ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಪತ್ನಿಯ ಕಾರು ಹಾಡಹಗಲೇ ಕಳ್ಳತನ..!
ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಜೆಪಿ ನಡ್ಡಾ(JP Nadda) ಅವರ ಪತ್ನಿಯ ಕಾರು ಕಳ್ಳತನ ವಾಗಿರುವ ಸುದ್ದಿ ಬೆಳಕಿಗೆ ಬಂದಿದೆ. ಮಾಹಿತಿ ಪ್ರಕಾರ, ಚಾಲಕ, ಮಲ್ಲಿಕಾ ನಡ್ಡಾ ಅವರ ಫಾರ್ಚುನರ್ ಕಾರನ್ನು ಸರ್ವೀಸ್‌ಗೆ ತೆಗೆದುಕೊಂಡು ಹೋಗಿದ್ದರು. ಮಾರ್ಚ್ 19 ರಂದು, ಅವರ ಕಾರನ್ನು ಸರ್ವೀಸ್ ಸೆಂಟರ್‌ನಿಂದಲೇ ಕಳವು ಮಾಡಲಾಗಿತ್ತು. ಚಾಲಕನ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇದೀಗ ಪೊಲೀಸರು ಕಾರಿಗೆ ಹುಡುಕಾಟ ಆರಂಭಿಸಿದ್ದಾರೆ.
ಈ ಸಂಬಂಧ ಪೊಲೀಸರು ಸಮೀಪದ ಸಿಸಿಟಿವಿ ವೀಕ್ಷಿಸುತ್ತಿದ್ದಾರೆ. ಅಲ್ಲದೆ ಶಂಕಿತ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ. ಅರೋರಾ ಪ್ರಾಪರ್ಟೀಸ್ ಆರ್‌ಡಿ ಮಾರ್ಗದ ಮುಂಭಾಗದಲ್ಲಿರುವ ಗೋವಿಂದಪುರಿಯಿಂದ ಕಾರು ನೋಂದಣಿ ಸಂಖ್ಯೆ HP03D0021 ಅನ್ನು ಕಳವು ಮಾಡಲಾಗಿದೆ ಎಂದು ಚಾಲಕ ಹೇಳಿದ್ದಾರೆ.
ಮಧ್ಯಾಹ್ನ 3 ಗಂಟೆಯಿಂದ 4 ಗಂಟೆಯೊಳಗೆ ಕಾರು ಕಳ್ಳತನವಾಗಿರುವ ಸಾಧ್ಯತೆ ಇದೆ ಎಂದು ಚಾಲಕ ತಿಳಿಸಿದ್ದಾರೆ. ದೆಹಲಿ ಸೇರಿದಂತೆ ಹಲವು ಮಹಾನಗರಗಳಲ್ಲಿ ವಾಹನ ಕಳ್ಳತನ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವುದು ಗಮನಾರ್ಹ. ದೆಹಲಿ-ಎನ್‌ಸಿಆರ್‌ನಲ್ಲಿ ಪ್ರತಿ 14 ನಿಮಿಷಕ್ಕೆ ಒಂದು ವಾಹನ ಕಳ್ಳತನವಾಗುತ್ತದೆ.
ಜೆಪಿ ನಡ್ಡಾ ಅವರ ಪತ್ನಿಯ ಕಾರು ಸಂಖ್ಯೆ ಹಿಮಾಚಲ ಪ್ರದೇಶದ್ದು ಎಂಬ ಮಾಹಿತಿ ಲಭಿಸಿದೆ. ಕಾರು ಚಾಲಕ ಸರ್ವೀಸ್ ಸೆಂಟರ್ ನಲ್ಲಿ ಕಾರನ್ನು ನಿಲ್ಲಿಸಿ ಊಟ ಮಾಡಲು ಮನೆಗೆ ತೆರಳಿದ್ದ. ಆದರೆ ವಾಪಸ್ ಬಂದಾಗ ಕಾರು ನಾಪತ್ತೆಯಾಗಿತ್ತು. ಕಾರಿನ ಬಣ್ಣ ಬಿಳಿ. ಈ ವೇಳೆ ಚಾಲಕ ಜೋಗಿಂದರ್ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಕಾರಿನ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಇದು ಮಾರ್ಚ್ 19ರ ಘಟನೆ ಎಂದು ಹೇಳಲಾಗುತ್ತಿದೆ. 2022 ಮತ್ತು 2023 ರ ನಡುವೆ ಭಾರತದಲ್ಲಿ ವಾಹನ ಕಳ್ಳತನ ಘಟನೆಗಳು 2.5% ರಷ್ಟು ಹೆಚ್ಚಾಗಿದೆ.
ಬಿಜೆಪಿಯ 5ನೇ ಪಟ್ಟಿ ಬಿಡುಗಡೆ; ಜಗದೀಶ್ ಶೆಟ್ಟರ್ ಗೆ ಅಚ್ಚರಿಯ ಕ್ಷೇತ್ರ..!
ಬೆಂಗಳೂರು, ಮಾರ್ಚ್ 24: ಲೋಕಸಭಾ ಚುನಾವಣೆಗೆ(Lok Sabha Elections) ಬಿಜೆಪಿ ಅಭ್ಯರ್ಥಿಳ ತನ್ನ 5ನೇ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಕರ್ನಾಟಕ ಸೇರಿದಂತೆ 8 ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕದಲ್ಲಿ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆಗೆ ಟಿಕೆಟ್ ಕೈತಪ್ಪಿದ್ದು, ತೀವ್ರ ವಿರೋಧದ ನಡುವೆ ಜಗದೀಶ್ ಶೆಟ್ಟರ್ಗೆ ಬೆಳಗಾವಿ ಟಿಕೆಟ್ ಘೋಷಣೆ ಮಾಡಲಾಗಿದೆ.