ಸೋಮವಾರ, ಮೇ 6, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಿಜೆಪಿ ಹೆಣೆದ ಚಕ್ರವ್ಯೂಹದೊಳಗೆ ಎಂ ಎನ್ ರಾಜೇಂದ್ರ ಕುಮಾರ್ ಸಿಲುಕಿದರೆ?

Twitter
Facebook
LinkedIn
WhatsApp
ವಿಧಾನಪರಿಷತ್ತು ಚುನಾವಣೆಗೆ ಎಂ ಎನ್ ರಾಜೇಂದ್ರ ಕುಮಾರ್ ಸ್ವತಂತ್ರ ಸ್ಪರ್ಧೆ?

ಕರಾವಳಿ ಬಿಜೆಪಿ ವಿಧಾನಪರಿಷತ್ತು ಚುನಾವಣೆಯಲ್ಲಿ ಚಕ್ರವ್ಯೂಹ ಹೆಣೆದು ಸಹಕಾರಿ ನಾಯಕ ಎಂ ಎನ್ ರಾಜೇಂದ್ರ ಕುಮಾರ್ ಅವರನ್ನು ಕಟ್ಟಿಹಾಕಿದೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ಒಂದು ಹಂತದಲ್ಲಿ ಬಿಜೆಪಿಯ ಬೆಂಬಲ ಎಂಎನ್ ರಾಜೇಂದ್ರ ಕುಮಾರ್ ಅವರಿಗೆ ಸಿಕ್ಕಿತ್ತು ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡಿತು.ನಂತರದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ರಾಜೇಂದ್ರಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಒಂದು ಹಂತದಲ್ಲಿ ಪಕ್ಕಾ ಆಗಿತ್ತು.

ಆದರೆ ಬಿಜೆಪಿ ಇದನ್ನು ಸೂಕ್ಷ್ಮವಾಗಿ ಗಮನಿಸಿ ಸಚಿವ ಎಸ್ ಟಿ ಸೋಮಶೇಖರ್ ಮೂಲಕ ಬಹಿರಂಗವಾಗಿ ಹಾಗೂ ಪರೋಕ್ಷವಾಗಿ ರಾಜೇಂದ್ರ ಕುಮಾರ್ ಒತ್ತಡಕ್ಕೆ ಸಿಲುಕಿಸುವ ಹೇಳಿಕೆಗಳನ್ನು ನಿನ್ನೆ ನೀಡಿದ್ದರು.

ನಂತರದ ಬೆಳವಣಿಗೆಗಳು ರಾಜೇಂದ್ರ ಕುಮಾರ್ ಅವರನ್ನು ಒತ್ತಡಕ್ಕೆ ಸಿಲುಕಿಸುವ ತಂತ್ರಗಳನ್ನು ಬಿಜೆಪಿ ಹೆಣೆದಿದೆ ಎಂಬುದು ರಾಜಕೀಯ ವಲಯದಲ್ಲಿ ಕೇಳಿ ಬರುವ ಮಾತು.

ಈ ನಡುವೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಜುನಾಥ್ ಭಂಡಾರಿ ಆಯ್ಕೆಯಾಗಿದ್ದಾರೆ ‌. ಆದರೆ ಮಂಜುನಾಥ ಭಂಡಾರಿ ಆಯ್ಕೆಯ ವಿರುದ್ಧ ಬಿಜೆಪಿ ಯಾವ ತಂತ್ರಗಾರಿಕೆ ಅನುಸರಿಸಿದೆ ಎಂಬುದು ನಿಗೂಢವಾಗಿದೆ. ಒಂದು ವೇಳೆ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮಂಜುನಾಥ ಭಂಡಾರಿ ಮಾತ್ರ ಅಭ್ಯರ್ಥಿಯಾದರೆ ಇಬ್ಬರು ಆಯ್ಕೆಯಾಗಲಿದ್ದಾರೆ.
ಅಧಿಕಾರದಲ್ಲಿರುವ ಬಿಜೆಪಿ ಇನ್ನೊಂದು ಅಭ್ಯರ್ಥಿಯನ್ನು ಹಾಕದೆ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಬಿಟ್ಟಿರುವುದು ರಾಜಕೀಯ ವಲಯದಲ್ಲಿ ಆಶ್ಚರ್ಯ ಉಂಟುಮಾಡಿದೆ. ಅಥವಾ ಬಿಜೆಪಿ ರಿಸ್ಕ್ ತೆಗೆದುಕೊಳ್ಳಲು ಮುಂದಾಗಲಿಲ್ಲವೇ? ಎಂಬುದು ಉತ್ತರಕ್ಕೆ ನಿಲುಕದ ಪ್ರಶ್ನೆಯಾಗಿದೆ.

ಒಟ್ಟಿನಲ್ಲಿ ಕರಾವಳಿ ಕಾಂಗ್ರೆಸ್-ಬಿಜೆಪಿ ನಲ್ಲಿ ಏನು ನಡೆಯುತ್ತಿದೆ ಎಂಬುದು ಜನರಿಗೆ ಉತ್ತರ ಸಿಗಲಾರದ ದೊಡ್ಡ ಪ್ರಶ್ನೆಯಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು