ಮಂಗಳವಾರ, ಮೇ 7, 2024
ಶೀಘ್ರದಲ್ಲೇ SSLC ಪಲಿತಾಂಶ ಪ್ರಕಟ; ರಿಸಲ್ಟ್ ನೋಡುವುದು ಹೇಗೆ.!-ಮೇ 7 ರ ಚುನಾವಣೆ ಬಳಿಕ ಪ್ರಜ್ವಲ್ ರೇವಣ್ಣ ಭಾರತಕ್ಕೆ ಆಗಮನ..?-ಮದುವೆಗೆ ತೆರಳಿದ್ದ 5 ಮಂದಿ ವಿದ್ಯಾರ್ಥಿಗಳು ಕನ್ಯಾಕುಮಾರಿ ಬೀಚ್ ನಲ್ಲಿ ಮುಳುಗಿ ಸಾವು!-ಚಾಲಕ ನಿಯಂತ್ರಣ ತಪ್ಪಿ 5 ವಿದಾರ್ಥಿಗಳ ದುರಂತ ಅಂತ್ಯ..!-ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಹೆಸರು ಬಳಸದಂತೆ ಕೋರ್ಟ್ ಆದೇಶ.!-ಮೂಡಬಿದರೆ: ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಪದವಿ ಪೂರ್ವ ವಿದ್ಯಾರ್ಥಿನಿ ಆತ್ಮಹತ್ಯೆ..!-ಸೇಡಂ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಡಾ ನಾಗರೆಡ್ಡಿ ಪಾಟೀಲ್ ನಿಧನ..!-Rain Alert : ನಾಳೆಯಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೇ 12ರವರೆಗೆ ಮಳೆ ನಿರೀಕ್ಷೆ..!-ಅಮೇಥಿಯಲ್ಲಿರುವ ಕಾಂಗ್ರೆಸ್​ ಕಚೇರಿ ಮೇಲೆ ದುಷ್ಕರ್ಮಿಗಳಿಂದ ದಾಳಿ; ಕಾರುಗಳು ಧ್ವಂಸ..!-ಬಂಟ್ವಾಳ: ನೇತ್ರಾವತಿ ನದಿ ನೀರಿನಲ್ಲಿ ಆಟವಾಡಲು ಇಳಿದ ಇಬ್ಬರು ಬಾಲಕಿಯರು ನೀರುಪಾಲು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮೀಟೂ ಕೇಸ್ ಗೆ ಟ್ವಿಸ್ಟ್: ನಟಿ ಶ್ರುತಿ ಹರಿಹರನ್ ಗೆ ಪೊಲೀಸ್ ನೋಟಿಸ್!

Twitter
Facebook
LinkedIn
WhatsApp
35483736 2195399510706174 831302834380079104 n

ನ್ನಡ ಚಿತ್ರರಂಗದ ಹೆಸರಾಂತ ನಟಿ ಶ್ರುತಿ ಹರಿಹರನ್ (Shruti Hariharan) ಮೀಟೂ ಕೇಸ್ ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ದಕ್ಷಿಣದ ಖ್ಯಾತ ನಟ ಅರ್ಜುನ್ ಸರ್ಜಾ ಮೇಲೆ ಶ್ರುತಿ ಹರಿಹರನ್ ಮೀಟೂ (Metoo) ಆರೋಪ ಮಾಡಿದ್ದರು. ಅದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಸೂಕ್ತ ಸಾಕ್ಷಿಗಳು ಇಲ್ಲ ಎನ್ನುವ ಕಾರಣಕ್ಕಾಗಿ ಜನವರಿ 2022ರಂದು ಬಿ ರಿಪೋರ್ಟ್ (B Report) ಸಲ್ಲಿಸಿದ್ದರು. ಈ ರಿಪೋರ್ಟ್ ವಿರುದ್ಧ ಶ್ರುತಿ ಮತ್ತೆ ಕೋರ್ಟ್ ಮೆಟ್ಟಿಲು ಏರಿದ್ದರು.

ಕಬ್ಬನ್ ಪಾರ್ಕ್ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಚಾಲೇಂಜ್ ಮಾಡಿದ್ದ ಶ್ರುತಿ ಹರಿಹರನ್ ಗೆ ಈಗ ಮತ್ತೆ ಪೊಲೀಸರು ನೋಟಿಸ್ (Notice) ನೀಡಿದ್ದಾರೆ. ಪೊಲೀಸರಿಗೆ ಸಾಕ್ಷ್ಯಾಧಾರಗಳನ್ನು ನೀಡುವಂತೆ ನೋಟಿಸ್ ನಲ್ಲಿ ತಿಳಿಸಿದ್ದಾರೆ. ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ಬಳಿಕ ಈ ನೋಟಿಸ್  ನೀಡಲಾಗಿದೆ.

30052326 2163723180540474 8684745450102732003 o

ಶ್ರುತಿ ಹರಿಹರನ್ ವಿಸ್ಮಯ (Vismaya) ಚಿತ್ರದ ಚಿತ್ರೀಕರಣದ ವೇಳೆ ನಟ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಮೀಟೂ ವೇದಿಕೆಯಲ್ಲಿ ಹೇಳಿಕೊಂಡಿದ್ದರು. ಶ್ರುತಿ ಆರೋಪ ಮಾಡುತ್ತಿದ್ದಂತೆ ಕೆಲ ಸಂಘಟನೆಗಳು, ನಟರು, ಕಲಾವಿದರು ನಟಿಯ ಪರ ನಿಂತರೆ, ಬಹುತೇಕ ಹಿರಿಯ ಕಲಾವಿದರು ಅರ್ಜುನ್ ಸರ್ಜಾ ಪರ ಬ್ಯಾಟ್ ಬೀಸಿದ್ದರು. ಇತ್ತ ಅರ್ಜುನ್ ಸರ್ಜಾ (Arjun Sarja) ವಿರುದ್ಧ ದೂರು ಕೇಳಿ ಬರುತ್ತಿದ್ದಂತೆ ಮಾವ, ಹಿರಿಯ ನಟ ಕಲಾ ತಪಸ್ವಿ ರಾಜೇಶ್ ಮೊದಲು ಫಿಲ್ಮ್ ಚೇಂಬರ್ ನಲ್ಲಿ ದೂರು ದಾಖಲಿಸಿದ್ದರು.

ದೂರು ದಾಖಲಾದ ಬಳಿಕ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಚಲನಚಿತ್ರ ಮಂಡಳಿ ಸಹ ಶ್ರುತಿ ಹರಿಹರನ್ ನೇರವಾಗಿ ಮಾಧ್ಯಮಗಳ ಮುಂದೆ ಹೋಗಬಾರದಿತ್ತು ಎಂದು ಅಸಮಾಧಾನ ಹೊರಹಾಕಿತ್ತು. ನಂತರ ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಧ್ಯಸ್ಥಿತಿಕೆಯಲ್ಲಿ ಫಿಲ್ಮ್ ಚೇಂಬರ್ ನಲ್ಲಿ ಶೃತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಮಧ್ಯೆ ಸಂಧಾನ ಸಭೆ ನಡೆಯಿತು.

29872568 2156345227944936 85184221253413275 o

ವಿಸ್ಮಯ’ ಕುರಿತು ಹೇಳಿಕೆ ನೀಡುವ ವೇಳೆ ಮಧ್ಯ ಪ್ರವೇಶ ಮಾಡಿದ ನಟ ಅರ್ಜುನ ಸರ್ಜಾ ಅವರು, ಸಿನಿಮಾ ವೇಳೆ ನಾನು ಯಾವುದೇ ರೀತಿ ಕೆಟ್ಟದಾಗಿ ವರ್ತನೆ ಮಾಡಿಲ್ಲ. ಅಲ್ಲದೇ ಯಾವುದೇ ಡಿನ್ನರ್, ಹೋಟೆಲ್, ರೆಸಾರ್ಟ್, ರೂಮ್‍ಗೆ ಕರೆದಿಲ್ಲ. 35 ವರ್ಷದಿಂದ ಚಿತ್ರರಂಗದಲ್ಲಿ ಇದ್ದು, ಒಂದು ಕಪ್ಪು ಚುಕ್ಕೆ ನನ್ನ ಮೇಲಿಲ್ಲ. ಆದರೆ ಶ್ರುತಿ ಮಾಡಿರುವ ಆರೋಪದಿಂದ ನನಗೂ, ನನ್ನ ಕುಟುಂಬಸ್ಥರಿಗೂ ಸಾಕಷ್ಟು ನೋವಾಗಿದೆ ಎಂದು ಅಂಬರೀಶ್ ಮುಂದೆ ಹೇಳಿಕೊಂಡಿದ್ದರು. ಅಂಬರೀಶ್ ನಡೆಸಿದ ಸಂಧಾನ ವಿಫಲವಾಗುತ್ತಿದ್ದಂತೆಯೇ ಶ್ರುತಿ  ಕೋರ್ಟ್ ಮೆಟ್ಟಿಲು ಹತ್ತಿದ್ದರು. ಇದೆಲ್ಲವೂ ನಡೆದದ್ದು 2018ರಂದು.

ಶ್ರುತಿ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿದ್ದರು. ಲೈಂಗಿಕ ಕಿರುಕುಳ ಆಗಿದೆ ಎನ್ನಲಾದ ಸ್ಥಳಗಳಿಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದರು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಜನವರಿ 2022ರಂದು ಕಬ್ಬನ್ ಪಾರ್ಕ್ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟನ್ನು ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯ ಅಂಗೀಕರಿಸಿತ್ತು. ಅರ್ಜುನ್ ಸರ್ಜಾ ವಿರುದ್ಧ ಅಷ್ಟೆಲ್ಲಾ ಆರೋಪ ಮಾಡಿದ್ದ ನಟಿ ಶೃತಿ ಹರಿಹರನ್ ಕೂಡ ಪೊಲೀಸರ ಬಿ ರಿಪೋರ್ಟ್‍ಗೆ ಆಕ್ಷೇಪಣೆ ಸಲ್ಲಿಸಿಲ್ಲ. ಹೀಗಾಗಿ ಕೋರ್ಟ್ ಬಿ-ರಿಪೋರ್ಟ್ ಅಂಗೀಕರಿಸಿತ್ತು.

34392166 2186361371609988 56437815889625088 n

ನಟಿ ಶ್ರುತಿ ಹರಿಹರನ್ ಮೀಟೂ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಿಳಿದಿದ್ದ ಪೊಲೀಸರಿಗೆ ಯುಬಿ ಸಿಟಿಯ ಸೆಕ್ಯೂರಿಟಿ ಗಾರ್ಡ್‍ಗಳು ತಲೆನೋವಾಗಿ ಪರಿಣಮಿಸಿದ್ದರು. ಹೌದು. ನಟಿ ಶ್ರುತಿ ಹರಿಹರನ್ ಅವರು ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಕಬ್ಬನ್ ಪಾರ್ಕ್ ಪೊಲೀಸರು, ಮೊದಲಿಗೆ ನಟ ಅರ್ಜುನ್ ಸರ್ಜಾ, ವಿಸ್ಮಯ ಚಿತ್ರದ ನಿರ್ದೇಶಕ, ನಿರ್ಮಾಪಕ ಸೇರಿದಂತೆ ಸಾಕಷ್ಟು ಜನರನ್ನು ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಹೇಳಿಕೆಗಳನ್ನು ಪಡೆದುಕೊಂಡಿದ್ದರು.

ವಿಸ್ಮಯ ಚಿತ್ರದ ಚಿತ್ರೀಕರಣದ ವೇಳೆ ನನಗೆ ಅರ್ಜುನ್ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ರು. ಯುಬಿ ಸಿಟಿಯಲ್ಲಿ ರೂಮ್ ನಲ್ಲಿ ಒಬ್ಬನೇ ಇದೇನಿ, ಬಾ ಸ್ವಲ್ಪ ಹೊತ್ತು ಕಾಲ ಕಳೆಯೋಣ ಅಂತಾ ನನ್ನನ್ನು ಕರೆದ್ರು ಎಂದು ನಟಿ ಶ್ರುತಿ ಹರಿಹರನ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಆ ವೇಳೆ ಯುಬಿ ಸಿಟಿಯಲ್ಲಿ ಕೆಲಸ ಮಾಡ್ತಿದ್ದ ಸೆಕ್ಯೂರಿಟಿ ಗಾರ್ಡ್ ಗಳನ್ನು ವಿಚಾರಣೆ ನಡೆಸೋಕೆ ಹೋದ ಪೊಲೀಸರಿಗೆ ಶಾಕ್ ಆಗಿತ್ತು. ಆ ಘಟನೆ ನಡೆದ ನಂತರ ಹತ್ತಾರು ಸೆಕ್ಯೂರಿಟಿ ಗಾರ್ಡ್‍ಗಳು ಕೆಲಸಬಿಟ್ಟಿರೋದಲ್ಲದೇ, ಸೆಕ್ಯೂರಿಟಿ ಏಜೆನ್ಸಿಯನ್ನೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಅಲ್ಲಿದ್ದ ಕೆಲ ಸಿಬ್ಬಂದಿ ಕೂಡ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಬಾಯಿ ಬಿಟ್ಟಿರಲಿಲ್ಲ.

80379035 2627174454195342 8891425366145499136 n

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ