ಸೋಮವಾರ, ಮೇ 6, 2024
ಶೀಘ್ರದಲ್ಲೇ SSLC ಪಲಿತಾಂಶ ಪ್ರಕಟ; ರಿಸಲ್ಟ್ ನೋಡುವುದು ಹೇಗೆ.!-ಮೇ 7 ರ ಚುನಾವಣೆ ಬಳಿಕ ಪ್ರಜ್ವಲ್ ರೇವಣ್ಣ ಭಾರತಕ್ಕೆ ಆಗಮನ..?-ಮದುವೆಗೆ ತೆರಳಿದ್ದ 5 ಮಂದಿ ವಿದ್ಯಾರ್ಥಿಗಳು ಕನ್ಯಾಕುಮಾರಿ ಬೀಚ್ ನಲ್ಲಿ ಮುಳುಗಿ ಸಾವು!-ಚಾಲಕ ನಿಯಂತ್ರಣ ತಪ್ಪಿ 5 ವಿದಾರ್ಥಿಗಳ ದುರಂತ ಅಂತ್ಯ..!-ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಹೆಸರು ಬಳಸದಂತೆ ಕೋರ್ಟ್ ಆದೇಶ.!-ಮೂಡಬಿದರೆ: ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಪದವಿ ಪೂರ್ವ ವಿದ್ಯಾರ್ಥಿನಿ ಆತ್ಮಹತ್ಯೆ..!-ಸೇಡಂ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಡಾ ನಾಗರೆಡ್ಡಿ ಪಾಟೀಲ್ ನಿಧನ..!-Rain Alert : ನಾಳೆಯಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೇ 12ರವರೆಗೆ ಮಳೆ ನಿರೀಕ್ಷೆ..!-ಅಮೇಥಿಯಲ್ಲಿರುವ ಕಾಂಗ್ರೆಸ್​ ಕಚೇರಿ ಮೇಲೆ ದುಷ್ಕರ್ಮಿಗಳಿಂದ ದಾಳಿ; ಕಾರುಗಳು ಧ್ವಂಸ..!-ಬಂಟ್ವಾಳ: ನೇತ್ರಾವತಿ ನದಿ ನೀರಿನಲ್ಲಿ ಆಟವಾಡಲು ಇಳಿದ ಇಬ್ಬರು ಬಾಲಕಿಯರು ನೀರುಪಾಲು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಯುಪಿಐ ವಹಿವಾಟಿನಲ್ಲಿ ಹಣ ಪಾವತಿಗೆ ಮಿತಿ ಹಾಕಿದ ಬ್ಯಾಂಕುಗಳು ; ದಿನಕ್ಕೆ ಎಷ್ಟು ವಹಿವಾಟು ನಡೆಸಬಹುದು - ಇಲ್ಲಿದೆ ಅಪ್ಡೇಟ್ಸ್

Twitter
Facebook
LinkedIn
WhatsApp
images 7

ಬೆಂಗಳೂರು: ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್, ಅಥವಾ ಯುಪಿಐ ಬಂದ ಮೇಲೆ ಹಣಕಾಸು ವಹಿವಾಟು ಚಹರೆಯೇ ಪೂರ್ಣ ಬದಲಾಗಿದೆ. ಜನರು ತಮ್ಮ ಬಹುತೇಕ ಹಣವಾಟಿಗೆ ಯುಪಿಐ ಅನ್ನೇ ಬಳಸುತ್ತಿದ್ದಾರೆ. ದಾಖಲೆ ಮಟ್ಟದಲ್ಲಿ ಯುಪಿಐ (UPI) ಬಳಕೆಯಾಗುತ್ತಿದೆ. ಒಂದು ವರದಿ ಪ್ರಕಾರ ಕಳೆದ ಕ್ಯಾಲಂಡರ್ ವರ್ಷದಲ್ಲಿ (2022) 149.5 ಲಕ್ಷ ಕೋಟಿ ರೂ ಮೊತ್ತದಷ್ಟು ಯುಪಿಐ ವಹಿವಾಟು ನಡೆದಿತ್ತು. ಇದರಿಂದ ಯುಪಿಐ ಆ್ಯಪ್​ಗಳು ಹಾಗೂ ಬ್ಯಾಂಕುಗಳಿಗೆ ಸಾಕಷ್ಟು ಒತ್ತಡ ಬೀಳುತ್ತಿದೆ. ಯುಪಿಐ ವಹಿವಾಟುಗಳಿಂದ ಹೆಚ್ಚಿನ ಆದಾಯವೂ ಇಲ್ಲದಿರುವುದೂ ಅವರುಗಳನ್ನು ಸಂಬಾಳಿಸಿಕೊಂಡು ಹೋಗುವುದು ಕಷ್ಟವಾಗಿದೆ. ಅತಿ ಹೆಚ್ಚು ನಡೆಯುತ್ತಿರುವ ವಹಿವಾಟುಗಳಿಗೆ ಮಿತಿ ಹಾಕಲು ಯುಪಿಐ ಆ್ಯಪ್​ಗಳು ಹಾಗೂ ಬ್ಯಾಂಕುಗಳು ನಿರ್ಧರಿಸಿವೆ. ದಿನಕ್ಕೆ ಗರಿಷ್ಠ ಎಷ್ಟು ವಹಿವಾಟುಗಳು ನಡೆಯಬಹುದು ಎಂದು ಮಿತಿ ಹಾಕಿವೆ.

ಯುಪಿಐ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ (NPCI) ಇತ್ತೀಚೆಗೆ ಹೊರಡಿಸಿದ್ದ ಮಾರ್ಗಸೂಚಿ ಪ್ರಕಾರ, ಯುಪಿಐ ಮೂಲಕ ಒಬ್ಬ ವ್ಯಕ್ತಿ ದಿನಕ್ಕೆ 1ಲಕ್ಷ ರೂಗಿಂತ ಹೆಚ್ಚು ಹಣ ಪಾವತಿ ಮಾಡುವಂತಿಲ್ಲ ಎಂದು ಮಿತಿ ಹಾಕಲಾಗಿದೆ. ಅಷ್ಟೇ ಅಲ್ಲ ದಿನಕ್ಕೆ 20ಕ್ಕಿಂತ ಹೆಚ್ಚು ವಹಿವಾಟು ನಡೆಸುವಂತಿಲ್ಲ. ಪೇಟಿಎಂ, ಗೂಗಲ್ ಪೇ ಮತ್ತು ಅಮೇಜಾ್ ಪೇ ಆ್ಯಪ್​ಗಳು ದಿನಕ್ಕೆ 1ಲಕ್ಷ ರೂ ಮೊತ್ತದ ವಹಿವಾಟು ನಡೆಸಲು ಮಾತ್ರ ಅವಕಾಶ ಕೊಟ್ಟಿವೆ. ಅಷ್ಟೇ ಅಲ್ಲ, ದಿನಕ್ಕೆ ಗರಿಷ್ಠ 10 ವಹಿವಾಟಿಗೆ ಮಿತಿಗೊಳಿಸಲಾಗಿದೆ.

ಯುಪಿಐ ಪೇಮೆಂಟ್ ವಹಿವಾಟಿನಲ್ಲಿ ವಿವಿಧ ಬ್ಯಾಂಕುಗಳು ವಿವಿಧ ಮಿತಿ ಹಾಕಿವೆ. ಹೆಚ್​ಡಿಎಫ್​ಸಿ ಬ್ಯಾಂಕು ದಿನಕ್ಕೆ ಯುಪಿಐ ವಹಿವಾಟುಗಳನ್ನು 1 ಲಕ್ಷ ರೂಗೆ ಮಿತಿ ನಿಗದಿ ಮಾಡಿದೆ. ಹೊಸ ಬಳಕೆದಾರರಾದರೆ ಮಿತಿ ಕೇವಲ 5,000 ರೂ ಇರುತ್ತದೆ. ಆ್ಯಕ್ಸಿಸ್ ಬ್ಯಾಂಕ್ ಮತ್ತು ಎಸ್​​ಬಿಐ ಹಾಗೂ ಇತರ ಕೆಲ ಪ್ರಮುಖ ಬ್ಯಾಂಕುಗಳು ಕೂಡ ಗರಿಷ್ಠ 1 ಲಕ್ಷ ರೂವರೆಗೆ ಮಾತ್ರ ಯುಪಿಐ ವಹಿವಾಟಿಗೆ ಅವಕಾಶ ಕೊಟ್ಟಿದೆ.

ಆದರೆ, ಕೆನರಾ ಬ್ಯಾಂಕು 25,000 ರೂ, ಐಸಿಐಸಿಐ ಬ್ಯಾಂಕು 10,000 ರೂ, ಬ್ಯಾಂಕ್ ಆಫ್ ಬರೋಡಾ 25,000 ರೂ ಮೊತ್ತದ ವಹಿವಾಟಿಗೆ ಮಿತಿ ನಿಗದಿ ಮಾಡಿದೆ.

ಗರಿಷ್ಠ ಮಿತಿಯನ್ನು ಬಳಸಿಕೊಳ್ಳುವುದು ಹೇಗೆ?

ಎನ್​ಪಿಸಿಐ ನಿಗದಿಪಡಿಸಿರುವ ಮಿತಿ ಎಂದರೆ ದಿನಕ್ಕೆ 1ಲಕ್ಷ ರೂನಷ್ಟು ವಹಿವಾಟು ಹಾಗೂ 20 ಬಾರಿ ವಹಿವಾಟು. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಯುಪಿಐ ಆ್ಯಪ್ ಉಪಯೋಗಿಸುತ್ತಿದ್ದರೆ ಈ ಗರಿಷ್ಠ ಮಟ್ಟವನ್ನು ಉಪಯೋಗಿಸಿಕೊಳ್ಳಬಹುದು. ಪೇಟಿಎಂ, ಗೂಗಲ್ ಪೇ, ಫೋನ್​ಪೇ ಮೂಲಕ ತಮ್ಮ ವಹಿವಾಟುಗಳನ್ನು ನಡೆಸಬಹುದು. ಪೇಟಿಎಂ ಮತ್ತು ಜಿಪೇನಲ್ಲಿ ದಿನಕ್ಕೆ 10 ಬಾರಿ ಮಾತ್ರ ವಹಿವಾಟು ಎಂದು ಮಿತಿಗೊಳಿಸಲಾಗಿದೆ. ಎರಡನ್ನೂ ಉಪಯೋಗಿಸಿ ತಲಾ 10 ವಹಿವಾಟು ನಡೆಸಿದರೆ ದಿನಕ್ಕೆ 20 ವಹಿವಾಟು ಆಗುತ್ತದೆ.

ಪೇಟಿಎಂ ಮತ್ತು ಫೋನ್​ಪೇನಲ್ಲಿರುವ ವ್ಯಾಲಟ್ ಸೌಲಭ್ಯವನ್ನು ಉಪಯೋಗಿಸಿದರೆ ಹೆಚ್ಚು ಸಂಖ್ಯೆಯಲ್ಲಿ ವಹಿವಾಟು ನಡೆಸಲು ಸಾಧ್ಯವಾಗುತ್ತದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ