ಕಾಳುಮೆಣಸು: ಬಂಗಾರದ ಬೆಲೆ, ಕೃಷಿಕರಿಗೆ ಉಲ್ಲಾಸ!
Pepper:ಮಂಗಳೂರು, ಜು 27 : ಕಾಳುಮೆಣಸಿನ ಧಾರಣೆ ಏರಿಕೆ ಮಾರುಕಟ್ಟೆಯಲ್ಲಿ ಮುಂದುವರಿದಿದ್ದು ಕೆಲ ದಿನಗಳ ಹಿಂದೆ ಕೆ.ಜಿ.ಗೆ 480ರಿಂದ 500 ರೂ. ಇದ್ದ ಕಾಳುಮೆಣಸು ದರ, ದಿಢೀರ್ ಆಗಿ ಈಗ 600ರ ಗಡಿ ದಾಟಿದೆ.
ಕಾಳುಮೆಣಸಿನ (Pepper) ಧಾರಣೆ ಕೇರಳದ ಕೊಚ್ಚಿ ಮಾರುಕಟ್ಟೆಯಲ್ಲಿ ಸತತವಾಗಿ ಏರುತ್ತಿದೆ. ಗುಣಮಟ್ಟದ ಕಾಳುಮೆಣಸಿಗೆ ಕೊಚ್ಚಿಯಲ್ಲಿ ಸೋಮವಾರ ಕೆ.ಜಿ.ಯೊಂದಕ್ಕೆ ಗರಿಷ್ಠ 570ರೂ. ಧಾರಣೆ ದೊರೆತಿದೆ.
ಕ್ಯಾಂಪ್ಕೋದಲ್ಲಿ 550 ರೂ ತನಕ ಧಾರಣೆ ಇತ್ತು. ಕಾಂಪ್ಕೋಗೆ ಹೋಲಿಸಿದರೆ ಹೊರ ಮಾರುಕಟ್ಟೆಯಲ್ಲಿ 40 ರಿಂದ 50 ರೂ ತನಕ ಧಾರಣೆ ಹೆಚ್ಚಿತ್ತು.
ಕಲೆದ ಮೂರು ವರ್ಷದಿಂದ 500ರ ಗಡಿ ದಾಟದೆ ಇದ್ದ ಕರಿಮೆಣಸಿನ ಧಾರಣೆ 2023ರ ಜುಲೈನಲ್ಲಿ 600ರ ಗಡಿ ದಾಟಿದ್ದು, ದರ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ.
ಕಾಳು ಮೆಣಸಿನ ಕೃಷಿ; ತಿಳಿದುಕೊಳ್ಳಿ ಕಾಳು ಮೆಣಸಿನ ಔಷಧೀಯ ಗುಣಗಳನ್ನು!
ಕಾಳು ಮೆಣಸು (Pepper) ಅಥವಾ ಕರಿಮೆಣಸು ಭಾರತದಲ್ಲಿ ಅತಿ ಹೆಚ್ಚು ರೈತರು ಈ ಕೃಷಿಯನ್ನು ಮಾಡುತ್ತಾರೆ. ಮುಖ್ಯವಾಗಿ ಸಾಂಬಾರ ಬೆಳೆಯಾಗಿದ್ದು. ವೈದ್ಯಶಾಸ್ತ್ರದಲ್ಲೂ ಕೂಡ ಇದರ ಉಪಯೋಗ ಅಪಾರ. ಇವು ಮರಗಳನ್ನೆ ಆಧಾರವಾಗಿಸಿಕೊಂಡು ಬಳ್ಳಿಗಳಾಗಿ ಎತ್ತರಕ್ಕೆ ಹಬ್ಬುತ್ತಾ ಹೋಗುತ್ತದೆ. ಬಳ್ಳಿಗಳು ಅಲ್ಲಲ್ಲಿ ಗಂಟು ಗಂಟಾಗಿರುತ್ತವೆ. ಮರದ ಅಪ್ಪುಗೆಯಿಂದ ಬೆಳೆಯುವುದರಿಂದ ಇದನ್ನು ‘ಅಪ್ಪು ಸಸ್ಯ’ ಎಂತಲೂ ಕರೆಯುತ್ತಾರೆ. ಇದರ ಬಳ್ಳಿ, ಎಲೆಗಳು ನೋಡೊಕೆ ವಿಳ್ಯದೆಲೆಯ ಆಕಾರವನ್ನೆ ಹೊಂದಿರುತ್ತದೆ.
ಕರ್ನಾಟಕದಲ್ಲಿ ಹೆಚ್ಚಾಗಿ ಅಡಕೆ, ಕಾಫಿ ತೋಟದಲ್ಲಿ ಕಾಳು ಮೆಣಸು ಬೆಳೆಯಬಹುದು. ಕಾಳು ಮೆಣಸು ಬೆಳೆಯಲು ಬೇರೆ ಭೂಮಿ ಬೇಕಿಲ್ಲ. ಇದ್ದ ಗಿಡ, ಮರಗಳಲ್ಲಿಯೇ ಬೆಳೆಸಬಹುದು. ಕಾಫಿ ತೋಟದಲ್ಲಿ ಒಂದು ಎಕರೆಗೆ 250 ಕಾಳು ಮೆಣಸು ಗಿಡ ಬೆಳೆಸಬಹುದು. ಒಟ್ಟಾರೆ ಒಂದು ಎಕರೆಯಲ್ಲಿ 250ರಿಂದ 300 ಕೆ.ಜಿ. ಕಾಳು ಮೆಣಸು ಪಡೆಯಬಹುದು. ಕಾಳು ಮೆಣಸಿನ ಪನ್ಯೂರ್ 1 ಎಂಬ ತಳಿ ಅತಿ ಹೆಚ್ಚು ಇಳುವರಿಯನ್ನು ನೀಡುತ್ತದೆ. ಕರ್ನಾಟಕದಲ್ಲಿ ಈ ತಳಿ ಹೆಚ್ಚು ಪ್ರಚಲಿತದಲ್ಲಿದೆ. ಆದರೆ, ಈ ತಳಿಯ ಬೆಳೆಗೆ ಬಿಸಿಲು ಬೇಕು. ನೆರಳಿನಲ್ಲಿದ್ದರೆ ಇಳುವರಿ ಕಡಿಮೆಯಾಗುತ್ತದೆ.
ಅಡಕೆ ಮರಕ್ಕೆ (ಬುಡದಲ್ಲಿ) ನೆಟ್ಟರೆ ನೆರಳು ಜಾಸ್ತಿಯಾಗಿ ಇಳುವರಿ ಕಡಿಮೆಯಾಗುತ್ತದೆ. ಅದಕ್ಕೆ ಬೆಳಕಿನ ವ್ಯವಸ್ಥೆ ಮಾಡಿದರೆ ಇಳುವರಿ ಚೆನ್ನಾಗಿ ಪಡೆಯಬಹುದು. ಏಪ್ರಿಲ್, ಮೇ ನಲ್ಲಿ ನೀರು ಕೊಟ್ಟರೆ, ಜೂನ್ ನಲ್ಲಿ ಗಂಡು ಹೂ ಬಿಟ್ಟು ಪ್ರತಿ ಕೊನೆಯಲ್ಲಿ ಕಾಳುಗಳು 80, 100 ಬರುತ್ತವೆ. ಗೊಬ್ಬರ, ಕೀಟ ನಿರ್ಹಣೆ ಸರಿಯಾದ ಸಮಯಕ್ಕೆ ಮಾಡಬೇಕು.
ಕಾಳು ಮೆಣಸು (Pepper) ಬಳ್ಳಿಗೆ ಮಾರ್ಚ್ ಕೊನೆಯ ವಾರದಿಂದ, ಏಪ್ರಿಲ್ ಮತ್ತು ಮೇ ಮೊದಲನೆ ವಾರದವರೆಗೆ ವಾರಕ್ಕೊಮ್ಮೆ ಪ್ರತಿ ಬಳ್ಳಿಗೆ 40 ರಿಂದ 50 ಲೀಟರ್ ನೀರನ್ನು ಬುಡಕ್ಕೆ ಹಾಕಿದರೆ ಇಳುವರಿ ಹೆಚ್ಚಾಗುತ್ತದೆ. ನೀರನ್ನು ಕೊಡದೆ, ಏಪ್ರಿಲ್/ಮೇನಲ್ಲಿ ಮಳೆ ಬಾರದೇ ಜೂನ್‌ನಲ್ಲಿ ಬಂದರೆ ಕಾಳುಮೆಣಸು ಬಳ್ಳಿಯೂ ಜುಲೈ ಅಥವಾ ಆಗಸ್ಟ್‌ನಲ್ಲಿ ಹೂ ಬಿಡುತ್ತದೆ. ಜುಲೈನಲ್ಲಿ ಬಂದ ಹೂವುಗಳಲ್ಲಿ ಹೆಚ್ಚು ಹೆಣ್ಣು ಹೂವುಗಳಿದ್ದು ಗಂಡು ಮತ್ತು ಹೆಣ್ಣು ಹೂವುಗಳು ತುಂಬ ಕಡಿಮೆಯಾಗಿರು ತ್ತವೆ. ಇದರಿಂದ ಸರಿಯಾಗಿ ಪರಾಗಸ್ವರ್ಶ ವಾಗದೆ ಕೊತ್ತು ಬೀಳುವುದು ಸಾಮಾನ್ಯ ವಾಗುತ್ತದೆ ಅಥವಾ ದಾಟು ಮಣಿಯಿಂದ ಕೂಡಿದ ಗೊಂಚಲನ್ನು ಗಮನಿಸ ಬಹುದು. ರೋಗ ಬಾಧೆಯಿಂದ ಬಳಲಿ ಸತ್ತು ಹೋದ ಬಳ್ಳಿಗಳನ್ನು ಬೇರು ಸಮೇತ ಕಿತ್ತು ತೋಟದಿಂದ ಹೊರಗೊಯ್ದು ನಾಶಪಡಿಸಬೇಕು. ತೋಟಗಳಲ್ಲಿ ಕನಿಷ್ಠ ಶೇ.20 ರಿಂದ 25ರಷ್ಟು ನೆರಳಿರುವ ಹಾಗೆ ನೋಡಿಕೊಳ್ಳಬೇಕು. ಬಳ್ಳಿಯ ಸುತ್ತಲು ಹಸಿರು ಎಲೆ, ಒಣ ಎಲೆ ಅಥವಾ ಸಾವಯವ ಪದಾರ್ಥಗಳ ಹೊದಿಕೆ ಮಾಡಬೇಕು. ಇದರಿಂದ ಬಳ್ಳಿಯ ಬುಡ ಬೇಗ ಒಣಗದಂತೆ ತಡೆಗಟ್ಟಬಹುದು.
ಕಾಳು ಮೆಣಸನ್ನು ಸೂರ್ಯನ ಶಾಖದಲ್ಲಿ ಒಣಗಿಸುವುದು ಸಾಂಪ್ರದಾಯಿಕವಾದ ವಿಧಾನವಾಗಿದೆ. ಕಾಳುಗಳನ್ನು ಸಿಮೆಂಟ್ ನೆಲದ ಮೇಲೆ ಹರಡಿ ಸೂರ್ಯನ ಶಾಖದಲ್ಲಿ 3-5 ದಿನಗಳವರೆಗೆ ಒಣಗಿಸಿಬೇಕು, ಹೆಚ್ಚು ತೇವಾಂಶವಿದ್ದರೆ ಶಿಲೀಂಧ್ರದ ಬೆಳವಣೆಗೆಗೆ ಕಾರಣವಾಗುತ್ತದೆ. ಶಿಲೀಂಧ್ರಗಳು. ಮೈಕೋಟಾಕ್ಸಿನ್ಸ್ ಎಂಬ ವಿಷವನ್ನು ಉತ್ಪತ್ತಿಮಾಡಿ ಕಾಳುಮೆಣಸು ಮಾನವನ ಬಳಕೆಗೆ ಯೋಗ್ಯವಲ್ಲದ ಹಾಗೆ ಮಾಡುತ್ತವೆ.
ಮೊದಲನೇ ವರ್ಷ ಯಾವುದೇ ಬೆಳೆ ಬರುವುದಿಲ್ಲ. ಎರಡನೇ ವರ್ಷದಲ್ಲಿ ಒಂದು ಗಿಡಕ್ಕೆ ಕಾಲು ಕೆಜಿಯಷ್ಟು ಇಳುವರಿ ಬರಬಹುದು. ಹಾಗೆಯೇ ಮೂರನೇ ವರ್ಷದಲ್ಲಿ ಪ್ರತಿ ಬಳ್ಳಿಯಲ್ಲಿ ಒಂದು ಕೆಜಿಯಷ್ಟು ಇಳುವರಿ ಹೆಚ್ಚುತ್ತದೆ. ತದನಂತರ ಮುಂದಿನ ವರ್ಷಗಳಲ್ಲಿ ಇಳುವರಿ ಹೆಚ್ಚುತ್ತಾ ಹೋಗಬಹುದು
ಕಾಳುಮೆಣಸಿನ ಔಷಧೀಯ ಗುಣ:
- ಅಡುಗೆ ಪದಾರ್ಥಗಳಲ್ಲಿ ರುಚಿಗಾಗಿ ಬಳಸುತ್ತಾರೆ.
- ಜೀರಿಗೆ, ಶುಂಠಿಯೊಂದಿಗೆ ಕಾಳುಮೆಣಸನ್ನು ಸಮಪ್ರಮಾಣದಲ್ಲಿ ಸೇರಿಸಿ ಕಷಾಯ ಮಾಡಿ ಸೇವಿಸಿದರೆ, ಗಂಟಲುಕೆರೆತ, ಗಂಟಲು ನೋವು, ಕೆಮ್ಮು ನಿಲ್ಲುತ್ತದೆ.
- ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಸಂಬಂಧಿಸಿದ ಖಾಯಿಲೆಗಳಿಗೂ ಇದು ಪರಿಹಾರಕ.
- ಬಿಸಿಹಾಲಿಗೆ ಅರಿಶಿಣ, ಕಾಳುಮೆಣಸುಪುಡಿ, ಸಕ್ಕರೆ ಹಾಕಿ ಕುಡಿಯುವುದರಿಂದ ಗಂಟಲುನೋವು ಗುಣವಾಗುತ್ತದೆ.
- ಅನ್ನಕ್ಕೆ ಉಪ್ಪು, ಬಿಸಿ ತುಪ್ಪ ಹಾಗೂ ಕಾಳುಮೆಣಸಿನ ಪುಡಿ ಕಲೆಸಿ, ತಿನ್ನುಪುದರಿಂದ ಅಜೀರ್ಣದಿಂದಾದ ಸಮಸ್ಯೆ ವಾಸಿಯಾಗುತ್ತದೆ.
- ಖಾರ ಮತ್ತು ಕಹಿ ಗುಣವನ್ನು ಹೊಂದಿರುವ ಇದು ಕಫ, ವಾತ ದೋಷಗಳನ್ನು ಕಡಿಮೆ ಮಾಡುತ್ತದೆ.
- ಹಲ್ಲುನೋವಿದ್ದರೆ ಇದರ ಪುಡಿಯೊಂದಿಗೆ, ಸ್ವಲ್ಪ ಉಪ್ಪನ್ನು ಸೇರಿಸಿ ನೋವಿನ ಜಾಗದಲ್ಲಿಟ್ಟರೆ ಕಡಿಮೆಯಾಗುತ್ತದೆ.
- ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಸಂಬಂಧಿಸಿದ ಖಾಯಿಲೆಗಳಿಗೂ ಇದು ಪರಿಹಾರಕ.
- ಜೇನುತುಪ್ಪದ ಜೊತೆಗೆ ಕರಿಮೆಣಸಿನ ಪುಡಿಯನ್ನು ಸೇರಿಸಿ ಸೇವನೆ ಮಾಡುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ.
- ಕಾಳುಮೆಣಸನ್ನು ಸ್ವಲ್ಪ ನೀರಿನ ಜೊತೆಗೆ ಕಲ್ಲಿನ ಮೇಲೆ ಉಜ್ಜಿ ಮೈಮೇಲೆ ಹಚ್ಚಿದರೆ ಕಜ್ಜಿ, ಗುಳ್ಳೆಗಳಂತ ರೋಗಗಳು ಹೋಗುತ್ತವೆ.
ಮಂಗಳೂರು: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ವಿಮಾ ಕಚೇರಿಯಲ್ಲಿ ಬೆಂಕಿ ಅವಘಢ – ಲಕ್ಷಾಂತ ರೂ. ನಷ್ಟ
ಮಂಗಳೂರು, ಜು 26 : ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬಾವುಟ ಗುಡ್ಡೆಯ ಇನ್ಶೂರೆನ್ಸ್ ಸಂಸ್ಥೆಯೊಂದರ ಕಚೇರಿಯಲ್ಲಿ ಇಂದು ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿ ಕಂಪ್ಯೂಟರ್, ಎಸಿ ಮತ್ತಿತರ ಪರಿಕರಗಳು ಸುಟ್ಟು ಹೋಗಿರುವ ಘಟನೆ ನಡೆದಿದ್ದು, ಲಕ್ಷಾಂತ ರೂ. ನಷ್ಟ ಸಂಭವಿಸಿ ಎಂದು ತಿಳಿದು ಬಂದಿದೆ.
ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ಇನ್ನು ಇನ್ಶೂರೆನ್ಸ್ ಕಚೇರಿಯು ಕಟ್ಟಡದ ಮೂರನೇ ಅಂತಸ್ತಿನಲ್ಲಿ ಅಗ್ನಿ ಅವಘಢ ಸಂಭವಿಸಿದ್ದು, ತಕ್ಷಣ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.