ಶನಿವಾರ, ಮೇ 18, 2024
ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ದೇಶದ ಉಪಾಧ್ಯಕ್ಷರ ಹಣೆಗೆ ಪಿಸ್ತೂಲಿಟ್ಟ ದಾಳಿಕೋರ, ಟ್ರಿಗರ್‌ ಜಾಮ್‌, ಹತ್ಯೆ ಯತ್ನ ವಿಫಲ!

Twitter
Facebook
LinkedIn
WhatsApp
ದೇಶದ ಉಪಾಧ್ಯಕ್ಷರ ಹಣೆಗೆ ಪಿಸ್ತೂಲಿಟ್ಟ ದಾಳಿಕೋರ, ಟ್ರಿಗರ್‌ ಜಾಮ್‌, ಹತ್ಯೆ ಯತ್ನ ವಿಫಲ, ವಿಡಿಯೋ ವೈರಲ್!

ಅರ್ಜೆಂಟೀನಾ: ದಕ್ಷಿಣ ಅಮೆರಿಕ ದೇಶ ಅರ್ಜೆಂಟೀನಾದ ಉಪಾಧ್ಯಕ್ಷೆ ಕ್ರಿಸ್ಟಿನಾ ಫೆರ್ನಾಂಡಿಸ್ ಡಿ ಕಿರ್ಚ್ನರ್ ರನ್ನು ಸಾರ್ವಜನಿಕವಾಗಿ ಕೊಲೆ ಮಾಡುವ ಪ್ರಯತ್ನ ವಿಫಲವಾಗಿದೆ.  ತಮ್ಮ ಮನೆಯ ಹೊರಗಡೆ ಬೆಂಬಲಿಗರಿಗೆ ಕ್ರಿಸ್ಟಿನಾ ಫೆರ್ನಾಂಡೆಜ್‌ ಕೈಕುಲುಕುವ ವೇಳೆ ಗುಂಪಿನಲ್ಲಿದ್ದ ಒಬ್ಬ ನೇರವಾಗಿ ಅವರ ಹಣೆಗೆ ಪಿಸ್ತೂಲ್‌ ಇರಿಸಿದ್ದಾನೆ. ಆದರೆ, ಟ್ರಿಗರ್‌ ಒತ್ತುವ ವೇಳೆ ಅದು ಜಾಮ್‌ ಆಗಿದ್ದರಿಂದ ಉಪಾಧ್ಯಕ್ಷೆ ಬಚಾವ್‌ ಆಗಿದ್ದಾರೆ. ತಕ್ಷಣವೇ ಇಡೀ ಪ್ರದೇಶದಲ್ಲಿ ಭಯಭೀತಿಯ ವಾತಾವರಣ ಸೃಷ್ಟಿಯಾಗಿತ್ತು. ಅರ್ಜೆಂಟೀನಾ ಪೊಲೀಸ್‌ ತಕ್ಷಣವೇ ಶಂಕಿತ ದಾಳಿಕೋರನನನ್ನು ಬಂಧಿಸಿದ್ದಾರೆ. ಕ್ರಿಸ್ಟಿನಾ ಫೆರ್ನಾಂಡೆಜ್‌ ಅವರನ್ನು ಕೊಲ್ಲುವ ಉದ್ದೇಶದಲ್ಲಿಯೇ ಆಕೆಯ ಹಣೆಗೆ ಗನ್‌ ಇರಿಸಿದ್ದೆ ಎಂದು ಅತ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಈ ಕುರಿತಾಗಿ ಅರ್ಜೆಂಟೀನಾ ಅಧ್ಯಕ್ಷ ಅಲ್ಬೆರ್ಟೋ ಫೆರ್ನಾಂಡೆಜ್‌ ಕೂಡ ಮಾತನಾಡಿದ್ದು, ಉಪಾಧ್ಯಕ್ಷರ ಕೊಲೆ ಮಾಡಲು ದಾಳಿಕೋರ ಬಳಸಿದ್ದ ಗನ್‌ನಲ್ಲಿ ಐದು ಬುಲೆಟ್‌ಗಳು ಪತ್ತೆಯಾಗಿದೆ. ಟ್ರಿಗರ್‌ ಜಾಮ್‌ ಆದ ಕಾರಣಕ್ಕಾಗಿ ಆತನಿಗೆ ಶೂಟ್‌ ಮಾಡಲು ಸಾಧ್ಯವಾಗಿಲ್ಲ. ಇದರಿಂದಾಗಿ ಕೂದಲೆಳೆಯ ಅಂತರದಲ್ಲಿ ಕ್ರಿಸ್ಟಿನಾ ಫೆರ್ನಾಂಡೆಜ್‌ ಬಚಾವ್‌ ಆಗಿದ್ದಾರೆ. ಆರೋಪಿ ಬ್ರೆಜಿಲ್ ನಿವಾಸಿ ಎಂದುತಿಳಿದುಬಂದಿದ್ದು, ಆತ ಹೆಸರು ಫರ್ನಾಂಡೋ ಆಂಡ್ರೆ ಸಬಾಗ್ ಮೊಂಟಿಯೆಲ್ ಎನ್ನಲಾಗಿದೆ.

ಗುರುವಾರ ರಾತ್ರಿ ನಡೆದ  ಘಟನೆ ಇದಾಗಿದೆ. ಕ್ರಿಸ್ಟಿನಾ ತನ್ನ ಮನೆಯ ಹೊರಗೆ ಬೆಂಬಲಿಗರನ್ನು ಮಾತನಾಡಿಸುವ ಸಲುವಾಗಿ ಬಂದಿದ್ದು. ಅದೇ ಸಮಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಪಾಯಿಂಟ್ ಬ್ಲಾಂಕ್ ರೇಂಜ್ ನಲ್ಲಿ ಕ್ರಿಸ್ಟಿನಾ ಅವರ ಹಣೆಗೆ ಪಿಸ್ತೂಲ್‌ ಇರಿಸಿದ್ದಾನೆ. ಅಕ್ಕಪಕ್ಕದಲ್ಲಿದ್ದವರು ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಅರ್ಜೆಂಟೀನಾದ (Argentina) ಭದ್ರತಾ ಸಚಿವರು, ಸ್ಥಳೀಯ ಸುದ್ದಿ ಚಾನೆಲ್ ಸಿ5ಎನ್‌ಗೆ ವಿಷಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.. .

ದಾಳಿಕೋರರು ಉಪಾಧ್ಯಕ್ಷರ ಮುಖದ ಹತ್ತಿರ ಬಂದೂಕನ್ನು ತೋರಿಸಿದ್ದ. ಘಟನೆ ವೇಳೆ ಗೊಂದಲ ಉಂಟಾಗಿತ್ತು. ಶಂಕಿತನು ಕ್ರಿಸ್ಟಿನಾ ಮುಂದೆ ಕಾಣಿಸಿಕೊಂಡ ತಕ್ಷಣ ಅವನ ಭದ್ರತಾ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರು. ದಾಳಿಕೋರನನ್ನು ಬಂಧಿಸಲಾಗಿದೆ. ಕ್ರಿಸ್ಟಿನಾ 2007-2015ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದರು. ಈ ವೇಳೆ ಅವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ. ಕ್ರಿಸ್ಟಿನಾ ವಿರುದ್ಧ ನಡೆಯುತ್ತಿರುವ ಪ್ರಕರಣವನ್ನು ವಿರೋಧಿಸಿ ಅವರ ಬೆಂಬಲಿಗರು ಮನೆಯ ಹೊರಗೆ ಜಮಾಯಿಸಿದ್ದರು

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ