ಭಾನುವಾರ, ಮೇ 5, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ರೈಫಲ್​ನಿಂದ ಗುಂಡು ಹಾರಿ ವ್ಯಕ್ತಿ ಸಾವು; ಹೊಳೆಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಘಟನೆ -ಮೂವರು ವಶಕ್ಕೆ..!

Twitter
Facebook
LinkedIn
WhatsApp
ರೈಫಲ್​ನಿಂದ ಗುಂಡು ಹಾರಿ ವ್ಯಕ್ತಿ ಸಾವು; ಹೊಳೆಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಘಟನೆ -ಮೂವರು ವಶಕ್ಕೆ..!

ರೈಫಲ್​ನಿಂದ ಗುಂಡು ಹಾರಿ (Rifle Firing) ವ್ಯಕ್ತಿ ಮೃತಪಟ್ಟಿರುವ ಘಟನೆ ಕೊಡಗು-ಮೈಸೂರು (Kodagu-Mysore) ಗಡಿ ಗ್ರಾಮ ಗಿರಗೂರಿನಲ್ಲಿ ನಡೆದಿದೆ. ಕುಶಾಲನಗರದ (Kushalnagar) ಹಾರಂಗಿ ನಿವಾಸಿ ಸಂತೋಷ್ (34) ಮೃತ ದುರ್ದೈವಿ. ಪಾಯಿಂಟ್​​ 22 ರೈಫಲ್​​ನಿಂದ ಗುಂಡು ಹಾರಿದೆ. ಗುಂಡು ಸಂತೋಷ್​​ ತಲೆ ಸೀಳಿದ್ದು, ಪ್ರಾಣ ಪಕ್ಷಿ ಹಾರಿ ಹೋಗಿದೆ. ಕಾವೇರಿ ಹೊಳೆಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಘಟನೆ ಸಂಭವಿಸಿದ್ದು, ಸಂತೋಷ್ ಜೊತೆ ಇದ್ದ ರವಿ, ನೂತನ್, ಶರತ್​ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿಕೊಂಡಿದ್ದಾರೆ. ಕುಶಾಲನಗರ ಟೌನ್ ಮತ್ತು ಬೈಲುಕುಪ್ಪೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ದ.ಕ.: ಜಿಲ್ಲೆಯ 19 ಮಂದಿ ವಿರುದ್ದ ಗಡಿಪಾರು ಆದೇಶ

ಲೋಕಸಭಾ ಚುನಾವಣೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ, ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ನಿರತರಾಗಿರುವ 19 ಮಂದಿ ರೌಡಿಶೀಟರ್‌ಗಳಿಗೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಗಡಿಪಾರು ಆದೇಶ ಹೊರಡಿಸಿದ್ದಾರೆ.

 

ಮೂಡುಬಿದಿರೆಯ ಅತ್ತೂರು ನಸೀಬ್,ಕಾಟಿಪಳ್ಳದ ಶ್ರೀನಿವಾಸ್ ಎಚ್.,ಬಜ್ಪೆ ಶಾಂತಿಗುಡ್ಡದ ಸಫ್ವಾನ್ , ಬೋಂದೆಲ್‌ನ ಜಯೇಶ್ ಯಾನೆ ಸಾಚು,ನೀರುಮಾರ್ಗದ ಭಟ್ರಕೋಡಿಯ ವರುಣ್ ಪೂಜಾರಿ, ಅಶೋಕ ನಗರದ ಅಝೀಝ್ , ಕಾವೂರಿನ ಇಶಾಮ್,ಸುರತ್ಕಲ್ ಇಡ್ಯಾದ ಕಾರ್ತಿಕ್ ಶೆಟ್ಟಿ, ಕೈಕಂಬ-ಗಣೇಶ್‌ಪುರದ ದೀಕ್ಷಿತ್ ಪೂಜಾರಿ,ಕೃಷ್ಣಾಪುರದ ಲಕ್ಷ್ಮೀಶ ಉಳ್ಳಾಲ, ಬೊಂಡಂತಿಲದ ಕಿಶೋರ್ ಸನಿಲ್,ಉಳ್ಳಾಲ ಕೋಡಿಯ ಹಸೈನಾರ್ ಅಲಿ ,ಕುದ್ರೋಳಿ ಕರ್ಬಲಾ ರಸ್ತೆಯ ಅಬ್ದುಲ್ ಜಲೀಲ್, ಬೋಳೂರಿನ ರೋಶನ್ ಕಿಣಿ, ಕಸಬಾ ಬೆಂಗರೆಯ ಅಹ್ಮದ್ ಸಿನಾನ್, ಜಪ್ಪಿನಮೊಗರಿನ ದಿತೇಶ್ ಕುಮಾರ್, ಬಜಾಲ್ ಕುತ್ತಡ್ಕದ ಗುರುಪ್ರಸಾದ್ ,ಭರತ್ ಪೂಜಾರಿ ,ಜಪ್ಪು ಕುಡ್ಪಾಡಿಯ ಸಂದೀಪ್ ಶೆಟ್ಟಿ ವಿರುದ್ದ ಗಡಿಪಾರು ಆದೇಶ ಹೊರಡಿಸಲಾಗಿದೆ.

ರೌಡಿಶೀಟರ್‌ಗಳ ವಿರುದ್ಧ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಶಾಂತಿಯುತ ಚುನಾವಣೆ ನಡೆಸುವ ಸಲುವಾಗಿ ಈ ಕ್ರಮ ಜರಗಿಸಲಾಗಿದೆ. ಕಳೆದ ಎರಡು ದಿನಗಳಲ್ಲಿ 19 ರೌಡಿ ಶೀಟರ್‌ಗಳ ವಿರುದ್ಧ ಗಡಿಪಾರು ಆದೇಶ ಮಾಡಲಾಗಿದ್ದರೆ, ಈ ತಿಂಗಳ ಆರಂಭದಲ್ಲಿ 7 ಜನರ ವಿರುದ್ಧ ಗಡಿಪಾರು ಆದೇಶ ಹೊರಡಿಸಲಾಗಿತ್ತು. ಆರೋಪಿಗಳನ್ನು ವಿವಿಧ ಜಿಲ್ಲೆಗಳಿಗೆ ಸ್ಥಳಾಂತರಿಸಲಾಗಿದೆ. ಶಾಂತಿಯುತ ಚುನಾವಣೆಯನ್ನು ನಡೆಸುವ ಸಲುವಾಗಿ ಇವರ ಚಟುವಟಿಕೆಗಳ ಮೇಲೆ ನಿಕಟ ನಿಗಾ ಇರಿಸಲಾಗಿದೆ. ಅದಲ್ಲದೆ 367 ಮಂದಿಯ ವಿರುದ್ಧ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ