ಉಜಿರೆ: ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಬೆಳ್ತಂಗಡಿ: ಉಜಿರೆಯ ಖಾಸಗಿ ಲಾಡ್ಜ್ ವೊಂದರಲ್ಲಿ ಬಾಡಿಗೆಗೆ ಕೊಠಡಿ ಪಡೆದಿದ್ದ ವ್ಯಕ್ತಿಯೊಬ್ಬರು ನೇಣಿಗೆ ಶರಣಾದ ಘಟನೆ ನಡೆದಿದೆ.
ಸಚಿನ್ ತಲವಾಡೆ ಮೃತರು. ಸೆ. 9ರಂದು ತಾನು ಒಬ್ಬನೇ ಇರುವುದಾಗಿ ತಿಳಿಸಿ ಡಬಲ್ ಬೆಡ್ ರೂಂ ಪಡೆದು ನೆಲೆಸಿದ್ದರು. ಸೆ. 10ರಂದು ಸಂಜೆ 7 ಗಂಟೆಗೆ ರೂಮ್‌ಬಾಯ್ ತಿಲಕ್ ಅವರು ರೂಮಿನ ಬಳಿ ತೆರಳಿ ಬಾಗಿಲು ಬಡಿದರೂ ತೆರೆಯದ ಕಾರಣ ಕಿಟಕಿಯಲ್ಲಿ ಇಣುಕಿ ನೋಡಿದಾಗ ವ್ಯಕ್ತಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದಿರುವುದು ಕಂಡುಬಂದಿದೆ.
ಅಂತೆಯೇ ಲಾಡ್ಜ್ ಕಡೆಯಿಂದ ಬೆಳ್ತಂಗಡಿ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಕಾಸರಗೋಡು: ಒಂದೂವರೆ ತಿಂಗಳ ಮಗುವನ್ನು ಹತ್ಯೆಗೈದ ತಾಯಿ
ಕಾಸರಗೋಡು, ಸೆ 12 : ಒಂದೂವರೆ ತಿಂಗಳ ಹೆಣ್ಣು ಮಗುವನ್ನು ತಾಯಿ ಕೆಸರು ನೀರಿನಲ್ಲಿ ಮುಳುಗಿಸಿ ಹತ್ಯೆಗೈದ ದಾರುಣ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯ ಉಪ್ಪಳ ಪಚ್ಲಂಪಾರೆ ಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಸುಮಂಗಲಿ – ಸತ್ಯನಾರಾಯಣ ದಂಪತಿ ಯ ಒಂದೂವರೆ ತಿಂಗಳ ಮಗು ಮೃತ ಪಟ್ಟವಳು.
ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ . ತಾಯಿ ಮತ್ತು ಮಗು ನಾಪತ್ತೆ ಯಾದುದರಿಂದ ಮನೆ ಯವರು ಶೋಧ ನಡೆಸಿದಾಗ ತಾಯಿ ಯನ್ನು ಮನೆಯ ಅಲ್ಪ ದೂರದಿಂದ ಪತ್ತೆ ಹಚ್ಚಲಾಗಿದ್ದು, ಮಗು ನಾಪತ್ತೆಯಾಗಿತ್ತು. ವಿಚಾರಿಸಿದಾಗ ಮಗುವನ್ನು ಸಮೀಪದ ಬಯಲಿನಲ್ಲಿ ಕೆಸರು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಳು ಎನ್ನಲಾಗಿದೆ .ಕೂಡಲೇ ಮಗುವನ್ನು ಮೇಲಕ್ಕೆತ್ತಿ ಉಪ್ಪಳದ ಮಂಗಲ್ಪಾಡಿ ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತಪಟ್ಟಿತ್ತು.
ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು, ಮಹಿಳೆಯನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ. ಮಹಿಳೆ ಮಾನಸಿಕ ಅಸ್ವಸ್ಥೆತೆಯಂತೆ ವರ್ತಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬೇರೆ ಯಾವುದಾದರೂ ಕಾರಣ ಇದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.