ಭಾನುವಾರ, ಮೇ 5, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಿಪಿಎಲ್ ಕುಟುಂಬಕ್ಕೆ 500 ರೂ.ಗೆ ಎಲ್‌ಪಿಜಿ ಸಿಲಿಂಡರ್‌: ರಾಜಸ್ಥಾನ ಸಿಎಂ ಗೆಹ್ಲೋಟ್ ಘೋಷಣೆ

Twitter
Facebook
LinkedIn
WhatsApp
ಬಿಪಿಎಲ್ ಕುಟುಂಬಕ್ಕೆ 500 ರೂ.ಗೆ ಎಲ್‌ಪಿಜಿ ಸಿಲಿಂಡರ್‌: ರಾಜಸ್ಥಾನ ಸಿಎಂ ಗೆಹ್ಲೋಟ್ ಘೋಷಣೆ

ಜೈಪುರ: ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮುಂದಿನ ವರ್ಷ ಏಪ್ರಿಲ್ 1 ರಿಂದ 500 ರೂ.ಗೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ ಘೋಷಿಸಿದ್ದಾರೆ.

“ಬೆಲೆ ಏರಿಕೆ ವಿಷಯ ಗಂಭೀರವಾಗಿದೆ. ಮುಂದಿನ ವರ್ಷ ಏಪ್ರಿಲ್ 1 ರ ನಂತರ ನಾವು ಬಿಪಿಎಲ್ ಕುಟುಂಬಗಳಿಗೆ  ಪ್ರತಿ ಸಿಲಿಂಡರ್ ಗೆ 500 ರೂಪಾಯಿಯಂತೆ ಒಂದು ವರ್ಷದಲ್ಲಿ 12 ಗ್ಯಾಸ್ ಸಿಲಿಂಡರ್ಗಳನ್ನು ನೀಡುತ್ತೇವೆ ಎಂದು ಗೆಹ್ಲೋಟ್ ತಿಳಿಸಿದ್ದಾರೆ.

ಯಾರೂ ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಯೋಜನಗಳಿಂದ ವಂಚಿತರಾಗಬಾರದು. ಬಡತನ ರೇಖೆಗಿಂತ ಕೆಳಗಿರುವ ಮತ್ತು ಉಜ್ವಲ ಯೋಜನೆಗೆ ಅಡಿಯಲ್ಲಿ ಅಡುಗೆ ಅನಿಲ ಪಡೆಯುತ್ತಿರುವ ಜನರಿಗೆ ರಾಜಸ್ಥಾನ ಸರ್ಕಾರ 500 ರೂ.ಗೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ನೀಡಲಿದೆ ಎಂದು ಅಲ್ವಾರ್ನಲ್ಲಿ ಗೆಹ್ಲೋಟ್ ಹೇಳಿದ್ದಾರೆ.

ಮುಂದಿನ ತಿಂಗಳು ನಾನು ಬಜೆಟ್‌ಗೆ ಸಿದ್ಧತೆ ನಡೆಸುತ್ತಿದ್ದೇನೆ. ಈ ಸಮಯದಲ್ಲಿ ನಿಮ್ಮ ಮುಂದೆ ಈ ಘೋಷಣೆಯನ್ನು ಮಾಡುತ್ತಿದ್ದೇನೆ. ಉಜ್ವಲ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಅವರು ಬಡವರಿಗೆ ಎಲ್‌ಪಿಜಿ ಸಂಪರ್ಕಗಳನ್ನು ನೀಡಿದರು. ಆದರೆ ಈಗ ಆ ಸಿಲಿಂಡರ್ ಖಾಲಿಯಾಗಿದೆ, ಏಕೆಂದರೆ ಸಿಲಿಂಡರ್ ದರಗಳು ಈಗ 400ರಿಂದ 1,040 ರೂ.ಗೆ ಹೆಚ್ಚಾಗಿದೆ ಎಂದು ಗೆಹ್ಲೋಟ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ