯತೆಯಿದೆ. ಹಾಗಾಗಿ, ಬೇಸಿಗೆಯಲ್ಲಿಯೂ ಸಾಮಾನ್ಯ ನೀರನ್ನು ಕುಡಿಯಲು ಪ್ರಯತ್ನಿಸಿ. ಹೀಗೆ ಮಾಡಿದಾಗ ಕೆಲವು ಕಾಯಿಲೆಗಳನ್ನು ಕೂಡಾ ದೂರವಿರಿಸಬಹುದು.

  • ತಣ್ಣೀರು ಕುಡಿಯುವುದರಿಂದ ಬಾಯಾರಿಕೆ ತಣಿಯುವುದಿಲ್ಲ. ಬದಲಾಗಿ ಬಾಯಾರಿಕೆ ಹೆಚ್ಚಾಗುತ್ತದೆ. ಅದಕ್ಕಾಗಿಯೇ ನಾವು ಹೆಚ್ಚು ನೀರು ಕುಡಿಯುತ್ತೇವೆ. ಮೂತ್ರ ವಿಸರ್ಜನೆಯೂ ಆಗಾಗ ಮಾಡಬೇಕಾಗುತ್ತದೆ. ಇದರಿಂದ ನಾವು ದೇಹದಲ್ಲಿನ ಲವಣಗಳನ್ನು ಕಳೆದುಕೊಳ್ಳುತ್ತೇವೆ.
  • ತಣ್ಣೀರು ಕುಡಿಯುವುದರಿಂದ ಮೆದುಳಿಗೆ ಆಮ್ಲಜನಕದ ಸಾಗಣೆ ಕಡಿಮೆಯಾಗುತ್ತದೆ. ಇದು ಮೆದುಳಿನ ಕೋಶಗಳಿಗೆ ಹಾನಿಯನ್ನುಂಟುಮಾಡುತ್ತದೆ. ಇದರಿಂದ ತಲೆತಿರುಗುವಿಕೆ ಉಂಟಾಗುತ್ತದೆ.
  • ತುಂಬಾ ತಣ್ಣನೆಯ ನೀರನ್ನು ಕುಡಿಯುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ನಿಧಾನಗೊಳಿಸುತ್ತದೆ. ಏಕೆಂದರೆ ತಣ್ಣೀರು ಜೀರ್ಣಕ್ರಿಯೆಯಲ್ಲಿ ತೊಡಗಿರುವ ಸ್ನಾಯುಗಳನ್ನು ಸಂಕುಚಿತಗೊಳಿಸುತ್ತದೆ. ಆಗ ಸ್ನಾಯುಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಇದು ನಿಮಗೆ ಹೊಟ್ಟೆಯ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಹೊಟ್ಟೆಯಲ್ಲಿ ಸೆಳೆತ ಮತ್ತು ಉಬ್ಬುವುದು.
 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ