ಭಾನುವಾರ, ಮೇ 5, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪುತ್ತೂರಿನ ಪ್ರಥಮ ಬಿಜೆಪಿ ಶಾಸಕ, ಹಿರಿಯ ಮುಖಂಡ ಉರಿಮಜಲು ಕೆ.ರಾಮ್‌ ಭಟ್‌ ಇನ್ನಿಲ್ಲ.

Twitter
Facebook
LinkedIn
WhatsApp
ಪುತ್ತೂರಿನ ಪ್ರಥಮ ಬಿಜೆಪಿ ಶಾಸಕ, ಹಿರಿಯ ಮುಖಂಡ ಉರಿಮಜಲು ಕೆ.ರಾಮ್‌ ಭಟ್‌ ಇನ್ನಿಲ್ಲ.

ಪುತ್ತೂರು : ಬಿಜೆಪಿಯ ಹಿರಿಯ ಮುಖಂಡ , ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಉರಿಮಜಲು ಕೆ.ರಾಮ ಭಟ್‌  ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಂಬೆಟ್ಟಿನಲ್ಲಿರುವ ತಮ್ಮ ಮನೆಯಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಕಳೆದ ಹಲವು ಸಮಯಗಳಿಂದಲೂ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಇದೀಗ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಆರ್‌ಎಸ್‌ಎಸ್‌ನ ನಿಷ್ಟಾವಂತ ಸ್ವಯಂ ಸೇವಕರಾಗಿ, ಪುತ್ತೂರಿನಲ್ಲಿ ಹಿಂದುತ್ವದ ಅಡಿಪಾಯವನ್ನು ಗಟ್ಟಿಯಾಗಿ ಬೆರೂರುವಂತೆ ಮಾಡಿದವರು. ಬಿಜೆಪಿಯ ರಾಷ್ಟ್ರೀಯ ನಾಯಕರಾದ ಅಟಲ್‌ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ ಸೇರಿದಂತೆ ಹಲವು ನಾಯಕರ ಜೊತೆಗೆ ನಿಕಟ ಸಂಪರ್ಕವನ್ನು ಇಟ್ಟುಕೊಂಡಿದ್ದರು. ವಕೀಲರಾಗಿದ್ದ ಉರಿಮಜಲು ರಾಮ ಭಟ್‌ ಅವರು ಪುತ್ತೂರು ಪುರಸಭೆಯ ಅಧ್ಯಕ್ಷರಾಗಿ, ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾಗಿ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಮೂಲಕ ಶೈಕ್ಷಣಕ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.

ಜನಸಂಘ ಸ್ಥಾಪನೆ ಕಾಲದಿಂದಲೂ ರಾಜಕೀಯದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದ ಉರಿಮಜಲು ಕೆ.ರಾಮಭಟ್‌ ಅವರು 1956-57ರ ಚುನಾವಣೆಯಿಂದಲೇ ಪುತ್ತೂರಿನಲ್ಲಿ ಜನಸಂಘದಿಂದ ಸ್ಪರ್ಧಿಸಿ, ಎರಡು ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ರಾಮ ಭಟ್ ಅವರು, ಡಿ.ವಿ. ಸದಾನಂದ ಗೌಡರನ್ನು ಸುಳ್ಯದಿಂದ ಕರೆತಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಣದಿಂದ ಸ್ಪರ್ಧೆಗೆ ಇಳಿಸಿದ್ದರು. 1989ರ ಚುನಾವಣೆಯಲ್ಲಿ ಡಿವಿಎಸ್‌ ಪರಾಭವಗೊಂಡಿದ್ದರೂ ಕೂಡ 1994 ಮತ್ತು 1999ರಲ್ಲಿ ಮತ್ತೆ ಗೆದ್ದು ಬಂದಿದ್ದರು. 2004ರಲ್ಲಿ ಮಂಗಳೂರು ಸಂಸದರಾಗಿ, ನಂತರ ಉಡುಪಿ ಸಂಸದರಾಗಿ, ಮುಖ್ಯಮಂತ್ರಿಯೂ ಆದರು. ಡಿ.ವಿ.ಸದಾನಂದ ಗೌಡರ ರಾಜಕೀಯದ ಗುರುವಾಗಿ ಗುರುತಿಸಿಕೊಂಡವರು.
2008ರಲ್ಲಿ ಆಗಿನ ಬಿಜೆಪಿ ಶಾಸಕಿ ಶಕುಂತಳಾ ಶೆಟ್ಟಿಗೆ ಎರಡನೇ ಬಾರಿ ಟಿಕೆಟ್ ನಿರಾಕರಿಸಿದಾಗ ಉರಿಮಜಲ್ ರಾಮ ಭಟ್ ಬಿಜೆಪಿ ನಾಯಕತ್ವದ ವಿರುದ್ದವೇ ಸಿಡಿದೆದ್ದು ಸ್ವಾಭಿಮಾನಿ ವೇದಿಕೆಯನ್ನು ಸ್ಥಾಪಿಸಿ ವೇದಿಕೆ ಅಡಿಯಲ್ಲಿ ಶಕುಂತಳಾ ಶೆಟ್ಟಿ 2008ರಲ್ಲಿ ಪಕ್ಷೇರರರಾಗಿ ಪುತ್ತೂರಿನಿಂದ ಸ್ಪರ್ಧಿಸಿದ್ದರು. ಅಷ್ಟೇ ಅಲ್ಲಾ ರಾಮ ಭಟ್‌ ಅವರು ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ವಿರುದ್ದ ಲೋಕಸಭಾ ಚುನಾವಣೆಯಲ್ಲಿಯೂ ಸ್ಪರ್ಧೆ ಮಾಡಿದ್ದರು. ಆದರೆ ಶಕುಂತಲಾ ಶೆಟ್ಟಿ ಅವರು ಕಾಂಗ್ರೆಸ್‌ ಸೇರಿದ ನಂತರದಲ್ಲಿ ರಾಮ ಭಟ್‌ ಅವರು ಅಂತರ ಕಾಯ್ದುಕೊಂಡಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಮತ್ತೆ ಬಿಜೆಪಿ ಜೊತೆ ಮುನಿಸು ಕಡಿಮೆ ಮಾಡಿಕೊಂಡಿದ್ದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು