ಭಾನುವಾರ, ಮೇ 19, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಏಪ್ರಿಲ್ ತಿಂಗಳ ಮೊದಲ ವಾರದ ಚಿನ್ನ ಬೆಳ್ಳಿ ದರ ; ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ

Twitter
Facebook
LinkedIn
WhatsApp
627af6ef4711c

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ (Gold and Silver price) ಇಂದು (ಏ.2, ಭಾನುವಾರ) ಯಥಾಸ್ಥಿಯಲ್ಲಿದೆ. ನಿನ್ನೆ ಭಾರಿ ಏರಿಕೆಯಾಗಿತ್ತು. ವಾರದ ರಜೆ ಇದೆ ಅಥವಾ ಸಮಾರಂಭಗಳಿಗಾಗಿ ನೀವು ಏನಾದರೂ ಆಭರಣಗಳನ್ನು ಖರೀದಿಸಲು ಪ್ಲಾನ್ ಮಾಡಿದ್ದರೆ ಒಮ್ಮೆ ಬೆಲೆಗಳನ್ನು ಪರೀಕ್ಷಿಸಿಕೊಳ್ಳಿ.

ಚಿನ್ನದ ಬೆಲೆಯಲ್ಲಿ ಯಾವುದೇ ಏರಿಳಿತವಾಗದೆ ಯಥಾಸ್ಥಿತಿಯಲ್ಲಿ ಇರುವ ಕಾರಣ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 60,050 ರೂಪಾಯಿ ಇದೆ. ನಿನ್ನೆ ಕೂಡ ಇದೇ ದರ ಇತ್ತು. ಅದೇ ರೀತಿಯಾಗಿ 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 55,050 ರೂಪಾಯಿಗೆ ಬಂದು ನಿಂತಿದೆ.

ಒಂದು ಕೆಜಿ ಬೆಳ್ಳಿ ಬೆಲೆ ಇಂದು 77,700 ರೂಪಾಯಿ ಇದೆ. ಬೆಳ್ಳಿ ಬೆಲೆಯಲ್ಲಿ ಇವತ್ತು 200 ರೂಪಾಯಿ ಏರಿಕೆಯಾಗಿದೆ. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಬಹುತೇಕ ಎಲ್ಲಾ ಕಡೆ ಇಂದು ಇದೇ ದರಗಳಲ್ಲಿ ಮಾರಾಟವಾಗುತ್ತಿವೆ.

ದೇಶದ ಇತರೆ ಪ್ರಮುಖ ನಗರಗಲ್ಲಿನ ಚಿನ್ನ, ಬೆಳ್ಳಿ ದರಗಳು:

Gold and silver rate in india: ಹೈದರಾಬಾದ್ ನಲ್ಲೂ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 60,000 ರೂಪಾಯಿ ಇದೆ. ಮೊನ್ನೆ ಈ ದರ 59,670 ರೂಪಾಯಿ ಇತ್ತು. ಅದೇ ರೀತಿಯಾಗಿ 22 ಕ್ಯಾರೆಟ್ ಚಿನ್ನದ ದರ 55,000 ರೂಪಾಯಿಯಲ್ಲಿ ಮಾರಾಟವಾಗುತ್ತಿದೆ.

ಹೈದರಾಬಾದ್ ಮಾರುಕಟ್ಟೆಯಲ್ಲೂ ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 200 ರೂಪಾಯಿ ಹೆಚ್ಚಳವಾಗಿದೆ. ಪ್ರಸ್ತುತ 77,700 ರೂಪಾಯಿಗೆ ವ್ಯಾಪಾರ ಆಗುತ್ತಿದೆ. ವಿಜಯವಾಡದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 55,000 ಆಗಿದೆ. 24 ಕ್ಯಾರೆಟ್ ಚಿನ್ನಕ್ಕೆ 60,000 ರೂಪಾಯಿ ಇದೆ. ಇಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 77,500 ರೂಪಾಯಿ ಇದೆ. ವಿಶಾಖಪಟ್ಟಣಂ ಮಾರುಕಟ್ಟೆಯಲ್ಲಿ 22ಕ್ಯಾರೆಟ್ ಚಿನ್ನದ ಬೆಲೆ 55,000 ರೂಪಾಯಿ ಆಗಿದ್ದು, 24ಕ್ಯಾರೆಟ್ ಚಿನ್ನದ ಬೆಲೆ 60,000 ರೂಪಾಯಿಗೆ ಇಳಿದಿದೆ.

ಚೆನ್ನೈನಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ

ದೇಶದ ಇತರ ನಗರಗಳಿಗೆ ಹೋಲಿಸಿಕೊಂಡಾಗ ನೆರೆಯ ಚೆನ್ನೈನಲ್ಲಿ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಿದೆ. ಚೆನ್ನೈನಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲಿ 300 ರೂಪಾಯಿ ಇಳಿಕೆಯಾಗಿ 55,600 ರೂಪಾಯಿಗೆ ತಲುಪಿದೆ. ನಿನ್ನೆ ಈ ದರ 55,900 ರೂಪಾಯಿ ಆಗಿತ್ತು.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 330 ರೂಪಾಯಿ ಕಡಿಮೆಯಾಗಿದ್ದು, ಆ ಬಳಿಕ 60,650 ರೂಪಾಯಿ ಇದೆ. ನಿನ್ನೆ 60,980 ರೂಪಾಯಿಯಲ್ಲಿ ವಹಿವಾಟು ನಡೆಸಿತ್ತು. ಚೆನ್ನೈನಲ್ಲೂ ಕೆಜಿ ಬೆಳ್ಳಿ 77,700 ರೂಪಾಯಿ ಇದೆ.

ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 55,000 ರೂಪಾಯಿ ಆಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 60,000 ರೂಪಾಯಿ ಇದೆ. ದೇಶದ ವಾಣಿಜ್ಯ ನಗರಿಯಲ್ಲಿ ಬೆಳ್ಳಿ ಬೆಲೆಯಲ್ಲಿ 500 ರೂಪಾಯಿ ಏರಿಕೆಯಾಗಿದೆ. ಪ್ರಸ್ತುತ ಅಲ್ಲಿ ಕೆಜಿ ಬೆಳ್ಳಿ ಬೆಲೆ 74,500 ರೂಪಾಯಿ ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 55,150 ರೂ., 24 ಕ್ಯಾರೆಟ್ ಚಿನ್ನದ ಬೆಲೆ 60,150 ರೂಪಾಯಿಯಲ್ಲಿ ವ್ಯಾಪಾರ ಮುಂದುವರೆಯುತ್ತಿದೆ. ಇಲ್ಲಿ ಬೆಳ್ಳಿ ಬೆಲೆ 74,500 ರೂಪಾಯಿಗೆ ವಹಿವಾಟು ನಡೆಸುತ್ತಿದೆ.

ಲೋಹಗಳ ಬೆಲೆಗಳು ಅಂತಾರಾಷ್ಟ್ರೀಯ ಬೆಳವಣಿಗೆಗಳು ಮತ್ತು ಡಾಲರ್ ಮೌಲ್ಯದ ಮೇಲೆ ನಿರ್ಣಾಯಕವಾಗುತ್ತದೆ. ಈ ತಿಂಗಳಲ್ಲಿ ಮದುವೆಗೆ ಯಾವುದೇ ಶುಭ ದಿನಗಳಿಲ್ಲದ ಕಾರಣ ದೇಶೀಯವಾಗಿಯೂ ಚಿನ್ನದ ಬೇಡಿಕೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಮಾರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ