ಭಾನುವಾರ, ಮೇ 5, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬರ್ತ್‌ಡೇ ಆಚರಿಸಲು ಹೋದ ಇಬ್ಬರು ನಿಗೂಢ ಸಾವು: ನೈಟ್ ಕ್ಲಬ್‌ನಲ್ಲಿ ಶವಪತ್ತೆ

Twitter
Facebook
LinkedIn
WhatsApp
ಬರ್ತ್‌ಡೇ ಆಚರಿಸಲು ಹೋದ ಇಬ್ಬರು ನಿಗೂಢ ಸಾವು: ನೈಟ್ ಕ್ಲಬ್‌ನಲ್ಲಿ ಶವಪತ್ತೆ

ಗುರುಗ್ರಾಮ್: ಹುಟ್ಟುಹಬ್ಬ ಸಮಾರಂಭಕ್ಕೆ ಕ್ಲಬ್‌ಗೆ ಹೋದ ಮಹಿಳೆ ಹಾಗೂ ವ್ಯಕ್ತಿ ಉಸಿರುಕಟ್ಟಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಗುರುಗ್ರಾಮದ ಕ್ಲಬ್‌ನಲ್ಲಿ ನಡೆದಿದೆ. ಮತ್ತಿಬ್ಬರು ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚೇತರಿಸಿಕೊಂಡಿದ್ದಾರೆ. ಮೃತರಲ್ಲಿ ಒಬ್ಬರು ಕ್ಲಬ್ ಮಾಲೀಕನ ಸಹೋದರನಾಗಿದ್ದಾರೆ. ಕ್ಲಬ್‌ನ ಕ್ಯಾಬೀನ್‌ನಲ್ಲಿ ಓರ್ವ ಮಹಿಳೆ ಹಾಗೂ ಪುರುಷ ಶವ ಪತ್ತೆಯಾಗಿತ್ತು. 

ಮೃತ ವ್ಯಕ್ತಿ 50ರ ಆಸುಪಾಸಿನವರಾಗಿದ್ದು, ಇಬ್ಬರು ಕ್ಯಾಬಿನ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಗುರುಗ್ರಾಮದ ಡಿಎಲ್ಎಫ್-3 (DLF Phase-3) ಪ್ರದೇಶದ ಕ್ಲಬ್‌ನಲ್ಲಿ ಈ ಘಟನೆ ನಡೆದಿದೆ. ತಾಪಮಾನ ಹೆಚ್ಚಲು ಬಳಸುವ ಅಗಿಷ್ಟಿಕೆಯ ಹೊಗೆಯಿಂದ ಉಸಿರುಕಟ್ಟಿ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತ ವ್ಯಕ್ತಿಯನ್ನು ಹಿಸಾರ್ ಮೂಲದ ಸಂಜೀವ್ ಜೋಶಿ ಎಂದು ಗುರುತಿಸಲಾಗಿದೆ. ಇವರು ಕ್ಲಬ್ ಮಾಲೀಕನ ಸಹೋದರನೂ ಆಗಿದ್ದರು. 

ಇವರು ಒಟ್ಟು ಮೂವರು ಮಹಿಳೆಯರ ಜೊತೆ ಕ್ಯಾಬಿನ್‌ನಲ್ಲಿ ಕುಳಿತಿದ್ದು, ಅವರಲ್ಲಿ ಒಬ್ಬರು ಮೃತಪಟ್ಟರೆ ಇನ್ನಿಬ್ಬರು ಪ್ರಜ್ಞೆ ತಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಾಲ್ವರು ಕೂಡ ಮಹಿಳೆಯೊಬ್ಬರ ಹುಟ್ಟುಹಬ್ಬ ಆಚರಿಸುವ ಸಲುವಾಗಿ ರಾತ್ರಿ 2 ಗಂಟೆ ಸುಮಾರಿಗೆ ಈ ಕ್ಲಬ್‌ಗೆ ಬಂದಿದ್ದರು. ಅಲ್ಲಿ ವೆಂಟಿಲೇಷನ್ ಇರಲಿಲ್ಲ. ಚಳಿಯ ಕಾರಣಕ್ಕೆ ಅಲ್ಲಿ ಅಂಗಿಟಿ (ಸಣ್ಣ ಆಕಾರದ ಸ್ಟೌ) ಉರಿಸಲಾಗಿತ್ತು.

ಮೃತ ಸಂಜಯ್ ಜೋಷಿ ನೈಟ್ ರೈಡರ್ (Knite Ryder club) ಎಂಬ ಕ್ಲಬ್‌ನ ಮಾಲೀಕ ರಜನ್ ಜೋಷಿ ಅವರ ಸಹೋದರನಾಗಿದ್ದು, ಇದೇ ಕಾರಣಕ್ಕೆ ಕ್ಲಬ್‌ನಲ್ಲಿರುವ ಪರಿಚಾರಕರು ಕೂಡ ಅವರ ಬಗ್ಗೆ ಹೆಚ್ಚು ವಿಚಾರಿಸಲು ಹೋಗದೇ ಮನೆಗೆ ಹೊರಟು ಹೋಗಿದ್ದಾರೆ. ಆದರೆ ಸೋಮವಾರ ಸಂಜೆ 5 ಗಂಟೆಗೆ ಕ್ಲಬ್ ಸ್ವಚ್ಛಗೊಳಿಸಲು ಬಂದವರು ಕ್ಯಾಬಿನ್‌ಗೆ ಭೇಟಿ ನೀಡಿ ಡೋರ್ ತೆಗೆದಾಗ ಕೊಠಡಿ ಪೂರ್ತಿ ಹೊಗೆ ತುಂಬಿದೆ. 

ಕೂಡಲೇ ಅವರು ಕ್ಲಬ್ ಮಾಲೀಕ ರಾಜನ್ ಜೋಷಿಗೆ (Rajan Joshi) ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಕೂಡಲೇ ಅಲ್ಲಿಗೆ ಆಗಮಿಸಿದ ರಾಜನ್ ಜೋಷಿ ಸಹೋದರ ಸಂಜೀವ್ ಜೋಷಿ (Sanjeev Joshi) ಸೇರಿದಂತೆ ಎಲ್ಲರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿಯೇ ಸಂಜಯ್ ಜೋಷಿ ಹಾಗೂ ಓರ್ವ ಮಹಿಳೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪ್ರಜ್ಞಾಶೂನ್ಯರಾಗಿದ್ದ ಮತ್ತಿಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಾಥಮಿಕ ತನಿಖೆಯಲ್ಲಿ ಉಸಿರಾಟದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೂರ್ವ ವಿಭಾಗದ ಉಪ ಪೊಲೀಸ್ ಕಮೀಷನರ್ ವಿರೇಂದ್ರ ವಿಜ್ (Virender Vij) ಹೇಳಿದ್ದಾರೆ. ಕ್ಯಾಬಿನ್‌ನಲ್ಲಿ ವಿವಾದವಾಗಿರುವ ಬಗ್ಗೆ ಯಾವುದೇ ಸಾಕ್ಷ್ಯಗಳು ದೊರಕ್ಕಿಲ್ಲ ಆದರೆ ಎಲ್ಲಾ ಮೂಲಗಳಿಂದ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ