ಶುಕ್ರವಾರ, ಮೇ 10, 2024
ಬಂಗೇರ ಅಸ್ತಂಗತ. ಕೊನೆಗೂ ದಕ್ಷಿಣ ಕನ್ನಡದ ಪ್ರಬಲ ರಾಜಕಾರಣಿ ಮಂತ್ರಿಯಾಗಲಿಲ್ಲ! 2013 ರಲ್ಲಿ ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ ಎಂಬುದು ಇಂದಿಗೂ ರಹಸ್ಯ!!-ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಪೊಲೀಸ್ ವಶಕ್ಕೆ; ಏನಿದು ಪ್ರಕರಣ?-ಬಿವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಚುನಾವಣಾಧಿಕಾರಿಗಳಿಗೆ ದೂರು..!-ಬಿವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಚುನಾವಣಾಧಿಕಾರಿಗಳಿಗೆ ದೂರು..!-ಕ್ಯಾಮೆರಾಗಳ ಮುಂದೆನೇ ನಾಯಕ ಕೆ ಎಲ್ ರಾಹುಲ್ ಗೆ ತರಾಟೆಗೆ ತೆಗೆದುಕೊಂಡ LSG ಮಾಲೀಕ ; ಅಭಿಮಾನಿಗಳು ಆಕ್ರೋಶ..!-ಮನೆಯಲ್ಲಿ ನೇಣುಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಆತ್ಮಹತ್ಯೆ-SSLC ಪಲಿತಾಂಶ ಪ್ರಕಟ; ಇಲ್ಲಿದೆ ಲಿಂಕ್-ಕೋವಿಶೀಲ್ಡ್‌ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮದ ಬಗ್ಗೆ ಪ್ಯಾಕ್‌ ಮೇಲೇ ಸ್ಪಷ್ಟನೆ ನೀಡಿದ್ದೇವು: ಸೀರಂ-ಜೆಪಿ ನಡ್ಡಾ ಮತ್ತು ಅಮಿತ್ ಮಾಲವೀಯಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಪೊಲೀಸರಿಂದ ಸಮನ್ಸ್.!-ಇಂದು SSLC ಪಲಿತಾಂಶ ಪ್ರಕಟ; ಎಷ್ಟು ಹೊತ್ತಿಗೆ ಪಲಿತಾಂಶ ಪ್ರಕಟವಾಗಲಿದೆ.?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸ್ಕೂಟರ್ ಓಡಿಸುತ್ತಿರುವಾಗಲೇ ವ್ಯಕ್ತಿಯೊಬ್ಬನ ಲ್ಯಾಪ್ಟಾಪ್ ನಲ್ಲಿ ವಿಡಿಯೋ ಕಾನ್ಫರೆನ್ಸ್ ಕಾಲ್ ; ಇಲ್ಲಿದೆ ವಿಡಿಯೋ

Twitter
Facebook
LinkedIn
WhatsApp
ಸ್ಕೂಟರ್ ಓಡಿಸುತ್ತಿರುವಾಗಲೇ ವ್ಯಕ್ತಿಯೊಬ್ಬನ ಲ್ಯಾಪ್ಟಾಪ್ ನಲ್ಲಿ ವಿಡಿಯೋ ಕಾನ್ಫರೆನ್ಸ್ ಕಾಲ್ ; ಇಲ್ಲಿದೆ ವಿಡಿಯೋ

ಬೆಂಗಳೂರು: ಬೆಂಗಳೂರು ಅದರ ಐಟಿ- ಬಿಟಿ- ಸ್ಟಾರ್ಟಪ್‌ (IT BT Startup) ಗುಣದಿಂದಾಗಿ ಖ್ಯಾತವಾಗಿರುವಂತೆ, ಟ್ರಾಫಿಕ್‌ ಸಮಸ್ಯೆಯಿಂದಾಗಿಯೂ (Bengaluru traffic) ಕುಖ್ಯಾತವಾಗಿದೆ. ಇವೆರಡೂ ಸೇರಿದಾಗ ಏನಾಗುತ್ತದೆ? ಇಲ್ಲೊಂದು ವಿಶಿಷ್ಟ, ವೈರಲ್‌ ವಿಡಿಯೋ (Viral video) ಅದನ್ನು ಮನದಟ್ಟು ಮಾಡಿಕೊಡುವಂತಿದೆ.

ಈ ವಿಡಿಯೋದಲ್ಲಿ, ಟೆಕ್ಕಿಯಂತೆ ಕಾಣುವ ವ್ಯಕ್ತಿಯೊಬ್ಬರು ಬೆಂಗಳೂರಿನ ರಸ್ತೆಯಲ್ಲಿ ಸ್ಕೂಟರ್‌ ಓಡಿಸುತ್ತಿದ್ದಾರೆ. ಅವರ ಮುಂದುಗಡೆ ಲ್ಯಾಪ್‌ಟಾಪ್‌ ಓಪನ್‌ ಆಗಿದ್ದು, ವಿಡಿಯೋ ಕಾನ್ಫರೆನ್ಸ್‌ (video conference) ನಡೆಯುತ್ತಿದೆ. ಅದರಲ್ಲಿ ಈ ವ್ಯಕ್ತಿಯೂ ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗುತ್ತದೆ. ಬೆಂಗಳೂರಿನ ವಾಹನನಿಬಿಡ ರಸ್ತೆಯಲ್ಲಿ ಸ್ಕೂಟರ್‌ ಚಲಾವಣೆಯನ್ನೂ ಕಚೇರಿ ಕೆಲಸವನ್ನೂ ಬ್ಯಾಲೆನ್ಸ್‌ ಮಾಡುತ್ತಿರುವ ಈ ವ್ಯಕ್ತಿಯ ಚಾಕಚಕ್ಯತೆ ಇದನ್ನು ನೋಡಿದವರೆಲ್ಲರ ಹುಬ್ಬೇರಿಸುವಿಕೆ, ಬೆರಗು, ವಿನೋದಕ್ಕೆ ಕಾರಣವಾಗಿದೆ.

ಈ ವಿಡಿಯೋ ಪೀಕ್ ಬೆಂಗಳೂರು ಎಂಬ X ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲ್ಪಟ್ಟಿದೆ. “ಬೆಂಗಳೂರು ಆರಂಭಿಕರಿಗಾಗಿ ಅಲ್ಲ” (Bengaluru is not for beginners) ಎಂದು ಶೀರ್ಷಿಕೆ ಇದಕ್ಕಿದೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಉಲ್ಲಾಸದ, ಟೀಕೆಯ, ವಿನೋದದ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಕೆಲವು ಬಳಕೆದಾರರು ರಸ್ತೆ ಸುರಕ್ಷತೆ ಮತ್ತು ಕೆಲಸದ ಒತ್ತಡದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

“ಬ್ರೋ ಅವರು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರಬೇಕು. ಏಕೆಂದರೆ ಅವರು ವಾರಕ್ಕೆ 70 ಗಂಟೆಗಳ ಕೆಲಸ ಮಾಡಬೇಕಲ್ಲ!” ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು, “ಟ್ರಾಫಿಕ್ ಪರಿಸ್ಥಿತಿಯನ್ನು ಗಮನಿಸಿದರೆ ಅವರು ತಮ್ಮ ಸಂಪೂರ್ಣ ಶಿಫ್ಟ್ ಅನ್ನು ರಸ್ತೆಯಲ್ಲೇ ಪೂರ್ಣಗೊಳಿಸಬಹುದು!” ಎಂದಿದ್ದಾರೆ.

“ಕೆಲಸದ ಪ್ಯಾಕೇಜ್ ಹಾಗೂ ಮನೆಗೆ ಹಿಂದಿರುಗುವುದು- ಎರಡನ್ನೂ ಬ್ಯಾಲೆನ್ಸ್‌ ಮಾಡುವ ಕಲೆ” ಎಂಬುದು ಇನ್ನೊಬ್ಬರ ಪ್ರತಿಕ್ರಿಯೆ. “ಈ ಕೆಲಸ ಬಿಟ್ಟು ಇನ್ನೊಂದು ಹೊಸ ಕೆಲಸ ಕಂಡುಕೊಳ್ಳಿ” ಎಂಬುದು ಮತ್ತೊಬ್ಬರ ಟೀಕೆ.

ಕಳೆದ ವರ್ಷ ಇದೇ ರೀತಿಯ ಇನ್ನೊಂದು ಘಟನೆ ವೈರಲ್‌ ಆಗಿತ್ತು. ಬೆಂಗಳೂರಿನಲ್ಲಿ ಭಾರೀ ಟ್ರಾಫಿಕ್ ನಡುವೆ ಮಹಿಳೆಯೊಬ್ಬಳು ರಾಪಿಡೋ ರೈಡ್‌ ಮಾಡುತ್ತಿರುವ ನಡುವೆಯೇ ತನ್ನ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವ ದೃಶ್ಯದ ಫೋಟೋ ಹರಿದಾಡಿತ್ತು.

ಇತ್ತೀಚೆಗೆ, ಕಾರು ಡ್ರೈವಿಂಗ್ ಮಾಡುತ್ತಿರುವಾಗ ವ್ಯಕ್ತಿಯೊಬ್ಬ ಲ್ಯಾಪ್‌ಟಾಪ್ ಮೂಲಕ ಬಾಲಿವುಡ್ ಹಾಡು ಹಾಕಿಕೊಂಡು ವೈಬ್ ಮಾಡುತ್ತಿದ್ದುದು, ಕಿಟಕಿಯಿಂದ ಲ್ಯಾಪ್‌ಟಾಪ್‌ ಜಾರಿ ಬೀಳುತ್ತಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ಬಿರುಗಾಳಿಯಂತೆ ವೈರಲ್‌ ಆಗಿತ್ತು. ಲ್ಯಾಪ್‌ಟಾಪ್ ಅನ್ನು ಕಳೆದುಕೊಂಡ ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ 28 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ