ಭಾನುವಾರ, ಮೇ 5, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸರ್ಕಾರಿ ಇಲಾಖೆಯಲ್ಲಿ ಲಂಚ ಇಲ್ಲದೇ ಕೆಲಸ ನಡೆಯಲ್ಲ; ಭ್ರಷ್ಟಾಚಾರಕ್ಕೆ ಮೋದಿ ಬೆಂಬಲ – ಸಿದ್ದು ಆರೋಪ

Twitter
Facebook
LinkedIn
WhatsApp
 ಸರ್ಕಾರಿ ಇಲಾಖೆಯಲ್ಲಿ ಲಂಚ ಇಲ್ಲದೇ ಕೆಲಸ ನಡೆಯಲ್ಲ; ಭ್ರಷ್ಟಾಚಾರಕ್ಕೆ ಮೋದಿ ಬೆಂಬಲ – ಸಿದ್ದು ಆರೋಪ

ಹಾಸನ: ಇಂದು ಯಾವುದೇ ಸರ್ಕಾರಿ ಇಲಾಖೆಯ ಕಚೇರಿಗಳಿಗೆ ಹೋದರೂ ಲಂಚವಿಲ್ಲದೇ ಕೆಲಸ ನಡೆಯೋದಿಲ್ಲ. ಹೀಗಿದ್ದೂ ಪ್ರಧಾನಿ ನರೇಂದ್ರ ಮೋದಿ ಅವರೇ ಭ್ರಷ್ಟಾಚಾರ ಬೆಂಬಲಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಅರಸೀಕೆರೆ ತಾಲ್ಲೂಕಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರೇ ಭ್ರಷ್ಟಾಚಾರ ಬೆಂಬಲಿಸುತ್ತಿದ್ದಾರೆ. ಕೆಂಪಣ್ಣ ಅವರು ಪತ್ರ ಬರೆದು ಒಂದು ವರ್ಷ ಆಯ್ತು. ಇವತ್ತಿನವರೆಗೂ ಪ್ರಧಾನಿ ಕ್ರಮ ತೆಗೆದುಕೊಂಡಿಲ್ಲ. ಈ ಹಿಂದೆಯೂ ನಾ ಕಾವೂಂಗ್, ನಾ ಕಾನೇದೊಂಗಾ ಅಂತ ಪ್ರಧಾನಮಂತ್ರಿ ಹೇಳಿದ್ರು. ಅವರ ಹೇಳಿಕೆಯಂತೆ ಏನೂ ಕ್ರಮ ತೆಗೆದುಕೊಂಡಿಲ್ಲ. ಕರ್ನಾಟಕದಲ್ಲಿ ಭ್ರಷ್ಟಾಚಾರ ಅವ್ಯಾಹತವಾಗಿ ನಡೆಯುತ್ತಿದೆ. ತಹಸೀಲ್ದಾರ್ ಕಚೇರಿ, ಪೊಲೀಸ್ ಠಾಣೆ, ಪಿಡಬ್ಲ್ಯೂಡಿ ಇಲಾಖೆ, ನೀರಾವರಿ ಇಲಾಖೆ ಯಾವ ಸರ್ಕಾರಿ ಕಚೇರಿಗಳಿಗೆ ಹೋದರೂ ಭ್ರಷ್ಟಾಚಾರವಿಲ್ಲದೇ ಏನೂ ಕೆಲಸ ನಡೆಯುವುದಿಲ್ಲ ಎಂದು ಆರೋಪಿಸಿದ್ದಾರೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಕ್ಕೆ ಸಂಧಿಸಿದಂತೆ `ಭ್ರಷ್ಟಾಚಾರ ನಡೆದಿದ್ದರೆ ಸಾಕ್ಷಿ ನೀಡಲಿ’ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರರ ಸಂಘ, ಕೆಂಪಣ್ಣ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ: ಮುನಿರತ್ನ

ಭ್ರಷ್ಟಾಚಾರ ಮಾಡಿರೋರು ಲಂಚ ಕೊಟ್ಟಿದ್ದಕ್ಕೆಲ್ಲಾ ರಶೀದಿ ಕೊಡ್ತಾರಾ? ತನಿಖೆ ಮಾಡಿಸಿದರೆ ಗೊತ್ತಾಗುತ್ತದೆ. ಕೆಂಪಣ್ಣ ನ್ಯಾಯಾಂಗ ತನಿಖೆ ಮಾಡಿದರೆ ದಾಖಲೆ ಕೊಡ್ತೀವಿ ಅಂದಿದ್ದಾರೆ. ನಮ್ಮ ಆರೋಪ ಸಾಬೀತಾಗದೇ ಇದ್ದರೆ ನಮಗೆ ಏನು ಬೇಕಾದರೂ ಶಿಕ್ಷೆ ಕೊಡಿ ಎಂದು ಹೇಳಿದ್ದಾರೆ. ಇದಕ್ಕಿಂತ ಇನ್ನೇನು ಬೇಕು. ನೀವು ಪ್ರಾಮಾಣಿಕರಾಗಿದ್ದರೆ ತನಿಖೆ ಮಾಡಿಸೋಕೆ ಭಯ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಕೆಂಪಣ್ಣ ಕಾಂಗ್ರೆಸ್ಸೋ, ಬಿಜೆಪಿಯೊ ನಂಗೆ ಗೊತ್ತಿಲ್ಲ. ಪ್ರಧಾನಿಗೆ ಪತ್ರ ಬರೆದ ಒಂದು ವರ್ಷದ ನಂತರ ಅವರು ನನ್ನನ್ನು ಭೇಟಿಯಾಗಿದ್ದಾರೆ. ಸಂಘದ 25 ಪದಾಧಿಕಾರಿಗಳು ಪಕ್ಷಾತೀತವಾಗಿ ಬಂದು ನನ್ನ ಭೇಟಿಯಾಗಿದ್ದಾರೆ. ಅವರ ಭೇಟಿ ಬಳಿಕ ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡೋಕೆ ಹೇಳಿದ್ದರು ಅಷ್ಟೇ ಹೊರತಾಗಿ ಬೇರೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಯಿಂದ ಜನೋತ್ಸವ ಕಾರ್ಯಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದು ಜನೋತ್ಸವ ಅಲ್ಲ, ಭ್ರಷ್ಟ ಪ್ಲಸ್ ಉತ್ಸವ ಭ್ರಷ್ಟೋತ್ಸವ. ರೂಪ್ಸಾದವರು ಲಂಚ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿದ್ದಾರೆ. ಕೆಂಪಣ್ಣ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದಾರೆ. ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದು ಸೆಲೆಕ್ಷನ್ ಕಮಿಟಿ ಅಧ್ಯಕ್ಷ ಎಡಿಜಿಪಿ ಜೈಲಿಗೆ ಹೋಗಿದ್ದಾರೆ. ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಕೆಲವರು ಅರೆಸ್ಟ್ ಆಗಿದ್ದಾರೆ. ಬೆಂಕಿಯಿಲ್ಲದೆ ಹೊಗೆ ಬರುತ್ತಾ? `ದಿಸ್ ಗವರ್ನಮೆಂಟ್ ಈಸ್ ಎ ಮೋಸ್ಟ್ ಕರಪ್ಟ್ ಗೌರ್ನಮೆಂಟ್’. ಈಗ ವರ್ಗಾವಣೆಗೂ ದುಡ್ಡು ತೆಗೆದುಕೊಳ್ಳೋಕೆ ಶುರು ಮಾಡಿದ್ದಾರೆ ಎಂದು ಸಾಲು-ಸಾಲು ಹಗರಣಗಳನ್ನು ಉದಾಹರಣೆ ನೀಡಿದ್ದಾರೆ.

ಅರವಿಂದ ಲಿಂಬಾವಳಿ ಜನಪ್ರತಿನಿಧಿಯಾಗಲು ನಾಲಾಯಕ್:
ಅಹವಾಲು ಹೇಳಲು ಬಂದ ಮಹಿಳೆ ಜೊತೆ ದುರ್ವರ್ತನೆ ತೋರಿದ ಅರವಿಂದ ಲಿಂಬಾವಳಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದು, ಲಿಂಬಾವಳಿ ಜನಪ್ರತಿನಿಧಿಯಾಗಲು ನಾಲಾಯಕ್. ಆಯಮ್ಮ ಏನು ಹೇಳ್ತಾರೆ ಕೇಳಬೇಕಿತ್ತು. ಅವರು ರಾಜಕಾಲುವೆ ಒತ್ತುವರಿ ಮಾಡಿದ್ದರೆ ಕ್ರಮ ತಗೊಳ್ಳಿ. ನೀವೊಬ್ಬ ಜನಪ್ರತಿನಿಧಿಯಾಗಿ ಸಮಸ್ಯೆ ಕೇಳೋದು ನಿಮ್ಮ ಕರ್ತವ್ಯ ಅಲ್ಲವೇ? ಯಾರೇ ಆಗಲಿ ಕಷ್ಟ-ಸುಖ ಹೇಳಿಕೊಳ್ಳಲು ಬಂದಾಗ ಕೆಟ್ಟದಾಗಿ ಬೈಯ್ದು ಬಿಡೋದಾ? ನಾವೇನು ಆಯಮ್ಮನಿಗೆ ರೇಪ್ ಮಾಡಿದಿವಾ ಅಂದರೆ ಏನರ್ಥ ಹೇಳಿ ನೋಡೋಣ ಎಂದು ಪ್ರಶ್ನಿಸಿದ್ದಾರೆ.

ಆಯಮ್ಮ ಸುಳ್ಳು ಹೇಳುತ್ತಿದ್ದಾರೆ, ಅಕ್ರಮವಾಗಿ ರಾಜಕಾಲುವೆ ಒತ್ತುವರಿ ಮಾಡಿದ್ದಾರೆ ಅಂತಲೇ ಅಂದುಕೊಳ್ಳೋಣ. ಅವರು ಹೇಳೋದನ್ನು ಕೇಳೋಕೆ ಏನು ಕಷ್ಟ. ತಾಳ್ಮೆಯಿಂದ ಅವರ ಕಷ್ಟ-ಸುಖ ಕೇಳಬೇಕು ಅಲ್ಲವಾ? ಅದು ಬಿಟ್ಟು ಮೈ ಮೇಲೆ ಬಿದ್ದರೆ ಹೇಗೆ? ಅವರು ಎಂಎಲ್‌ಎ ಆಗಲು ಲಾಯಕ್ಕಾ, ನಾಲಾಯಕ್ಕ ನೀವೆ ಹೇಳಿ ವಾಗ್ದಾಳಿ ನಡೆಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ

ಅಂಕಣ