ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಿಜೆಪಿಯ 5ನೇ ಪಟ್ಟಿ ಬಿಡುಗಡೆ; ಜಗದೀಶ್ ಶೆಟ್ಟರ್ ಗೆ ಅಚ್ಚರಿಯ ಕ್ಷೇತ್ರ..!

Twitter
Facebook
LinkedIn
WhatsApp
ಬಿಜೆಪಿಯ 5ನೇ ಪಟ್ಟಿ ಬಿಡುಗಡೆ; ಜಗದೀಶ್ ಶೆಟ್ಟರ್ ಗೆ ಅಚ್ಚರಿಯ ಕ್ಷೇತ್ರ..!

ಬೆಂಗಳೂರು, ಮಾರ್ಚ್​​ 24: ಲೋಕಸಭಾ ಚುನಾವಣೆಗೆ(Lok Sabha Elections) ಬಿಜೆಪಿ ಅಭ್ಯರ್ಥಿಳ ತನ್ನ 5ನೇ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಕರ್ನಾಟಕ ಸೇರಿದಂತೆ 8 ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕದಲ್ಲಿ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆಗೆ ಟಿಕೆಟ್ ಕೈತಪ್ಪಿದ್ದು, ತೀವ್ರ ವಿರೋಧದ ನಡುವೆ ಜಗದೀಶ್ ಶೆಟ್ಟರ್​ಗೆ ಬೆಳಗಾವಿ ಟಿಕೆಟ್ ಘೋಷಣೆ ಮಾಡಲಾಗಿದೆ.

ಯಾರಿಗೆಲ್ಲ ಟಿಕೆಟ್​

  • ರಾಯಚೂರು ಲೋಕಸಭಾ ಕ್ಷೇತ್ರ-ರಾಜಾ ಅಮರೇಶ್ವರ ನಾಯಕ
  • ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ-ಡಾ.ಕೆ.ಸುಧಾಕರ್​​​
  • ಉತ್ತರ ಕನ್ನಡ ಲೋಕಸಭಾ ಕ್ಷೇತ್ರ-ವಿಶ್ವೇಶ್ವರ ಹೆಗಡೆ ಕಾಗೇರಿ (ಹಾಲಿ ಸಂಸದ ಅನಂತಕುಮಾರ ಹೆಗಡೆಗೆ ಕೈತಪ್ಪಿದ ಟಿಕೆಟ್)
  • ಬೆಳಗಾವಿ ಲೋಕಸಭಾ ಕ್ಷೇತ್ರ-ಜಗದೀಶ್ ಶೆಟ್ಟರ್​
  • ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಇನ್ನೂ ಪೆಂಡಿಂಗ್

ಚಿತ್ರದುರ್ಗ ಬಿಜೆಪಿ ಟಿಕೆಟ್ ಪೆಂಡಿಂಗ್

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ನೀಡಬೇಕು ಎಂಬ ಗೊಂದಲದಲ್ಲಿ ಬಿಜೆಪಿ ಹೈಕಮಾಂಡ್ ಇದ್ದಂತೆ ಕಾಣುತ್ತಿದೆ. ರಘುಚಂದನ್ ಹಾಗೂ ಗೋವಿಂದ ಕಾರಜೋಳ ನಡುವೆ ಟಿಕೆಟ್​ಗಾಗಿ ಫೈಟ್ ನಡೆಯುತ್ತಿದೆ. ಆದರೆ, ಕಾರಜೋಳ ಅವರಿಗೆ ಟಿಕೆಟ್ ನೀಡದಂತೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ, ರಾಜ್ಯ ನಾಯಕರೊಂದಿಗೆ ಮತ್ತೊಮ್ಮೆ ಚರ್ಚಿಸಿ ಟಿಕೆಟ್ ಘೋಷಿಸಲು ಹೈಕಮಾಂಡ್ ನಿರ್ಧರಿಸಿದೆ.

ಚಿಕ್ಕಬಳ್ಳಾಫುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮಾಜಿ ಸಚಿವ ಡಾ.ಕೆ.ಸುಧಾಕರ್ ಪಾಲಾಗಿದೆ. ಕ್ಷೇತ್ರದ ಟಿಕೆಟ್ ತನ್ನ ಪುತ್ರ ಅಲೋಕ್​ಗೆ ಕೊಡಿಸಲು ಭಾರೀ ಪ್ರಯತ್ನ ಮಾಡಿದ್ದ ಯಲಹಂಕ ಶಾಸಕ ಎಸ್​ಆರ್ ವಿಶ್ವಾನಥ್​ ಅವರು ಸುಧಾಕರ್​ಗೆ ಟಿಕೆಟ್ ನೀಡದಂತೆ ವಿರೋಧಿ ಅಲೆ ಸೃಷ್ಟಿಸಿದ್ದರು. ಅಲ್ಲದೆ, ಸುಧಾಕರ್ ಮತ್ತು ವಿಶ್ವನಾಥ್ ನಡುವೆ ವಾಗ್ವಾದವೂ ನಡೆದಿತ್ತು. ಕೊನೆಯಲ್ಲಿ ಕ್ಷೇತ್ರದ ಟಿಕೆಟ್ ಸುಧಾಕರ್​ಗೆ ನೀಡಲಾಗಿದೆ.

ಸಮಸದ ಅನಂತಕುಮಾರ್ ಹೆಗಡೆಗೆ ಟಿಕೆಟ್ ಮಿಸ್

ಆರು ಬಾರಿ ಗೆದ್ದಿದ್ದ ಉತ್ತರ ಕನ್ನಡದ ಸಮಸದ ಅನಂತಕುಮಾರ್ ಹೆಗಡೆಗೆ ಈ ಬಾರಿ ಟಿಕೆಟ್ ಮಿಸ್ ಆಗಿದ್ದು, ವಿಧಾನಸಭೆ ಮಾಜಿ ಸ್ಪೀಕರ್ ವಿಶ್ಚೇಶ್ವರ ಹೆಗಡೆ ಕಾಗೇರಿ ಅವರಿಗೆ ಕ್ಷೇತ್ರದಲ್ಲಿ ಮಣೆ ಹಾಕಲಾಗಿದೆ. ಟಿಕೆಟ್ ಕೈತಪ್ಪುವ ಸುಳಿವು ಪಡೆದಿದ್ದ ಅನಂತಕುಮಾರ್ ಹೆಗಡೆ ಅವರು ಕಳೆದ ಒಂದು ವಾರದಿಂದ ಪ್ರಚಾರ ನಿಲ್ಲಿಸಿದ್ದರು. ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿದ್ದ ಇವರಿಗೆ ಈ ಬಾರಿ ಟಿಕೆಟ್​ ಕೈತಪ್ಪಲು ಇತ್ತೀಚೆಗೆ ಸಂವಿಧಾನ ತಿದ್ದುಪಡಿ ಕುರಿತು ನೀಡಿದ ಹೇಳಿಕೆಯೇ ಕಾರಣವಾಯ್ತಾ ಎನ್ನುವ ಪ್ರಶ್ನೆ ಎದ್ದಿದೆ.

ಇತರೆ ರಾಜ್ಯಗಳ ಬಿಜೆಪಿ ಅಭ್ಯರ್ಥಿಗಳು

  • ಕೇರಳದ ವಯನಾಡು ಲೋಕಸಭಾ ಕ್ಷೇತ್ರ-ಕೆ.ಸುರೇಂದ್ರನ್​
  • ಕೇರಳದ ಆಲತ್ತೂರ ಲೋಕಸಭಾ ಕ್ಷೇತ್ರ-ಟಿ.ಎನ್.ಸರಾಸು
  • ಕೇರಳದ ಎರ್ನಾಕುಲಂ ಲೋಕಸಭಾ ಕ್ಷೇತ್ರ-ಕೆ.ಎಸ್.ರಾಧಾಕೃಷ್ಣನ್​
  • ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರ-ಜಿ.ಕೃಷ್ಣಕುಮಾರ್​
  • ಮಹಾರಾಷ್ಟ್ರದ ಭಂಡಾರ-ಗೊಂದಿಯಾ ಲೋಕಸಭಾ ಕ್ಷೇತ್ರ-ಸುನೀಲ್ ಬಾಬುರಾವ್ ಮೇಂಢೆ
  • ಮಹಾರಾಷ್ಟ್ರದ ಗಡ್​ಚಿರೋಲಿ-ಚಿಮೂರ ಲೋಕಸಭಾ ಕ್ಷೇತ್ರ-ಅಶೋಕ್ ಮಹದೇವರಾವ್ ನೆತೆ
  • ಮಹಾರಾಷ್ಟ್ರದ ಸೊಲ್ಲಾಪುರ ಲೋಕಸಭಾ ಕ್ಷೇತ್ರ-ರಾಮ್​ ಸಾತ್​ಪುತೆ
  • ಮಹಾರಾಷ್ಟ್ರದ ಔರಂಗಬಾದ್ ಲೋಕಸಭಾ ಕ್ಷೇತ್ರ-ಸುಶೀಲ್ ಕುಮಾರ್ ಸಿಂಗ್​​
  • ಮಹಾರಾಷ್ಟ್ರದ ನವಾಡ ಲೋಕಸಭಾ ಕ್ಷೇತ್ರ-ವಿವೇಕ್ ಠಾಕೂರ್​
  • ಮಿಜೋರಾಂ ಲೋಕಸಭಾ ಕ್ಷೇತ್ರ-ವನ್ಲಾಲ್ಹ್​ಮುಕ
  • ಒಡಿಶಾ ಬಾರ್​ಗಢ ಲೋಕಸಭಾ ಕ್ಷೇತ್ರ-ಪ್ರದೀಪ್ ಪುರೋಹಿತ್​​
  • ಒಡಿಶಾ ಸುಂದರ್​ಗಢ ಲೋಕಸಭಾ ಕ್ಷೇತ್ರ-ಜ್ಯುಯೆಲ್ ಓರಾಮ್​​
  • ಒಡಿಶಾ ಸಂಬಲ್​ಪುರ ಲೋಕಸಭಾ ಕ್ಷೇತ್ರ-ಧರ್ಮೇಂದ್ರ ಪ್ರಧಾನ್​​
  • ಒಡಿಶಾದ ಪುರಿ ಲೋಕಸಭಾ ಕ್ಷೇತ್ರ-ಸಂಬಿತ್ ಪಾತ್ರಾ
  • ದಕ್ಷಿಣ ಗೋವಾ ಲೋಕಸಭಾ ಕ್ಷೇತ್ರ-ಪಲ್ಲವಿ ಶ್ರೀನಿವಾಸ ಡೆಂಪೋ
  • ಗುಜರಾತ್​ನ ಮೆಹ್​ಸಾನಾ ಲೋಕಸಭಾ ಕ್ಷೇತ್ರ-ಹರಿಭಾಯ್ ಪಟೇಲ್​
  • ಗುಜರಾತ್​ನ ಸಾಬರಕಾಂಠಾ ಲೋಕಸಭಾ ಕ್ಷೇತ್ರ-ಶೋಭನಾಬೆನ್​ ಮಹೇಂದ್ರಸಿಂಗ್ ಬರೈಯಾ
  • ಗುಜರಾತ್​ನ ಸುರೇಂದ್ರನಗರ ಲೋಕಸಭಾ ಕ್ಷೇತ್ರ-ಚಂದುಭಾಯ್ ಛಗನ್​ಭಾಯ್ ಶಿಹೋರಾ
  • ಗುಜರಾತ್​ನ ಜುನಾಗಢ್ ಲೋಕಸಭಾ ಕ್ಷೇತ್ರ-ರಾಜೇಶಭಾಯ್ ಚುಡಾಸಮಾ
  • ಗುಜರಾತ್​ನ ಅಮ್ರೇಲಿ ಲೋಕಸಭಾ ಕ್ಷೇತ್ರ-ಭರತ್​ಭಾಯ್ ಮನುಭಾಯ್ ಸುತಾರಿಯಾ
  • ಗುಜರಾತ್​ನ ವಡೋದರ ಲೋಕಸಭಾ ಕ್ಷೇತ್ರ-ಹೆಮಂಗ್ ಯೋಗೇಶ್ಚಂದ್ರ ಜೋಶಿ
  • ಹರಿಯಾಣ ಕುರುಕ್ಷೇತ್ರ ಲೋಕಸಭಾ ಕ್ಷೇತ್ರ-ನವೀನ್ ಜಿಂದಾಲ್​​​
  • ಬಿಹಾರದ ಪಶ್ಚಿಮ ಚಂಪಾರಣ್ ಲೋಕಸಭಾ ಕ್ಷೇತ್ರ-ಸಂಜಯ್ ಜೈಸ್ವಾಲ್​
  • ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರ-ಕಂಗನಾ ರಣಾವತ್​
  • ಉತ್ತರ ಪ್ರದೇಶದ ಸುಲ್ತಾನ್​ಪುರ ಲೋಕಸಭಾ ಕ್ಷೇತ್ರ-ಮನೇಕಾ ಗಾಂಧಿ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ