ಸೋಮವಾರ, ಮೇ 6, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ತನ್ನ ಮಗಳನ್ನು ಮೀರಿಸುತ್ತಾನೆ ಎಂಬ ಕಾರಣಕ್ಕೆ 13 ವರ್ಷದ ವಿದ್ಯಾರ್ಥಿಯನ್ನು ಕೊಲೆ ಮಾಡಿದ ತಾಯಿ!

Twitter
Facebook
LinkedIn
WhatsApp
 ತನ್ನ ಮಗಳನ್ನು ಮೀರಿಸುತ್ತಾನೆ ಎಂಬ ಕಾರಣಕ್ಕೆ 13 ವರ್ಷದ ವಿದ್ಯಾರ್ಥಿಯನ್ನು ಕೊಲೆ ಮಾಡಿದ ತಾಯಿ!

ಕಾರೈಕಲ್: 13 ವರ್ಷದ ಬಾಲಕನನ್ನು ಸಹಪಾಠಿಯ ತಾಯಿಯೇ ಕೊಲೆ ಮಾಡಿರುವ ಘಟನೆ ಕಾರೈಕಲ್ ನಲ್ಲಿ ನಡೆದಿದೆ. ವಿದ್ಯಾರ್ಥಿ ಶಾಲೆಯಲ್ಲಿ ತನ್ನ ಮಗಳನ್ನು ಮೀರಿಸುವುದನ್ನು ಬಯಸದ ಕಾರಣ ಮಹಿಳೆ ಪಾನೀಯದಲ್ಲಿ ವಿಷ ಹಾಕಿ ಕುಡಿಸಿದ್ದಾಳೆ. ಇದರಿಂದ ತೀವ್ರ ಅಸ್ವತ್ಥಗೊಂಡಿದ್ದ ಬಾಲಕ ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಆರೋಪಿಯನ್ನು 42 ವರ್ಷದ ಜೆ ಸಹಾಯರಾಣಿ ವಿಕ್ಟೋರಿಯಾ ಎಂದು ಗುರುತಿಸಲಾಗಿದೆ. ಇನ್ನು ಮಹಿಳೆ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ಮೃತ ವಿದ್ಯಾರ್ಥಿ ಕಾರೈಕಲ್‌ನ ಖಾಸಗಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದು ತರಗತಿಯ ಟಾಪರ್ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದನು ಎಂದು ವರದಿಯಾಗಿದೆ. ಇನ್ನು ಆರೋಪಿ ಸಹಾಯರಾಣಿ ವಿಕ್ಟೋರಿಯಾ ಅವರ ಮಗಳು ಅದೇ ತರಗತಿಯಲ್ಲಿ ಓದುತ್ತಿದ್ದು ತನ್ನ ಮಗಳಿಗಿಂತ ಉತ್ತಮವಾಗಿ ಓದುತ್ತಿದ್ದ ಹುಡುಗನ ಬಗ್ಗೆ ಆಕೆ ಅಸಮಾಧಾನ ಹೊಂದಿದ್ದಳು.

ಶುಕ್ರವಾರ ಶಾಲೆಯಲ್ಲಿ ವಾರ್ಷಿಕ ದಿನ ಆಚರಿಸಲಾಗಿತ್ತು. ಆಚರಣೆಯ ಅಂಗವಾಗಿ ಬಾಲಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಲು ಮುಂದಾಗಿದ್ದನು. ಬೆಳಗ್ಗೆ ಶಾಲೆಗೆ ಭೇಟಿ ನೀಡಿದ ಆರೋಪಿ ಮಹಿಳೆ, ಶಾಲೆಯ ಕಾವಲುಗಾರನಿಗೆ ತಾನು ಬಾಲಕನ ತಾಯಿ ಎಂದು ಸುಳ್ಳು ಹೇಳಿ ತನ್ನ ಮಗನಿಗೆ ತಂಪು ಪಾನೀಯವನ್ನು ನೀಡುವಂತೆ ಎರಡು ಬಾಟಲಿಗಳನ್ನು ಕೊಟ್ಟು ಹೋಗಿದ್ದಳು.

ಇದನ್ನು ಸೇವಿಸಿದ ನಂತರ ಬಾಲಕ ಅಸ್ವಸ್ಥಗೊಂಡಿದ್ದಾನೆ. ನಂತರ ಮನೆಗೆ ತಲುಪಿದ ಮೇಲೆ ಬಾಟಲಿಯನ್ನು ಎಸೆದಿದ್ದಾನೆ. ಇದರಿಂದ ಆತಂಕಗೊಂಡ ಪೋಷಕರು ಮಗನನ್ನು ಕಾರೈಕಲ್ ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದನು.

ಇದಕ್ಕೂ ಮುನ್ನ ಬಾಲಕ ತನ್ನ ಪೋಷಕರಿಗೆ ನಡೆದಿದ್ದನ್ನು ತಿಳಿಸಿದ್ದಾನೆ. ಪೋಷಕರು ಶಾಲೆಯ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರೀಕ್ಷಿಸಿದಾಗ ಮಹಿಳೆಯನ್ನು ಸಹಾಯರಾಣಿ ವಿಕ್ಟೋರಿಯಾ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಾರೈಕಲ್‌ನ ಹಿರಿಯ ಪೊಲೀಸ್ ಅಧೀಕ್ಷಕ ಆರ್ ಲೋಕೇಶ್ವರನ್ ಪ್ರಕಾರ, ಆರೋಪಿಯು ಮೆಡಿಕಲ್ ನಿಂದ ವಿರೇಚಕ ಮಾತ್ರೆಗಳನ್ನು ಖರೀದಿಸಿ, ತಂಪು ಪಾನೀಯದಲ್ಲಿ ಬೆರೆಸಿ ಶಾಲೆಯ ವಾಚ್‌ಮನ್ ಮೂಲಕ ಹುಡುಗನಿಗೆ ನೀಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಶಾಲೆಯ ವಾರ್ಷಿಕ ದಿನದ ಕಾರ್ಯಕ್ರಮಗಳಲ್ಲಿ ಹುಡುಗ ಭಾಗವಹಿಸದಂತೆ ತಡೆಯಲು ಆರೋಪಿ ಮಹಿಳೆ ಬಯಸಿದ್ದಳು. ಆಕೆ ಬಾಲಕನಿಗೆ ನೀಡಿದ ಪಾನೀಯದಲ್ಲಿ ನಿಖರವಾಗಿ ಏನನ್ನು ಸೇರಿಸಲಾಗಿದೆ ಎಂಬುದನ್ನು ಕಂಡುಹಿಡಿಯಲು ನಾವು ಶವಪರೀಕ್ಷೆಯ ವರದಿಗಳಿಗಾಗಿ ಕಾಯುತ್ತಿದ್ದೇವೆ ಎಂದರು.

ಸಹಾಯರಾಣಿ ವಿಕ್ಟೋರಿಯಾ ವಿರುದ್ಧ ಕಾರೈಕಲ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದ್ದು ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ

ಅಂಕಣ