ಮಂಗಳವಾರ, ಮೇ 21, 2024
ಶಿರಾಡಿ ಘಾಟಿಯಲ್ಲಿ ಭೀಕರ ಅಪಘಾತ; ತಾಯಿ -ಮಗ ಮೃತ್ಯು.!-ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣ; ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ನ್ಯಾಯಾಂಗ ಬಂಧನ ವಿಸ್ತರಣೆ.!-ಟಿ-20 ವಿಶ್ವಕಪ್ ಟೂರ್ನಿಗೆ ಜೆರ್ಸಿ ಬಿಡುಗಡೆ ಮಾಡಿದ ಐರ್ಲೆಂಡ್ ತಂಡ..!-ಒಂದೇ ಕುಟುಂಬದ ಮೂವರು ನಿಗೂಢವಾಗಿ ನಾಪತ್ತೆ..!-ಹಾಜಬ್ಬರ ಶಾಲೆಯಲ್ಲಿ ದುರಂತ; ಶಾಲೆಯ ತಡೆಗೋಡೆ ಕುಸಿದು ವಿದ್ಯಾರ್ಥಿನಿ ದಾರುಣ ಸಾವು..!-ಕಂಗನಾ ರಣಾವತ್ ಮೇಲೆ ಪ್ರಚಾರದ ವೇಳೆ ಕಲ್ಲು ತೂರಾಟ ಮತ್ತು ಕಪ್ಪು ಬಾವುಟ ಪ್ರದರ್ಶಿಸಿ ಗೋ ಬ್ಯಾಕ್ ಘೋಷಣೆ ; ದೂರು ದಾಖಲು.!-ಪಪ್ಪಾಯ ಹಣ್ಣಿನಲ್ಲಿರುವ ನಿಮಗೆ ತಿಳಿದಿರದ ಕೆಲವು ಆರೋಗ್ಯಕಾರಿ ಸಂಗತಿಗಳು; ತಪ್ಪದೇ ಓದಿ-ಈ ಆಟಗಾರ ಕಣಕ್ಕಿಳಿದಾಗಿನಿಂದ RCB ಒಂದೇ ಒಂದು ಪಂದ್ಯವನ್ನು ಸೋತಿಲ್ಲ!-ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು-ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮೆಸ್ಸಿ ಮ್ಯಾಜಿಕ್‌, 36 ವರ್ಷಗಳ ಬಳಿಕ ಫಿಫಾ ವಿಶ್ವಕಪ್ ಗೆದ್ದ ಅರ್ಜೆಂಟೀನಾ

Twitter
Facebook
LinkedIn
WhatsApp
ಮೆಸ್ಸಿ ಮ್ಯಾಜಿಕ್‌, 36 ವರ್ಷಗಳ ಬಳಿಕ ಫಿಫಾ ವಿಶ್ವಕಪ್ ಗೆದ್ದ ಅರ್ಜೆಂಟೀನಾ

ದೋಹಾ(ಕತಾರ್): ಕತಾರ್ ಲುಸೇಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ ರೋಚಕ ಗೆಲುವು ದಾಖಲಿಸಿದ್ದು, ಈ ಮೂಲಕ ಅರ್ಜೆಂಟೀನಾ 36 ವರ್ಷಗಳ ನಂತರ ಮೂರನೇ ಬಾರಿಗೆ ಫಿಫಾ ವಿಶ್ವಕಪ್ ಅನ್ನು ತನ್ನ ಮುಡಿಗೇರಿಸಿಕೊಂಡಿದೆ.

ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ಅರ್ಜೆಂಟೀನಾ, 23ನೇ ನಿಮಿಷದಲ್ಲಿ ಲಿಯೋನಲ್ ಮೆಸ್ಸಿ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ನಂತರ 36ನೇ ನಿಮಿಷದಲ್ಲಿ ಏಂಜಲ್ ಡಿ ಮಾರಿಯಾ ಮತ್ತೊಂದು ಗೋಲು ಬಾರಿಸಿದರು. ಈ ಮೂಲಕ ಅರ್ಜೆಂಟೀನಾ 2-0 ಗೋಲುಗಳಿಂದ ಮುನ್ನಡೆ ಸಾಧಿಸಿತ್ತು.

ಮೆಸ್ಸಿ ಮ್ಯಾಜಿಕ್‌, 36 ವರ್ಷಗಳ ಬಳಿಕ ಫಿಫಾ ವಿಶ್ವಕಪ್ ಗೆದ್ದ ಅರ್ಜೆಂಟೀನಾ

ಆದರೆ, ದ್ವಿತೀಯಾರ್ಧದಲ್ಲಿ ಫ್ರಾನ್ಸ್‌ ಪರ ಏಕಾಂಗಿ ಹೋರಾಟ ನಡೆಸಿದ ಸ್ಟಾರ್‌ ಆಟಗಾರ ಕಿಲಿಯನ್‌ ಎಂಬಾಪೆ ಎರಡು ನಿಮಿಷಗಳಲ್ಲಿ ಬ್ಯಾಕ್‌-ಟು-ಬ್ಯಾಕ್‌ ಗೋಲ್‌ ಬಾರಿಸಿ ಪೂರ್ಣ ಸಮಯದ ಅಂತ್ಯಕ್ಕೆ 2-2ರ ಸಮಬಲ ಸಾಧಿಸಿದರು. ಅಂತಿಮವಾಗಿ ಪೆನಾಲ್ಟಿ ಶೂಟ್-ಔಟ್‌ನಲ್ಲಿ ಫ್ರಾನ್ಸ್ ತಂಡವನ್ನು 4-2 ಗೋಲುಗಳ ಅಂತರದಲ್ಲಿ ಸೋಲಿಸುವ ಮೂಲಕ ಅರ್ಜೆಂಟೀನಾ ಮೂರನೇ ಬಾರಿಗೆ ವಿಶ್ವಕಪ್ ಎತ್ತಿಹಿಡಿದಿದೆ. 

ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದ ಅರ್ಜೆಂಟೀನಾ

ಪೆನಾಲ್ಟಿಯಲ್ಲಿ ಫ್ರಾನ್ಸ್‌ನ ಕೈಲಿಯನ್ ಎಂಬಪ್ಪೆ ಮೊದಲ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ನಂತರ ಅರ್ಜೆಂಟೀನಾ ಪರ ಮೆಸ್ಸಿ ಕೂಡ ಗೋಲು ಬಾರಿಸಿದರು. ಇದಾದ ನಂತರ ಫ್ರಾನ್ಸ್​ ಪರ ಎರಡನೇ ಪೆನಾಲ್ಟಿ ಶೂಟೌಟ್ ಮಾಡಲು ಬಂದ ಮಾರ್ಟಿನೆಜ್ ಕೋಮನ್ ಅವರ ಕಿಕ್ ಅನ್ನು ತಡೆಯುವಲ್ಲಿ ಅರ್ಜೆಂಟೀನಾದ ಗೋಲ್‌ಕೀಪರ್ ಯಶಸ್ವಿಯಾದರು. ಬಳಿಕ ಅರ್ಜೆಂಟೀನಾ ಪರ ಡೈಬಾಲಾ ಎರಡನೇ ಗೋಲು ಗಳಿಸಿದರು.

ಹಾಗೆಯೇ ಫ್ರಾನ್ಸ್ ಪರ ಚುಮೇನಿ ಬಾರಿಸಿದ ಮೂರನೇ ಪೆನಾಲ್ಟಿ ಕಿಕ್ ಅನ್ನು ಸಹ ಅರ್ಜೆಂಟೀನಾದ ಗೋಲ್‌ಕೀಪರ್ ಮಾರ್ಟಿನೆಜ್ ತಡೆದರು. ಇದಾದ ನಂತರ ಅರ್ಜೆಂಟೀನಾ ಪರ ಪರೆಡೆಸ್ ಮೂರನೇ ಗೋಲು ಗಳಿಸಿದರು. ಆದರೆ 2 ಮತ್ತು 3 ನೇ ಪೆನಾಲ್ಟಿ ಶೂಟೌಟನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಗಿದ್ದ ಫ್ರಾನ್ಸ್ ನಾಲ್ಕನೇ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಯಿತು. ಫ್ರಾನ್ಸ್ ಪರ ಕೊಲೊ ಮುವಾನಿ 2ನೇ ಗೋಲು ಗಳಿಸಿದರು. ಅಂತಿಮವಾಗಿ ಮೊಂಟಿಯೆಲ್ ಅರ್ಜೆಂಟೀನಾ ಪರ 4ನೇ ಗೋಲು ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಈ ವಿಶ್ವಕಪ್ ಗೆಲುವಿನೊಂದಿಗೆ ಮೆಸ್ಸಿ ತಮ್ಮ ಅಂತರಾಷ್ಟ್ರೀಯ ಫುಟ್ಬಾಲ್ ವೃತ್ತಿಜೀವನವನ್ನು ಅಂತ್ಯಗೊಳಿಸಿದ್ದಾರೆ. ಫೈನಲ್ ಪಂದ್ಯ ತನ್ನ ಅಂತರಾಷ್ಟ್ರೀಯ ವೃತ್ತಿ ಜೀವನದ ಕೊನೆಯ ಪಂದ್ಯವಾಗಲಿದೆ ಎಂದು ಮೆಸ್ಸಿ ಈಗಾಗಲೇ ಹೇಳಿದ್ದರು.

1978ರಲ್ಲಿ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಗೆದ್ದಿದ್ದ ಅರ್ಜೆಂಟೀನಾ, 1986ರಲ್ಲಿ ಡಿಯೇಗೊ ಮರಡೊನಾ ಸಾರಥ್ಯದಲ್ಲಿ ಎರಡನೇ ಬಾರಿ ವಿಶ್ವ ಕಪ್‌ ಗೆದ್ದಿತ್ತು. ಈಗ ಲಿಯೋನೆಲ್‌ ಮೆಸ್ಸಿ ಸಾರಥ್ಯದಲ್ಲಿ ಮತ್ತೊಮ್ಮೆ ಟ್ರೋಫಿ ಎತ್ತಿ ಹಿಡಿದು, ವಿಶ್ವಕಪ್‌ ಇತಿಹಾಸದಲ್ಲಿ ಮೂರನೇ ಬಾರಿ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ