ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ಜೆಡಿಯು-ಬಿಜೆಪಿ ಮೈತ್ರಿಕೂಟ...!
ಬಿಹಾರದಲ್ಲಿ ಬಿಜೆಪಿಯು ಹಾಗೂ ಬಿಜೆಪಿ ಮೈತ್ರಿಕೂಟ ಸರ್ಕಾರ ಸದನದಲ್ಲಿ ಇಂದು ವಿಶ್ವಾಸಮತ ಗೆದ್ದಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಬಹುಮತ ಸಾಬೀತುಪಡಿಸಿದ್ದಾರೆ. 129 ಶಾಸಕರು ನಿತೀಶ್ ಕುಮಾರ್ ಅವರನ್ನು ಬೆಂಬಲಿಸಿದ್ದಾರೆ. ಒಟ್ಟು 243 ಸದಸ್ಯಬಲದ ಬಿಹಾರದಲ್ಲಿ ಬಹುಮತಕ್ಕೆ 122 ಸದಸ್ಯರ ಅಗತ್ಯವಿತ್ತು, ಬಿಜೆಪಿ -ಜೆಡಿಯು ಮೈತ್ರಿಕೂಟ 128 ಸದಸ್ಯರನ್ನು ಹೊಂದಿದೆ. ಬಿಜೆಪಿಯ 78 ಶಾಸಕರಿದ್ದು ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳ 45 ಶಾಸಕರನ್ನು ಹೊಂದಿದೆ. ಜಿತಿನ್ ರಾಮ್ ಮಾಂಜಿ ಹಿಂದೂಸ್ತಾನ್ ಅವಾಮ್ ಮೋರ್ಚಾ 4 ಸ್ಥಾನಗಳನ್ನು ಹೊಂದಿತ್ತು.
ಇನ್ನುಳಿದಂತೆ ಒಬ್ಬ ಪಕ್ಷೇತರ ಈ ಮೈತ್ರಿಕೂಟವನ್ನು ಬೆಂಬಲಿಸಿದ್ದರು. ವಿರೋಧಿ ಕೂಟವಾಗಿರುವ ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್ 114 ಸ್ಥಾನಗಳನ್ನು ಹೊಂದಿದ್ದವು.
ಬಿಜೆಪಿ ಜೊತೆಗೂಡಿ ನೂತನ ಸರ್ಕಾರ ರಚಿಸಲಿರುವ ನಿತೀಶ್ ಕುಮಾರ್ ಅವರು ವಿಶ್ವಾಸಮತ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿದ್ದಾರೆ ಎಂದು ಜೆಡಿಯು ವಿಶ್ವಾಸ ವ್ಯಕ್ತಪಡಿಸಿಸಿತ್ತು. ಭಾನುವಾರ ನಡೆದ ಜೆಡಿಯು ಶಾಸಕಾಂಗ ಪಕ್ಷದ ಸಭೆಗೆ ಇಬ್ಬರು-ಮೂರು ಶಾಸಕರು ಹಾಜರಾಗಿರಲಿಲ್ಲ.
ಮೂವರು ಶಾಸಕರಾದ ಸುದರ್ಶನ್ ಕುಮಾರ್ ಸಿಂಗ್, ಬಿಮಾ ಭಾರತಿ ಮತ್ತು ದಿಲೀಪ್ ರಾಯ್ ಅವರು ಜೆಡಿಯು ಸಭೆಗಳಿಗೆ ಹಾಜರಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಶಾಸಕರು ಜೆಡಿಯು ತಲೆಬಿಸಿ ಹೆಚ್ಚಿಸಿದ್ದಾರೆ. ಈ ಶಾಸಕರು ವಿಧಾನಸಭೆಯಿಂದ ದೂರ ಉಳಿದರೆ ಮತ್ತು ಜಿತನ್ ರಾಮ್ ಮಾಂಜಿ ಪಕ್ಷದ ಎಚ್‌ಎಎಂನ ಶಾಸಕರು ಯು-ಟರ್ನ್ ತೆಗೆದುಕೊಂಡರೆ, ಬಿಜೆಪಿ-ಜೆಡಿಯು ಸಮ್ಮಿಶ್ರ ಸರ್ಕಾರಕ್ಕೆ ತೊಂದರೆಯಾಗುತ್ತದೆ ಎಂದು ಹೇಳಲಾಗಿತ್ತು.
ಆದರೆ, ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ವಿಜಯ್ ಕುಮಾರ್ ಚೌಧರಿ ಅವರು ವಿಶ್ವಾಸಮತ ಪರೀಕ್ಷೆಯ ಸಮಯದಲ್ಲಿ ಎಲ್ಲಾ ಪಕ್ಷದ ಶಾಸಕರು ವಿಧಾನಸಭೆಯಲ್ಲಿ ಹಾಜರಿರುತ್ತಾರೆ ಎಂದು ಹೇಳಿದ್ದರು.