ಭಾನುವಾರ, ಮೇ 5, 2024
ಪ್ರಜ್ವಲ್‌ ರೇವಣ್ಣರ ಅಶ್ಲೀಲ ವಿಡಿಯೋವನ್ನು ನಾನು ನೋಡುವ ಧೈರ್ಯ ಮಾಡಿಲ್ಲ :ನಿಖಿಲ್‌ ಕುಮಾರಸ್ವಾಮಿ-Onion price : ಈರುಳ್ಳಿ ದರ ಮತ್ತೆ ಏರಿಕೆಯಾಗುವ ಸಾಧ್ಯತೆ; ಕಾರಣವೇನು?-ಅಶ್ಲೀಲ ವಿಡಿಯೋ ಪ್ರಕರಣ; ದೇವೇಗೌಡರ ನಿವಾಸಿದಿಂದಲೇ ಹೆಚ್​ಡಿ ರೇವಣ್ಣ ಎಸ್ಐಟಿ ವಶಕ್ಕೆ..!-ಮಂಗಳೂರಿನ ಚುನಾವಣೆಯ ಡಲ್ ಪ್ರಚಾರದ ಮೂಲಕ ಹೆಣೆ ದ ಬಿಜೆಪಿ ತಂತ್ರಗಾರಿಕೆಯು ರಾಷ್ಟ್ರೀಯ ಕಾಂಗ್ರೆಸ್ ನ ದಾರಿ ತಪ್ಪಿಸಿತೇ?-ಚುನಾವಣಾ ಪ್ರಚಾರಕ್ಕೆ ಹಣವಿಲ್ಲವೆಂದು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿ ಕಾಂಗ್ರೆಸ್​​ ಅಭ್ಯರ್ಥಿ..!-ಕೋವಿಶೀಲ್ಡ್​ ಪಡೆದವರು ಕೋಲ್ಡ್, ಐಸ್​ ಕ್ರೀಮ್ ಸೇವಿಸಬಾರದು ಎನ್ನುವುದು ಸುಳ್ಳು ಸುದ್ದಿ ಎಂದ ಆರೋಗ್ಯ ಇಲಾಖೆ.!-17 ಭಾರತೀಯರು ಸೇರಿದಂತೆ ಒಟ್ಟು 25 ಮಂದಿ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಬಿಡುಗಡೆ ಮಾಡಿದ ಇರಾನ್!-ಕಾರ್ಕಳ : ನಾಲ್ಕು ತಿಂಗಳೊಳಗೆ ಪರುಶುರಾಮ ಥೀಂ ಪಾರ್ಕ್ ಕಾಮಗಾರಿ ಮುಗಿಸುವಂತೆ ಹೈಕೋರ್ಟ್ ಆದೇಶ..!-ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!-ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಇಂದು ಮುಂಬೈಗೆ ಆರ್‌ಸಿಬಿ ಸವಾಲು..! ಗೆಲುವಿನ ಹಳಿಗೆ ಮರಳುತ್ತಾ ಮಂಧನಾ ಪಡೆ?

Twitter
Facebook
LinkedIn
WhatsApp
MV5BZTMxMzkyZTItODc3ZS00MDU4LTliOWUtMDI2YThlOGRjOTQ4XkEyXkFqcGdeQXVyMjkxNzQ1NDI@. V1 FMjpg UX1000 1 5

ನವಿ ಮುಂಬೈ(ಮಾ.06): ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್‌ ತಂಡವು ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್‌ ಎದುರು 143 ರನ್‌ಗಳ ಬೃಹತ್ ಗೆಲುವು ದಾಖಲಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಇನ್ನೊಂದೆಡೆ ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಮೊದಲ ಪಂದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಎದುರು 60 ರನ್‌ಗಳ ಆಘಾತಕಾರಿ ಸೋಲು ಅನುಭವಿಸಿದೆ. ಇದೀಗ ಮುಂಬೈ ಎದುರು ಆರ್‌ಸಿಬಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.

ಮೇಲ್ನೋಟಕ್ಕೆ ಎರಡು ತಂಡಗಳು ಸಾಕಷ್ಟು ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದು, ಮುಂಬೈ ಕೊಂಚ ಸಮತೋಲಿತ ತಂಡವಾಗಿ ಕಾಣಿಸಿಕೊಂಡಿದೆ. ಬ್ಯಾಟಿಂಗ್‌ನಲ್ಲಿ ಯಾಶ್ತಿಕಾ ಭಾಟಿಯಾ, ಹೀಲೆ ಮ್ಯಾಥ್ಯೂಸ್‌, ಹರ್ಮನ್‌ಪ್ರೀರ್ ಕೌರ್, ನಥಾಲಿ ಶೀವರ್ ಬ್ರಂಟ್ , ಅಮೆಲಿಯಾ ಕೆರ್ರ್ ಅವರಂತಹ ಬ್ಯಾಟರ್‌ಗಳಿದ್ದಾರೆ. ಇನ್ನೊಂದೆಡೆ ಆರ್‌ಸಿಬಿ ತಂಡವು ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಕಣಕ್ಕಿಳಿಯುವ ಸಾಧ್ಯತೆಯಿದೆ. ಆರ್‌ಸಿಬಿ ತಂಡವು ಸ್ಮೃತಿ ಮಂಧನಾ , ಸೋಫಿ ಡಿವೈನ್‌, ಹೀಥರ್ ನೈಟ್‌ ಹಾಗೂ ಎಲೈಸಿ ಪೆರ್ರಿಯನ್ನೇ ನೆಚ್ಚಿಕೊಂಡಿದೆ. 

ಇನ್ನು ಆರ್‌ಸಿಬಿ ಬೌಲರ್‌ಗಳು ಮೊದಲ ಪಂದ್ಯದಲ್ಲೇ ಎದುರಾಳಿ ತಂಡಕ್ಕೆ 200+ ರನ್ ಬಿಟ್ಟುಕೊಡುವ ಮೂಲಕ ದುಬಾರಿಯಾಗಿದ್ದರು. ಇದೀಗ ಮುಂಬೈ ಎದುರು ರೇಣುಕಾ ಠಾಕೂರ್, ಮೆಗನ್ ಶುಟ್‌, ಎಲೈಸಿ ಪೆರ್ರಿ ಜತೆಗೆ ದೇಶಿ ತಾರೆಯರು ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ.

ಪಂದ್ಯ ಆರಂಭ: ಸಂಜೆ 7.30ಕ್ಕೆ

ಯುಪಿ ಗ್ರೇಟ್‌ ಚೇಸ್‌

ನವಿ ಮುಂಬೈ(ಮಾ.06): ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌ನಲ್ಲಿ ಗುಜ​ರಾತ್‌ ಜೈಂಟ್ಸ್‌ ಸತತ 2ನೇ ಸೋಲುಂಡಿದೆ. ಉದ್ಘಾ​ಟನಾ ಪಂದ್ಯ​ದಲ್ಲಿ ಮುಂಬೈ ಇಂಡಿ​ಯ​ನ್ಸ್‌ ವಿರುದ್ಧ ಸೋತಿದ್ದ ಗುಜ​ರಾತ್‌ ಜೈಂಟ್ಸ್‌ ಭಾನು​ವಾರ ತನ್ನ 2ನೇ ಪಂದ್ಯ​ದಲ್ಲಿ ಯುಪಿ ವಾರಿ​ಯ​ರ್ಸ್‌ಗೆ  ಶರ​ಣಾ​ಯಿ​ತು. ಅತ್ಯಂತ ರೋಚ​ಕ​ವಾ​ಗಿ ಸಾಗಿದ ಪಂದ್ಯ​ದಲ್ಲಿ ಯುಪಿ ತಂಡ 3 ವಿಕೆಟ್‌ ಗೆಲುವು ಸಾಧಿ​ಸಿತು. ಮೊದಲು ಬ್ಯಾಟ್‌ ಮಾಡಿದ ​ಗು​ಜ​ರಾತ್‌ 6 ವಿಕೆಟ್‌ ಕಳೆ​ದು​ಕೊಂಡು 169 ರನ್‌ ಕಲೆ​ಹಾ​ಕಿತು. ಹರ್ಲೀನ್‌ ಡಿಯೋಲ್‌ 32 ಎಸೆ​ತ​ಗ​ಳಲ್ಲಿ 46 ರನ್‌ ಸಿಡಿ​ಸಿ​ದರೆ, ಆಶ್ಲೆ ಗಾಡ್ರ್ನರ್‌ 25, ಮೇಘನಾ 24, ಹೇಮ​ಲತಾ 21 ರನ್‌ ಕೊಡುಗೆ ನೀಡಿ​ದರು. ಸೋಫಿ ಎಕ್ಲೆ​ಸ್ಟೋನ್‌, ದೀಪ್ತಿ ಶರ್ಮಾ ತಲಾ 2 ವಿಕೆಟ್‌ ಕಿತ್ತರು. 

MI-W vs RCB-W Dream11 Prediction With Stats, Pitch Report & Player Record  of WPL, 2023 For Match 4 - ProBatsman

ಇನ್ನು ಸ್ಪರ್ಧಾ​ತ್ಮಕ ಗುರಿ ಬೆನ್ನ​ತ್ತಿದ ಯುಪಿ ವಾರಿಯರ್ಸ್‌ 19.5 ಓವ​ರಲ್ಲಿ 7 ವಿಕೆಟ್‌ ಕಳೆ​ದು​ಕೊಂಡು ಗೆಲುವು ಸಾಧಿ​ಸಿತು. 20ಕ್ಕೆ ಪ್ರಮುಖ 3 ವಿಕೆಟ್‌ ಕಳೆ​ದು​ಕೊಂಡ ಬಳಿಕ ಕಿರಣ್‌ ನಾವ್ಗಿರೆ (53) ತಂಡಕ್ಕೆ ಆಸ​ರೆ​ಯಾ​ದರು. ಆರಂಭಿಕ ಬ್ಯಾಟರ್‌ಗಳಾದ ಅಲಿಸಾ ಹೀಲೆ(7) ಹಾಗೂ ಅಂಡರ್ 19 ಪ್ರತಿಭೆ ಶ್ವೇತಾ ಶೆರಾವತ್(5) ಒಂದಂಕಿ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿದರೆ, ದೀಪ್ತಿ ಶರ್ಮಾ ಖಾತೆ ತೆರೆಯುವ ಮುನ್ನವೇ ಕಿಮ್ ಗರ್ತ್‌ಗೆ ವಿಕೆಟ್ ಒಪ್ಪಿಸಿದರು. ಕೇವಲ 105 ರನ್‌ಗಳಿಗೆ ಯುಪಿ ವಾರಿಯರ್ಸ್‌ 7 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೊನೆ 4 ಓವ​ರಲ್ಲಿ ತಂಡಕ್ಕೆ 63 ರನ್‌ ಅಗ​ತ್ಯ​ವಿ​ತ್ತು. ಗ್ರೇಸ್‌ ಹ್ಯಾರಿ​ಸ್‌​ 26 ಎಸೆ​ಗ​ಳಲ್ಲಿ 59 ರನ್‌ ಸಿಡಿಸಿ ತಂಡಕ್ಕೆ ಗೆಲುವು ತಂದು​ಕೊ​ಟ್ಟರು. ಎಕ್ಲೆ​ಸ್ಟೋನ್‌ 22 ರನ್‌ ಗಳಿ​ಸಿ​ದ​ರು.

ಸದ್ಯ ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ ಮೂರು ಪಂದ್ಯಗಳ ಮುಕ್ತಾಯದ ವೇಳೆಗೆ ಮುಂಬೈ ಇಂಡಿಯನ್ಸ್‌ ತಂಡವು ಅಗ್ರಸ್ಥಾನ ಕಾಯ್ದುಕೊಂಡಿದ್ದರೇ, ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಯುಪಿ ವಾರಿಯರ್ಸ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ. ಇನ್ನು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್ ಜೈಂಟ್ಸ್‌ ತಂಡಗಳು ಕ್ರಮವಾಗಿ ನಾಲ್ಕು ಮತ್ತು 5ನೇ ಸ್ಥಾನ ಪಡೆದಿವೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ