ಗುರುವಾರ, ಮೇ 2, 2024
ಅಶ್ಲೀಲ ವಿಡಿಯೋ ಕೇಸ್ ಪ್ರಕರಣ ; ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ಏನು..?-ಪ್ರಜ್ವಲ್ ರೇವಣ್ಣಗೆ ಕಠೋರ ಶಿಕ್ಷೆ ನೀಡಿ: ನಾವು ಬೆಂಬಲಿಸುತ್ತೇವೆ; ಅಮಿತ್ ಶಾ-ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ಮುಂದೆ ಶಬ್ದರಹಿತ ಕಾರ್ಯಾಚರಣೆ-ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಪ್ರಕಟ ಮಾಡದಂತೆ ಕೋರ್ಟ್‌ನಿಂದ ನಿರ್ಬಂಧಕಾಜ್ಞೆ ತಂದ ಕೆ.ಎಸ್‌. ಈಶ್ವರಪ್ಪ ಪುತ್ರ ಕೆ.ಇ .ಕಾಂತೇಶ್‌!-ದಾರಿ ತಪ್ಪಿದ್ದು ಮಹಿಳೆಯರಲ್ಲ, ನಿಮ್ಮ ಮಗ - ಪ್ರಕಾಶ್ ರೈ-ಪೆನ್ ಡ್ರೈವ್ ಪ್ರಕರಣ: ಅಪ್ಪ- ಮಗನಿಗೆ ನೋಟಿಸ್!-ತೆಲಂಗಾಣದ ನಿಜಾಮಾಬಾದ್ ಕ್ಷೇತ್ರದ ಚುನಾವಣಾ AICC ಉಸ್ತುವಾರಿಯಾಗಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ನೇಮಕ-ಅನೈತಿಕ ಸಂಬಂಧ ಶಂಕೆ ಕಾರಿಗೆ ಬೆಂಕಿ ಹಚ್ಚಿ ವ್ಯಕ್ತಿಯ ಬರ್ಬರ ಕೊಲೆ!-Commercial LPG ಗ್ಯಾಸ್‌ ಸಿಲಿಂಡರ್‌ ದರದಲ್ಲಿ19 ರೂ. ಇಳಿಕೆ-ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನಯನಾಡಿನ ಮಜಲು ಗದ್ದೆಯಲ್ಲಿ ನಡೆಯಿತು ಅದ್ದೂರಿ ಕೆಸರ್ಡೊಂಜಿ ದಿನ ಕಾರ್ಯಕ್ರಮ.

Twitter
Facebook
LinkedIn
WhatsApp

ನಯನಾಡಿನ ಶ್ರೀ ರಾಮ ಯುವಕ ಸಂಘದ ವತಿಯಿಂದ ದಿನಾಂಕ 14/11/2021 ರಂದು ನಯನಾಡಿನ ಮಜಲ್ ಗದ್ದೆಯಲ್ಲಿ ನಾಲ್ಕನೇ ವರ್ಷದ ಕೆಸರ್ ಡೊಂಜಿ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಿರಿ ಸುಂದರ ಪೂಜಾರಿ ವೇದಿಕೆಯಲ್ಲಿ ಯಂ. ತುಂಗಪ್ಪ ಬಂಗೇರರವರ ಅಧ್ಯಕ್ಷತೆಯಲ್ಲಿ , ಟಿ. ಹರೀಂದ್ರ ಪೈ ಶಶಾಂಕ್ ಕ್ಯಾಶ್ಯು ಫ್ಯಾಕ್ಟರಿ ಮಾಲಕರು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀಮತಿ ಸುಜಾತ ಉಮೇಶ್ ರ ಪ್ರಾರ್ಥನೆಯೊಂದೀಗೆ ಕಳಸೆಗೆ ಭತ್ತವನ್ನು ಹಾಕುವ ಮುಖೇನ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಘದ ಅಧ್ಯಕ್ಷ ಶೇಖರ ನಿನ್ನಿಕಲ್ಲು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ವೇದಿಕೆಯಲ್ಲಿದ್ದ ಅತಿಥಿಗಳಿಗೆ ಹಾಗೂ ಊರ ಬಂಧುಗಳಿಗೆ ಚಿತ್ರದುರ್ಗದ ಕೋಟೆಯಲ್ಲಿದ್ದ ಒನಕೆ ಓಬವ್ವ ಮೆಟ್ಟಿ ನಡೆದಾಡಿದ್ದ ನೆಲದ ಮಣ್ಣನ್ನು, ಉಳ್ಳಾಲದ ಅಬ್ಬಕ್ಕ ರಾಣಿಯು ನಡೆದಾಡಿದ ನೆಲದ ಮಣ್ಣನ್ನು ತಂದು ವೀರ ತಿಲಕವಾಗಿ ಕೊಡಲಾಯಿತು. ಕಾರ್ಯದರ್ಶಿ ರಾಘವೇಂದ್ರರು ವರದಿ ವಾಚನ ಮಾಡಿದರು.

ವೇದಿಕೆಯಲ್ಲಿ ಹರ್ಷಿಣಿ ಪುಷ್ಪಾನಂದ್, ಅಧ್ಯಕ್ಷರು ಪಿಲಾತಬೆಟ್ಟು ಗ್ರಾಮ ಪಂಚಾಯತ್, ಶ್ರೀ ಮತಿ ಅಮೃತಾ ಯಸ್. ಸೇವಾ ಪ್ರತಿನಿಧಿ ಧ. ಗ್ರಾ. ಯೋ. , ರಮೇಶ್ ಕುಡ್ಮೇರು, ಚಂದ್ರಶೇಖರ ಶೆಟ್ಟಿ, ಗೋಪಾಲ್ ಪೂಜಾರಿ, ಲಕ್ಷ್ಮಿನಾರಾಯಣ ಹೆಗ್ಡೆ ಉಪಾಧ್ಯಕ್ಷರು ಪಿಲಾತಬೆಟ್ಟು ಪಂಚಾಯತ್, ಜಾರಪ್ಪ ಪೂಜಾರಿ ಆಧ್ಯಕ್ಷರು ಶ್ರೀ ರಾಮ ಭಜನಾ ಮಂದಿರ, ಶಾರದಾ ಕೊಡೆಂಜಾರು, ಪಂಚಾಯತ್ ಸದಸ್ಯರು, ದಯಾನಂದ್ ನಿನ್ನಿಕಲ್ಲು, ಮೋಹನ ಹೆಗ್ಡೆ, ಯುವಕ ಸಂಘದ ಅಧ್ಯಕ್ಷರಾದ ಶೇಖರ ನಿನ್ನಿಕಲ್ಲು ಮುಂತಾದವರಿದ್ದರು. ವೇದಿಕೆಯಲ್ಲಿ ಊರಿನ ಏಳು ಮಂದಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಯಿತು. ಚಿನ್ನಯ ಹೆಗ್ಡೆ ನಿನ್ಯಾಲು, ಉಗ್ಗಪ್ಪ ಪೂಜಾರಿ ತಿಮರಡ್ಡ, ಅಣ್ಣು ಪೂಜಾರಿ ಮಿತ್ತಬೆಟ್ಟು, ಉಮೇಶ್ ಮೂಲ್ಯ ಕೊಡಂಗೆ, ಸುಧಾನಂದ ಶೆಣೈ, ಆಶಾ ಕಾರ್ಯಕರ್ತೆ ಪ್ರಮೀಳಾ ಮಿತ್ತಬೆಟ್ಟು, ಯುವ ಪ್ರತಿಭೆ ಯಶು ಸ್ನೇಹಗಿರಿ ರವರುಗಳನ್ನು ಗೌರವಿಸಲಾಯಿತು. ನಾಲ್ಕು ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ಧನ ನೀಡಲಾಯಿತು.

ಕೆಸರ್ ಗದ್ದೆಯಲ್ಲಿ ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯರ ತನಕ ವಿವಿಧ ರೀತಿಯ ಕೆಸರ್ ಗದ್ದೆಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಬೆಳಗಿನ ಉಪಹಾರಕ್ಕೆ ಬೆಲ್ಲ ತೆಂಗಿನತುರಿ ಹಾಕಿದ ಕಡುಬು, ಬೇಂಗದ ಕಷಾಯ, ಮಧ್ಯಾಹ್ನ ದ ಊಟಕ್ಕೆ ಗಂಜಿ ಚಟ್ನಿ, ಬಾಳೆ ದಿಂಡಿನ ಪಲ್ಯ, ಪಾಯಸದ ಸವಿಯಿತ್ತು.
ಕೆಸರ್ದ ಕಂಡೊದ ಗೀತೆಯನ್ನು ಹಾಡಿದ ಯಶ್ವಂತ್ ಸ್ನೇಹಗಿರಿ, ರಾಘವ ಆಚಾರ್ಯ, ಅಶ್ವಿನಿ ರವಿ ಮಿತ್ತಬೆಟ್ಟುರವರನ್ನು ಗೌರವಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಲಕ್ಷ್ಮೀನಾರಾಯಣ ಉಡುಪರು, ಪ್ರಕಾಶ್ ರಾವ್, ಸದಾಶಿವ ಹೆಗ್ಡೆ, ಸರೋಜಾ ಶೆಟ್ಟಿ, ಶಿಲ್ಪಾ ಐಶ್ವರ್ಯ ಪೈ, ಜಯಲಕ್ಷ್ಮಿ ಹೆಗ್ಡೆ, ವೆಂಕಪ್ಪ ಪೂಜಾರಿ, ಜಯರಾಂ ನಾಯ್ಯ್, ಕೀರ್ತೆಶ್ ಮೂರ್ಜೆ, ಚಂದ್ರ ಶೇಖರ ಹೆಗ್ಡೆ, ಯಕ್ಷಗಾನ ಕಲಾವಿದ ಶ್ರೀ ಸತೀಶ್ ಬಾಡಾರು , ಸಂಘದ ಕಾರ್ಯದರ್ಶಿ ರಾಘವೇಂದ್ರ ಮುಂತಾದವರಿದ್ದರು.

ಗದ್ದೆಯ ಮಾಲೀಕ ರಾದ ಶ್ರೀಮತಿ ಕಮಲಾ ಶೆಡ್ತಿ ಯವರನ್ನು ಗೌರವಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನದ ಪಟ್ಟಿಯನ್ನು ಚಂದ್ರಶೇಖರ ಅಚ್ಚಿನಡ್ಕ, ಗಣೇಶ್ ಹೆಗ್ಡೆ ವಾಚಿಸಿದರು. ನಯನಾಡು ಶ್ರೀ ರಾಮ ಭಜನಾ ಮಂದಿರದಿಂದ ಹೊರಟ ಮೆರವಣಿಗೆಯಲ್ಲಿ ಚಿಣ್ಣರ ಬಗೆ ಬಗೆಯ ವೇಷಭೂಷಣದ ಜೊತೆಗೆ ಕಾಜಲ ವೆಂಕಪ್ಪ ಪೂಜಾರಿಯವರ ಕಂಬಳದ ಕೋಣಗಳು ಭಾಗವಹಿಸಿದ್ದವು. ಸಂಜೆ ರಾಷ್ಟ್ರ ಗೀತೆ ಯೊಂದೀಗೆ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಲಾಯಿತು.
ಶ್ರೀ ರಾಮ ಯುವಕ ಸಂಘದ ಜೊತೆಯಲ್ಲಿ ಕಾರ್ಯಕ್ರಮದ ಯಶ್ಸಸ್ವಿಗೆ ನಿವೇದಿತಾ ಮಾತೃಮಂಡಳಿ ಸದಸ್ಯರು, ಭಜನಾ ಮಂದಿರ ಸದಸ್ಯರು, ಊರ ಬಂಧುಗಳು ಸಹಕರಿಸಿದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!

ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!

ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !! Twitter Facebook LinkedIn WhatsApp ಮಂಗಳೂರು:

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು