ಶುಕ್ರವಾರ, ಮೇ 17, 2024
ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!-ನಾನು ಎಂದಿಗೂ ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ; ಪ್ರಧಾನಿ ಮೋದಿ-ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಅಮ್ಮನ ಕಾಲಿಗಡ್ಡ ಬಿದ್ದು ಆಶೀರ್ವಾದ ಪಡೆದ ಮಂಗಳೂರು ಮೇಯರ್‌

Twitter
Facebook
LinkedIn
WhatsApp
ಅಮ್ಮನ ಕಾಲಿಗಡ್ಡ ಬಿದ್ದು ಆಶೀರ್ವಾದ ಪಡೆದ ಮಂಗಳೂರು ಮೇಯರ್‌

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಗೊಂಡಿರುವ ಬಿಜೆಪಿ ಹಿರಿಯ ಸದಸ್ಯ, ಕೊಡಿಯಾಲ್‌ ಬೈಲ್‌ ಕಾರ್ಪೋರೇಟರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಕಣ್ಣೂರಿನ ವಿಠಲ್‌ ಶೆಟ್ಟಿ ಗುತ್ತಿಗೆ ಮನೆ ಕೋಡೆಕಲ್‌ಗೆ ಭೇಟಿ ನೀಡಿ ತಮ್ಮ ತಾಯಿ ಗುಲಾಬಿ ಅವರ ಕಾಲಿಗೆ ಅಡ್ಡ ಬಿದ್ದು ಆಶೀರ್ವಾದವನ್ನು ಬೇಡಿಕೊಂಡರು.

ಈ ವೇಳೆ ತಾಯಿ, ಪುತ್ರನನ್ನು ಮನತುಂಬಿ ಹರಸಿದರಲ್ಲದೇ ಸಿಹಿ ತಿನ್ನಿಸಿದರು. ಪತ್ನಿ ಉಷಾ ಶೆಟ್ಟಿ, ಹಿರಿಯ ಸಹೋದರ ಲೋಕೇಶ್‌ ಶೆಟ್ಟಿ, ಅತ್ತಿಗೆ ಶಕುಂತಲಾ ಶೆಟ್ಟಿ, ಸ್ನೇಹಿತರು, ಹಿತೈಷಿಗಳು ಕೂಡಾ ಸುಧೀರ್ ಶೆಟ್ಟಿ ಅವರನ್ನು ಅಭಿನಂದಿಸಿದರು.

ಬಿಜೆಪಿ ಸಾಮಾನ್ಯ ಕಾರ್ಯಕರ್ತನಾಗಿ, ಇದೀಗ ಪಾಲಿಕೆಯಲ್ಲಿ ಹಿರಿಯ ಕಾರ್ಪೋರೇಟರ್‌ ಆಗಿ ಗುರುತಿಸಿಕೊಂಡಿರುವ ಸುಧೀರ್ ಶೆಟ್ಟಿ ನಿನ್ನೆ ನಡೆದ ಚುನಾವಣೆಯಲ್ಲಿ ಮೇಯರ್ ಆಗಿ ಆಯ್ಕೆಗೊಂಡಿದ್ದರು. ಸುಧೀರ್ ಶೆಟ್ಟಿ ಕಣ್ಣೂರು ಸತತ ಮೂರನೇ ಬಾರಿ ಮಹಾನಗರ ಪಾಲಿಕೆಗೆ ಆಯ್ಕೆಯಾಗಿದ್ದು, ಆರ್ ಎಸ್ ಎಸ್ ಗರಡಿಯಲ್ಲಿ ಪಳಗಿದ ಚತುರ ಸಂಘಟಕ. ಸುರತ್ಕಲ್‌ ಗೋವಿಂದ ದಾಸ ಕಾಲೇಜಿನಲ್ಲಿ ಬಿಕಾಂ ಪದವಿ ಶಿಕ್ಷಣ ಪಡೆದಿರುವ 52ರ ಹರೆಯದ ಸುಧೀರ್‌ ಶೆಟ್ಟಿ ವೃತ್ತಿಯಲ್ಲಿ ಸಾರಿಗೆ ಉದ್ಯಮಿಯಾಗಿದ್ದಾರೆ.

ಕಣ್ಣೂರು ಗ್ರಾಮ ಪಂಚಾಯತಿ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದ ಇವರು, ಕಣ್ಣೂರು ಪ್ರದೇಶ ಮಹಾನಗರ ಪಾಲಿಕೆ ವ್ಯಾಪ್ತಿಯಗೆ ಸೇರ್ಪಡೆಯಾದ ಸತತ ಎರಡು ಬಾರಿ ಆ ವಾರ್ಡಿನ ಕಾರ್ಪೋರೇಟರ್ ಆಗಿ ಚುನಾಯಿತರಾಗಿದ್ದರು. 2019ರಲ್ಲಿ ಕೊಡಿಯಾಲ್‌ಬೈಲು ವಾರ್ಡಿನಿಂದ ಸ್ಪರ್ಧಿಸಿ ಚುನಾಯಿತರಾದರು.  ಪಾಲಿಕೆ ಪ್ರತಿಪಕ್ಷ ನಾಯಕರಾಗಿ, ಮುಖ್ಯ ಸಚೇತಕರಾಗಿ, ನಗರ ಯೋಜನೆ ಸ್ಥಾಯಿ ಸಮಿತಿ ಪ್ರಧಾನ ಕಾರ್ಯದರ್ಶೀಯಾಗಿದ್ದರು. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯೂ ಅಗಿದ್ದಾರೆ.

ಮಂಗಳೂರು ಕ್ಷೇತ್ರವನ್ನು ಮಾದರಿ ಮಾಡುವ ಗುರಿ: ಯು.ಟಿ.ಖಾದರ್

ಮಂಗಳೂರು ಸೆಪ್ಟೆಂಬರ್ 8: ಮಂಗಳೂರು  ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ದೂರದರ್ಶಿತ್ವದ ಕಾರ್ಯಯೋಜನೆ ಹಮ್ಮಿಕೊಂಡಿದ್ದೇವೆ ಎಂದು ಮಂಗಳೂರು ಕ್ಷೇತ್ರ ಶಾಸಕ, ಸ್ಪೀಕರ್ ಯು ಟಿ ಖಾದರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಇಂದು ಒಂದು ಪ್ರದೇಶ ಅಭಿವೃದ್ಧಿ ಆಗಬೇಕಾದರೆ ವಿದ್ಯುತ್‌, ಕುಡಿಯುವ ನೀರು, ರಸ್ತೆ, ಶಾಂತಿಯುತವಾದ ವಾತಾವರಣ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿದೆ. ಈ ಮೂಲಭೂತ ಸೌಕರ್ಯ 30 ವರ್ಷಕ್ಕೆ ಬೇಕಾದ ಯೋಜನೆಗಳನ್ನು ರೂಪಿಸಿ ಮಾಡಲು ನಿರ್ಧರಿಸಿದ್ದೇನೆ ಎಂದರು.ವಿದ್ಯುತ್‌ ಸಬ್‌ ಸ್ಟೇಷನ್‌ಗಳನ್ನು ನಾವು ಸಬ್‌ ಡಿವಿಶನ್‌ ಆಗಿ ಅಪ್ ಗ್ರೇಡ್ ಮಾಡಲಿದ್ದೇವೆ. ಅಲ್ಲೇ 110 ಕೆವಿ ಕ್ಯಾಪಾಸಿಟಿ ದೊಡ್ಡ ಮಟ್ಟದ ಪವರ್ ಸ್ಟೇಷನ್‌ ಮಾಡಲು ತೊಕ್ಕೊಟ್ಟಿಗೆ ಸಂಬಂಧಿಸಿ ರೂಪಿಸಲಾಗಿದೆ. ಇನ್ನೊಂದು ಸಬ್‌ಸ್ಟೇಷನ್‌ ಕೊಣಾಜೆಯಲ್ಲಿದ್ದು, ಅದನ್ನೂ ಕೂಡಾ ಅದರ ವಿದ್ಯುತ್‌ ಸಾಮರ್ಥ್ಯವನ್ನು ನಾವು ಹೆಚ್ಚಿಸಲಿದ್ದೇವೆ ಎಂದರು. ಆಡಳಿತಾತ್ಮಕ ವಿಚಾರಕ್ಕೆ ಸಂಬಂಧಿಸಿ ಮೂರು ಸೆಕ್ಷನ್‌ ಆಫೀಸನ್ನು ನಾವು ಆರಂಭಿಸಲಿದ್ದು, ನನ್ನ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಗಳು ಉಂಟಾಗದಂತೆ ಭವಿಷ್ಯದ ಆಲೋಚನೆಗಳನ್ನು ಮುಂದಿಟ್ಟುಕೊಂಡು ಕಾರ್ಯಯೋಜನೆ ರೂಪಿಸಲಾಗಿದೆ. ಕುಡಿಯುವ ನೀರಿಗೆ ಸಂಬಂದಿಸಿದಂತೆ 24 ಗಂಟೆ ನೀರು ಪೂರೈಸಲು ಸಜಿಪದಿಂದ ವ್ಯವಸ್ಥೆ ಮಾಡಲಾಗಿದೆ ಎಂದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಮಂಗಳೂರು