ಬುಧವಾರ, ಮೇ 8, 2024
ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸಿಕ್ಕಾಪಟ್ಟೆ ಟ್ರೋಲ್!!-ಹರಿಯಾಣ ಸರ್ಕಾರ ಬೆಂಬಲಿಸುತ್ತಿದ್ದ ಮೂವರು ಶಾಸಕರು ಕಾಂಗ್ರೆಸ್ ಸೇರ್ಪಡೆ..!-ಟಿ-20 ವಿಶ್ವಕಪ್ ಗೆ ಪ್ರಕಟಗೊಂಡ ಎಲ್ಲಾ ತಂಡದಲ್ಲಿ ಯಾರೆಲ್ಲಾ ಆಟಗಾರರಿದ್ದಾರೆ? ಬಲಿಷ್ಠ ತಂಡ ಯಾವುದು?-ಕರ್ನಾಟಕದಲ್ಲಿ ಸಂಜೆ 5 ಗಂಟೆವರೆಗೆ ಶೇಕಡಾ 66.05 ರಷ್ಟು ಮತದಾನ..!-ಕಳೆದ ಐದು ತಿಂಗಳಿಂದ ರಿಜಿಸ್ಟ್ರೇಷನ್ ಸರ್ವರ್ ಸಮಸ್ಯೆ ಮುಗಿಯದ ಕಥೆ!10 ನಿಮಿಷದ ಡಾಕ್ಯೂಮೆಂಟ್ಗೆ ಅಪ್ಲೋಡೆಗೆ ಬೇಕು ಮೂರರಿಂದ ನಾಲ್ಕು ದಿನ!!-ಮಂಜೇಶ್ವರ: ಕಾರು ಮತ್ತು ಅಂಬುಲೆನ್ಸ್ ನಡುವೆ ಭೀಕರ ಅಪಘಾತ; ಮೂವರು ಸಾವು.!-ಬಂಟ್ವಾಳ: ಮದುವೆ ಸಭಾಂಗಣವೊಂದರ ಆವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ..!-Rain Alert: ರಾಜ್ಯದಲ್ಲಿ ಇಂದಿನಿಂದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ.!-ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಲೀಕ್ ಆಗಲು ನನ್ನ ಪಾತ್ರವಿಲ್ಲ; ದೇವರಾಜೆಗೌಡರಿಂದ ಸುಳ್ಳು ಆರೋಪವೆಂದ ಡಿಕೆ ಶಿವಕುಮಾರ್
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ನಿವೃತ್ತ ಯೋಧನ ಮೃತದೇಹ ಕೆರೆಯಲ್ಲಿ ಪತ್ತೆ

Twitter
Facebook
LinkedIn
WhatsApp
ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ನಿವೃತ್ತ ಯೋಧನ ಮೃತದೇಹ ಕೆರೆಯಲ್ಲಿ ಪತ್ತೆ! Dead body of missing retired soldier found in lake

ಮಡಿಕೇರಿ: ವಿವಾಹಿತ ಮಹಿಳೆಯಿಂದ ಹಾನಿಟ್ಯ್ರಾಪ್‌ಗೆ (Honeytrap) ಒಳಗಾದ ನಿವೃತ್ತ ಯೋಧ (Retired Soldier) ಡೆತ್ ನೋಟ್ ಬರೆದಿಟ್ಟು ಮಂಗಳವಾರ ರಾತ್ರಿಯಿಂದ ನಾಪತ್ತೆಯಾಗಿದ್ದರು. ಅವರ ಮೃತದೇಹ ಇದೀಗ ಅವರ ಮನೆ ಸಮೀಪದ ಪಂಪಿನ ಕೆರೆಯಲ್ಲಿ ಪತ್ತೆಯಾಗಿದೆ.

ಮೃತ ಮಾಜಿ ಯೋಧನನ್ನು ಸಂದೇಶ್ ಎಂದು ಗುರುತಿಸಲಾಗಿದೆ. ಮಾಜಿ ಯೋಧ ಕಣ್ಮರೆಯಾಗಿ 30 ಗಂಟೆಗಳ ಬಳಿಕ ಮೃತದೇಹ ಪತ್ತೆಯಾಗಿದೆ. ಬುಧವಾರ ರಾತ್ರಿ 8:20 ರ ಸುಮಾರಿಗೆ ಕೆರೆಯ 40 ಆಡಿ ಆಳದಲ್ಲಿ ಸಂದೇಶ್ ಮೃತದೇಹ ಪತ್ತೆಯಾಗಿದೆ. 

ಬೆಳಗ್ಗೆಯಿಂದಲೂ ಅಗ್ನಿಶಾಮಕ ದಳ, ಸ್ಥಳೀಯರು ಕೆರೆಯಲ್ಲಿ ಹುಡುಕಾಟ ನಡೆಸಿದ್ದರು. ಯಾವುದೇ ಪ್ರಯೋಜನ ಆಗದೇ ಇದ್ದ ಸಂದರ್ಭದಲ್ಲಿ ಮಲ್ಪೆಯ ಹೆಸರಾಂತ ಮುಳುಗು ತಜ್ಞ ಈಶ್ವರ್ ಮತ್ತು ತಂಡದವರನ್ನು ಕರೆಸಿ ಮೃತದೇಹದ ಶೋಧ ಕಾರ್ಯವನ್ನು ಮಾಡಲಾಗಿತ್ತು. 1 ಗಂಟೆಗೂ ಅಧಿಕ ಕಾಲ ಕರೆಯಲ್ಲಿ ಆಕ್ಸಿಜನ್‌ನೊಂದಿಗೆ ಶೋಧ ಕಾರ್ಯ ನಡೆಸಲಾಗಿದ್ದು, ಈ ವೇಳೆ ಮಾಜಿ ಯೋಧನ ಮೃತ ದೇಹ ಪತ್ತೆಯಾಗಿದೆ.

ಡೆತ್​ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ನಿವೃತ್ತ ಸೈನಿಕ

ಡೆತ್​ನೋಟ್​ ಬರೆದಿಟ್ಟು ನಿವೃತ್ತ ಯೋಧ (soldier) ನಾಪತ್ತೆ ಆಗಿದ್ದು, ಜೊತೆಗೆ ತನ್ನನ್ನು ಮಹಿಳೆಯೊಬ್ಬಳು ಹನಿಟ್ರ್ಯಾಪ್ ಮಾಡಿರುವುದಾಗಿ ಆರೋಪ ಮಾಡಿದ್ದ. ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದ ಮಾಜಿ ಸೈನಿಕ ಸಂದೇಶ್ ತನ್ನ ಸಾವಿಗೆ ಜೀವಿತ, ಆಕೆಯನ್ನು ಬೆಂಬಲಿಸುತ್ತಿದ್ದ ಪೊಲೀಸ್ ಸತೀಶ್ ಹಾಗೂ ರೆಸಾರ್ಟ್ ಮಾಲೀಕ ಸತ್ಯ ಕಾರಣ ಎಂದು ಡೆತ್‌ನೋಟ್‌ನಲ್ಲಿ ಬರೆದಿಟ್ಟು ನಾಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ, ಸ್ಥಳೀಯರು ಸುತ್ತಮುತ್ತಲಿನ ಕೆರೆಯಲ್ಲಿ ಹುಡುಕಾಟ ನಡೆಸಿದ್ದರು. 

ಯಾವುದೇ ಪ್ರಯೋಜನ ಆಗದೇ ಇದ್ದ ಸಂದರ್ಭದಲ್ಲಿ ಮಲ್ಪೆಯ ಹೆಸರಾಂತ ಮುಳುಗು ತಜ್ಞ ಈಶ್ವರ್ ಮತ್ತು ತಂಡದವರನ್ನು ಕರೆಸಿ ಮೃತದೇಹದ ಶೋಧ ಕಾರ್ಯವನ್ನು ಮಾಡಲಾಗಿತ್ತು. 1 ಗಂಟೆಗೂ ಅಧಿಕ ಕಾಲ ಕರೆಯಲ್ಲಿ ಆಕ್ಸಿಜನ್‌ನೊಂದಿಗೆ ಶೋಧ ಕಾರ್ಯ ನಡೆಸಲಾಗಿದ್ದು, ಈ ವೇಳೆ ಮಾಜಿ ಯೋಧನ ಮೃತ ದೇಹ ಪತ್ತೆಯಾಗಿದೆ. ಆದ್ರೆ, ಮಾಜಿ ಯೋಧ ಕಣ್ಮರೆಯಾಗಿ 30 ಗಂಟೆಗಳ ಬಳಿಕ ಮೃತದೇಹ ಪತ್ತೆಯಾಗಿದೆ. ಬುಧವಾರ ರಾತ್ರಿ 8:20 ರ ಸುಮಾರಿಗೆ ಕೆರೆಯ 40 ಆಡಿ ಆಳದಲ್ಲಿ ಸಂದೇಶ್ ಮೃತದೇಹ ಪತ್ತೆಯಾಗಿದೆ.

ಯೋಧನಿಗೆ ಮದುವೆ ಆಗಿದ್ದರೂ ಯುವತಿಯ ಅಂದ- ಚಂದ ಹಾಗೂ ಆಕೆಯ ಮಾತಿಗೆ ಮರುಳಾಗಿ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾನೆ. ಆದರೆ, ಈತನಿಗೆ ಮದುವೆಯಾಗಿ ಹೆಂಡತಿಯಿದ್ದರೂ ತನ್ನೊಂದಿಗೆ ಸಲುಗೆಯಿಂದ ನಡೆದುಕೊಂಡ ಎಲ್ಲ ಫೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಯುವತಿ ಬ್ಲ್ಯಾಕ್‌ಮೇಲ್‌ ಮಾಡಲು ಮುಂದಾಗಿದ್ದಾಳೆ. ಇದಕ್ಕೆ ತನ್ನ ಸ್ನೇಹಿತರಿಂದಲೂ ಸಾಥ್‌ ಪಡೆದಿದ್ದಾಳೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ