ಸೋಮವಾರ, ಮೇ 6, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಾಜಿ ಕಂಬಳ ಓಟಗಾರ ಜಯ ಶೆಟ್ಟಿ ಕಕ್ಕೆಪದವು ನಿಧನ.

Twitter
Facebook
LinkedIn
WhatsApp
ಮಾಜಿ ಕಂಬಳ ಓಟಗಾರ ಜಯ ಶೆಟ್ಟಿ ಕಕ್ಕೆಪದವು ನಿಧನ.

ಬಂಟ್ವಾಳ: ದಶಕಗಳ ಕಾಲ ಕಂಬಳದಲ್ಲಿ ಖ್ಯಾತ ಆಟಗಾರನಾಗಿ ಮಿಂಚಿದ್ದ ಜಯ ಶೆಟ್ಟಿ ಕಕ್ಕೆಪದವು ನಿಧನರಾಗಿದ್ದಾರೆ. ಬಂಟ್ವಾಳ ತಾಲೂಕಿನ ಕಕ್ಕೆಪದವ್ ನಲ್ಲಿ ನೆಲೆಸಿದ್ದ ಇವರು ಹಲವಾರು ಖ್ಯಾತ ಕಂಬಳಗಳಲ್ಲಿ ಪ್ರಶಸ್ತಿ ವಿಜೇತ ರಾಗಿದ್ದರು. ಕಿಂಜಾಲು ನಿವಾಸಿ ಜಯ ಶೆಟ್ಟಿ ಅವರು ಕೃಷಿಕರಾಗಿದ್ದರು. ಕುಗ್ರಾಮವೆಂದು ಗುರುತಿಸಿದ್ದ ಉಳಿ ಗ್ರಾಮದಲ್ಲಿ ಸೌಲಭ್ಯಗಳ ಕೊರತೆಗಳ ಮಧ್ಯೆ ಉತ್ತಮ ಕೃಷಿ ಸಾಧನೆ ಮಾಡಿದ್ದರು. ಕಂಬಳಕ್ಷೇತ್ರದಲ್ಲಿ ಓಟಗಾರರರಾಗಿ ಪ್ರಖ್ಯಾತಿ ಪಡೆದಿದ್ದ ಅವರು ಕಂಬಳ ಕ್ಷೇತ್ರದ ಅದ್ವಿತೀಯ ಸಾಧನೆಗಾಗಿ ಹಲವಾರು ಪ್ರಶಸ್ತಿ, ಸಮ್ಮಾನ ಪಡೆದಿದ್ದರು.

ಸುಮಾರು 70 ರ ದಶಕದ ಆರಂಭದಲ್ಲಿ ಕಕ್ಯಪದವು ಡೀಕಯ್ಯ ಪೂಜಾರಿ, ಪುಣ್ಕೆದಡಿ ಅಣ್ಣು ಭಂಡಾರಿ ಅವರ ಕೋಣಗಳನ್ನು ಓಡಿಸುತ್ತಿದ್ದ ಅವರು ಬಳಿಕ ಕಾಡಬೆಟ್ಟು ದಿ.ನಾರಾಯಣ ರೈಅವರ ಕೋಣಗಳನ್ನು ಹಗ್ಗ ಹಿರಿಯ ವಿಭಾಗದಲ್ಲಿ ಓಡಿಸುತ್ತಿದ್ದು, ಸುಮಾರು ಒಂದೂವರೆ ದಶಕಗಳ ಕಾಲ ನಿರಂತರ ಪದಕ ಪಡೆದು ನಂಬರ್ ಒನ್ ಸ್ಥಾನದಲ್ಲಿ ವಿರಾಜಿಸಿದ್ದರು. ಆದರೆ ಯಾವುದೇ ಸಂಭಾವನೆ ಪಡೆಯದೆ ಕಂಬಳದ ಸೇವೆ ಸಲ್ಲಿಸಿದ ಹಿರಿಮೆ ಅವರದ್ದಾಗಿತ್ತು. ಸ್ವಾಮಿ ನಿಷ್ಠ ಓಟಗಾರ ಎಂಬ ಗೌರವ ಪಡೆದಿದ್ದರು. ಯುವ ಓಟಗಾರರಿಗೆ ಮಾರ್ಗದರ್ಶಕರಾಗಿದ್ದರು.
ಅವರು 5 ವರ್ಷ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿದ್ದರು. ಕಕ್ಯಪದವು ಶ್ರೀ ಪಂಚದುರ್ಗಾ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಸದಸ್ಯರಾಗಿ, ಉಳಿ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ, ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ ಬ್ರಹ್ಮ ಬದರ್ಕಳ ಗರಡಿ ಜೀರ್ಣೋದ್ಧಾರ ಸಮಿತಿ ಮತ್ತು ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ನಡೆಯುತ್ತಿರುವ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ ಸಮಿತಿಯ ಗೌರವ ಸಲಹೆಗಾರರಾಗಿದ್ದರು. ಸ್ಥಳೀಯವಾಗಿ ಕೊಡುಗೈ ದಾನಿಯಾಗಿದ್ದರು.

ಅವರ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದು, ಕಂಬಳ ಕ್ಷೇತ್ರ ಕಂಬನಿ ಮಿಡಿದಿದೆ. ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು