ಮಂಗಳವಾರ, ಡಿಸೆಂಬರ್ 5, 2023
ರಾಜ್ಯದ 13 ಭ್ರಷ್ಟ ಅಧಿಕಾರಿಗಳಿಗೆ ಸೇರಿದ 63 ಕಡೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಹಣ ಸೀಝ್..!-ಬೆಂಗಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟು ಸಿಬ್ಬಂದಿಗಳಿಗೆ ವೇತನ ನೀಡಿದ ಬೈಜೂಸ್ ಸಂಸ್ಥಾಪಕ!-ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಒಂದೇ ಹೆಸರಿನಲ್ಲಿ ಎರಡು ಸಂಸ್ಥೆಗಳು ನೋಂದಾವಣೆ: ಉತ್ತರ ಕನ್ನಡ ಜಿಲ್ಲಾ ಅಮಚೂರ್ ಕಬಡ್ಡಿ ಅಸೋಸಿಯೇಷನ್ ನೊಂದಾವಣಿ ರದ್ದು!

Twitter
Facebook
LinkedIn
WhatsApp
ಒಂದೇ ಹೆಸರಿನಲ್ಲಿ ಎರಡು ಸಂಸ್ಥೆಗಳು ನೋಂದಾವಣೆ: ಉತ್ತರ ಕನ್ನಡ ಜಿಲ್ಲಾ ಅಮಚೂರ್ ಕಬಡ್ಡಿ ಅಸೋಸಿಯೇಷನ್ ನೊಂದಾವಣಿ ರದ್ದು!

ಕಾರವಾರ: ಒಂದೇ ಹೆಸರಿನಲ್ಲಿ ಎರಡು ಸಂಘಗಳನ್ನು ನೋಂದಾಯಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಸಹಕಾರಿ ಉಪನಿಬಂಧಕರು ನಂತರ ನೋಂದಾವಣೆಗೊಂಡಿರುವ ಉತ್ತರ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಎಸೋಸಿಯೇಷನ್ ನೋಂದಾವಣೆಯನ್ನು ರದ್ದುಗೊಳಿಸಿದ್ದಾರೆ.

ಸಹಕಾರಿ ಸಂಘಗಳ ನೋಂದಾವಣಿ ಅಧಿನಿಯಮ 7ರ ಪ್ರಕಾರ ಉತ್ತರ ಕನ್ನಡ ಅಮೆಚೂರು ಕಬ್ಬಡಿ ಎಸೋಶಿಯೇಶನ್ ಎರಡನೇ ಸಂಘದ ನೋಂದಣಿ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದು, ವಾದ-ವಿವಾದವನ್ನ ಆಲಿಸಿದ ಉಪನಿಬಂಧಕರು ಏಳು ತಿಂಗಳ ನಂತರ ನೋಂದಾವಣೆಗೊಂಡ ಸಂಘವನ್ನು ರದ್ದುಗೊಳಿಸಿ ಆದೇಶ ನೀಡಿದ್ದಾರೆ.
ಇಂತಹ ಪ್ರಕರಣಗಳು ಸಹಕಾರಿ ಸಂಘದಲ್ಲಿ ಇದ್ದು, ಒಂದೇ ಹೆಸರಿನಲ್ಲಿ ಎರಡು ಹೆಸರುಗಳನ್ನು ನೀಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಆದೇಶ ಮಹತ್ವ ಪಡೆದಿದ್ದು, ಕಲಂ ಏಳ ಮಹತ್ವವನ್ನು ಇದು ಒತ್ತಿ ಹೇಳಿದೆ ಎಂದು ಅಭಿಪ್ರಾಯ ಪಡಲಾಗಿದೆ.

ಉತ್ತರ ಕನ್ನಡ ಅಮೆಚೂರು ಕಬ್ಬಡಿ ಎಸೋಸಿಯೇಷನ್ ಪರವಾಗಿ ಅಧ್ಯಕ್ಷರಾದ ಮಂಜುನಾಥ ನಾಯ್ಕ್, ಕಾರ್ಯದರ್ಶಿ ಅನಿಲ್ ಕುಮಾರ್, ಉಪಾಧ್ಯಕ್ಷ ವಾಸು ಎಲ್ ನಾಯ್ಕ್, ಸಂಘಟನಾ ಕಾರ್ಯದರ್ಶಿ ಗಜ ನಾಯ್ಕ್ ಪ್ರತಿನಿಧಿಸಿದ್ದರು. ಉತ್ತರ ಕನ್ನಡ ಅಮೆಚೂರು ಕಬ್ಬಡಿ ಎಸೋಸಿಯೇಶನ್ ಪರವಾಗಿ ಐಪಿ ನ್ಯಾಯವಾದಿ ನವನೀತ್.ಡಿ. ಹಿ0ಗಾಣಿ ಮಂಗಳೂರು ಹಾಗೂ ಹೈಕೋರ್ಟ್ ನ್ಯಾಯವಾದಿ ನಾಗೇಂದ್ರ ನಾಯ್ಕ್ ಭಟ್ಕಳ ಕಾನೂನು ಸಲಹೆ ಸೂಚನೆಗಳನ್ನು ನೀಡಿದ್ದರು.

ಗ್ರಾಹಕರಿಗೆ ರಶೀದಿ ನೀಡದೆ 1.62 ಕೋಟಿ ರೂ. ವಂಚನೆ – ಬ್ಯಾಂಕ್ ಮ್ಯಾನೇಜರ್ ಅರೆಸ್ಟ್

ಹಾವೇರಿ: ಬ್ಯಾಂಕ್‍ನ (Bank) ಗ್ರಾಹಕರ ಎಫ್‍ಡಿ ಹಣ (Money), ಚಿನ್ನದ ಲೋನ್‍ನ ಹಣ ಸೇರಿದಂತೆ ಗ್ರಾಹಕರ ಖಾತೆಗೆ ಹಾಕಿದ್ದ ಹಣವನ್ನು ವಂಚನೆ ಮಾಡಿರುವ ಕುರುಬಗೊಂಡು ಗ್ರಾಮದ ಯೂನಿಯನ್ ಬ್ಯಾಂಕ್‍ನ ಹಳೆಯ ಮ್ಯಾನೇಜರ್‌ನ್ನು ಸೈಬರ್ ಕ್ರೈಮ್ ಪೊಲೀಸರು (Police) ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಅರ್ಚನಾ ಬೇಟಗೇರಿ ಎಂದು ಗುರುತಿಸಲಾಗಿದೆ. ಬ್ಯಾಂಕ್‍ನಲ್ಲಿ ಗ್ರಾಹಕರ ಎಫ್‍ಡಿ ಹಣ, ಚಿನ್ನದ ಲೋನ್ ಹಣ ಹಾಗೂ ಖಾತೆಗೆ ಜಮೆ ಮಾಡಿದ ಹಣಕ್ಕೆ ರಶೀದಿ ಹಾಗೂ ಎಫ್‍ಡಿಗೆ ಬಾಂಡ್ ನೀಡದೆ ವಂಚಿಸಲಾಗಿದೆ ಎಂದು ತಿಳಿದು ಬಂದಿದೆ. ಗ್ರಾಹಕರ ಸುಮಾರು 1.62 ಕೋಟಿ ರೂ ಹಣವನ್ನು ಆರೋಪಿ ವಂಚಿಸಿದ್ದಾಳೆ ಎಂದು ತಿಳಿದು ಬಂದಿದೆ.

ನೂತನ ಬ್ಯಾಂಕ್ ಮ್ಯಾನೇಜರ್ ರವಿರಾಜ್ ಈ ಸಂಬಂಧ ಹಾವೇರಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಸಿಸ್ಟೆಂಟ್ ಮ್ಯಾನೇಜರ್ ಸೇರಿ ಬ್ಯಾಂಕ್‍ನ ಇಬ್ಬರು ಸಿಬ್ಬಂದಿ ಶಾಂತಪ್ಪ ಮತ್ತು ಪ್ರವೀಣ್ ವಿರುದ್ಧ ಪ್ರಕರಣ ದಾಖಲಾಗಿದೆ.

ಬಂಧಿತ ಆರೋಪಿ ಅರ್ಚನಾ ಬೇಟಗೇರಿ ವಿಚಾರಣೆ ನಡೆಸಲಾಗುತ್ತಿದೆ. ಇನ್ನಿಬ್ಬರು ಆರೋಪಿಗಳನ್ನು ಬಂಧಿಸಲು ಪೊಲೀಸರು ಕ್ರಮಕೈಗೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ