ಸೋಮವಾರ, ಮೇ 6, 2024
ಶೀಘ್ರದಲ್ಲೇ SSLC ಪಲಿತಾಂಶ ಪ್ರಕಟ; ರಿಸಲ್ಟ್ ನೋಡುವುದು ಹೇಗೆ.!-ಮೇ 7 ರ ಚುನಾವಣೆ ಬಳಿಕ ಪ್ರಜ್ವಲ್ ರೇವಣ್ಣ ಭಾರತಕ್ಕೆ ಆಗಮನ..?-ಮದುವೆಗೆ ತೆರಳಿದ್ದ 5 ಮಂದಿ ವಿದ್ಯಾರ್ಥಿಗಳು ಕನ್ಯಾಕುಮಾರಿ ಬೀಚ್ ನಲ್ಲಿ ಮುಳುಗಿ ಸಾವು!-ಚಾಲಕ ನಿಯಂತ್ರಣ ತಪ್ಪಿ 5 ವಿದಾರ್ಥಿಗಳ ದುರಂತ ಅಂತ್ಯ..!-ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಹೆಸರು ಬಳಸದಂತೆ ಕೋರ್ಟ್ ಆದೇಶ.!-ಮೂಡಬಿದರೆ: ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಪದವಿ ಪೂರ್ವ ವಿದ್ಯಾರ್ಥಿನಿ ಆತ್ಮಹತ್ಯೆ..!-ಸೇಡಂ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಡಾ ನಾಗರೆಡ್ಡಿ ಪಾಟೀಲ್ ನಿಧನ..!-Rain Alert : ನಾಳೆಯಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೇ 12ರವರೆಗೆ ಮಳೆ ನಿರೀಕ್ಷೆ..!-ಅಮೇಥಿಯಲ್ಲಿರುವ ಕಾಂಗ್ರೆಸ್​ ಕಚೇರಿ ಮೇಲೆ ದುಷ್ಕರ್ಮಿಗಳಿಂದ ದಾಳಿ; ಕಾರುಗಳು ಧ್ವಂಸ..!-ಬಂಟ್ವಾಳ: ನೇತ್ರಾವತಿ ನದಿ ನೀರಿನಲ್ಲಿ ಆಟವಾಡಲು ಇಳಿದ ಇಬ್ಬರು ಬಾಲಕಿಯರು ನೀರುಪಾಲು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಜ್ಯೋತಿಷಿಯ ಸಲಹೆಯಂತೆ ಹಾವು ಕಚ್ಚಿಸಿಕೊಂಡು ನಾಲಿಗೆ ಕಳೆದುಕೊಂಡ ರೈತ!

Twitter
Facebook
LinkedIn
WhatsApp
ಜ್ಯೋತಿಷಿಯ ಸಲಹೆಯಂತೆ ಹಾವು ಕಚ್ಚಿಸಿಕೊಂಡು ನಾಲಿಗೆ ಕಳೆದುಕೊಂಡ ರೈತ!

ಈರೋಡ್‌: ರೈತನೊಬ್ಬರಿಗೆ ಜ್ಯೋತಿಷಿರೊಬ್ಬರು ನೀಡಿದ ಸಲಹೆಯಿಂದ ತನ್ನ  ನಾಲಿಗೆಯನ್ನು ಕಳೆದುಕೊಂಡಿದ್ದಾನೆ. ಕಾಪಿಚೆಟ್ಟಿಪಾಳ್ಯಂನ 54 ವರ್ಷದ ರಾಜಾ ಎಂಬ ವ್ಯಕ್ತಿಯು ತನ್ನ ನಾಲಿಗೆಗೆ ಕೊಳಕು ಮಂಡಲದಿಂದ  ಕಚ್ಚಿಸಿಕೊಂಡಿದ್ದಾನೆ. ಈ ಘಟನೆ ತಮಿಳುನಾಡಿನ ಈರೋಡ್‌ನಲ್ಲಿ ನಡೆದಿದೆ. ಕಾಪಿಚೆಟ್ಟಿಪಾಳ್ಯಂನ 54 ವರ್ಷದ ರಾಜಾ ಎಂದು ಹೇಳಲಾಗಿದೆ. ಈತನಿಗೆ ಕನಸಿನಲ್ಲಿ ಪದೇ ಪದೇ ಹಾವು ಕಚ್ಚುವ ಕನಸು ಬಿಳುತ್ತಿತ್ತು ಎಂದು ಜ್ಯೋತಿಷಿಯನ್ನು ಸಂಪರ್ಕಿಸಿದ್ದಾರೆ.

ಜ್ಯೋತಿಷಿಯು ಈ ರೈತನಿಗೆ ಹಾವಿನ ದೇವಸ್ಥಾನಕ್ಕೆ ಹೋಗಿ ಕೆಲವು ಆಚರಣೆಗಳನ್ನು ಮಾಡಿ ಕೆಟ್ಟ ಕನಸುಗಳಿಗೆ ಪರಿಹಾರ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಸಲಹೆಯಂತೆ, ರೈತನು ದೇವಸ್ಥಾನಕ್ಕೆ ಹೋಗಿ ವಿಧಿವಿಧಾನಗಳನ್ನು ಪೂರೈಸಿದನು, ಇದರ ಜೊತೆಗೆ ರಾಜಾ ಕೊಳಕು ಮಂಡಲ ಹಾವಿನ ಮುಂದೆ ಮೂರು ಬಾರಿ ತನ್ನ ನಾಲಿಗೆಯನ್ನು ಚಾಚಿದನು ಈ ವಿಷಕಾರಿ ಹಾವು ಅವನ ನಾಲಿಗೆಯನ್ನು ಕ್ಷಣಾರ್ಧದಲ್ಲಿ ಕಚ್ಚಿದೆ.

ದೇವಸ್ಥಾನದ ಅರ್ಚಕ ಇದನ್ನು ಕಂಡ ಕೂಡಲೇ ನಾಲಿಗೆಯನ್ನು ತುಂಡರಿಸಿ ಈರೋಡ್ ಮಣಿಯನ್ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವಾಗ ವ್ಯಕ್ತಿಯೂ ಪ್ರಜ್ಞೆ ತಪ್ಪಿ ಬಿದ್ದಿದ್ದ. ಮಣಿಯನ್ ಮೆಡಿಕಲ್ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕ ಸೆಂಥಿಲ್ ಕುಮಾರನ್, ವೈದ್ಯರು ರಾಜಾನ ನಾಲಿಗೆ ಕತ್ತರಿಸಿದ ಕಾರಣ ಚಿಕಿತ್ಸೆ ನೀಡಿದರು ಜೊತೆಗೆ ಆತನ ದೇಹದಲ್ಲಿದ್ದ ಹಾವಿನ ವಿಷಕ್ಕೆ ಚಿಕಿತ್ಸೆ ನೀಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ