ಮಂಗಳವಾರ, ಏಪ್ರಿಲ್ 30, 2024
ನಮ್ಮದು ಮತ್ತು ರೇವಣ್ಣಕುಟುಂಬವೇ ಬೇರೆ ಬೇರೆ; ಕುಮಾರಸ್ವಾಮಿ-ಹೆತ್ತ ತಂದೆಯನ್ನೇ ಹಿಗ್ಗಾಮುಗ್ಗಾ ಮುಖಕ್ಕೆ ಜಾಡಿಸಿ ಮಗನಿಂದ ಕ್ರೂರ ಕೃತ್ಯ ; ಇಲ್ಲಿದೆ ವಿಡಿಯೋ-Gold Rate: ಏರಿಳಿತದಲ್ಲಿರುವ ಚಿನ್ನದ ದರ ; ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿಯ ದರದ ವಿವರ-ಅಮಿತ್ ಶಾ ಹೇಳಿಕೆ ತಿರುಚಿದ ಆರೋಪ ; ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಮನ್ಸ್..!-ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ; ಬಿಜೆಪಿ ಸೇರ್ಪಡೆ ಸಾಧ್ಯತೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಗೆ ಟ್ವಿಸ್ಟ್ ದೂರುದಾರೆಯ ಅತ್ತೆಯಿಂದ ಶಾಕಿಂಗ್ ಹೇಳಿಕೆ.!-ಸಂಸದ ಪ್ರಜ್ವಲ್​ ರೇವಣ್ಣ ಜೆಡಿಎಸ್​ನಿಂದ ಉಚ್ಚಾಟನೆ.!-ಗೃಹಲಕ್ಷ್ಮಿ ಯೋಜನೆ ಹಣದಿಂದ ಮೊಬೈಲ್ ಖರೀದಿಸಿದ ಮಹಿಳೆ; ಡಿಸ್ಪ್ಲೇ ಪಿಚ್ಚರ್ ವೈರಲ್!-ಮಾಜಿ ಸಿಎಂ ಎಸ್​ಎಂ ಕೃಷ್ಣ ಆಸ್ಪತ್ರೆಗೆ ದಾಖಲು.!-ನೇಣಿಗೆ ಶರಣಾದ ಖ್ಯಾತ ನಟಿ ಅಮೃತಾ ಪಾಂಡೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಂಗಳೂರು ಜ್ಯುವೆಲ್ಲರಿ ಶಾಪ್‍ಗೆ ನುಗ್ಗಿ ಸಿಬ್ಬಂದಿ ಹತ್ಯೆ ಪ್ರಕರಣ- ಆರೋಪಿ ಅರೆಸ್ಟ್

Twitter
Facebook
LinkedIn
WhatsApp
ಮಂಗಳೂರು ಜ್ಯುವೆಲ್ಲರಿ ಶಾಪ್‍ಗೆ ನುಗ್ಗಿ ಸಿಬ್ಬಂದಿ ಹತ್ಯೆ ಪ್ರಕರಣ- ಆರೋಪಿ ಅರೆಸ್ಟ್

ಮಂಗಳೂರು (ಮಾ.03): ತಿಂಗಳ ಹಿಂದೆ ನಡೆದಿದ್ದ ಮಂಗಳೂರಿನ ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿ ಸಿಬ್ಬಂದಿ ಹತ್ಯೆ ಪ್ರಕರಣ ಸಂಬಂಧ ಕೇರಳದ ಕಾಸರಗೋಡಿನಲ್ಲಿ ತಿಂಗಳ ಬಳಿಕ ಆರೋಪಿ ಸೆರೆ ಸಿಕ್ಕಿದ್ದು, ದರೋಡೆ ನಡೆಸುವ ಉದ್ದೇಶದಿಂದಲೇ ಹತ್ಯೆಗೈದಿರುವ ಪ್ರಾಥಮಿಕ ಮಾಹಿತಿ ವಿಚಾರಣೆ ವೇಳೆ ತಿಳಿದು ಬಂದಿದೆ. ಕೇರಳದ ಕಲ್ಲಿಕೋಟೆಯ ಚಟ್ಟನಾಡುತ್ ಕೆಳಮನೆ ನಿವಾಸಿ ಶಿಫಾಸ್(33) ಬಂಧಿತ ಆರೋಪಿ. ಕಾಸರಗೋಡು ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ವಶಕ್ಕೆ ಪಡೆದ ಕೇರಳ ಪೊಲೀಸರು ಸದ್ಯ ಮಂಗಳೂರು ಪೊಲೀಸರ ವಶಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆಸುತ್ತಿದ್ದಾರೆ. 

ಕಾಸರಗೋಡು ಡಿವೈಎಸ್ಪಿ ಸುಧಾಕರನ್ ನೇತೃತ್ವದ ಪೊಲೀಸ್ ತಂಡದಿಂದ ಬಂಧನವಾಗಿದ್ದು, ದರೋಡೆ ನಡೆಸುವ ಉದ್ದೇಶದಿಂದಲೇ ಕೊಲೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ನಿಖರ ಕಾರಣ ಹೆಚ್ಚಿನ ತನಿಖೆಯಿಂದ ತಿಳಿದು ಬರಬೇಕಿದೆ. ಫೆ.3ರಂದು ಮಂಗಳೂರಿನ ಹಂಪನಕಟ್ಟೆಯ ಮಂಗಳೂರು ‌ಜ್ಯುವೆಲ್ಲರಿ ಹೆಸರಿನ ಶಾಪ್‌ನಲ್ಲಿ ಕೊಲೆ ನಡೆದಿತ್ತು. ಜ್ಯುವೆಲ್ಲರಿ ಸಿಬ್ಬಂದಿ, ಅತ್ತಾವರ ನಿವಾಸಿ ರಾಘವೇಂದ್ರ(50) ಹತ್ಯೆಗೈಯ್ಯಲಾಗಿತ್ತು. ಮಾಲೀಕ ಕೇಶವ ಆಚಾರ್ಯ ‌ಮಧ್ಯಾಹ್ನ ಊಟಕ್ಕೆ ಹೋಗಿದ್ದ ವೇಳೆ ಕೊಲೆ ನಡೆಸಲಾಗಿತ್ತು. ಬಂದರು ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿತ್ತು. 

ಘಟನೆ ನಡೆದ ದಿನವೇ ಜ್ಯುವೆಲ್ಲರಿಯಲ್ಲಿದ್ದ ಚಿನ್ನಾಭರಣ ಮಿಸ್ಸಿಂಗ್ ಆಗಿದ್ದ ಬಗ್ಗೆ ಜ್ಯುವೆಲ್ಲರಿ ಮಾಲೀಕರು ದೂರು ನೀಡಿದ್ದರು. ಮಾಲೀಕ ಕೇಶವ ಆಚಾರ್ಯ ಮಧ್ಯಾಹ್ನ 1.30ಕ್ಕೆ ಊಟಕ್ಕೆ ಹೋದ ಬಳಿಕ ಘಟನೆ‌ ನಡೆದಿದ್ದು, ಸುಮಾರು 3.30-3.45ರ ಸುಮಾರಿಗೆ ಘಟನೆ ನಡೆದಿತ್ತು. ಕೇಶವ ಆಚಾರ್ಯ 3.45ರ ಅಸುಪಾಸು ಶಾಪ್‌ಗೆ ಬಂದಾಗ ಅಂಗಡಿ ಮುಂಭಾಗ ಕಾರು ನಿಲ್ಲಿಸೋ ಜಾಗದಲ್ಲಿ ಬೈಕ್ ನಿಂತಿತ್ತು. ಆಗ ಕೇಶವ ಆಚಾರ್ಯ ಬೈಕ್ ತೆಗೆಯಲು ಸಿಬ್ಬಂದಿ ರಾಘವೇಂದ್ರಗೆ ಕರೆ ಮಾಡಿದ್ದಾರೆ. ಆಗ ಕಾಲ್ ತೆಗೆದ ರಾಘವೇಂದ್ರ ತನಗೆ ಯಾರೋ ಚೂರಿ‌ ಹಾಕಿದ್ದಾಗಿ ಬೊಬ್ಬೆ ಹಾಕಿದ್ದಾರೆ. 

ತಕ್ಷಣ ಕೇಶವ ಆಚಾರ್ಯ ಕಾರು ನಿಲ್ಲಿಸಿ ಅಂಗಡಿ ಬಳಿ ಬಂದಾಗ ಒಬ್ಬಾತ ಓಡಿ ಹೋಗಿದ್ದಾನೆ‌. ಒಳಗೆ ಹೋಗಿ ನೋಡಿದಾಗ ಕತ್ತಿನ ಭಾಗಕ್ಕೆ ‌ಇರಿದ ರೀತಿಯಲ್ಲಿ ರಾಘವೇಂದ್ರ ಬಿದ್ದಿದ್ದರು. ಸಿಬ್ಬಂದಿ ರಾಘವೇಂದ್ರ ಆಚಾರ್ಯ ಏಳು ತಿಂಗಳಿನಿಂದ ಇಲ್ಲಿ ಕೆಲಸ ಮಾಡ್ತಿದ್ದರು. ಮಾಸ್ಕ್ ಧರಿಸಿಕೊಂಡು ಬಂದಿದ್ದ ಆರೋಪಿ ಅರ್ಧ ಗಂಟೆಗೂ ಹೆಚ್ಚು ಕಾಲ ಜ್ಯುವೆಲ್ಲರಿ ಒಳಗೆ ಇದ್ದ ಎನ್ನಲಾಗಿದೆ. ಅರ್ಧ ಗಂಟೆ ಬಿಟ್ಟು ಜ್ಯುವೆಲ್ಲರಿಯಿಂದ ಹೊರಗೆ ಬಂದಿರೋದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದೀಗ ತಿಂಗಳ ಬಳಿಕ ಆರೋಪಿ ಸಿಕ್ಕಿ ಹಾಕಿಕೊಂಡಿದ್ದಾನೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ