Gold Rate: ಚಿನ್ನದ ದರ ಕೊಂಚ ಇಳಿಕೆ; ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿಯ ದರದ ವಿವರ
Gold Rate: ಚಿನ್ನದ ದರ ಕೊಂಚ ಇಳಿಕೆ; ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿಯ ದರದ ವಿವರ. ಇಂದು ಗುರುವಾರ ಚಿನ್ನದ ಬೆಲೆ (Gold Rate) ಗ್ರಾಮ್ಗೆ 40 ರೂನಷ್ಟು ಇಳಿದಿದೆ. ಬೆಳ್ಳಿ ಬೆಲೆ 50 ಪೈಸೆ ಕಡಿಮೆ ಆಗಿದೆ.
ಚಿನ್ನ, ಬೆಳ್ಳಿ ಬೆಲೆ ಇಳಿಕೆಯ ಟ್ರೆಂಡ್ ಮುಂದುವರಿದಿದೆ. ಚಿನ್ನದ ಬೆಲೆ (Gold Rate) ಇವತ್ತು ಗ್ರಾಮ್ಗೆ 40 ರೂನಷ್ಟು ಕಡಿಮೆ ಆಗಿದೆ. ಒಂದು ಗ್ರಾಮ್ ಆಭರಣ ಚಿನ್ನದ (22 ಕ್ಯಾರಟ್) ಬೆಲೆ ಇವತ್ತು 6,350 ರೂ ಇದೆ. ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ಎಲ್ಲೆಡೆ ಚಿನ್ನದ ಬೆಲೆ ತಗ್ಗಿದೆ. ಬೆಳ್ಳಿ ಬೆಲೆಯೂ ಇಳಿಕೆ ಆಗಿದೆ. ಕಳೆದ ಕೆಲ ವಾರಗಳ ಹಿಂದೆ ಅಸಹಜವಾಗಿ ಉಬ್ಬಿಹೋಗಿದ್ದ ಚಿನಿವಾರ ಪೇಟೆ ಈಗ ಪ್ರೈಸ್ ಕರೆಕ್ಷನ್ ಹಂತಕ್ಕೆ ಹೋದಂತಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 63,500 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 69,270 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,200 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 63,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,100 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 8ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,500 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 69,270 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 820 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,500 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 69,270 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 810 ರೂ.
- ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.
ಎಲ್‌ಟಿಸಿಜಿ ತೆರಿಗೆಯಲ್ಲಿ ಬದಲಾವಣೆ, ಮನೆ ಮಾಲೀಕರಿಗೆ ಗುಡ್ ನ್ಯೂಸ್
ಹೊಸದಿಲ್ಲಿ: ಸದನ ಸೂಚಿಸಿದ ಒಟ್ಟು 45 ತಿದ್ದುಪಡಿಗಳೊಂದಿಗೆ ಹಣಕಾಸು ವಿಧೇಯಕ – 2024ಕ್ಕೆ ಲೋಕಸಭೆ ಬುಧವಾರ ಅಂಗೀಕಾರ ನೀಡಿತು. ಸ್ಥಿರಾಸ್ತಿಗಳ ದೀರ್ಘಕಾಲೀನ ಬಂಡವಾಳ ಗಳಿಕೆ (ಎಲ್‌ಟಿಸಿಜಿ) ಮೇಲಿನ ತೆರಿಗೆ ಬದಲಾವಣೆ ಪ್ರಮುಖ ಬದಲಾವಣೆಯಾಗಿದೆ. ಜುಲೈ 1ರಂದು ಮಂಡಿಸಿದ 2024 – 25ನೇ ಸಾಲಿನ ಮುಂಗಡಪತ್ರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸ್ಥಿರಾಸ್ತಿಗಳ ಮೇಲಿನ ದೀರ್ಘಾವಧಿ ಬಂಡವಾಳ ಲಾಭದ ತೆರಿಗೆಯನ್ನು ಇಂಡೆಕ್ಸೇಷನ್ ಪ್ರಯೋಜನವಿಲ್ಲದೆ ಶೇ. 20ರಿಂದ ಶೇ. 12.5ಕ್ಕೆ ಇಳಿಸುವ ಪ್ರಸ್ತಾಪ ಮಾಡಿದ್ದರು.
ಈಗ ಇಂಡೆಕ್ಸೇಷನ್ ಪ್ರಯೋಜನದೊಂದಿಗೆ ತೆರಿಗೆದಾರರು ಹಳೆಯ ಅಥವಾ ಹೊಸ ಆದಾಯ ತೆರಿಗೆ ವ್ಯವಸ್ಥೆ ಯಾವುದನ್ನಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
ಇಂಡೆಕ್ಸೇಷನ್ ಅಂದರೆ ಸ್ಥಿರಾಸ್ತಿಗಳ ಮಾರಾಟದಿಂದ ಲಭಿಸುವ ಲಾಭವನ್ನು ಹಣದುಬ್ಬರದೊಂದಿಗೆ ಹೊಂದಿಸಿ ತೆರಿಗೆ ಲೆಕ್ಕಾಚಾರ ಮಾಡಲು ಅವಕಾಶ ಮಾಡಿಕೊಡುವ ಪ್ರಕ್ರಿಯೆಯಾಗಿದೆ.
ಲೋಕಸಭೆಯ ಅನುಮೋದನೆ ಪಡೆದ ತಿದ್ದುಪಡಿಯಿಂದ ಜುಲೈ 23, 2024ಕ್ಕಿಂತ ಮೊದಲು ಖರೀದಿಸಿದ ಆಸ್ತಿ ಮಾರಾಟ ಮಾಡಿದವರಿಗೆ ಅನುಕೂಲ ಕಲ್ಪಿಸಲಿದೆ. ಅಂತಹವರು ಶೇ. 12.5ರ ದರದಲ್ಲಿ ದೀರ್ಘಕಾಲೀನ ಬಂಡವಾಳ ತೆರಿಗೆ ಪಾವತಿಸಬಹುದು ಅಥವಾ ಇಂಡೆಕ್ಸೆಷೇನ್ ಪ್ರಯೋಜನ ಪಡೆದು ಶೇ. 20ರಷ್ಟು ತೆರಿಗೆಯನ್ನು ಪಾವತಿಸಬಹುದು.
ಹೊಸ ತಿದ್ದುಪಡಿಗಳ ಪ್ರಕಾರ, ಜುಲೈ 23, 2024 ರ ಮೊದಲು ಆಸ್ತಿಯನ್ನು ಖರೀದಿಸಿದ ಮನೆಮಾಲೀಕರು, ಇಂಡೆಕ್ಸೇಶನ್ ಪ್ರಯೋಜನಗಳಿಲ್ಲದೆ ಶೇ. 12.5 ತೆರಿಗೆ ವಿಧಿಸುವ ಹೊಸ ತೆರಿಗೆ ಪದ್ಧತಿ ಅಥವಾ ಇಂಡೆಕ್ಸೇಶನ್ ಪ್ರಯೋಜನಗಳೊಂದಿಗೆ ಶೇ. 20ರಷ್ಟು ತೆರಿಗೆ ವಿಧಿಸುವ ಹಳೆಯ ಪದ್ಧತಿಯನ್ನು ಆಯ್ದುಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ.
ಆದರೆ, ಜುಲೈ 23 ಅಥವಾ ನಂತರ ಆಸ್ತಿಯನ್ನು ಖರೀದಿಸಿದ ಮಾಲೀಕರು ಪೂರ್ವನಿಯೋಜಿತವಾಗಿ (ಡೀಫಾಲ್ಟ್) ಹೊಸ ತೆರಿಗೆ ಪದ್ಧತಿಯನ್ನು ಅನುಸರಿಸಬೇಕಾಗುತ್ತದೆ.