ಭಾನುವಾರ, ಏಪ್ರಿಲ್ 28, 2024
ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ; ಪ್ರಜ್ವಲ್ ರೇವಣ್ಣ ಜೊತೆಗೆ ಹೆಚ್​​ಡಿ ರೇವಣ್ಣ ವಿರುದ್ಧವೂ ಎಫ್ಐಆರ್‌ ದಾಖಲು..!-ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.-ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದಿಂದ ಸರ್ಕಾರಕ್ಕೆ ಪತ್ರ; ಜರ್ಮನಿಗೆ ಹಾರಿದ ಪ್ರಜ್ವಲ್‌ ರೇವಣ್ಣ!-ಮದುವೆ ಆಮಂತ್ರಣದಲ್ಲಿ ಚುನಾವಣಾ ಪ್ರಚಾರ : ನೀತಿ ಸಂಹಿತೆಯಡಿ ಪ್ರಕರಣ ದಾಖಲು-ನೋಟಾ, ಅತಿ ಹೆಚ್ಚು ಅಲ್ಪಸಂಖ್ಯಾತರ ಮತದಾನ, ಮೂಡಬಿದ್ರೆ- ಬೆಳ್ತಂಗಡಿಯಲ್ಲಿ ಬಿಲ್ಲವರ ಅತಿ ಹೆಚ್ಚು ಮತದ ಬಗ್ಗೆ ಕಾಂಗ್ರೆಸ್ ನಿರೀಕ್ಷೆ.ಆ ಮೂಲಕ ಗೆಲುವಿನ ಭರವಸೆ!-ಬಿಜೆಪಿಯ ಬಣ ರಾಜಕೀಯ, ನೋಟಾ, ಸತ್ಯಜಿತ್ , ಗ್ಯಾರೆಂಟಿ, ಬಿಲ್ಲವ ಟ್ರಂಪ್ ಕಾರ್ಡ್ , ಅಲ್ಪಸಂಖ್ಯಾತರ ಬೂತುಗಳ ಹೆಚ್ಚಿನ ಮತದಾನ ಸಹಾಯ ಪಡೆದು ಮಂಗಳೂರು ಲೋಕಸಭೆಯಲ್ಲಿ ಪದ್ಮರಾಜ್ ವಿಜಯ ಪತಾಕೆ ಹಾರಿಸಬಹುದೇ?-ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Lemon-Sabja Juice: ದೇಹವನ್ನು ತಂಪಾಗಿಡಲು ನಿಂಬೆ ಹಣ್ಣಿನ ಜೊತೆ ಸಬ್ಜಾ ಬೀಜದ ಜ್ಯೂಸ್ ನ ಉಪಯೋಗವೇನು; ಮಾಡುವ ವಿಧಾನ ಇಲ್ಲಿದೆ

Twitter
Facebook
LinkedIn
WhatsApp
Lemon-Sabja Juice: ದೇಹವನ್ನು ತಂಪಾಗಿಡಲು ನಿಂಬೆ ಹಣ್ಣಿನ ಜೊತೆ ಸಬ್ಜಾ ಬೀಜದ ಜ್ಯೂಸ್ ನ ಉಪಯೋಗವೇನು; ಮಾಡುವ ವಿಧಾನ ಇಲ್ಲಿದೆ

Lemon-Sabja Juice: ಬೇಸಿಗೆ ಶುರುವಾಯ್ತು.ವಿಪರೀತ ಧಗೆಗೆ ಅತಿಯಾದ ಬೆವರುವಿಕೆ, ಉರಿಯೂತ, ನಿರ್ಜಲೀಕರಣ ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತೆ.ಈ ವರ್ಷ ಬೇಸಿಗೆ ತುಸು ಜಾಸ್ತಿಯೇ ಇದೆ. ಮಳೆ ಬರದೆ ರಾಜ್ಯದಲ್ಲಿ ಬರಗಾಲ ಹೆಚ್ಚಾಗಿದೆ. ಸೂರ್ಯನ ಶಾಖದಿಂದ ತಪ್ಪಿಸಿಕೊಳ್ಳು ಆಗದ ಸ್ಥಿತಿ ಬಂದಿದೆ. ಈ ವೇಳೆ ದೇಹಕ್ಕೆ ಹೆಚ್ಚು ಆರೋಗ್ಯಕರ ಮತ್ತು ದೇಹವನ್ನು ಹೆಚ್ಚು ತಂಪಾಗಿ ಇಡುವ ಆಹಾರ ಪದಾರ್ಥಗಳನ್ನು ಸೇವಿಸಬೇಕು.ನಿಂಬೆ ಹಣ್ಣಿನ ಜೊತೆ ಸಬ್ಜಾ ಬೀಜದ ಜ್ಯೂಸ್ ಕುಡಿದರೆ ದೇಹವನ್ನು ತಂಪಾಗಿಡುತ್ತದೆ.

ಹಸಿರು ಬೀಜಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಬೀಜ ಚಯಾಪಚಯವನ್ನು ನಿಧಾನಗೊಳಿಸುತ್ತದೆ. ಮಧುಮೇಹವನ್ನು ನಿಯಂತ್ರಿಸುವಲ್ಲಿ ಈ ಬೀಜಗಳು ವಿಶೇಷ ಪಾತ್ರವನ್ನು ಹೊಂದಿವೆ. ಊಟಕ್ಕೆ ಮುಂಚೆ ಹಸಿರು ಕಾಳುಗಳನ್ನು ತಿನ್ನುವವರ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿದೆ ಎಂದು ಕಂಡುಬಂದಿದೆ.

ಆಮ್ಲೀಯತೆ, ಎದೆಯುರಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ದೇಹದ ಶಾಖವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಸಬ್ಜಾ ಬೀಜಗಳು ಅಗತ್ಯವಾದ ಕೊಬ್ಬುಗಳು, ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ ಗಳಲ್ಲಿ ಸಮೃದ್ಧವಾಗಿವೆ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಕ್ಯಾಲೋರಿ ಗಳನ್ನು ಕಡಿಮೆ ಹೊಂದಿರುವುದರಿಂದ ತೂಕ ಇಳಿಸಿಕೊಳ್ಳಲು ಈ ಬೀಜಗಳು ಸಹಾಯ ಮಾಡುತ್ತದೆ.

ಸಬ್ಜಾ ಬೀಜಗಳಲ್ಲಿ ಇರುವ ಹೆಚ್ಚಿನ ನಾರಿನಂಶವು ನಿಮ್ಮನ್ನು ಹೆಚ್ಚು ಸಮಯದವರೆಗೆ ಹಸಿವಾಗದಂತೆ ಇರಿಸುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಅತಿಯಾಗಿ ತಿನ್ನುವುದು ಮತ್ತು ಅನಗತ್ಯ ಕಡುಬಯಕೆಗಳನ್ನು ತಡೆಗಟ್ಟುವ ಮೂಲಕ, ಸಬ್ಜಾ ಬೀಜಗಳು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ದೇಹದಲ್ಲಿನ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ಗಳ ಹೀರಿಕೊಳ್ಳುವಿಕೆ ಯನ್ನು ಕಡಿಮೆ ಮಾಡುವ ಮೂಲಕ ಫೈಬರ್ ಕೂಡ ಸಹಾಯ ಮಾಡುತ್ತದೆ.ಅಂದರೆ ಇದರಲ್ಲಿರುವ ಹೆಚ್ಚಿನ ಫೈಬರ್ ಅಂಶವು ತೂಕ ಕಳೆದುಕೊಳ್ಳುವಿಕೆಗೆ ಸಹಾಯ ಮಾಡುತ್ತದೆ ಎಂದರ್ಥ.

 

ಮಹಿಳೆಯರ ಆರೋಗ್ಯವನ್ನು ಸುಧಾರಿಸುವಲ್ಲಿ ಹಸಿರು ಬೀಜಗಳು ವಿಶೇಷ ಪಾತ್ರವನ್ನು ವಹಿಸುತ್ತವೆ. ಈ ಕಪ್ಪು ಬೀಜಗಳು ಈಸ್ಟ್ರೊಜೆನ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಆದ್ದರಿಂದ ಋತುಚಕ್ರದ ಸಮಯದಲ್ಲಿ ಅಧಿಕವಾಗಿ ರಕ್ತಸ್ರಾವವಾಗುವ ಮಹಿಳೆಯರಿಗೆ ಹಸಿರು ಬೀಜಗಳು ಉತ್ತಮವಾಗಿದೆ.

ತೂಕ ಇಳಿಕೆಗೆ ಹೇಗೆ ಸಹಕಾರಿ? ಎರಡು ಚಮಚ ಸಬ್ಜಾವನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಎರಡು ಚಮಚ ಸಬ್ಜಾದಲ್ಲಿ 40ಕ್ಯಾಲೋರಿ ಇದ್ದು 11 ಗ್ರಾಂ ಪ್ರೊಟೀನ್, 5 ಗ್ರಾಂ ಕಾರ್ಬೋಹೈಡ್ರೇಟ್ಸ್, 2 ಗ್ರಾಂ ನಾರಿನಂಶವಿರುವುದರಿಂದ ತೂಕ ಇಳಿಕೆಗೆ ಸರಿಯಾದ ವಸ್ತು ಇದಾಗಿದೆ. ಇದನ್ನು ಪ್ರತಿದಿನ ಬೆಳಗ್ಗೆ ತೆಗೆದುಕೊಳ್ಳುವುದರಿಂದ ಮೈ ಬೊಜ್ಜು ಕರಗುವುದು

ಸುಮಾರು 2 ಟೀ ಚಮಚ ಸಬ್ಜಾ ಬೀಜಗಳನ್ನು ಒಂದು ಕಪ್ ಬೆಚ್ಚಗಿನ ನೀರಿನಲ್ಲಿ ಸುಮಾರು 15 ನಿಮಿಷಗಳ ಕಾಲ ನೆನೆಸಿಡಿ. ಅವು ಉಬ್ಬುತ್ತವೆ ಮತ್ತು ಪ್ರತಿ ಕಪ್ಪು ಬೀಜದ ಸುತ್ತಲೂ ಅರೆಪಾರದರ್ಶಕ ಬೂದು ಫಿಲ್ಮ್ ಲೇಪನವು ಬೆಳೆಯುತ್ತದೆ, ಏಕೆಂದರೆ ಅವು ಗಾತ್ರದಲ್ಲಿ ಹೆಚ್ಚಾಗುತ್ತವೆ.ನೀವು ಈಗ ಈ ಬೀಜಗಳನ್ನು ನಿಂಬೆ ಪಾನಕ, ಮಿಲ್ಕ್‌ಶೇಕ್‌ಗಳು, ತೆಂಗಿನ ನೀರು, ಸ್ಮೂಥಿಗಳು, ಮಜ್ಜಿಗೆ, ಸೂಪ್‌ಗಳು ಮತ್ತು ಮುಂತಾದ ವಿವಿಧ ಪಾನೀಯಗಳ ಭಾಗವಾಗಿ ಸೇರಿಸಬಹುದು.

ಸಬ್ಜಾ ಬೀಜಗಳು ಅಂಗಡಿಗಳಲ್ಲಿ ಸುಲಭವಾಗಿ ದೊರೆಯುತ್ತವೆ. ಇದನ್ನು ಕನ್ನಡ ಭಾಷೆಯಲ್ಲಿ “ಕಾಮಕಸ್ತೂರಿ ಬೀಜ” ಎಂದೂ ಕರೆಯಲಾಗುತ್ತದೆ. ಈ ವರ್ಷ ಬೇಸಿಗೆ ತುಂಬಾ ಹೆಚ್ಚಾಗಿದ್ದು. ನಿಮ್ಮ ಆಹಾರದಲ್ಲಿ ಹೆಚ್ಚು ಹೆಚ್ಚು ಹಣ್ಣುಗಳು, ತರಕಾರಿಗಳು ಮತ್ತು ದೇಹವನ್ನು ತಂಪಾಗಿ ಇರಿಸುವ ಪದಾರ್ಥಗಳನ್ನು ಸೇವಿಸಬೇಕು. ಹೀಗಾಗಿಯೇ ಬೇಗ ಜೀರ್ಣವಾಗುವ ಜ್ಯೂಸ್‌ಗಳು ಬೇಸಿಗೆಗೆ ಹೆಚ್ಚು ಸಹಕಾರಿ.

lemon

ನಿಂಬೆ ಹಣ್ಣು ಮತ್ತು ಸಬ್ಜಾ ಬೀಜಗಳ ಜ್ಯೂಸ್ ಮಾಡಲು ಬೇಕಾದ ಪದಾರ್ಥಗಳು

1. 2 ನಿಂಬೆ ಹಣ್ಣು

2. 2 ಟೇಬಲ್ ಸ್ಪೂನ್ ಸಬ್ಜಾ ಬೀಜಗಳು ಅಥವಾ ಕಾಮಕಸ್ತೂರಿ ಬೀಜ

3. ಅರ್ಧ ಕಪ್ ಸಕ್ಕರೆ ಅಥವಾ ಬೆಲ್ಲ

4. ಅಗತ್ಯಕ್ಕೆ ತಕ್ಕಂತೆ ನೀರು

5. ಬೇಕಿದ್ದರೇ ಐಸ್ ಕ್ಯೂಬ್‌ಗಳು

6. ಸ್ವಲ್ಪ ಏಲಕ್ಕಿ ಪುಡಿ

7. ಪುಡಿಮಾಡಿದ ಪುದೀನ ಮತ್ತು ಶುಂಠಿ

ನಿಂಬೆ ಮತ್ತು ಸಬ್ಜಾ ಬೀಜಗಳ ಜ್ಯೂಸ್ ಮಾಡುವ ವಿಧಾನ ಮೊದಲು ಅರ್ಧ ಕಪ್ ಸಕ್ಕರೆ ಅಥವಾ ಬೆಲ್ಲ ಮತ್ತು ಅರ್ಧ ಕಪ್ ನೀರು ಹಾಕಿ ಒಂದು ಪ್ಯಾನ್ ಅಥವಾ ಪಾತ್ರೆಯಲ್ಲಿ ಬಿಸಿ ಮಾಡಿ. ಸಕ್ಕರೆ ಕರಗುವವರೆಗೆ ಕಾಯಿರಿ ಮತ್ತು ಒಲೆ ಆಫ್ ಮಾಡಿ. ಇದರ ನಡುವೆ ಎರಡು ಚಮಚ ಸಬ್ಜಾ ಬೀಜಗಳನ್ನು ಅರ್ಧ ಕಪ್ ನೀರಿನಲ್ಲಿ 10 ನಿಮಿಷಗಳ ಕಾಲ ನೆನೆಸಿಡಿ.ಜ್ಯೂಸ್ ಮಿಕ್ಸ್ ಮಾಡಲು ಸಾಧ್ಯವಾಗುವಂತೆ ಒಂದು ಬಾಟಲಿ ಅಥವಾ ಪಾತ್ರೆ ತೆಗೆದುಕೊಳ್ಳಿ. ಇದಕ್ಕೆ ನೆನೆಸಿದ ಸಬ್ಜಾ ಬೀಜಗಳನ್ನು ಸೇರಿಸಿ. ಬಳಿಕ ಅದಕ್ಕೆ ನಿಂಬೆ ರಸ ಬೆರೆಸಿ. ಐಸ್ ಕ್ಯೂಬ್‌ಗಳನ್ನು ಸೇರಿಸಿ. ಅಗತ್ಯವಿರುವಷ್ಟು ನೀರನ್ನು ಸಹ ಸೇರಿಸಿ. ಬಳಿಕ ಅವಶ್ಯಕತೆ ಇದ್ದರೇ ಕಿತ್ತಳೆ ರಸ ಅಥವಾ ಅನಾನಸ್ ರಸವನ್ನು ಬೆರೆಸಿಕೊಳ್ಳಿ. ಬಳಿಕ ತಣ್ಣಗೆ ಕುಡಿಯಲು ಕೊಡಿ.



lemon

ಸಬ್ಜಾ ಬೀಜಗಳೊಂದಿಗೆ ನಿಂಬೆ ಪುದಿನಾ ಮೋಜಿಟೋ

ಬೇಕಾಗುವ ಪದಾರ್ಥಗಳು

  • 10-12 ಪುದಿನಾ ಎಲೆಗಳು ಅಥವಾ 1/8 ಕಪ್ ಪುದಿನಾ ಎಲೆಗಳು
  • 2 ತೆಳ್ಳಗಿನ ವೃತ್ತಾಕಾರದ ನಿಂಬೆ ಹೋಳುಗಳು
  • 2 ಟೇಚಮಚ ನಿಂಬೆರಸ
  • 1 ಚಿಟಿಕೆ ಉಪ್ಪು
  • 1 ಟೀಸ್ಪೂನ್ ನೆನೆಸಿದ ಸಬ್ಜಾ ಬೀಜಗಳು
  • 2 ಕಪ್‌ಗಳಿಂದ 500 ಮಿಲೀ ಸೋಡಾ ಅಥವಾ ಸ್ಪಾರ್ಕ್ಲಿಂಗ್ ವಾಟರ್ ಅಥವಾ ನೀರು
  • 1 ರಿಂದ 2 ಟೀಸ್ಪೂನ್ ಸಕ್ಕರೆ ಅಥವಾ ರುಚಿಗೆ ತಕ್ಕಂತೆ
  • ಐಸ್ ಕ್ಯೂಬ್ ಅಥವಾ ಪುಡಿ ಮಾಡಿದ ಐಸ್

ಮಾಡುವ ವಿಧಾನ

  • ಕುಟ್ಟಣಿ ಅಥವಾ ಹೂಜಿಯಲ್ಲಿ 1/8 ಕಪ್‌ನಷ್ಟು ತುಳಸಿ ಎಲೆಗಳು,2 ನಿಂಬೆ ತುಂಡುಗಳು, 1-2 ಟೇಚಮಚ ಸಕ್ಕರೆ, ಚಿಟಿಕೆ ಸೈಂದವ ಲವಣ ಹಾಕಿ. 2 ಟೇಚಮಚ ಸಕ್ಕರೆಯು ಪಾನೀಯವನ್ನು ಸಿಹಿಯಾಗಿಸುತ್ತದೆ. ನಿಮಗೆ ಇನ್ನೂ ಹೆಚ್ಚಿಗೆ ಕಟು ರುಚಿಯೇ ಪ್ರಧಾನವಾಗಿ ಬೇಕಾದಲ್ಲಿ, ಮತ್ತೊಂದು ಚಮಚ ಸಕ್ಕರೆ ಸೇರಿಸಿ.
  • ಪಾನೀಯವನ್ನು ಮಧುಮೇಹ ಸ್ನೇಹಿಯನ್ನಾಗಿಸಲು, ಸ್ಟೀವಿಯಾದಂತಹ ಸಕ್ಕರೆ ಪರ್ಯಾಯವನ್ನು ಸೇರಿಸಿ. ಸಕ್ಕರೆಗೆ ಬದಲಿಗೆ ಜೇನುತುಪ್ಪವನ್ನು ಬಳಸಬಹುದು.
  • ಕುಟ್ಟಣಿಯಿಂದ ಎಲ್ಲಾ ಸಾಮಗ್ರಿಗಳನ್ನು ಬೆರೆಸಿ
  • ಬೆರೆಸಿದ ಸಾಮಗ್ರಿಗಳನ್ನು ಎರಡು ಗ್ಲಾಸುಗಳಲ್ಲಿ ಹಾಕಿ
  • ಪ್ರತೀ ಗ್ಲಾಸಿಗೂ 1 ಟೇಚಮಚ ನಿಂಬೆ ರಸ ಹಾಕಿ
  • ಪುಡಿ ಮಾಡಿದ ಮಂಜುಗಡ್ಡೆ ಅಥವಾ ಐಸ್ ಕ್ಯೂಬ್‌ಗಳನ್ನು ಹಾಕಿ
  • ಇದಕ್ಕೆ ಸೋಡಾ ಅಥವಾ ಸ್ಪಾರ್ಕ್ಲಿಂಗ್ ವಾಟರ್ ಅಥವಾ ನೀರು ಹಾಕಿ. ಸೌಟು ಅಥವಾ ಸ್ಪೂನ್‌ನಲ್ಲಿ ಬೆರೆಸಿ
  • 1 ಟೀಚಮಚ ನೆನೆಸಿದ ಸಬ್ಜಾ ಬೀಜಗಳನ್ನು ಹಾಕಿ
  • ಸಬ್ಜಾ ಬೀಜಗಳನ್ನು ಹಾಕಿದ ನಿಂಬೆ ಪುದಿನಾ ಮೋಜಿಟೋವನ್ನು ಸವಿಯಲು ನೀಡಿ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ