ಸೋಮವಾರ, ಮೇ 20, 2024
ಲೈಂಗಿಕ ದೌರ್ಜನ್ಯ ಪ್ರಕರಣ; ಹೆಚ್​ಡಿ ರೇವಣ್ಣಗೆ ಜಾಮೀನು ಮಂಜೂರು..!-ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!-ನಾನು ರೇವ್ ಪಾರ್ಟಿಗೆ ಹೋಗಿಲ್ಲ; ನಟಿ ವಿಡಿಯೋ ಸಂದೇಶ : ಐವರ ಬಂಧನ.!-ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!-ಬೆಂಗಳೂರು: ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ ; ಹಲವು ತೆಲುಗು ನಟ ನಟಿಯರು ಮತ್ತು ಮಾಡೆಲ್ ಗಳು ಭಾಗಿ..!-ಸಿಎಂ ಸಿದ್ದರಾಮಯ್ಯಗೆ ಸೋಮಾರಿ ಸಿದ್ದು ಎಂದು ನಟ ಚೇತನ್ ಅಹಿಂಸಾ ವ್ಯಂಗ್ಯ..!-Gold Rate: ಇಂದಿನ ಚಿನ್ನಾಭರಣದ ಬೆಲೆ ಹೇಗಿದೆ; ಖರೀದಿಗೆ ಸೂಕ್ತವೇ.?-ಆರ್ಸಿಬಿ ಗೆ ಕಪ್ ಗೆಲ್ಲಲು ಮುಂದಿನ ಪಂದ್ಯ ಯಾವಾಗ; ಎದುರಾಳಿ ತಂಡ ಯಾವುದು.?-ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ವಿದೇಶಾಂಗ ಸಚಿವರು ಹೆಲಿಕಾಪ್ಟರ್ ದುರಂತದಲ್ಲಿ ದುರ್ಮರಣ; ಇರಾನ್ ಮಾದ್ಯಮ ವರದಿ-ಬಿಜೆಪಿ ಅಭ್ಯರ್ಥಿಗೆ ಒಬ್ಬನಿಂದಲೇ 8 ಬಾರಿ ಮತ; ವೈರಲ್ ವಿಡಿಯೋ ಇಲ್ಲಿದೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಂಟ್ವಾಳ :ನಯನಾಡು ಶಾಲೆಯಲ್ಲಿ ಜರುಗಿದ ಪುಂಜಾಲಕಟ್ಟೆ ಮತ್ತು ವೇಣೂರು ಠಾಣೆಯ ಆರಕ್ಷಕರಿಂದ ಜನಜಾಗೃತಿ ಮೂಡಿಸುವ ತುಳು ಸಾಮಾಜಿಕ ನಾಟಕ..!

Twitter
Facebook
LinkedIn
WhatsApp
ಬಂಟ್ವಾಳ :ನಯನಾಡು ಶಾಲೆಯಲ್ಲಿ ಜರುಗಿದ ಪುಂಜಾಲಕಟ್ಟೆ ಮತ್ತು ವೇಣೂರು ಠಾಣೆಯ ಆರಕ್ಷಕರಿಂದ ಜನಜಾಗೃತಿ ಮೂಡಿಸುವ ತುಳು ಸಾಮಾಜಿಕ ನಾಟಕ..!

ಬಂಟ್ವಾಳ : ಬಂಟ್ವಾಳ ತಾಲೂಕಿನ ನಯನಾಡು ಸಂತ ಜೋಸೆಫರ ಅನುದಾನಿತ ಶಾಲೆಯಲ್ಲಿ ಫೆಬ್ರವರಿ 8 ರಿಂದ ರಾಷ್ಟೀಯ ಸೇವಾ ಯೋಜನೆ (NSS) ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ವತಿಯಿಂದ ಶಿಬಿರ ನಡೆಯುತ್ತಿದೆ. ಸಂಜೆ 7 ರಿಂದ ಕಾಲೇಜಿನ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆ ಇಂದು ತಾರೀಕು 11 ರಂದು ಪುಂಜಾಲಕಟ್ಟೆ ಮತ್ತು ವೇಣೂರು ಪೊಲೀಸ್ ಠಾಣೆಯ ಆರಕ್ಷಕರಿಂದ ಜನಜಾಗೃತಿ ಮೂಡಿಸುವಂತಹ ಅಭೂತಪೂರ್ವ ಸಾಮಾಜಿಕ ನಾಟಕ “ಬದ್ಕ್ಡ್ ಸಾದಿ ತತ್ತ್ಂಡಾ” ಪ್ರದರ್ಶನವಾಯಿತು. ನಮ್ಮೆಲ್ಲರ ರಕ್ಷಣೆ ಮಾಡುವಂತಹ ಪೊಲೀಸರು, ದಿನ ಮತ್ತು ರಾತ್ರಿ ಹೊತ್ತು ಎನ್ನದೇ ಕೆಲಸ ಅರ್ಥಾತ್ ಸೇವೆ ಮಾಡಿ ದೂರುಗಳನ್ನು ಸ್ವೀಕರಿಸಿ ಸಾರ್ವಜನಿಕರಿಗೆ ನೆರವಾಗುತ್ತಾರೆ.

nayanadu

ಆದರೆ ಇಂದು ಈ ಆರಕ್ಷಕರು ಒಟ್ಟಿಗೆ ಸೇರಿ ಸಮಾಜಕ್ಕೆ ಹಾಗೂ ಪ್ರತ್ಯೇಕವಾಗಿ ಇಂದಿನ ಯುವ ಜನರಿಗೆ ಡ್ರಗ್ಸ್ ಹಾಗೂ ಮಾದಕ ದ್ರವ್ಯಕ್ಕೆ ಬಲಿಯಾಗದಂತೆ ವಿಸ್ಕ್ರತವಾದಂತಹ ಸಂದೇಶ ಅರ್ಥಪೂರ್ಣ ಕಿರು ನಾಟಕ ಪ್ರದರ್ಶನವಾಯಿತು. ವಿದ್ಯಾರ್ಥಿಗಳು ಸೇರಿದಂತೆ ನಯನಾಡು ಪರಿಸರದ ಹಲವು ಜನರು ಬಂದು ಈ ನಾಟಕವನ್ನು ವೀಕ್ಷಿಸಿ ಅಧ್ಬುತ ಪ್ರತಿಕ್ರಿಯೆ ನೀಡಿದರು. ಇಂತಹ ಸಂದೇಶ ಸಾರಿ ಜಾಗೃತಿ ಮೂಡಿಸುವಂತಹ ನಾಟಕಗಳು ಇಂದಿನ ಆಧುನಿಕ ಯುಗಕ್ಕೆ ಬಹುಮುಖ್ಯ.
ಬಡ ಮಕ್ಕಳಿಗೆ ಯಾವ ರೀತಿ ಡ್ರಗ್ಸ್ ಹಂಚಲಾಗುತ್ತದೆ ಮತ್ತು ಇಂತಹ ದುಷ್ಟಗಳಿಗೆ ವ್ಯಸನಿಯಾದರೆ ಯಾವ ಪರಿಣಾಮಗಳು ಯುವಜನರು ಎದುರಿಸುತ್ತಾರೆ ಎನ್ನುವ ಅಧ್ಭುತ ಸಂದೇಶ ಸಾರಿ ಸಾರ್ವಜನಿಕರ ಸಹಕಾರ ಎಲ್ಲಾ ಪೊಲೀಸ್ ಇಲಾಖೆಗೆ ನೀಡಿದರೆ ಈ ರೀತಿಯ ಅಪರಾಧ ಕೃತ್ಯಗಳನ್ನು ಹೋಗಲಾಡಿಸಲು ಸಾಧ್ಯ ಎಂದು ಹೇಳಿದರು

nayanadu

ಪುಂಜಾಲಕಟ್ಟೆ ಠಾಣೆಯ ಹೆಡ್ ಕಾನ್ಸ್ಟೇಬಲ್ ರಾದಂತಹ ಶ್ರೀ ಹರೀಶ್ ನಾಯ್ಕ್ ರವರು ನಿರ್ದೇಶಿಸಿ, ರಚಸಿದಂತಹ ಈ ನಾಟಕಕ್ಕೆ ಪೊಲೀಸ ರ ಪಾತ್ರ ಮತ್ತು ಅಭಿನಯಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಯಿತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ