ಭೀಕರ ರಸ್ತೆ ಅಪಘಾತ : 3 ತಿಂಗಳ ಮಗು ಸೇರಿ 6 ಮಂದಿ ಸಾವು
ಭೀಕರ ರಸ್ತೆ ಅಪಘಾತ :
ಕಲಬುರಗಿ: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಸಮೀಪ ಆಟೋ ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿದ್ದು, ಭೀಕರ ರಸ್ತೆ ಅಪಘಾತ ದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 6 ಮಂದಿ ಮೃತಪಟ್ಟಿದ್ದಾರೆ.
ವಾಡಿಯಿಂದ ನಾಲವಾರ ಕಡೆ ತೆರಳುತ್ತಿದ್ದ ಆಟೋಗೆ ಹಲಕರ್ಟಾ ಬಳಿ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಆಟೋದಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತಪಟ್ಟವರೆಲ್ಲೂ ನಾಲವಾರ ಗ್ರಾಮದ ಒಂದೇ ಕುಟುಂಬದವರಾಗಿದ್ದಾರೆ. ಮೃತರನ್ನು ನಾಜ್ಮಿನ್ ಬೇಗಂ(28), ಬೀಬಿ ಫಾತಿಮಾ(12), ಅಬೂಬಕರ್(4), ಬೀಬಿ ಮರಿಯಮ್(3 ತಿಂಗಳು), ಮೊಹಮ್ಮದ್ ಪಾಷಾ(20) ಹಾಗೂ ಆಟೋ ಚಾಲಕ ಬಾಬಾ(35) ಎಂದು ಗುರುತಿಸಲಾಗಿದೆ ಮತ್ತು 10 ವರ್ಷದ ಬಾಲಕ ಮುಹಮ್ಮದ್ ಹುಸೇನ್ ಗಾಯಗೊಂಡಿದ್ದಾನೆ.
ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಿಸಲು ಚಿತ್ತಾಪುರಕ್ಕೆ ಹೋಗಿ ಮರಳಿ ನಾಲವಾರ ಗ್ರಾಮಕ್ಕೆ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಅಪಘಾತ ಸ್ಥಳಕ್ಕೆ ವಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭೀಕರ ರಸ್ತೆ ಅಪಘಾತ : ಲಾರಿ, ಕೆಕೆಆರ್ಟಿಸಿ ಬಸ್ ಮಧ್ಯೆ ಮುಖಾಮುಖಿ ಡಿಕ್ಕಿ; ಚಾಲಕನಿಗೆ ಗಂಭೀರ ಗಾಯ
ಯಾದಗಿರಿ: ಲಾರಿ ಹಾಗೂ ಕೆಕೆಆರ್ಟಿಸಿ ಬಸ್ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಘಟನೆ ಯಾದಗಿರಿ ತಾಲೂಕಿನ ಸೌದಗಾರ ಕ್ರಾಸ್ ಬಳಿ ನಡೆದಿದೆ. ಭೀಕರ ರಸ್ತೆ ಅಪಘಾತ ದಲ್ಲಿ ಬಸ್ ಡ್ರೈವರ್ಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಾರಿ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಇನ್ನು ಈ ಬಸ್ ಯಾದಗಿರಿಯಿಂದ ಸೇಡಂ ಕಡೆ ಹೊರಟ್ಟಿತ್ತು. ಈ ವೇಳೆ ಲಾರಿ ಬಸ್ಗೆ ಗುದ್ದಿದೆ. ಬಸ್ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಯಾದಗಿರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಭೀಕರ ರಸ್ತೆ ಅಪಘಾತ : ಕ್ರೂಸರ್ಗೆ ಲಾರಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ದುರ್ಮರಣ
ತುಮಕೂರು: ತಾಲೂಕಿನ ಕೋರಾ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕ್ರೂಸರ್ಗೆ ಲಾರಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಗಂಗಾವತಿ ಮೂಲದ ಶಂಕರ್(35), ಸತೀಶ್(40) ಮೃತ ರ್ದುದೈವಿಗಳು. ಭೀಕರ ರಸ್ತೆ ಅಪಘಾತ ದಲ್ಲಿ ಮತ್ತೋರ್ವನಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಲು ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಈ ಕುರಿತು ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕರ್ನಾಟಕ-ಕೇರಳ ಗಡೀಲಿ ಶೂಟೌಟ್: ಇಬ್ಬರು ನಕ್ಸಲರ ಬಂಧನ; ಮೂವರು ಎಸ್ಕೇಪ್
ವಯನಾಡ್ (ನವೆಂಬರ್ 9, 2023): ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ನಕ್ಸಲರು ಮನೆಯೊಂದಕ್ಕೆ ಬಂದಾಗ ಪೊಲೀಸರು ದಾಳಿ ನಡೆಸಿದ ಘಟನೆ ಕರ್ನಾಟಕ – ಕೇರಳ ಗಡಿಯ ವಯನಾಡು ಜಿಲ್ಲೆಯಲ್ಲಿ ನಡೆದಿದೆ. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ನಕ್ಸಲರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಮೂವರು ನಕ್ಸಲರು ಪರಾರಿಯಾಗಿದ್ದಾರೆ.
ಐವರು ನಕ್ಸಲರು ಮನೆಯೊಂದಕ್ಕೆ ಬಂದು ತಮ್ಮ ಮೊಬೈಲ್‌ಗಳನ್ನು ಚಾರ್ಜ್ ಮಾಡಿಕೊಳ್ಳುತ್ತಿದ್ದರು. ಇದರ ಸುಳಿವು ವಿಶೇಷ ಕಾರ್ಯಾಚರಣೆ ಪಡೆ (ಎಸ್‌ಒಜಿ) ಪೊಲೀಸರಿಗೆ ಸಿಕ್ಕಿದ್ದು, ನಕ್ಸಲರ ಮೇಲೆ ದಾಳಿ ನಡೆಸಿದ್ದಾರೆ. ಆಗ ಚಕಮಕಿ ನಡೆದಿದೆ. ಬಳಿಕ ಚಂದ್ರು ಹಾಗೂ ಉನ್ನಿಮಾಯಾ ಎಂಬ ಇಬ್ಬರು ನಕ್ಸಲರನ್ನು ಪೊಲೀಸರು ಬಂಧಿಸಿದ್ದಾರೆ ಹಾಗೂ ಹತ್ತಿರದ ಪೊಲೀಸ್ ಕ್ಯಾಂಪ್‌ಗೆ ಹೆಚ್ಚಿನ ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ಈ ವೇಳೆ ಮೂವರು ಪರಾರಿಯಾಗಿದ್ದಾರೆ.
ಕಳೆದ ತಿಂಗಳೂ ಸಹ ನಕ್ಸಲರು ವಯನಾಡ್‌ನ ಮಕ್ಕಿಮಾಳ ಬಳಿಯ ರೆಸಾರ್ಟ್ ಒಂದಕ್ಕೆ ನುಗ್ಗಿ ಅಲ್ಲಿನ ಸಿಬ್ಬಂದಿಯ ಮೊಬೈಲ್‌ನಿಂದ ಹಲವು ಪತ್ರಕರ್ತರಿಗೆ ಎಸ್ಟೇಟ್ ಕಾರ್ಮಿಕರ ಕಷ್ಟದ ಬಗ್ಗೆ ಸಂದೇಶಗಳನ್ನು ಕಳಿಸಿದ್ದರು. ನಂತರ ಅವರ ಮೇಲೆ ದೇಶದ್ರೋಹ ಪ್ರಕರಣದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ನಿಂತಿದ್ದ ಕಾರಿಗೆ ಲಾರಿ ಡಿಕ್ಕಿ; ಫ್ರೀಡಂ ಪಾರ್ಕ್ ಪ್ರತಿಭಟನೆಗೆ ತೆರಳುತ್ತಿದ್ದ ನ್ಯಾಯಬೆಲೆ ಅಂಗಡಿ ಮಾಲೀಕರು ಸಾವು!
ಇಂದು ಬೆಳ್ಳಂಬೆಳಗ್ಗೆ ರಸ್ತೆಯ ಬದಿ ನಿಂತಿದ್ದ ಕ್ರೂಸರ್ ಕಾರಿಗೆ ಲಾರಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಕೋರಾ ಬಳಿಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನಡೆದಿದೆ.
ತುಮಕೂರು (ನ.9): ಇಂದು ಬೆಳ್ಳಂಬೆಳಗ್ಗೆ ರಸ್ತೆಯ ಬದಿ ನಿಂತಿದ್ದ ಕ್ರೂಸರ್ ಕಾರಿಗೆ ಲಾರಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಕೋರಾ ಬಳಿಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನಡೆದಿದೆ.
ಕ್ರೂಸರ್ ಚಾಲಕ ಶಂಕರ್ (35), ಖಾಸಗಿ ಪಡಿತರ ವಿತರಣಾ ಕೇಂದ್ರದ ಮಾಲೀಕ ಸತೀಶ್ (40) ಮೃತ ದುರ್ದೈವಿಗಳು. ಇನ್ನೊರ್ವನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರಿಬ್ಬರು ಗಂಗಾವತಿ ಮೂಲದವರು ಎನ್ನಲಾಗಿದೆ.
ಗಂಗಾವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ತೆರಳುತ್ತಿದ್ದ ಮೃತರು. ಖಾಸಗಿ ಪಡಿತರ ವಿತರಣಾ ಕೇಂದ್ರದ ಮಾಲೀಕರಿಗೆ, ಕಮಿಷನ್ ಹಣ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ತೆರಳುತ್ತಿದ್ದರು. ಈ ವೇಳೆ ಕೋರ ಸಮೀಪ ಕ್ರೂಸರ್ ಕಾರಿನ ಹಿಂಬದಿಯ ಟೈಯರ್ ಪಂಚ್ಚರ್ ಆಗಿದೆ. ಹೀಗಾಗಿ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಟೈಯರ್ ಬದಲಿಸುತ್ತಿದ್ದ ವೇಳೆ ಎದುರುಗಡೆಯಿಂದ ವೇಗವಾಗಿ ಬಂದು ಡಿಕ್ಕಿಯಾಗಿರುವ ಲಾರಿ. ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟ ಇಬ್ಬರು.
ಅಪಘಾತ ನಡೆಯುತ್ತಿದ್ದಂತೆ ಲಾರಿ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸದ್ಯ ಮೃತದೇಹಗಳು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.