ಮಂಗಳವಾರ, ಮೇ 7, 2024
ಶೀಘ್ರದಲ್ಲೇ SSLC ಪಲಿತಾಂಶ ಪ್ರಕಟ; ರಿಸಲ್ಟ್ ನೋಡುವುದು ಹೇಗೆ.!-ಮೇ 7 ರ ಚುನಾವಣೆ ಬಳಿಕ ಪ್ರಜ್ವಲ್ ರೇವಣ್ಣ ಭಾರತಕ್ಕೆ ಆಗಮನ..?-ಮದುವೆಗೆ ತೆರಳಿದ್ದ 5 ಮಂದಿ ವಿದ್ಯಾರ್ಥಿಗಳು ಕನ್ಯಾಕುಮಾರಿ ಬೀಚ್ ನಲ್ಲಿ ಮುಳುಗಿ ಸಾವು!-ಚಾಲಕ ನಿಯಂತ್ರಣ ತಪ್ಪಿ 5 ವಿದಾರ್ಥಿಗಳ ದುರಂತ ಅಂತ್ಯ..!-ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಹೆಸರು ಬಳಸದಂತೆ ಕೋರ್ಟ್ ಆದೇಶ.!-ಮೂಡಬಿದರೆ: ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಪದವಿ ಪೂರ್ವ ವಿದ್ಯಾರ್ಥಿನಿ ಆತ್ಮಹತ್ಯೆ..!-ಸೇಡಂ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಡಾ ನಾಗರೆಡ್ಡಿ ಪಾಟೀಲ್ ನಿಧನ..!-Rain Alert : ನಾಳೆಯಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೇ 12ರವರೆಗೆ ಮಳೆ ನಿರೀಕ್ಷೆ..!-ಅಮೇಥಿಯಲ್ಲಿರುವ ಕಾಂಗ್ರೆಸ್​ ಕಚೇರಿ ಮೇಲೆ ದುಷ್ಕರ್ಮಿಗಳಿಂದ ದಾಳಿ; ಕಾರುಗಳು ಧ್ವಂಸ..!-ಬಂಟ್ವಾಳ: ನೇತ್ರಾವತಿ ನದಿ ನೀರಿನಲ್ಲಿ ಆಟವಾಡಲು ಇಳಿದ ಇಬ್ಬರು ಬಾಲಕಿಯರು ನೀರುಪಾಲು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪರಭಾಷೆಯಲ್ಲಿ ಮಿಂಚಲು ರೆಡಿಯಾದ ಮತ್ತೋರ್ವ ಕನ್ನಡತಿ, ತೆಲುಗಿನಲ್ಲಿ ಅಣ್ಣಾವ್ರ ಮೊಮ್ಮಗಳ ಧನ್ಯಾ ಅಭಿನಯ

Twitter
Facebook
LinkedIn
WhatsApp
ಪರಭಾಷೆಯಲ್ಲಿ ಮಿಂಚಲು ರೆಡಿಯಾದ ಮತ್ತೋರ್ವ ಕನ್ನಡತಿ, ತೆಲುಗಿನಲ್ಲಿ ಅಣ್ಣಾವ್ರ ಮೊಮ್ಮಗಳ ಧನ್ಯಾ ಅಭಿನಯ
 

ರಾಜ್​ ಕುಟುಂಬದ ಕುಡಿ ಧನ್ಯಾ ರಾಮ್​ಕುಮಾರ್ ಸ್ಯಾಂಡಲ್​ವುಡ್​ ಪ್ರವೇಶ ಮಾಡಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ರಾಜ್​ಕುಮಾರ್ ಅವರ ಮಗಳು ಪೂರ್ಣಿಮಾ ಹಾಗೂ ನಟ ರಾಮ್​ಕುಮಾರ್ ಅವರ ಮಗಳು ಧನ್ಯಾ ಚಿತ್ರರಂಗದಲ್ಲಿ ಬ್ಯುಸಿ ಇರುವ ನಟಿ.

ನಿನ್ನ ಸನಿಹಕೆ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಧನ್ಯಾ, ಈಗಾಗಲೇ ಸಿನಿರಂಗದಲ್ಲಿ ಹಲವಾರು ಉತ್ತಮ ಆಫರ್​ಗಳನ್ನು ಪಡೆಯುತ್ತಿದ್ದಾರೆ. ಆದರೆ ಕಥೆಯ ವಿಚಾರದಲ್ಲಿ ಎಚ್ಚರವಹಿಸಿರುವ ಅವರು ಉತ್ತಮ ಕತೆಗಳನ್ನು ಮಾತ್ರ ಆಯ್ಕೆ ಮಾಡುತ್ತಿದ್ದಾರೆ.

 
ಪರಭಾಷೆಯಲ್ಲಿ ಮಿಂಚಲು ರೆಡಿಯಾದ ಮತ್ತೋರ್ವ ಕನ್ನಡತಿ, ತೆಲುಗಿನಲ್ಲಿ ಅಣ್ಣಾವ್ರ ಮೊಮ್ಮಗಳ ಧನ್ಯಾ ಅಭಿನಯ

ಈಗ ಧನ್ಯಾ ಅವರಿಗೆ ತೆಲುಗು ಹಾಗೂ ತಮಿಳು ಚಿತ್ರರಂಗದಿಂದ ಸಹ ಅವಕಾಶಗಳು ಹರಿದು ಬರುತ್ತಿದೆ. ಈಗಾಗಲೇ ಒಂದು ಚಿತ್ರಕ್ಕೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಮೊದಲ ಚಿತ್ರದಲ್ಲಿಯೇ ತಮ್ಮ ಅಬಿನಯದ ಮೂಲಕ ಜನರಿಗೆ ಇಷ್ಟವಾದ ನಟಿ ಧನ್ಯಾ, ಸದ್ಯ ಕಲಾಪತ್ಥರ್ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಈ ನಡುವೆಯೇ ಅವರಿಗೆ ತೆಲುಗಿನಿಂದ ಆಫರ್ ಬಂದಿದೆ.

 
ಪರಭಾಷೆಯಲ್ಲಿ ಮಿಂಚಲು ರೆಡಿಯಾದ ಮತ್ತೋರ್ವ ಕನ್ನಡತಿ, ತೆಲುಗಿನಲ್ಲಿ ಅಣ್ಣಾವ್ರ ಮೊಮ್ಮಗಳ ಧನ್ಯಾ ಅಭಿನಯ
ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಭಾಷೆಯಲ್ಲಿ ಸಹ ಮಿಂಚಬೇಕು ಎಂಬುದು ಧನ್ಯಾ ಅವರ ಆಸೆಯಾಗಿದ್ದು, ಅದಕ್ಕೆ ಪೂರಕವಾಗಿ ಆಫರ್​ಗಳು ಸಿಗುತ್ತಿದೆ. ಹಾಗಾಗಿ ಧನ್ಯಾ ಕೂಡ ತಯಾರಿ ನಡೆಸಿದ್ದು, ಭರ್ಜರಿ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
 
ಮಾಹಿತಿಗಳ ಪ್ರಕಾರ ಧನ್ಯಾ ತಮಿಳು ಹಾಗೂ ತೆಲುಗಿನಲ್ಲಿ ಬೇರೆ, ಬೇರೆ ಚಿತ್ರಗಳನ್ನು ಒಪ್ಪಿಕೊಂಡಿದ್ದು, ಈ ಬಗ್ಗೆ ಸದ್ಯ ಅವರು ಯಾವುದೇ ಮಾಹಿತಿ ನೀಡಿಲ್ಲ. ಅಭಿಮಾನಿಗಳು ಕೂಡ ಅಪ್​ಡೇಟ್​ಗಾಗಿ ಕಾಯುತ್ತಿದ್ದಾರೆ.
 
ಕನ್ನಡಿಗರಿಒಗೆ ಇದೊಂದು ನಿಜಕ್ಕೂ ಸಂತಸದ ವಿಚಾರವಾಗಿದ್ದು, ಬೇರೆ ಭಾಷೆಯಲ್ಲಿ ಧನ್ಯಾ ಹೇಗೆ ಮೋಡಿ ಮಾಡಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ.
ಪರಭಾಷೆಯಲ್ಲಿ ಮಿಂಚಲು ರೆಡಿಯಾದ ಮತ್ತೋರ್ವ ಕನ್ನಡತಿ, ತೆಲುಗಿನಲ್ಲಿ ಅಣ್ಣಾವ್ರ ಮೊಮ್ಮಗಳ ಧನ್ಯಾ ಅಭಿನಯ

Click here to support us

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ

ಅಂಕಣ