ಮಂಗಳವಾರ, ಏಪ್ರಿಲ್ 30, 2024
ನಮ್ಮದು ಮತ್ತು ರೇವಣ್ಣಕುಟುಂಬವೇ ಬೇರೆ ಬೇರೆ; ಕುಮಾರಸ್ವಾಮಿ-ಹೆತ್ತ ತಂದೆಯನ್ನೇ ಹಿಗ್ಗಾಮುಗ್ಗಾ ಮುಖಕ್ಕೆ ಜಾಡಿಸಿ ಮಗನಿಂದ ಕ್ರೂರ ಕೃತ್ಯ ; ಇಲ್ಲಿದೆ ವಿಡಿಯೋ-Gold Rate: ಏರಿಳಿತದಲ್ಲಿರುವ ಚಿನ್ನದ ದರ ; ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿಯ ದರದ ವಿವರ-ಅಮಿತ್ ಶಾ ಹೇಳಿಕೆ ತಿರುಚಿದ ಆರೋಪ ; ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಮನ್ಸ್..!-ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ; ಬಿಜೆಪಿ ಸೇರ್ಪಡೆ ಸಾಧ್ಯತೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಗೆ ಟ್ವಿಸ್ಟ್ ದೂರುದಾರೆಯ ಅತ್ತೆಯಿಂದ ಶಾಕಿಂಗ್ ಹೇಳಿಕೆ.!-ಸಂಸದ ಪ್ರಜ್ವಲ್​ ರೇವಣ್ಣ ಜೆಡಿಎಸ್​ನಿಂದ ಉಚ್ಚಾಟನೆ.!-ಗೃಹಲಕ್ಷ್ಮಿ ಯೋಜನೆ ಹಣದಿಂದ ಮೊಬೈಲ್ ಖರೀದಿಸಿದ ಮಹಿಳೆ; ಡಿಸ್ಪ್ಲೇ ಪಿಚ್ಚರ್ ವೈರಲ್!-ಮಾಜಿ ಸಿಎಂ ಎಸ್​ಎಂ ಕೃಷ್ಣ ಆಸ್ಪತ್ರೆಗೆ ದಾಖಲು.!-ನೇಣಿಗೆ ಶರಣಾದ ಖ್ಯಾತ ನಟಿ ಅಮೃತಾ ಪಾಂಡೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕರಿಮಣೇಲು: ಪನೋಳಿ ಮರ ಹೂಬಿಟ್ಟ ಅದ್ಭುತ ದೃಶ್ಯ ಕಂಣ್ತುಂಬಿಕೊಂಡಿದ್ದೀರಾ..?!

Twitter
Facebook
LinkedIn
WhatsApp
ಕರಿಮಣೇಲು: ಪನೋಳಿ ಮರ ಹೂಬಿಟ್ಟ ಅದ್ಭುತ ದೃಶ್ಯ ಕಂಣ್ತುಂಬಿಕೊಂಡಿದ್ದೀರಾ..?!

ವೇಣೂರು: ತನ್ನ ಜೀವಿತಾವಧಿಯಲ್ಲಿ ಒಂದು ಸಲ ಹೂ ಬಿಡುವ ತೀರಾ ಅಪರೂಪದ ಮರ ಸಂಕುಳಗಳಲ್ಲಿ ಒಂದಾದ ಶ್ರೀತಾಳಿ (ಪನೋಲಿ ಮರ) ಕರಿಮಣೇಲು ದೇವಸ್ಥಾನದ ಬಳಿ ಕಂಡು ಬಂದಿದ್ದು, ಕಳೆದೆರಡು ತಿಂಗಳುಗಳಿಂದ ಇದರ ಅಂದವನ್ನು ನೋಡಿ ಜನ ಕಣ್ತುಂಬಿಕೊಳ್ಳುತ್ತಿದ್ದಾರೆ.

ತಾಳಿ ಮರದಂತೆ ಎತ್ತರಕ್ಕೆ ಬೆಳೆಯುವ ಈ ಮರವು ತನ್ನ ಜೀವಿತಾವಧಿಯಲ್ಲಿ ಒಂದು ಬಾರಿ ಹೂವಿನಿಂದಲೇ ಆವೃತವಾಗಿ ಅತ್ಯಂತ ಆಕರ್ಷಣೀಯವಾಗಿ ಕಂಡು ಬರುತ್ತಿದೆ. ಪನೋಲಿ ಮರಕ್ಕೆ ಕನ್ನಡದಲ್ಲಿ ಶ್ರೀತಾಳಿ ಮರ ಎನ್ನುವುದು ರೂಡಿ. ಈ ಮರ ಸುಮಾರು 70 ರಿಂದ 80 ವರ್ಷಕ್ಕೆ ಹೂ ಬಿಟ್ಟು ಬಳಿಕ ಸಾಯುತ್ತದೆ. ಕರಿಮಣೇಲು ದೇವಸ್ಥಾನದ ಚಂದ್ರಶೇಖರ ಅಸ್ರಣ್ಣರಿಗೆ ಸೇರಿದ ತೋಟದಲ್ಲಿ ಮರ ಹೂ ಬಿಟ್ಟಿರುವ ಅದ್ಭುತ ದೃಶ್ಯ ಕಂಡು ಬಂದಿದೆ. ಅಸ್ರಣ್ಣರಿಗೆ ಸರಿಸುಮಾರು 73 ವರ್ಷ ವಯಸ್ಸಾಗಿದ್ದು, ಚಿಕ್ಕವಯಸ್ಸಿನಲ್ಲೇ ತೋಟದಲ್ಲಿ ಈ ಮರ ಕಂಡಿದ್ದನ್ನು ಅವರು ನೆನಪಿಸುತ್ತಾರೆ. ಹಾಗಾಗಿ ಈ ಮರಕ್ಕೆ 70 ವರ್ಷ ದಾಟಿರಬಹುದೆಂದು ಶಂಕಿಸಲಾಗಿದೆ.

ಹಿರಿಯರಾದ ….. ಅವರು ಹೇಳುವ ಪ್ರಕಾರ, ಹಿಂದಿನ ಕಾಲದಲ್ಲಿ ಈ ಮರದ ಹೊಲಿಯಿಂದ ದೇವರ ಸತ್ತಿಗೆ (ಕೊಡೆ)ಯನ್ನು ಮಾಡುತ್ತಿದ್ದರು. ಅಲ್ಲದೆ ಗೊರಬೆ (ಕೊರಂಬು) ಮಾಡಲು ಉಪಯೋಗಿಸುತ್ತಿದ್ದರು ಎನ್ನುತ್ತಾರೆ. ಶ್ರೀತಾಳಿ ಮರ ಅತ್ಯಂತ ಪವಿತ್ರ ಮರವಾಗಿದ್ದು, ಇದರ ಮರದಿಂದ ಬರುವ ಹುಡಿಯನ್ನು ಸೇವನೆಗೆ ಬಳಕೆ ಮಾಡಬಹುದು ಎನ್ನುತ್ತಾರೆ. ರೋಗ ನಿರೋಧಕ ಶಕ್ತಿ ವೃದ್ಧಿಯಾಗಲು ರಾಮಬಾಣ ಎನ್ನಲಾಗಿದೆ.

ಮನಬಂದಂತೆ ಕಡಿಯುವಂತಿಲ್ಲ

ಶ್ರೀತಾಳಿ ಮರ ಅಥವಾ ಪನೋಲಿ ಮರ ಒಂದು ಶ್ರೇಷ್ಠ ಹಾಗೂ ಅತ್ಯಂತ ವಿಶೇಷತೆಯುಳ್ಳ ಮರ ಆಗಿದೆ. ಇದನ್ನು ಮನಬಂದಂತೆ ಕಡಿಯುವಂತಿಲ್ಲ. ಇದನ್ನು ಕಡಿಯಬೇಕಾದರೆ ಧಾರ್ಮಿಕ ವಿಧಿವಿಧಾನಗಳು ನಡೆಯಬೇಕಂತೆ. ಶುಭ ಮುಹೂರ್ತದಲ್ಲಿ ವಿವಿಧ ಪೂಜಾ ವಿಧಾನಗಳೊಂದಿಗೆ ಚೆಂಡೆ, ವಾದಕಗಳೊಂದಿಗೆ ಗುತ್ತುಬರ್ಕೆಯವರ ಉಪಸ್ಥಿತಿಯಲ್ಲಿ ಪೂಜಾಕಾರ್ಯ ನಡೆದು ಬಳಿಕವೇ ಮರ ಕಡಿಯಲು ಸಿದ್ಧತೆ ಮಾಡಲಾಗುತ್ತದೆಯಂತೆ. ಈಗಾಗಿ ಕರಿಮಣೇಲುವಿನಲ್ಲಿರುವ ಮರವನ್ನು ಈ ಎಲ್ಲಾ ಸಂಪ್ರದಾಯದಂತೆ ಕಡಿಯಲು ನ. 21ರ ಬೆಳಿಗ್ಗೆ 9:55ಕ್ಕೆ ಮುಹೂರ್ತ ನಿಗದಿಯಾಗಿದೆ. ಈವೊಂದು ವಿಶೇಷ ಸಂಪ್ರದಾಯ, ಆಚರಣೆಯ ಕಾರ್ಯವನ್ನು ಕಣ್ತುಂಬಿಕೊಳ್ಳಬೇಕಾದರೆ ನ.21ರಂದು ನೀವು ಕರಿಮಣೇಲು ಗ್ರಾಮಕ್ಕೆ ಬರಲೇಬೇಕು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.

ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.

ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !. Twitter Facebook LinkedIn WhatsApp ಮಂಗಳೂರು: 2024 ಲೋಕಸಭಾ ಚುನಾವಣೆಯಲ್ಲಿ ಮಂಗಳೂರು

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು