ರಾಜ್ಯಸಭೆ ಚುನಾವಣೆ: ಮಾಜಿ ಸಚಿವ ವಿ. ಸೋಮಣ್ಣಗೆ ಮುಖಭಂಗ; BJP ಅಭ್ಯರ್ಥಿಗಳ ಪಟ್ಟಿ ಪ್ರಕಟ
ರಾಜ್ಯಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಪ್ರಕಟ ಮಾಡಿದ್ದು ಮಾಜಿ ಸಚಿವ ವಿ. ಸೋಮಣ್ಣಗೆ ರಾಜ್ಯಸಭೆ ಟಿಕೆಟ್ ಕೈತಪ್ಪಿದ್ದು ಕರ್ನಾಟಕದಿಂದ ನಾರಾಯಣ ಭಾಂಡಗೆ ಸ್ಪರ್ಧಿಸುತ್ತಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡೆರಡು ಕಡೆ ಸ್ಪರ್ಧಿಸಿ ಸೋತಿದ್ದ ವಿ ಸೋಮಣ್ಣ ಅವರು ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದರು. ನಂತರ ರಾಜ್ಯಸಭೆ ಟಿಕೆಟ್ ಸಿಗುವ ಭರವಸೆಯನ್ನು ಸೋಮಣ್ಣ ವ್ಯಕ್ತಪಡಿಸಿದ್ದರು. ಆದರೆ ಸೋಮಣ್ಣ ಬದಲಿಗೆ ನಾರಾಯಣ ಭಾಂಡಗೆಗೆ ಟಿಕೆಟ್ ನೀಡಲಾಗಿದೆ.
ಗದಗ ಮೂಲದ ಮಾಜಿ ಎಂಎಲ್‌ಸಿ ನಾರಾಯಣ ಭಾಂಡಗೆ ಅವರು ಬಿಜೆಪಿ ಉಪಾಧ್ಯಕ್ಷರಾಗಿ ಮತ್ತು ರಾಜ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ
ಇನ್ನುಳಿದಂತೆ ಬಿಹಾರದಲ್ಲಿ ಡಾ. ಧರ್ಮಶೀಲಾ ಗುಪ್ತಾ ಹಾಗೂ ಡಾ. ಭೀಮಸಿಂಗ್, ಛತ್ತೀಸ್ಗಢದಲ್ಲಿ ರಾಜಾ ದೇವೇಂದ್ರ ಪ್ರತಾಪ್ ಸಿಂಗ್, ಹರಿಯಾಣದಲ್ಲಿ ಸುಭಾಷ್ ಬಾರ್ಲಾ, ಉತ್ತರಾಖಂಡ್ ದಲ್ಲಿ ಮಹೇಂದ್ರ ಭಟ್, ಪಶ್ಚಿಮ ಬಂಗಾಳದಲ್ಲಿ ಸಮಿಕಾ ಭಟ್ಟಾಚಾರ್ಯಗೆ ಟಿಕೆಟ್ ನೀಡಲಾಗಿದೆ.
ಇನ್ನು ಉತ್ತರ ಪ್ರದೇಶದಲ್ಲಿ ಆರ್.ಪಿ.ಎನ್ ಸಿಂಗ್, ಸುಭಾಂಶು ತ್ರಿವೇದಿ, ಚೌಧರಿ ತೇಜ್ವೀರ್ ಸಿಂಗ್, ಸಾಧನಾ ಸಿಂಗ್, ಅಮರಪಾಲ್ ಮೌರ್ಯ, ಸಂಗೀತಾ ಬಲ್ವಂತ್, ನವೀನ್ ಜೈನ್ ಗೆ ಟಿಕೆಟ್ ನೀಡಲಾಗಿದೆ.