ಸೋಮವಾರ, ಮೇ 6, 2024
ಅಮೇಥಿಯಲ್ಲಿರುವ ಕಾಂಗ್ರೆಸ್​ ಕಚೇರಿ ಮೇಲೆ ದುಷ್ಕರ್ಮಿಗಳಿಂದ ದಾಳಿ; ಕಾರುಗಳು ಧ್ವಂಸ..!-ಬಂಟ್ವಾಳ: ನೇತ್ರಾವತಿ ನದಿ ನೀರಿನಲ್ಲಿ ಆಟವಾಡಲು ಇಳಿದ ಇಬ್ಬರು ಬಾಲಕಿಯರು ನೀರುಪಾಲು..!-6 ವರ್ಷದ ಮಗುವನ್ನು ಮೊಸಳೆಗಳಿದ್ದ ನಾಲೆಗೆ ಎಸೆದ ತಾಯಿ!-ಬೆಳ್ತಂಗಡಿ: ಅರ್ಚಕ ಆತ್ಮಹತ್ಯೆಗೆ ಶರಣು-ಬೆಳ್ತಂಗಡಿ: ಅರ್ಚಕ ಆತ್ಮಹತ್ಯೆಗೆ ಶರಣು-ತೇಜಸ್ವಿ ಸೂರ್ಯ ಮೀನು ತಿನ್ನುತ್ತಾ ಎಲ್ಲರ ಮೇಲೆ ಗೂಂಡಾಗಿರಿ ಮಾಡುತ್ತಿದ್ದಾರೆ ; ಕಂಗನಾ ರಣಾವತ್ ಹೇಳಿಕೆ ವಿಡಿಯೋ ವೈರಲ್-ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು!-ಕ್ರಿಸ್ ಗೇಲ್ ದಾಖಲೆ ಮುರಿದ RCB ನಾಯಕ ಫಾಫ್ ಡುಪ್ಲೆಸಿಸ್!-ಕೆರೆ ಮೀನು ತಿಂದು ಇಬ್ಬರು ಮೃತ: ಹಲವರು ಅಸ್ವಸ್ಥ-ಪ್ರಜ್ವಲ್‌ ರೇವಣ್ಣರ ಅಶ್ಲೀಲ ವಿಡಿಯೋವನ್ನು ನಾನು ನೋಡುವ ಧೈರ್ಯ ಮಾಡಿಲ್ಲ :ನಿಖಿಲ್‌ ಕುಮಾರಸ್ವಾಮಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಡೆಲ್ಟಾ ರೂಪಾಂತರ ಬಗ್ಗೆ ಎಚ್ಚರವಿರಲಿ' - ಜೋ ಬಿಡೆನ್‌

Twitter
Facebook
LinkedIn
WhatsApp
ಡೆಲ್ಟಾ ರೂಪಾಂತರ ಬಗ್ಗೆ ಎಚ್ಚರವಿರಲಿ’ – ಜೋ ಬಿಡೆನ್‌

ವಾಷಿಂಗ್ಟನ್‌: ಅಮೇರಿಕಾದಲ್ಲಿ ಲಸಿಕಾ ಅಭಿಯಾನದ ಕಾರಣ ಕೊರೊನಾ ಸಾವಿನ ಸಂಖ್ಯೆ ಇಳಿಕೆಯಾಗಿದೆ. ಆದರೆ, ಜನತೆ ಕೊರೊನಾ ಸೋಂಕಿನ ಡೆಲ್ಟಾ ರೂಪಾಂತರ ತಳಿಯಿಂದ ಜಾಗರೂಕರಾಗಿರಬೇಕು ಎಂದು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್‌ ಎಚ್ಚರಿಸಿದ್ದಾರೆ.

ಬಿಡೆನ್‌‌ ನೇತೃತ್ವದ ಸರ್ಕಾರ ಆರು ತಿಂಗಳು ಪೂರೈಸಿದ ಹಿನ್ನೆಲೆ ನಡೆಸಿದ ಕ್ಯಾಬಿನೆಟ್‌ ಸಭೆಯಲ್ಲಿ ಮಾತನಾಡಿದ ಅವರು, “ಲಸಿಕಾ ಅಭಿಯಾನದಿಂದ ಕಳೆದ ಆರು ತಿಂಗಳಿನಲ್ಲಿ ಕೊರೊನಾ ಸಾವಿನ ಸಂಖ್ಯೆ ಶೇ.90ರಷ್ಟು ಇಳಿಕೆಯಾಗಿದೆ. ಈಗ ಕೊರೊನಾ ಸೋಂಕಿಗೆ ತುತ್ತಾದವರು ಹಾಗೂ ಸಾವನ್ನಪ್ಪಿದ್ದ ಹೆಚ್ಚಿನ ಮಂದಿ ಲಸಿಕೆ ಪಡೆಯದವರು. ಹಾಗಾಗಿ ಕೊರೊನಾ ನಿಯಂತ್ರಣಕ್ಕೆ ಲಸಿಕೆ ತೆಗೆದುಕೊಳ್ಳುವುದು ಸೂಕ್ತ” ಎಂದಿದ್ದಾರೆ.
“ಮುಂಬರುವ ವಾರಗಳಲ್ಲಿ ಡೆಲ್ಟಾ ರೂಪಾಂತರ ತಳಿಯು ತೀವ್ರಗೊಳ್ಳಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅಮೇರಿಕಾದ ಹಲವು ಭಾಗಗಳಲ್ಲಿ ವರಿದಯಾದ ಹೊಸ ಪ್ರಕರಣಗಳಲ್ಲಿ ಶೇ.80ರಷ್ಟು ಡೆಲ್ಟಾ ರೂಪಾಂತರ ತಳಿ ಪ್ರಕರಣಗಳಿವೆ” ಎಂದು ಹೇಳಿದ್ದಾರೆ.
“ಕೇವಲ ಅಮೇರಿಕಾ ಮಾತ್ರವಲ್ಲದೇ, ಇತರ ರಾಷ್ಟ್ರಗಳ ನಾಗರಿಕರೂ ಲಸಿಕೆ ಪಡೆಯಲು ನಾವು ನೆರವಾಗುತ್ತಿದ್ದೇವೆ. ಇದರ ಜೊತೆ ಉದ್ಯೋಗ ಸೃಷ್ಟಿ ಹಾಗೂ ಮಧ್ಯಮ ವರ್ಗದವರ ಏಳಿಗೆಗಾಗಿ ದುಡಿಯುತ್ತಿದ್ದೇವೆ. ನಮ್ಮ ಜೊತೆ ಬೇರೆ ದೇಶದ ಆರ್ಥಿಕತೆಯೂ ಕೂಡಾ ಬೆಳೆಯಬೇಕು. ಅಮೇರಿಕಾದ ಆರ್ಥಿಕತೆ ಐತಿಹಾಸಿಕ ಪ್ರಗತಿ ಸಾಧಿಸಿದೆ” ಎಂದಿದ್ದಾರೆ.
“ವಯಸ್ಕರು ಹಾಗೂ ಮಕ್ಕಳು ಡೆಲ್ಟಾ ರೂಪಾಂತರ ತಳಿಗೆ ತುತ್ತಾಗುತ್ತಿದ್ದಾರೆ. ಅಲ್ಲದೇ ಪ್ರಕರಣದ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ” ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು