ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಕೃಷ್ಣಾಪುರದ ಚೈತನ್ಯ ಆಂಗ್ಲ ಮಾಧ್ಯಮ ಶಾಲೆಗೆ ಪ್ರಥಮ ಸ್ಥಾನ
ಸುರತ್ಕಲ್ : ಇಲ್ಲಿನ ಕೃಷ್ಣಾಪುರದಲ್ಲಿರುವ ಪ್ಯಾರಡೈಸ್ ಮೈದಾನದಲ್ಲಿ 13-09-2023 ರಂದು ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಂಗಳೂರು ಉತ್ತರ ವಲಯ ಹಾಗೂ ಅಲ್-ಬದ್ರಿಯಾ ಶಿಕ್ಷಣ ಸಂಸ್ಥೆ ಕೃಷ್ಣಾಪುರ ಇದರ ನೇತೃತ್ವದಲ್ಲಿ ನಡೆದ ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಕೃಷ್ಣಾಪುರದ ಚೈತನ್ಯ ಆಂಗ್ಲ ಮಾಧ್ಯಮ ಶಾಲೆಯ ಪ್ರೈಮರಿ ಮತ್ತು ಪ್ರೌಢಶಾಲಾ ವಿಬಾಗದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ,ಚೈತನ್ಯ ಶಾಲಾ ಮಕ್ಕಳಿಗೆ ಶಾಲೆಯ ದೈಹಿಕ ಶಿಕ್ಷಕರಾದ ಅರುಣ್ ಹಾಗೂ ಕೋಚ್ ಸಿನಾನ್ ಕಂದಾವರ ರವರು ಈ ಮಕ್ಕಳಿಗೆ ತರಬೇತಿನೀಡಿದ್ದರು
ಬೆಳ್ತಂಗಡಿಯ ಅಮೈ ದೇವರಾವ್‌ಗೆ ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ಪ್ರಶಸ್ತಿ ಪ್ರದಾನ
ನವದೆಹಲಿ: ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR) ಆಯೋಜಿಸಿದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿಯ ಕಿಲ್ಲೂರಿನ ಅಮೈ ದೇವ ರಾವ್ (Deva Rao) ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರು ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ಪ್ರಶಸ್ತಿ 2020-21 ನೀಡಿ ಪುರಸ್ಕರಿಸಿದರು.
ರೈತರ ಹಕ್ಕುಗಳ ಕುರಿತ ಮೊದಲ ಜಾಗತಿಕ ವಿಚಾರ ಸಂಕಿರಣ (First Global Symposium on Farmers’ Rights) ದೆಹಲಿಯಲ್ಲಿ ಇಂದು ಆರಂಭಗೊಂಡಿದ್ದು ಸೆ.15ರವರೆಗೆ ನಡೆಯಲಿದೆ. ಈ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ರಾಷ್ಟ್ರಪತಿಗಳು ಕೃಷಿಯಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಿದರು.
ಅಮೈ ದೇವರಾವ್ ಅವರಿಗೆ ಈ ಹಿಂದೆ 2019ರಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿತ್ತು. ಈ ಕೃಷಿ ಕೆಲಸಕ್ಕೆ ʼತಳಿ ತಪಸ್ವಿʼ ಬಿರುದು ಸಿಕ್ಕಿದೆ. ರಾಷ್ಟ್ರಮಟ್ಟದ ಪ್ರತಿಷ್ಠಿತ ʼಸೃಷ್ಟಿ ಸಮ್ಮಾನ್ʼ ಪ್ರಶಸ್ತಿಯೂ ದೊರಕಿದೆ.
ಯಾರು ಅಮೈ ದೇವರಾವ್?
ತಮ್ಮ ಐದು ಎಕರೆ ಗದ್ದೆಯಲ್ಲಿ 175ಕ್ಕೂ ಅಧಿಕ ಭತ್ತದ (P addy) ತಳಿಗಳನ್ನು ಬೆಳೆದಿರುವ ಸಾಧಕ. ವರ್ಷಕ್ಕೆ ಎರಡು ಬೆಳೆ ಬೆಳೆಯುತ್ತಿದ್ದು, ಪ್ರತಿಸಲವೂ 50 ಕ್ವಿಂಟಾಲ್‌ಗಿಂತಲೂಅಧಿಕ ಇಳುವರಿ ಸಿಗುತ್ತಿದೆ.
ಹಿಂದೆ ಏಳು ಜೋಡು ಎತ್ತುಗಳಿಂದ ಗದ್ದೆಯನ್ನು ಹಸನು ಮಾಡಿ ಕೃಷಿ ಮಾಡುತ್ತಿದ್ದ ಇವರು 25 ವರ್ಷಗಳಿಂದ ಟಿಲ್ಲರ್ ಉಪಯೋಗಿಸಿಕೊಂಡು ಗದ್ದೆಯನ್ನು ಉಳುತ್ತಿದ್ದಾರೆ. ಒಂದೇ ಗದ್ದೆಯಲ್ಲಿ ಅನೇಕ ಬಗೆಯ ತಳಿಗಳನ್ನು ನಾಟಿ ಮಾಡುವ ದೇವರಾವ್ ಇದು ಯಾವ ತಳಿ ಎಂಬುದನ್ನು ಗುರುತಿಸುವ ಸಾಮರ್ಥ್ಯ ಹೊಂದಿದ್ದಾರೆ.
ಹಿಂದೆ ನಾಲ್ಕು ಬೆಳೆಯನ್ನು ಬೆಳೆಯುತ್ತಿದ್ದ ದೇವರಾವ್ ಅವರು, ಕೆಲ ವರ್ಷಗಳಿಂದ ಎಣೆಲು ಮತ್ತು ಸುಗ್ಗಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಭತ್ತದ ವಿವಿಧ ತಳಿಗಳಲ್ಲೂ ದೀರ್ಘಾವಧಿ ಬೆಳೆ ಹಾಗೂ ಅಲ್ಪಾವಧಿ ಬೆಳೆಯನ್ನು ಮಾಡುತ್ತಿದ್ದಾರೆ.
1988 ರಿಂದ ರಾಸಾಯನಿಕ ಬಳಕೆಗೆ ಸಂಪೂರ್ಣ ವಿದಾಯ ಹೇಳಿದ್ದಾರೆ. ಹಟ್ಟಿಯ ಗೊಬ್ಬರನ್ನು ಬಳಸುವ ಇವರು ಭತ್ತವನ್ನು ಮನೆಯಲ್ಲಿಯೇ ಒಣಗಿಸಿ ಸ್ವಂತ ಹಲ್ಲರಿನಲ್ಲಿ ಅಕ್ಕಿ ಮಾಡುತ್ತಾರೆ. ದೇವ ರಾವ್ ಮನೆಗೇ ಬಂದು ಜನರು ಅಕ್ಕಿ ಖರೀದಿಸುತ್ತಿರುವುದು ವಿಶೇಷ.