ಭಾನುವಾರ, ಮೇ 5, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

1,300 ಉದ್ಯೋಗಿಗಳ ಬಳಿಕ ಅಧ್ಯಕ್ಷನನ್ನೂ ವಜಾಗೊಳಿಸಿದ ಜೂಮ್ ಕಂಪನಿ

Twitter
Facebook
LinkedIn
WhatsApp
MV5BNTk1OTUxMzIzMV5BMl5BanBnXkFtZTcwMzMxMjI0Nw@@. V1 1 6

ವಾಷಿಂಗ್ಟನ್: ವೀಡಿಯೊ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್ ಜೂಮ್ (Zoom) ತನ್ನ ಅಧ್ಯಕ್ಷ ಗ್ರೆಗ್ ಟಾಂಬ್ (Greg Tomb) ಅವರನ್ನು ವಜಾಗೊಳಿಸಿದೆ.

ಟಾಂಬ್ 2022ರ ಜೂನ್ ತಿಂಗಳಿನಲ್ಲಿ ಜೂಮ್‌ಗೆ ಸೇರ್ಪಡೆಯಾಗಿದ್ದರು. ಇತ್ತೀಚೆಗಷ್ಟೇ ಕಂಪನಿ ತನ್ನ 1,300 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಕಂಪನಿ 10 ತಿಂಗಳ ಹಿಂದೆ ಅಧ್ಯಕ್ಷ ಸ್ಥಾನಕ್ಕೇರಿದ್ದ ಟಾಂಬ್‌ರನ್ನು ಹಠಾತ್ತನೆ ವಜಾಗೊಳಿಸಿದೆ. ಇದೀಗ ಜೂಮ್‌ನ ಮುಂದಿನ ಅಧ್ಯಕ್ಷ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಟಾಂಬ್ ಉದ್ಯಮಿ ಹಾಗೂ ಈ ಹಿಂದೆ ಗೂಗಲ್‌ನಲ್ಲೂ ಕಾರ್ಯನಿರ್ವಹಿಸಿದ್ದಾರೆ. ಜೂಮ್ ಕಂಪನಿ 2011ರಲ್ಲಿ ಸ್ಥಾಪನೆಯಾಗಿದ್ದು, ಕೋವಿಡ್ ಕಾಲದಲ್ಲಿ ಭಾರೀ ಪ್ರಗತಿ ಸಾಧಿಸಿತ್ತು. ಲಾಕ್‌ಡೌನ್ ವೇಳೆ ಕಂಪನಿಗಳ ಮೀಟಿಂಗ್ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಜೂಮ್ ಅತ್ಯಂತ ಉಪಯುಕ್ತವಾಗಿತ್ತು. ಇದೀಗ ಲಾಕ್‌ಡೌನ್ ಕಳೆದು, ಬೇಡಿಕೆ ಕಡಿಮೆಯಾಗುತ್ತಿದ್ದಂತೆ ಕಂಪನಿಯನ್ನು ಆರ್ಥಿಕವಾಗಿ ನಿಭಾಯಿಸಲು ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಾರಂಭಿಸಿದೆ. 

ಕಳೆದ ತಿಂಗಳು ಕಂಪನಿ ತನ್ನ ಶೇ.15ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು. ಇದರ ಪ್ರಕಾರ, ಕಂಪನಿಯ ಸುಮಾರು 1,300 ಉದ್ಯೋಗಿಗಳನ್ನು ಜೂಮ್ ಇತ್ತೀಚೆಗೆ ವಜಾಗೊಳಿಸಿದೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ