ಮಂಗಳವಾರ, ಮೇ 7, 2024
ಬಂಟ್ವಾಳ: ಮದುವೆ ಸಭಾಂಗಣವೊಂದರ ಆವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ..!-Rain Alert: ರಾಜ್ಯದಲ್ಲಿ ಇಂದಿನಿಂದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ.!-ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಲೀಕ್ ಆಗಲು ನನ್ನ ಪಾತ್ರವಿಲ್ಲ; ದೇವರಾಜೆಗೌಡರಿಂದ ಸುಳ್ಳು ಆರೋಪವೆಂದ ಡಿಕೆ ಶಿವಕುಮಾರ್-ಕೋವಿಡ್ ಲಸಿಕೆಯಿಂದಲೇ ನನಗೆ ಹೃದಯಾಘಾತ ಸಂಭವಿಸಿರಬಹುದು? ನಟ ಶ್ರೇಯಸ್ ತಲ್ಪಾಡೆ-ಆಘಾತಕಾರಿ ಘಟನೆ; ಕ್ರಿಕೆಟ್‌ ಆಡುತ್ತಿದ್ದಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು ಬಾಲಕ ಸಾವು..!-ತಮ್ಮ ಭಾವಚಿತ್ರವನ್ನು ಅಳವಡಿಸಿ ಮತ ಹಾಕುವಂತೆ ಪೋಸ್ಟ್ ; ಆಪ್ತನ ವಿರುದ್ಧ ಅನಂತ್ ಕುಮಾರ್ ಹೆಗ್ಡೆ ದೂರು ದಾಖಲು.!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ ; ಇಲ್ಲಿದೆ ಇಂದಿನ ಚಿನ್ನ ಬೆಳ್ಳಿಯ ದರದ ವಿವರ-ಶೀಘ್ರದಲ್ಲೇ SSLC ಪಲಿತಾಂಶ ಪ್ರಕಟ; ರಿಸಲ್ಟ್ ನೋಡುವುದು ಹೇಗೆ.!-ಮೇ 7 ರ ಚುನಾವಣೆ ಬಳಿಕ ಪ್ರಜ್ವಲ್ ರೇವಣ್ಣ ಭಾರತಕ್ಕೆ ಆಗಮನ..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪ್ರೀತಿ ಪ್ರೇಮಕ್ಕೆಂದೇ ಒಂದು ವಾರ ರಜೆ ಕೊಟ್ಟ ಚೀನಾ ಸರ್ಕಾರ

Twitter
Facebook
LinkedIn
WhatsApp
chinese students 1019x573 1

ಬೀಜಿಂಗ್: ಚೀನಾ ಸರ್ಕಾರ ದೇಶದಲ್ಲಿ ಜನನ ಪ್ರಮಾಣವನ್ನು ಹೆಚ್ಚಿಸಲು ಹೊಸ ನೀತಿಗಳನ್ನು ಜಾರಿಗೆ ತರುತ್ತಿದೆ. ಇಲ್ಲಿ ಯುವಜನರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದ್ದು, ಹೀಗಾಗಿ ಜನಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ. ಒನ್ ಚೈಲ್ಡ್ ಪಾಲಿಸಿಯಿಂದ ಚೀನಾದ ಜನಸಂಖ್ಯೆಯಲ್ಲಿ ಐತಿಹಾಸಿಕ ಕುಸಿತ ಕಂಡು ಬಂದಿರುವ ಕಾರಣ ಈ ಮಹತ್ತರ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅದರಲ್ಲೂ ಇತ್ತೀಚಿಗೆ ಜನಸಂಖ್ಯೆ ಹೆಚ್ಚಳಕ್ಕೆ ಚೀನಾ ತೆಗೆದುಕೊಂಡಿರುವ ನಿರ್ಧಾರ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಕಡಿಮೆಯಾಗುತ್ತಿರುವ ಜನಸಂಖ್ಯೆಯು (Population) ಚೀನಾಗೆ ಕಳವಳ ಮೂಡಿಸಿದೆ. ಅದರಲ್ಲೂ ಯುವಜನತೆಯ ಸಂಖ್ಯೆ ಕಡಿಮೆಯಾಗಿದ್ದು, ಚೀನಾದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ. ಈ ಕಾರಣದಿಂದ ಮತ್ತೆ ಜನಸಂಖ್ಯೆಯನ್ನು ಹೆಚ್ಚಿಸಲು ಚೀನಾ ಹಲವು ರೀತಿಯ ಯೋಜನೆಯನ್ನು ಜಾರಿಗೆ ತರುತ್ತಿದೆ. ರಾಜಕೀಯ ಸಲಹೆಗಾರರು ಕೂಡ ಜನನ ಪ್ರಮಾಣ ದರ (Birth rate) ಹೆಚ್ಚಿಸಲು ಅನೇಕ ಶಿಫಾರಸುಗಳನ್ನು ಮಾಡುತ್ತಿದ್ದಾರೆ. ಹೀಗಿರುವಾಗ ಜನಸಂಖ್ಯೆ ಹೆಚ್ಚಿಸಲು ಚೀನಾ ಹೊಸ ಪ್ಲಾನ್‌ ಮಾಡಿದ್ದು, ಕಾಲೇಜು ವಿದ್ಯಾರ್ಥಿಗಳಿಗೆ (Student) ಲವ್ವಲ್ಲಿ ಬೀಳಲೆಂದೇ ವಾರಗಟ್ಟಲೆ ರಜೆ ಕೊಟ್ಟಿದೆ.

ವಿದ್ಯಾರ್ಥಿಗಳಿಗಾಗಿ ಫಾಲ್​ ಇನ್​ ಲವ್​ ಎಂಬ ಯೋಜನೆ ಜಾರಿ
9 ಕಾಲೇಜುಗಳು ವಿದ್ಯಾರ್ಥಿಗಳಿಗೆ ಫಾಲ್​ ಇನ್​ ಲವ್​ ಎಂಬ ಯೋಜನೆ ಜಾರಿ ಮಾಡಿದ್ದು, ಒಂದು ವಾರಗಳು ಪ್ರೀತಿಯಲ್ಲಿ (Love) ಬೀಳಲು ಅವಕಾಶ ನೀಡಿದೆ.ಪ್ರೀತಿಯ ಹುಡುಕಾಟವನ್ನು ಪೂರ್ಣಗೊಳಿಸುವ ಹೆಸರಿನಲ್ಲಿ ಒಂದು ವಾರದ ವಿಶೇಷ ರಜೆ ನೀಡಲಾಗಿದೆ. ಈ ನಿರ್ಧಾರವು ದೇಶದಲ್ಲಿ ಕಡಿಮೆಯಾಗುತ್ತಿರುವ ಜನಸಂಖ್ಯೆಯನ್ನು ಎದುರಿಸಲು ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗಿದೆ.

ಫ್ಯಾನ್ ಮೇ ಎಜುಕೇಶನ್ ಗ್ರೂಪ್ ನಡೆಸುತ್ತಿರುವ ಒಂಬತ್ತು ಕಾಲೇಜುಗಳಲ್ಲಿ ಒಂದಾದ ಮಿಯಾನ್ಯಾಂಗ್ ಫ್ಲೈಯಿಂಗ್ ವೊಕೇಶನಲ್ ಕಾಲೇಜು, ಮಾರ್ಚ್ 21 ರಂದು ಒಂದು ವಾರಗಳ ವಿರಾಮವನ್ನು ಘೋಷಿಸಿತು. ಏಪ್ರಿಲ್ 1 ರಿಂದ ಏಪ್ರಿಲ್ 7 ರವರೆಗೆ ಇರುವ ಸಮಯವು ವಸಂತ ವಿರಾಮವನ್ನು ಆನಂದಿಸುವ ಮೂಲಕ ಪ್ರಕೃತಿಯನ್ನು ಪ್ರೀತಿಸಲು, ಜೀವನವನ್ನು ಪ್ರೀತಿಸಲು ಮತ್ತು ಪ್ರೀತಿಯನ್ನು ಆನಂದಿಸಲು ಕಲಿಯಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ ಎಂದು ಸಂಸ್ಥೆ ತಿಳಿಸಿದೆ. ಈ ಬಗ್ಗೆ ಅಲ್ಲಿನ ಪ್ರಾಂಶುಪಾಲರು ಮಾತನಾಡಿದ್ದು, ಇಂಥಾ ರಜೆಯಿಂದಾಇ ವಿದ್ಯಾರ್ಥಿಗಳು ಹಲವು ಪ್ರದೇಶಗಳನ್ನು ನೋಡಲು, ಅಲ್ಲಿನ ಪರಿಸರವನ್ನು ಅನುಭವಿಸಲು ಸಹಾಯಕವಾಗುತ್ತದೆ. ಇದು ವಿದ್ಯಾರ್ಥಿಗಳಲ್ಲಿ ತರಗತಿಗಳಲ್ಲಿ ಕಲಿಸುವ ಬೋಧನಾ ವಿಷಯಕ್ಕೂ ಸಹಾಯವಾಗುತ್ತದೆ. ಜೊತೆಗೆ ಜನನದ ಪ್ರಮಾಣವನ್ನು ಹೆಚ್ಚಿಸಲು ಇದು ಸಹಾಯಕವಾಗಿದೆ ಎಂದು ಹೇಳಿದರು.

ಈ ಒಂದು ವಾರದಲ್ಲಿ ವಿದ್ಯಾರ್ಥಿಗಳಿಗೆ ಹೋಮ್‌ವರ್ಕ್ ಸಹ ನೀಡಲಾಗಿದೆ. ಡೈರಿಗಳನ್ನು ಬರೆಯುವುದು, ವೈಯಕ್ತಿಕ ಅಭಿವೃದ್ಧಿಯ ಬಗ್ಗೆ ನಿಗಾ ಇಡುವುದು ಮತ್ತು ಪ್ರಯಾಣದ ವಿಡಿಯೋಗಳನ್ನು ಮಾಡುವುದು ಒಳಗೊಂಡಿರುತ್ತದೆ. ಈ ಒಂದು ಪ್ರಯತ್ನವು ಜನನ ಪ್ರಮಾಣವನ್ನು ಹೆಚ್ಚಿಸುವ ಮಾರ್ಗಗಳನ್ನು ಕಂಡುಕೊಳ್ಳುವ ಉದ್ದೇಶವನ್ನು ಪೂರೈಸುವ ಪ್ರಯತ್ನವಾಗಿದೆ ಎಂದು ಹೇಳಲಾಗುತ್ತಿದೆ.

ಅತಿ ಕಡಿಮೆ ಜನನ ಪ್ರಮಾಣ ದರ ಹೊಂದಿರುವ ಚೀನಾ
ಕಳೆದ ವರ್ಷ ಚೀನಾ ಅತಿ ಕಡಿಮೆ ಜನನ ಪ್ರಮಾಣ ದರವನ್ನು ಹೊಂದಿದೆ. ಕಳೆದ ಆರು ದಶಕಗಳಲ್ಲೇ ಇದೆ ಮೊದಲು ಜನಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದ್ದು, 2022ರ ವರದಿಯ ಪ್ರಕಾರ ಪ್ರತಿ ಸಾವಿರ ಜನರಿಗೆ 6.77 ರಷ್ಟು ಜನನಗಳು ಮಾತ್ರ ಸಂಭವಿಸುತ್ತಿವೆ. ಅದರ ಹಿಂದಿನ ವರ್ಷ ಇದರ ಪ್ರಮಾಣ 7.52 ರಷ್ಟಿತ್ತು. ಇದೀಗ ಕುಸಿತ ಕಂಡಿರುವುದು ಚೀನಾದ ಕಳವಳಕ್ಕೆ ಕಾರಣವಾಗಿದೆ.

ಚೀನಾ 1980 ಮತ್ತು 2015ರ ನಡುವೆ ಒಂದು ಮಗು ನೀತಿಯನ್ನು ಹೇರಿತ್ತು. ಅಲ್ಲದೆ, ಶಿಕ್ಷಣದ ವೆಚ್ಚವನ್ನು ಭರಿಸಲಾಗದೇ ಅನೇಕರು ಒಂದೇ ಮಗುವಿಗೆ ಸೀಮಿತರಾದರು. ಈ ಎಲ್ಲ ಕಾರಣದಿಂದ ಚೀನಾದಲ್ಲಿ ಜನಸಂಖ್ಯೆ ದಿಢೀರ ಕುಸಿತವಾಗಿದ್ದು, ವಯಸ್ಸಾದವರ ಸಂಖ್ಯೆ ಹೆಚ್ಚಿದೆ. ಇದು ದೇಶದ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರಿದೆ. ಇದೀಗ ದೇಶದಲ್ಲಿ ಜನನ ಪ್ರಮಾಣವನ್ನು ಹಿಗ್ಗಿಸಲು ಚೀನಾ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ